ಅಭಿಪ್ರಾಯ / ಸಲಹೆಗಳು

ಹಾವೇರಿ ಸಂಚಾರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:07/2021 ಕಲಂ: INDIAN MOTOR VEHICLES ACT, 1988 (U/s-128(1),177); 279, 337, 304(A) IPC.

           ಅಣ್ಣಪ್ಪಾ ಲಮಾಣಿ ಸಾ ನೆಲ್ಲಿಕೊಪ್ಪ ತಾಂಡಾ ಇವರು ದಿನಾಂಕ 16-02-2021 ರಂದು ತನ್ನ ಮೋಟಾರ ಸೈಕಲ್ ನಂ.ಕೆಎ.68/H.8093 ನೇದ್ದನ್ನು ಹಾವೇರಿ ಬೈಪಾಸ್ ರಸ್ತೆಯ ಮೇಲೆ ಶಿಗ್ಗಾವಿ ಕಡೆಯಿಂದ ಮೋಟೆಬೆನ್ನೂರ ಕಡೆಗೆ ಬಹಳ ಜೋರಿನಿಂದ ಮತ್ತು ನಿರ್ಲಕ್ಷತನದಿಂದ ಓಡಿಸಿಕೊಂಡು ಹೋಗಿ ಮೇಲೆ ನಮೂದ ಮಾಡಿದ ಸ್ಥಳದಲ್ಲಿ ಒಮ್ಮಲೆ ರಸ್ತೆಯ ಎಡಬದಿಗೆ ಹೋಗಿ ಎಡಬದಿಯಲ್ಲಿ ನಿಲ್ಲಿಸಿದ ಸಿಮಿಂಟಿನ ಕಟ್ಟಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಕೆಡವಿ ತನ್ನ ಮೋಟಾರ ಸೈಕಲನಲ್ಲಿ ಹಿಂದೆ ಕುಳಿತಿದ್ದ ] ಯಶೋದಾ ಬಸವರಾಜ ನಾಯಕ್ @ ಲಮಾಣಿ ೨] ಸಾಯಿರಾಮ ಬಸವರಾಜ ನಾಯಕ್ @ ಲಮಾಣಿ ಇವರಿಬ್ಬರಿಗೆ ಗಾಯ ದುಃಖಾಪತ್ ಪಡಿಸಿದ್ದಲ್ಲದೆ ಹಿಂದೆನೆ ಕುಳಿತಿದ್ದ ನಯಿನಾ ಬಸವರಾಜ ನಾಯಕ್ @ ಲಮಾಣಿ ವಯಾ ೩./೨ ವರ್ಷ ಇವರಿಗೆ ತೆಲೆಗೆ ಹಾಗೂ ಇತರೆ ಕಡೆಗೆ ಭಾರಿ ಗಾಯ ಪಡಿಸಿ ಮರಣ ಪಡಿಸಿದ್ದಲ್ಲದೆ ತನಗೂ ಕೂಡ ಗಾಯ ಮತ್ತು ದುಃಖಾಪತ್ ಪಡಿಸಿಕೊಂಡಿದ್ದಲ್ಲದೆ ತನ್ನ ಮೋಟಾರ ಸೈಕಲ್ಲದಲ್ಲಿ ನಿಗದಿ ಪಡಿಸಿದಕ್ಕಿಂತ ಹೆಚ್ಚಿಗೆ ಇಬ್ಬರಿಗೆ ಕುಡ್ರಿಸಿಕೊಂಡು ಓಡಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:38/2021 ಕಲಂ: 279, 338, 304(A) IPC.

                 ದಿನಾಂಕಃ16/02/2021 ರಂದು ಸಾಯಂಕಾಲಃ07-30 ಗಂಟೆಯ ಸುಮಾರಿಗೆ ಲಾರಿ ನಂಬರಃಕೆಎ-27/ಬಿ-9394 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಲಾರಿಯನ್ನು ಹಾನಗಲ್ಲ ದರ್ಗಾ ಕಡೆಯಿಂದ ಹಾನಗಲ್ಲ ಮಿನಿ ವಿಧಾನಸೌಧ ಕಡೆಗೆ ಅತೀ ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಹಾನಗಲ್ಲ ದರ್ಗಾದ ಖಬರಸ್ಥಾನದ ಎದುರಿಗೆ ಹಾನಗಲ್ಲ ಮಿನಿ ವಿಧಾನಸೌಧ ಕಡೆಯಿಂದ ಹಾನಗಲ್ಲ ದರ್ಗಾ ಕಡೆಗೆ ರಸ್ತೆಯ ಎಡಸೈಡಿಗೆ ಕೃಷ್ಣಪ್ಪ ಗುರುಶಾಂತಪ್ಪ ಹುಳಕೇರ ಈತನು ಚಲಾಯಿಸುತ್ತಿದ್ದ ಮೋಟಾರ್  ಸೈಕಲ್ ನಂಬರಃಕೆಎ-27/ಇಕೆ-7458 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತಪಡಿಸಿ ಎಡಗಾಲಿನ ತೊಡೆಯ ಮೇಲೆ ಲಾರಿಯ ಬಲಗಡೆ ಸೈಡಿನ ಗಾಲಿಯನ್ನು ಹತ್ತಿಸಿ, ಎಡಗಾಲಿನ ತೊಡೆಯ ಮೋಳೆ ಮುರಿಯುವಂತೆ ಭಾರಿ ಸ್ವರೂಪದ ರಕ್ತಗಾಯಪಡಿಸಿ, ಬಲಗೈ ಮೊಣಕೈ ಹತ್ತಿರ ಭಾರಿ ಸ್ವರೂಪದ ರಕ್ತಗಾಯವಾಗುವಂತೆ ಮಾಡಿ ಮೊಣಕೈ ಹತ್ತಿರ ಮೋಳೆ ಮುರಿಯುವಂತೆ ಮಾಡಿ ಎದೆಗೆ ಭಾರಿ ಸ್ವರೂಪದ ಒಳನೋವು ಪಡಿಸಿದ್ದು ನಂತರ ಗಾಯಾಳು ಕೃಷ್ಣಪ್ಪ ಹುಳಕೇರ ಈತನಿಗೆ ಹಾನಗಲ್ಲ ಸರ್ಕಾರಿ ಆಸ್ಪತ್ರೆಯಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲು ಮಾಡಿದ್ದು ಅಲ್ಲಿ ಉಪಚಾರದಲ್ಲಿದ್ದಾಗ ದಿನಾಂಕಃ16/02/2021 ರಂದು ರಾತ್ರಿಃ10-10 ಗಂಟೆಯ ಸುಮಾರಿಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:06/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                 ತಿಪ್ಪಪ್ಪ ತಂದೆ ರುದ್ರಪ್ಪ ಕರೆಕನ್ನಪ್ಪನವರ, ವಯಾ-55 ವರ್ಷ, ಜಾತಿ-ಹಿಂದೂ ವಾಲ್ಮೀಕಿ. ಉದ್ಯೋಗ- ಮನೆವಾಸ, ಸಾ:ಹಿರೇಕೊಣತಿ, ತಾ:ಹಿರೇಕೆರೂರ. ಇವನು ಸುಮಾರು 5 ವರ್ಷಗಳಿಂದ ಪಾರ್ಶ್ಛುವಾಯು ಕಾಯಿಲೆಯಿಂದ ಮತ್ತು ಅನಾರೋಗ್ಯದಿಂದ ಬಳಲುತಿದ್ದು ಸರಿಯಾಗಿ ನಡೆಯಲು ಬಾರದೇ ನೆಲದಲ್ಲಿಯೇ ತೆವಳುತ್ತಾ ತನಗೆ ಇರುವ ಕಾಯಿಲೆ ವಾಸಿಯಾಗುದಿಲ್ಲಾ ಮತ್ತು ಎಷ್ಟು ದಿನ ಮನೆಯ ಜನರಿಗೆ ನಾನು ಭಾರವಾಗಿರಬೇಕು ಅಂತಾ ಮನಸ್ಸಿಗೆ ಬೇಜಾರು ಮಾಡಿಕೊಂಡು ದಿನಾಂಕ: 13-02-2021 ರಂದು ಬೆಳಿಗ್ಗೆ 10-00 ಗಂಟೆಗೆ ತನ್ನ ಮನೆಯ ಹಿತ್ತಲದಲ್ಲಿ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವನೆ ಮಾಡಿ ನಂತರ ಉಪಚಾರ ಕುರಿತು ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಉಪಚಾರ ಪಡೆಯುತ್ತಿದ್ದಾಗ ಉಪಚಾರ ಫಲಿಸದೇ ದಿನಾಂಕ: 15-02-2021 ರಂದು ಸಂಜೆ 6-00 ಗಂಟೆಗೆ ಆಸ್ಪತ್ರೆಯಲ್ಲಿಯೇ ಮೃತ ಪಟ್ಟಿದ್ದು ಮೃತ ತನ್ನ ತಂದೆಯ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮೃತನ ಮಗಳು  ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 19-02-2021 12:29 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ