ಅಭಿಪ್ರಾಯ / ಸಲಹೆಗಳು

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:30/2021 ಮಹಿಳೆ ಕಾಣೆ.

                ರಮ್ಯಾ ಕೃಷ್ಣ ಉಪರೆ  ಸಾ ರಾಣೆಬೇನ್ನೂರ ಇವಳು ದಿನಾಂಕ: 06-03-2021 ರಂದು ರಾತ್ರಿ 23-00 ಗಂಟೆ ಸುಮಾರಿಗೆ ಮನೆಯಲ್ಲಿ ಊಟ ಮಾಡಿ ಮಲಗಿದವಳು ದಿನಾಂಕ: 07-03-2021 ರಂದು ಬೆಳಗಿನ 04-00 ಗಂಟೆಯ ಸುಮಾರಿಗೆ ಎದ್ದು ನೋಡಿದಾಗ ಮನೆಯಲ್ಲಿ ಇರದೇ ಯಾರಿಗೂ ಹೇಳದೇ ಕೇಳದೆ ಮನೆಯಿಂದ ಹೋದವಳು ಈ ವರೆಗೂ ತಿರುಗಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಅವಳನ್ನು ಹುಡುಕಿಸಿ ಕೊಡುವಂತೆ ಕಾಣೆಯಾದವಳ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:43/2021 ಕಲಂ: 279, 337, 304(A)IPC.

                 ದಿನಾಂಕಃ07-03-2021 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ರಾಣೇಬೆನ್ನೂರು ಬ್ಯಾಡಗಿ ರಸ್ತೆಯ ಅಸುಂಡಿ ಗ್ರಾಮದ ಹತ್ತಿರ ವಾಗೇಶಪ್ಪ ನೇಗಳೂರು ಇವರ ಹೊಲದ ಹತ್ತಿರ ಕ್ಯಾಂಟರ ಗಾಡಿ ನಂಬರ ಕೆಎ-27/ಬಿ-2819 ನೇದ್ದರ ಚಾಲಕ ಮಾಲತೇಶ ತಂದೆ ಗುಡ್ಡಪ್ಪ ಬಾರ್ಕಿ @ ಸುಣಗಾರ ಸಾಃಕೋಡಿಹಾಳ ಹೊಸಪೇಟೆ ಇವನು ತಾನು ನಡೆಸುತ್ತಿದ್ದ ಕ್ಯಾಂಟರನ್ನು ಅತೀ ಜೋರಿನಿಂದ ವ ತಾತ್ಸರ ನಡೆಸಿಕೊಂಡು ಬಂದು  ಮೋಟರ ಸೈಕಲ ನಂಬರ ಕೆಎ-68/ಹೆಚ್-7932 ನೇದ್ದಕ್ಕೆ ಡಿಕ್ಕಿ ಪಡಿಸಿ ಮೋಟರ ಸೈಕಲದಲ್ಲಿದ್ದ ದೊರೆಸ್ವಾಮಿ ತಂದೆ ಪೀರುಮಾಲ್ ಸಾಃಕರಿಯಾಂಬಟ್ಟಿ ಹಾಲಿ ವಾಸ ರಾಣೇಬೆನ್ನೂರು ಮಾರುತಿ ನಗರ ಇವರಿಗೆ ಬಾರೀ ಗಾಯ ಪಡಿಸಿ ಮೃತ ಪಡುವಂತೆ ಮಾಡಿ ಕ್ಯಾಂಟರ ಕ್ಲೀನರ ಬಸವಣ್ಯೆಪ್ಪ ಇವರಿಗೆ ಗಾಯ ಪಡಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:11/2021 ಮಹಿಳೆ ಆತ್ಮಹತ್ಯೆ.

                 ಶ್ವೇತಾ ತಂದೆ ಮಲ್ಲಪ್ಪ ಎತ್ತಿನಮನಿ ವಯಾ-17 ವರ್ಷ. ಜಾತಿ-ಲಿಂಗವಂತ  ಉದ್ಯೋಗ-ವಿದ್ಯಾರ್ಥಿನಿ  ಸಾ-ತಡಸ  ತಾ-ಬ್ಯಾಡಗಿ ಇವಳ ಅಕ್ಕ ಅನಿತಾ ಇವಳು ದಿನಾಂಕ:20-02-2021 ರಂದು ಮನೆಬಿಟ್ಟು ಬಾಜು ಮನೆಯ ಹುಡುಗನ ಸಂಗಡ ಎಲ್ಲಿಯೋ ಹೋಗಿ ಮದುವೆಯಾಗಿದ್ದರಿಂದ ಮುಂದೆ ನನಗೆ ಯಾರು ಮದುವೆಯಾಗುವದಿಲ್ಲಾ ಅಂತಾ ಮಾನಸಿಕ ಮಾಡಿಕೊಂಡು ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ:07-03-2021 ರಂದು ಮುಂಜಾನೆ 10-30 ಗಂಟೆಗೆ ತಮ್ಮ ವಾಸದ ಮನೆಯಲ್ಲಿದ್ದ ಕ್ಯಾಬೀಜ ಹೊಲಕ್ಕೆ ಹೊಡೆಯುವ ವಿಷದ ಎಣ್ಣಿಯನ್ನು ತನ್ನಷ್ಟಕ್ಕೆ ತಾನೇ ಕುಡಿಯುತ್ತಿದ್ದಾಗ ಅದನ್ನು ನೋಡಿದ ಮಂಜವ್ವ ಇವಳು ಕಸಿದುಕೊಂಡು ನನ್ನ ಮಗಳು ಬದಕುವದಿಲ್ಲಾ ಅಂತಾ ಉಳಿದ ವಿಷದ ಎಣ್ಣಿಯನ್ನು ಕುಡಿದಿದ್ದು ಸದರಿಯವರಿಗೆ ಉಪಚಾರಕ್ಕೆ ಬ್ಯಾಡಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಹೋದಾಗ ಮಗಳು ಶ್ವೇತಾ ಇವಳಿಗೆ ಉಪಚಾರಪಲಿಸದೆ ಮರಣ ಹೊಂದಿರುತ್ತಾಳೆ. ಮತ್ತು ವಿಷ ಸೇವನೆ ಮಾಡಿದ ನನ್ನ ಹೆಂಡತಿ ಮಂಜವ್ವ ಕೊಂ ಶಿವಪ್ಪ ಹಿತ್ತಲಮನಿ ವಯಾ:52 ವರ್ಷ ಇವಳಿಗೆ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲ ಮಾಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 08-03-2021 06:59 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ