ಅಭಿಪ್ರಾಯ / ಸಲಹೆಗಳು

ಹಿರೇಕೆರೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:42/2021 ಕಲಂ: 379 IPC.

                ದಿನಾಂಕ: 21-03-2021 ರಂದು ರಾತ್ರಿ 10-00 ಗಂಟೆ ಯಿಂದಾ ದಿನಾಂಕ: 22-03-2021 ರಂದು ಬೆಳಗಿನ ಜಾವ 02-00 ಗಂಟೆಯ ನಡುವಿನ ಅವಧಿಯಲ್ಲಿ ಮಾಸೂರ ಗ್ರಾಮದ ಶಂಬುಲಿಂಗಪ್ಪ ನಿಂಗಪ್ಪ ಸಜ್ಜನಶೆಟ್ಟರ ಇವರ ವಾಸದ ಮನೆಯ ಮೊದಲನೆ ಕೊಠಡಿಯಲ್ಲಿ ಇಟ್ಟ ಇವರ ಬಾಬತ್ ಒಂದು ಕೆಂಪು ಬಣ್ಣದ ಹಿರೋ ಹೊಂಡಾ ಸಿಡಿ ಡಾನ್ ಮೋಟಾರ ಸೈಕಲ್ ನಂಬರ್; ಕೆ,,27/ಕೆ-3090 ಇದರ ಇಂಜಿನ್ ನಂ:-04D27E14800 ಮತ್ತು ಚಾಸ್ಸಿ ನಂ; 04D27F07367 ಇದರ ಅ:ಕಿ : 25,000/-ರೂ. ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:61/2021 ಕಲಂ:PROTECTION OF CHILDREN FROM SEXUAL OFFENCES ACT 2012 (U/s-4,6,12); 376AB,504,506) IPC.

              ಪ್ರೇಮವ್ವ ಕಟ್ಟಿಮನಿ ಹಾಗೂ ಶಿವಾನಂದ ಹನುಮಂತಪ್ಪ ಹಡ್ಡಣ್ಣನವರ ಸಾ|| ತಳ್ಳಿಹಳ್ಳಿ ಇವರಿಬ್ಬರು ಒಂದೆ ಊರಿನವರು ಇದ್ದು, ಪ್ರೇಮವ್ವ ಹಾಗೂ ಅವರ ಗಂಡ ಇಬ್ಬರೂ ಸೇರಿ ಶಿವಾನಂದ ಇವರ ಜಮೀನಿಗೆ ಕೂಲಿ ಕೆಲಸಕ್ಕೆಂದು ಹೋಗುತ್ತಿದ್ದು, ಶಿವಾನಂದ ಇವರು ಪ್ರೇಮವ್ವ ಇವರ ಮನೆಗೆ ಕೂಲಿ ಕೆಲಸ ಹೇಳಲು ಹೋಗಿ ಬಂದು ಮಾಡುತ್ತಾ ಅವರ ಮನೆಗೆ ಹೋದ ಕಾಲಕ್ಕೆ ಪ್ರೇಮವ್ವ ಇವರ ಅಪ್ರಾಪ್ತ ವಯಸ್ಸಿನ ಬಾಲಕಿ ಕು: ಲಲಿತಾ ತಂದೆ ನಿಂಗಪ್ಪ ಕಟ್ಟಿಮನಿ ಇವಳೊಂದಿಗೆ ಸಲುಗೆಯಿಂದ ಮಾತಾಡಿಸುವುದು ಮಾಡುತ್ತಾ ಬಂದಿದ್ದೂ ಅಲ್ಲದೇ ಅವಳು ಶಾಲೆಗೆ ಹೋಗುವಾಗ ಬರುವಾಗ ಹಿಂಬಾಲಿಸುತ್ತಾ ಚುಡಾಯಿಸುವುದು ಮಾಡಿದ್ದು, ಆತನಿಗೆ ಬುದ್ದಿವಾದ ಹೇಳಿದರೂ ಸಹ ಬಿಡದೇ ದಿನಾಂಕ: 14-01-2021 ರಂದು ಮಧ್ಯರಾತ್ರಿ 2-30 ಗಂಟೆ ಸುಮಾರಿಗೆ ಪ್ರೇಮವ್ವ ಇವರ ಮನೆಯ ಪೋನಿಗೆ ಪೋನ್ ಮಾಡಿ ಅಪ್ರಾಪ್ತ ಬಾಲಕಿಯೊಂದಿಗೆ ಮಾತಾಡಿ ನಿನ್ನೊಂದಿಗೆ ಏನೋ ಮಾತಾಡುವುದು ಇದೇ ನಿಮ್ಮ ಮನೆಯ ಹಿತ್ತಲು ಜಾಗಕ್ಕೆ ಬಾ ಅಂತಾ ಪುಸಲಾಯಿಸಿ ಕರೆದು, ನಂತರ ಅವಳಿಗೆ ಹಿತ್ತಲು ಜಾಗೆಯ ಎಳೆದಾಡಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿ ಪರಾರಿಯಾಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 30-03-2021 06:14 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ