ಅಭಿಪ್ರಾಯ / ಸಲಹೆಗಳು

ಹಾವೇರಿ ಸಿಇಎನ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:16/2021 ಕಲಂ:INFORMATION TECHNOLOGY ACT 2008 (U/s-66(C), 66(D)); 419, 420 IPC. 

              ದಿನಾಂಕ: 19-02-2021 ರಂದು ಬೆಳಿಗ್ಗೆ ಸುಮಾರು 10-00 ಗಂಟೆಯಿಂದ ದಿನಾಂಕ: 27-02-2021 ರಂದು ಮದ್ಯಾಹ್ನ ಸುಮಾರು 2-00 ಗಂಟೆಯವರೆಗೆ ಪ್ರಮೋದ ಎಮ್ ಹೆಚ್ ಸಾ ನೇಲ್ಲಿಕೊಪ್ಪ  ಇವರಿಗೆ ಮನೋಜಕುಮಾರ ಹಾಗೂ ಸಹಚರರು ಪೋನ್ ಮಾಡಿ WEB CSP ಸೇವಾ ಕೆಂದ್ರ ತೆರೆಯಲು 2 Laser Computer set,1 Biometric device, 1Passbook Lazer Printer,Card Swipe Machine Retailers & Retail Merchants,WiFi Routers, Internet Dongle ಗಳನ್ನು ಕೊಡುತ್ತೇವೆ ಅಂತಾ ನಂಬಿಸಿ, ನೋಂದಣಿ ಶುಲ್ಕ ಅಂತಾ ರೂ. 10,500/-, ಡಿಪಾಜಿಟ್ ಹಣ ಅಂತಾ ರೂ. 75,000/-ರೂಪಾಯಿಗಳನ್ನು, ಹೀಗೆ ಒಟ್ಟು ರೂ. 85,500/- ರೂಪಾಯಿಗಳನ್ನು ತಮ್ಮ SBI A/C No. 33924022205, IFSC Code SBIN0012371 0012371 ನೇದ್ದಕ್ಕೆ ಪ್ರಮೋದ ಇವರ ಕೆನರಾ ಬ್ಯಾಂಕ್ ಖಾತೆ ನಂ. 4220101001620 ಮತ್ತು ಎಸ್.ಬಿ.. ಅಕೌಂಟ್ ನಂ. 32124138498 ನೇದ್ದರಿಂದ ಹಣ ವರ್ಗಾವಣೆ ಮಾಡಿಸಿಕೊಂಡು, ಯಾವುದೇ ಉಪಕರಣಗಳನ್ನು ಕೊಡದೆ ಮೋಸ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬಂಕಾಪೂರ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:19/2021 ಕಲಂ: 279, 304(A) IPC.

             ದಿನಾಂಕ: 27-02-2021 ರಂದು ಸಂಜೆ 5-00 ಗಂಟೆ ಸುಮಾರಿಗೆ ಸಂಜೀವಕುಮಾರ ಮಹದೇವಪ್ಪ ಗುರಪ್ಪನವರ ಇತನು ತಾನು ನಡೆಸುತ್ತಿದ್ದ ಮೋಟಾರ್ ಸೈಕಲ್ ಮೋಟಾರ್ ಸೈಕಲ್ ನಂಬರ ಕೆಎ27 ಆರ್5017 ನೇದ್ದನ್ನು ಬಮ್ಮನಹಳ್ಳಿ ಕಡೆಯಿಂದ  ಲಕ್ಕಿಕೊಪ್ಪ  ಕಡೆಗೆ ನೀರಿನ ಟ್ಯಾಂಕ್ ಹತ್ತಿರ ರಸ್ತೆ ಮೇಲೆ  ಜೋರಾಗಿ ಮತ್ತು ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ ತನ್ನ ಮುಂದೆ ರಸ್ತೆ ಸೈಡಿಗೆ ಸೈಕಲ್ ಮೇಲೆ ಹೊರಟಿದ್ದ ಹನಮಂತಪ್ಪ ನಿಂಗಪ್ಪ ಗಿಡ್ಡಣ್ಣನವರ ವಯಾ: 65 ವರ್ಷ ಸಾ: ಲಕ್ಕಿಕೊಪ್ಪ ತಾ: ಶಿಗ್ಗಾಂವ ಇವನಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಆತನಿಗೆ ಹಿಂಬದಿ ತೆಲೆಗೆ,ಎಡಗಣ್ಣಿನ ಹತ್ತಿರ ಭಾರಿ ರಕ್ತ ಗಾಯ ಪಡಿಸಿದ್ದು  ಆತನಿಗೆ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲ ಮಾಡಿದಾಗ ರಾತ್ರಿ 8-20 ಗಂಟೆಗೆ ಮೃತ ಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2021 ವಿಷ ಸೇವಿಸಿ ವ್ಯಕ್ತಿ ಆತ್ಮತ್ಯೆ.

             ಅಪ್ಪು ತಂದೆ ಹಾಲೇಶ ಲಮಾಣಿ ವಯಾ 22 ವರ್ಷ, ಸಾಃಹುಣಸಿಕಟ್ಟಿಸಣ್ಣತಾಂಡ ತಾಃರಾಣೇಬೆನ್ನೂರು ಇವನಿಗೆ ರಂಜಿತಾ ನಾಗವತ್ ಸಾಃನೂಕಾಪೂರ ಇವರೊಂದಿಗೆ ಮದುವೆ ನಿಶ್ಚಿತರ್ಥವಾಗಿದ್ದು ಸದರಿ ರಂಜಿತಾ ಇವರ ಮೇಲೆ  ಅನುಮಾನ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ಬೇಜಾರ ಮಾಡಿಕೊಂಡು ದಿನಾಂಕಃ26-02-2021 ರಂದು 6-30 ಗಂಟೆ ಸುಮಾರಿಗೆ ನೂಕಾಪೂರ ಗ್ರಾಮದ ಶಿವಪ್ಪ ನಗವತ್ ಇವರ ಮನೆಯಲ್ಲಿ ವಿಷಕಾರಕ ಔಷದಿಯನ್ನು ಕುಡಿದು ಗುತ್ತಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಉಪಚಾರ ಪಡೆದುಕೊಂಡು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಉಪಚಾರ ಪಡೆದುಕೊಳ್ಳುವ ಕಾಲಕ್ಕೆ ರಾತ್ರಿ 9-30 ಗಂಟೆಗೆ ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿದ್ದು ಇವನ ಸಾವಿನಲ್ಲಿ ಅನುಮಾನ ಇರುವುದಿಲ್ಲ ಅಂತಾ ಶೇಖಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಿರೇಕೆರೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2021 ವ್ಯಕ್ತಿ ಸಾವು.

             ಮಂಜುನಾಥ @ ಮಂಜಪ್ಪ ತಂದೆ ಹನುಮಂತಪ್ಪ ಸಂಗಾಪುರ ವಯಾ: 44 ವರ್ಷ, ಜಾತಿ: ಹಿಂದೂ ಲಿಂಗಾಯಿತ, ಉದ್ಯೋಗ: ವ್ಯವಸಾಯ, ಸಾ: ತಾವರಗಿ ತಾ: ಹಿರೇಕೆರೂರ ಇವರು ಸುಮಾರು ದಿವಸಗಳಿಂದ ಆನಾರೋಗ್ಯದಲ್ಲಿ ಬಳಲುತ್ತಾ ಮನೆಯಲ್ಲಿ ಮಲಗಿದ್ದಾಗ ದಿನಾಂಕ: 19/02/2021 ರಂದು 18-30 ಗಂಟೆಯಿಂದ 19-00 ಗಂಟೆ ನಡುವಿನ ಅವದಿಯಲ್ಲಿ. ತಾವರಗಿ ಗ್ರಾಮದ ತಮ್ಮ ವಾಸದ ಮನೆಯಲ್ಲಿ  ವಿದ್ಯುತ್ ಶಾರ್ಟ ಸಕ್ಯೂಟ್ ಆಗಿ ಮನೆಗೆ ಬೆಂಕಿ ತಗುಲಿ ಮನೆಯಲ್ಲಿ ಮಲಗಿದ್ದ ಮಂಜುನಾಥ ಇವರ ದೇಹದ ಭಾಗಗಳು ಸುಟ್ಟು ನಂತರ ಕೂಡಿದ ಜನರು ಉಪಚಾರಕ್ಕೆ ಹಿರೇಕೆರೂರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಉಪಚಾರಪಡಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಧಾಖಲಿಸಿ, ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ದಾವಣಗೇರೆ ಎಸ್.ಎಸ್. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ  ದಿನಾಂಕ: 26/02/2021 ರಂದು ಮಧ್ಯಾಹ್ನ 03-45 ಗಂಟೆಗೆ ಉಪಚಾರ ಫಲಿಸದೇ ತೀರಿಕೊಂಡಿದ್ದು ಮೃತನ ಸಾವಿನಲ್ಲಿ ಯಾವದೇ ಸಂಶಯವಿರುವದಿಲ್ಲಾ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 04-03-2021 12:04 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ