ಅಭಿಪ್ರಾಯ / ಸಲಹೆಗಳು

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:18/2021 ಕಲಂ: INDIAN MOTOR VEHICLES ACT, 1988 (U/s-134(A&B),187 ; 279, 337, 338, 304(A) IPC.

                ದಿನಾಂಕ: 25/03/2021 ರಂದು ರಾತ್ರಿ 08-30 ಗಂಟೆಗೆ ನೆಗಳೂರ ಗ್ರಾಮದ ಮುದವಪ್ಪ ಹನಮಪ್ಪ ಸುಣಗಾರ ಮತ್ತು ರಾಜು ನಾಗಪ್ಪ ಕರಿಗಾರ, ರಾಜು ಕೋಟೆಪ್ಪ ಸುಣಗಾರ ಇವರು ಟಿ ವಿ ಎಸ್ ಎಕ್ಸೆಲ್ ನಂಬರ ಕೆಎ-27/ಇಕ್ಯೂ-3260  ನೇದ್ದರಲ್ಲಿ 03 ಜನರು ಕೂಡಿ ಗುತ್ತಲದಿಂದ ನೆಗಳೂರಿಗೆ ಬರುತ್ತಿರುವಾಗ ಯಾವುದೋ ಒಂದು ವಾಹನದ ಚಾಲಕನು ನೆಗಳೂರ ಕಡೆಯಿಂದ ಗುತ್ತಲಕಡೆಗೆ ವಾಹನವನ್ನು ಅತಿ ಜೋರಾಗಿ ಅಲಕ್ಷತನದಿಂದ ಜನರಿಗೆ ಅಪಾಯವಾಗುವಂತೆ ನಡೆಸಿಕೊಂಡು ಬಂದು ಟಿ.ವಿ.ಎಸ್. ಎಕ್ಸಲ್ ನಂಬರ ಕೆಎ-27/ಇಕ್ಯೂ-3260 ನೇದ್ದಕ್ಕೆ ಢಿಕ್ಕಿ ಪಡಿಸಿ ಅಪಘಾತ ಮಾಡಿ ವಾಹನವನ್ನು ನಿಲ್ಲಿಸದೆ ಹಾಗೆ ಹೋಗಿದ್ದು, ಮುದುವಪ್ಪ ಇವರ ತಲೆಗೆ ಬಲವಾದ ಗಾಯಗಳಾಗಿ ಸ್ಥಳದಲ್ಲಿಯೆ ಮರಣ ಹೊಂದಿದ್ದು ಅಲ್ಲದೆ ರಾಜು ನಾಗಪ್ಪ ಕರಿಗಾರ, ರಾಜು ಕೋಟೆಪ್ಪ ಸುಣಗಾರ ಇವರಿಗೆ ಗಾಯಗಳಾಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಸಿಇಎನ್ ಕ್ರೈಮ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:23/2021 ಕಲಂ:INFORMATION TECHNOLOGY ACT 2008 (U/s-66(C),66(D)); 419,420 IPC.

                ಚನ್ನವಿರಯ್ಯ ಶಿವಪುತ್ರಯ್ಯ ಹರಕುಣಿಮಠ ಸಾ ಸಂಗೂರ ಇವರು ದಿನಾಂಕ: 24-08-2014 ರಂದು ಬೆಳಿಗ್ಗೆ ಸುಮಾರು 10:00 ಗಂಟೆಯಿಂದ ದಿನಾಂಕ: 18-03-2021 ರಂದು ಮದ್ಯಾಹ್ನ 12:30 ಗಂಟೆಯವರೆಗೆ ಒಬ್ಬ ಅನಾಮದೇಯ ವ್ಯಕ್ತಿ ತನ್ನ ವಾಟ್ಸಪ್ ನಂಬರ್ +5434008, +2801914, 7562058134, 0016186190819, +923044351578 ಮತ್ತು +923016405412 ನೇದವುಗಳಿಂದ ಚನ್ನವಿರಯ್ಯ ಇವರ ಮೋ.ನಂ: 9686338348 ನೇದಕ್ಕೆ ಹಾಗೂ ಶ್ರೀನಿವಾಸನ ಪೋನ್ ನಂ:9739485724 ನೇದಕ್ಕೆ ಫೋನ್  ಮಾಡಿ ಕೌನ್ ಬನೇಗಾ ಕರೋಡಪತಿ ಹೆಡ್ ಆಫೀಸ್ ಸಿಬ್ಬಂದಿ ಶರ್ಮಾ ಅಂತಾ ಪರಿಚಯ ಮಾಡಿಕೊಂಡು, 25 ಲಕ್ಷ ರೂಪಾಯಿಗಳು ಕೌನ್ ಬನೇಗಾ ಕರೋಡಪತಿ ಯಿಂದ ಬಹುಮಾನ ಬಂದಿದೆ ಅಂತಾ ನಂಬಿಸಿ, ಬಹುಮಾನದ ಹಣವನ್ನು ಖಾತೆಗೆ ಜಮಾ ಮಾಡಲು ಟ್ಯಾಕ್ಸ್ ಹಣ, ಸರ್ವಿಸ್  ಚಾರ್ಜ, ಜಿಎಸ್ಟಿ ಟ್ಯಾಕ್ಸ್ ಹಣ ಕಟ್ಟಬೇಕು ಅಂತಾ ಹೇಳಿ, ಶರ್ಮಾ ಎಂಬುವವನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಶನಲ್ ಬ್ಯಾಂಕ್ನ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ. 14,86,000/-ಗಳ ಹಣವನ್ನು ಹಾಕಿಸಿಕೊಂಡು ಮೋಸ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ                                                                                                                           

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:37/2021 ಕಲಂ:306 IPC

              ಶಶಿಕುಮಾರ ತಂದೆ ಗುಡ್ಡಪ್ಪ ಬಿಷ್ಟಪ್ಪನವರ, ಸಾ: ಕಚವಿ, ತಾ: ಹಿರೇಕೆರೂರು ಇತನು ತನ್ನ ಹೆಂಡತಿಯೊಂದಿಗೆ ಹಾವೇರಿ ತಾಲೂಕು ಹೊಸಳ್ಳಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಸದರಿ ಶಶಿಕುಮಾರನಿಗೆ ಕೊಟೆಪ್ಪ ಸಾ|| ಕರ್ಜಗಿ ಹಾಗೂ ಇವರ ಸಹಚರರು ಸೇರಿ ಮಾನಸಿಕವಾಗಿ ಕಿರುಕುಳ ಕೊಡುತ್ತಾ ಹೊಡಿ ಬಡಿ ಮಾಡುತ್ತಾ ಬಂದಿದ್ದರಿಂದ, ಶಶಿಕುಮಾರನು ಮನಸ್ಸಿಗೆ ಹಚ್ಚಿಕೊಂಡು ನೊಂದುಕೊಂಡು, ದಿನಾಂಕ 25-03-2021 ರಂದು ಮದ್ಯಾಹ್ನ 01-30 ಗಂಟೆಯಿಂದ 03-15 ಗಂಟೆಯ ನಡುವಿನ ಅವಧಿಯಲ್ಲಿ ತಾನು ಬಾಡಿಗೆ ತರಿಕೆಯಿಂದ ವಾಸವಾಗಿದ್ದ ಹೊಸಳ್ಳಿ ಗ್ರಾಮದ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:60/2021 ಕಲಂ: 506, 34, 504, 448, 323, 324 IPC

              ಸುರೇಶ ಜೋಗೇರ ಸಾ||ಹೇಸರೂರ ಹಾಗೂ  ಫಕ್ಕೀರೇಶ ಜೋಗೇರ ಇವರು  ಖಾಸ ಅಣ್ಣ-ತಮ್ಮಂದಿರಿದ್ದು  ಇವರುಗಳು ತಮ್ಮ ಪಿತ್ರಾರ್ಜಿತ ಆಸ್ತಿಗಳನ್ನು ಅಪಸಾತ್ ಹಂಚಿಕೆಯನ್ನು ಮಾಡಿಕೊಂಡಿದ್ದು ಈ ಆಸ್ತಿಗಳನ್ನು  ವಾಟ್ನಿ ಮಾಡಿಕೊಳ್ಳುವ ಸಲುವಾಗಿ ವೈಮನಸ್ಸು ಬೆಳೆದಿದ್ದು ಈ ಬಗ್ಗೆ ದ್ವೇಷ ಸಾದಿಸುತ್ತಾ ಬಂದಿದ್ದು ಇರುತ್ತದೆ. ಹಿಗೀರುವಾಗ ದಿನಾಂಕ-20/03/2021 ರಂದು ರಾತ್ರಿ 11-30 ಗಂಟೆಯಿಂದ 12-00 ಗಂಟೆ ನಡುವಿನ ಅವಧಿಯಲ್ಲಿ ಪಕ್ಕಿರೇಶ ಹಾಗೂ ಇವರ ಸಹಚರರು ಏಕೋದ್ದೇಶದಿಂದ ಸುರೇಶ ಇವರ ಮನೆಯೊಳಗೆ ಅತೀಕ್ರಮಣ ಪ್ರವೇಶ ಮಾಡಿ ಲೇ ಬೋಸುಡಿಮಗನಾ  ಹೊಲ ವಾಟ್ನಿ ಮಾಡಿಕೊಡವಲ್ಲಿ ಅಂತಾ ಅವಾಚ್ಯ ಬೈದಾಡುತ್ತಾ ಸುರೇಶ ಹಾಗೂ ಆತನ ಹೆಂಡತಿಗೆ ಬಾಯಿಂದ ಕಡೆದು ಗಾಯ ಪಡಿಸಿ ಕೈಯಿಂದ ಹೊಡೆದು ದು:ಖಾಪತ್ ಪಡಿಸಿದ್ದು ಅಲ್ಲದೇ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವಧ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:08/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                 ಗೋಪಾಲರಡ್ಡಿ ತಂದೆ ಸೋಮರಡ್ಡಿ ಜಕ್ಕರಡ್ಡಿ ವಯಾ:48 ವರ್ಷ ಜಾತಿ: ಹಿಂದೂ ರಡ್ಡಿ ಉದ್ಯೂಗ: ಎನ್ ಡಬ್ಲೂ ಕೆ ಎಸ್ ಆರ್ ಟಿ ಚಾಲಕ ಸಾ:ಮಣಕೂರ ತಾ: ರಾಣೇಬೆನ್ನೂರ ಇವನಿಗೆ ಇತ್ತಿಚೆಗೆ ತಮ್ಮ ಎನ್ ಡಬ್ಲೂ ಕೆ ಎಸ್ ಆರ್ ಟಿ ಸಂಸ್ಥೆಯಲ್ಲಿ ಸರಿಯಾಗಿ ಸಂಬಳ ಹಾಕದೆ ಇರುವದರಿಂದ ಮನೆತನದ ಸಂಬಂದ ಅಲ್ಲಲ್ಲಿ ಸಾಲ ಮಾಡಿದ್ದರಿಂದ ಮನಸ್ಸಿಗೆ ಬೇಜಾರಾಗಿ ಮಾನಸಿಕ ಮಾಡಿಕೊಂಡು ದಿನಾಂಕ: ದಿನಾಂಕ: 25-03-2021 ರಂದು 19-00 ಗಂಟೆಯಿಂದ ದಿನಾಂಕ:26-03-2021 ರಂದು 00-30 ಗಂಟೆ ನಡುವಿನ ಅವದಿಯಲ್ಲಿ ಮಣಕೂರು ಗ್ರಾಮದ ತನ್ನ ಜಮೀನದಲ್ಲಿರುವ ಸಿದ್ದಾರೂಢ ಮಠದ ಹತ್ತಿರ ಇರುವ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡು ಮರಣ ಹೊಂದಿದ್ದು ಇರುತ್ತದೆ ಇವನ ಸಾವಿನಲ್ಲಿ ಯಾವುದೆ ಸಂಶಯ ಯಾರ ಮೇಲೂ ಇರುವದಿಲ್ಲ ಅಂತಾ ಸುನಂದಾ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:09/2021 ವ್ಯಕ್ತಿ ಸಾವು.

                 ನಿಂಗಪ್ಪ ತಂದೆ ನೀಲಪ್ಪ ಓಲೇಕಾರ ವಯಾ: 28 ವರ್ಷ, ಜಾತಿ: ಹಿಂದೂ-ವಾಲ್ಮೀಕಿ, ಉದ್ಯೋಗ: ಗೌಂಡಿ ಕೆಲಸ, ಸಾ: ಹಳೇಸಿಡೇನೂರ ಇವರು ದಿನಾಂಕ: 26-03-2021 ರಂದು ಮದ್ಯಾಹ್ನ 02-30 ಗಂಟೆಯಿಂದ 03-45 ಗಂಟೆಯ ನಡುವಿನ ಅವದಿಯಲ್ಲಿ ಹೆಡಿಯಾಲ ಗ್ರಾಮದ ಹೊಂಡದಲ್ಲಿ ಈಜಾಡಲು ಹೋದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮರಣ ಹೊಂದಿದ್ದು ಇರುತ್ತದೆ ವಿನಹ ಇವರ ಸಾವಿನಲ್ಲಿ ಯಾರ ಮೇಲೂ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಯಲ್ಲಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 30-03-2021 06:12 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ