ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:11/2021 ಮಹಿಳೆ ಕಾಣೆ

              ಅನ್ನಪೂರ್ಣ ತಂದೆ ಬಸವಣ್ಣೇಪ್ಪ ಹುರಳಿಕುಪ್ಪಿ, ವಯಾ: 45 ವರ್ಷ ಇವಳು ಹಾವೇರಿ ಅಶ್ವಿನಿನಗರ 2 ನೇ ಕ್ರಾಸ್ ಮನೆಯಲ್ಲಿಂದ ದಿನಾಂಕ: 23-02-2021 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಎಲ್ಲಿಯೊ ಹೋಗಿ ಕಾಣೆಯಾಗಿದ್ದು ಕಾಣೆಯಾದ ಅನ್ನಪೂರ್ಣ ಇವರನ್ನು ಈವರೆಗೆ ತಮಗೆ ತಿಳಿದಕಡೆಯಲ್ಲಾ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದ ಅನ್ನಪೂರ್ಣ ಇವರನ್ನು ಹುಡುಕಿಕೊಡಬೇಕೆಂದು ಚಂದ್ರಶೇಖರ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:25/2021 ಕಲಂ:INDIAN MOTOR VEHICLES ACT, 1988 (U/s-187);  279,304(A) IPC. 

              ದಿನಾಂಕ:25-02-2021 ರಂದು 16-00 ಗಂಟೆ ಸುಮಾರಿಗೆ ಇಟಗಿ-ಮುದೇನೂರ ರಸ್ತೆಯ ಮೇಲೆ ಟಾಟಾ ಟಿಪ್ಪರ ಲಾರಿ ನಂಬರ: ಕೆಎ-32/ಸಿ-2194 ನೇದ್ದನ್ನು ಅದರ ಚಾಲಕನು ಮುದೇನೂರ ಇಟಗಿ ರಸ್ತೆ ಮೇಲೆ ಮುದೇನೂರ ಕಡೆಯಿಂದ ಇಟಗಿ ಕಡೆಗೆ ಅತೀ ಜೋರಿನಿಂದ ವ ತಾತ್ಸಾರತನ್ನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಗೋವಿಂದರೆಡ್ಡಿ ಎರೇಸಿಮಿ ಇವರ ಜಮೀನದ ಎದುರಿಗೆ ಸಿದ್ದಪ್ಪ ತಂದೆ ಹನುಮಂತಪ್ಪ ನಾಗೇನಹಳಿ ಸಾ:ಮುದೇನೂರ ಇತನು ತನ್ನ ಮೋಟಾರ ಸೈಕಲ್ ನಂಬರ: ಕೆಎ-27/ಇಎ-4778 ನೇದ್ದರಲ್ಲಿ ತನ್ನ ಹೆಂಡತಿ ಅನಸೂಯಾ ಕೋಂ ಸಿದ್ದಪ್ಪ ನಾಗೇನಹಳ್ಳಿ ವಯಾ 32 ವರ್ಷ 3] ವನೀತಾ ತಂದೆ ಸಿದ್ದಪ್ಪ ನಾಗೇನಹಳ್ಳಿ ವಯಾ 11 ವರ್ಷ 4] ವಿನೋದಾ ತಂದೆ ಸಿದ್ದಪ್ಪ ನಾಗೇನಹಳ್ಳಿ ಸಾ: ಎಲ್ಲರೂ ಮುದೇನೂರ ಕೂಡ್ರಿಸಿಕೊಂಡು ಇಟಗಿ ಕಡೆಯಿಂದ ಬಂದು ರಸ್ತೆ ಎಡಸೈಡಿನಲ್ಲಿ ನಿಲ್ಲಿಸಿ ತನ್ನ ಮಕ್ಕಳಿಗೆ ನೀರು ಕುಡಿಸುತ್ತಿದ್ದವರಿಗೆ ಲಾರಿಯನ್ನು ಅತೀಜೋರಾಗಿ ಬಂದು ರಾಂಗ ಸೈಡಿಗೆ  ಹೋಗಿ ಡಿಕ್ಕಿ ಮಾಡಿ ಮೋಟಾರ ಸೈಕಲ್ ಮತ್ತು ಅದರ ಹತ್ತಿರ ನಿಂತವರ ಮೇಲೆ ಹಾಯಿಸಿ 1] ಸಿದ್ದಪ್ಪ ತಂದೆ ಹನುಮಂತಪ್ಪ ನಾಗೇನಹಳ್ಳಿ ವಯಾ 40 ವರ್ಷ 2] ಅನಸೂಯಾ ಕೋಂ ಸಿದ್ದಪ್ಪ ನಾಗೇನಹಳ್ಳಿ ವಯಾ 32 ವರ್ಷ3] ವನೀತಾ ತಂದೆ ಸಿದ್ದಪ್ಪ ನಾಗೇನಹಳ್ಳಿ ವಯಾ 11 ವರ್ಷ 4] ವಿನೋದಾ ತಂದೆ ಸಿದ್ದಪ್ಪ ನಾಗೇನಹಳ್ಳಿ ವಯಾ: 09 ಸಾ: ಎಲ್ಲರೂ ಮುದೇನೂರ ತಾ: ರಾಣೆಬೆನ್ನೂರ, ಇವರಿಗೆ ಮಾರಣಾಂತಿಕ ಗಾಯಗೊಳಿಸಿ ಸ್ಥಳದಲ್ಲಿಯೇ ಮರಣಪಡಿಸಿ ತನ್ನ ಟಿಪ್ಪರ ಲಾರಿಯನ್ನು ರಸ್ತೆ ಬಲಸೈಡಿನಲ್ಲಿ ಪಲ್ಟಿ ಕೆಡವಿ ಈ ಅಪಘಾತದ ಸುದ್ದಿಯನ್ನು ಪೊಲೀಸ್ ಠಾಣೆಗೆ ತಿಳಿಸದೇ ಲಾರಿಯನ್ನು ಬಿಟ್ಟು ಓಡಿಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:44/2021 ಕಲಂ:380, 457 IPC.

             ಹಾನಗಲ್ಲ ಪೊಲೀಸ ಠಾಣೆಯ ಹದ್ದಿ ಪೈಕಿ ಮೂಡೂರ ಗ್ರಾಮದ ಮರಿಯಮ್ಮದೇವಿ ಮತ್ತು ದುರ್ಗಮ್ಮ ದೇವಿ ದೇವಸ್ಥಾನದಲ್ಲಿ ದಿನಾಂಕ; 22-02-2021 ರಂದು ರಾತ್ರಿ 08-00 ಘಂಟೆಯಿಂದ ದಿನಾಂಕ; 23-02-2021 ರಂದು ಬೆಳಗಿನ ಜಾವ 05-00 ಘಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮರಿಯಮ್ಮದೇವಿ ಮತ್ತು ದುರ್ಗಮ್ಮ ದೇವಿ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಕೀಲಿಯನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ದೇವಸ್ಥಾನದ ಒಳಗಡೆ ಹೋಗಿ ಗರ್ಭಗುಡಿಯಲ್ಲಿರುವ ಮರಿಯಮ್ಮ ದೇವಿಯ ಮೂರ್ತಿಯ ಮೇಲೆ ಇದ್ದ 1) 02 ಗ್ರಾಂ ತೂಕದ ಬಂಗಾರದ 02 ಸಣ್ಣ ತಾಳಿಗಳು ಅ;ಕಿ; 6000/- ರೂಗಳು, 2) 01 ಗ್ರಾಂ ತೂಕದ ಬಂಗಾರದ 01 ಮೂಗುತಿ ಅ;ಕಿ;3000/- ರೂಗಳು, ಹಾಗೂ ದುರ್ಗಾದೇವಿ ಮೂರ್ತಿಯ ಮೇಲೆ ಇದ್ದ 3) 02 ಗ್ರಾಂ ತೂಕದ ಬಂಗಾರದ 02 ಸಣ್ಣ ತಾಳಿಗಳು ಅ;ಕಿ; 6000/- ರೂಗಳು, 4) 01 ಗ್ರಾಂ ತೂಕದ ಬಂಗಾರದ 01 ಮೂಗುತಿ ಅ;ಕಿ; 3000/- ರೂಗಳು ಹೀಗೇ ಮರಿಯಮ್ಮ ಮತ್ತು ದುರ್ಗಮ್ಮ ದೇವಿಯ ಮೂರ್ತಿಯ ಮೇಲೆ ಇದ್ದ ಒಟ್ಟು 06 ಗ್ರಾಂ ತೂಕದ ಬಂಗಾರದ ಆಭರಣಗಳು ಒಟ್ಟು ಅ;ಕಿ; 18,000/- ರೂಗಳು ನೇದ್ದವುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:06/2021 ವ್ಯಕ್ತಿ ಸಾವು.

                  ಹನುಮಂತ ತಂದೆ ಮಹಾದೇವಪ್ಪ ಲಮಾಣಿ ವಯಾ-25  ವರ್ಷ ಜಾತಿ: ಹಿಂದೂ ಲಮಾಣಿ, ಉದ್ಯೋಗ: ಕೂಲಿಕೆಲಸ  ಸಾ: ಚಿಕ್ಕಮರಳಿಹಳ್ಳಿ  ತಾ: ಸವಣೂರ  ಇವರ ತಂದೆ ತಮ್ಮ ಮನೆಯಲ್ಲಿ ಅಲಸಂದಿ ಮತ್ತು ಮೆಕ್ಕೆಜೋಳಕ್ಕೆ ಹೊಡೆಯುವ ವಿಷವನ್ನು ಸವೆನ್ ಅಪ್ ಬಾಟಲಿಯಲ್ಲಿ ಹಾಕಿ ಇಟ್ಟಿದ್ದು, ಅದನ್ನು ತಿಳಿಯದೇ ಅದನ್ನು ಸವೆನ್ ಅಪ್ ಅಂತಾ ತಿಳಿದು ಹನುಮಂತನು ಕುಡಿದಿದ್ದು ನಂತರ ಅಸ್ವಸ್ಥನಾಗಿ ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದನುನಂತರ ಅವನಿಗೆ ಉಪಚಾರಕ್ಕೆ ಕಡಕೋಳ ಸರ್ಕಾರಿ ಆಸ್ಪತ್ರೆ, ಲಕ್ಷ್ಮೇಶ್ವರ ಮಲ್ಲಾಡದ ಆಸ್ಪತ್ರೆ, ಸವಣೂರ ಸರ್ಕಾರಿ ಆಸ್ಪತ್ರೆ ನಂತರ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ ಫಲಿಸದೇ ದಿನಾಂಕ: 25-02-2021 ರಂದು ಬೆಳಗಿನ 4-00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಅದು ಬಿಟ್ಟು ಅವನ ಸಾವಿನಲ್ಲಿ ಬೇರೆನೂ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತನ ತಂದೆ ಮಹದೇವಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 04-03-2021 11:59 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ