ಅಭಿಪ್ರಾಯ / ಸಲಹೆಗಳು

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:115/2021 ವ್ಯಕ್ತಿ ಕಾಣೆ.

                  ನಾಗಪ್ಪ ತಂದೆ ದ್ಯಾಮಣ್ಣ ಕುಲಕರ್ಣಿ ವಯಸ್ಸು: 32 ವರ್ಷ, ಸಾ, ಕೊಣನತಂಬಿಗಿ  ತಾ: ವ ಜಿ: ಹಾವೇರಿ. ಇತನು  ಕೊಣತಂಬಿಗಿ ಗ್ರಾಮಕ್ಕೆ ಬಂದಿದ್ದ, ತನ್ನ ದೊಡ್ಡಮ್ಮಳ ಮಗಳಾದ ರೇಖಾ ಅಂಬುವವರೊಂದಿಗೆ ದಿನಾಂಕ 22-08-2021 ರಂದು ಕರ್ಜಗಿ ಗ್ರಾಮಕ್ಕೆ ಹೋಗಿ ಅಲ್ಲಿಯೇ ಇದ್ದು, ದಿನಾಂಕ 23-08-2021 ರಂದು ಬೆಳಗಿನ ಜಾವ 05-00 ಗಂಟೆ ಸುಮಾರಿಗೆ  ಕರ್ಜಗಿ ಗ್ರಾಮದ ತನ್ನ ಸಹೋದರಿ ಮನೆಯಿಂದ ಯಾರಿಗೂ ಏನೂ ಹೇಳದೆ ಕೇಳದೇ ಮನೆಯಿಂದ ಹೋಗಿ, ಕರ್ಜಗಿ ಗ್ರಾಮಕ್ಕೆ ಹೋಗದೇ ಮತ್ತು ಕೊಣತಂಬಿಗಿ ಗ್ರಾಮಕ್ಕೆ ಸಹ ಬಾರದೇ  ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಎಲ್ಲಾ ಕಡೆಗೆ ಹುಡುಕಾಡಿದ್ದು ಸಿಕ್ಕಿರುವದಿಲ್ಲ  ಕಾರಣ ಕಾಣೆಯಾದ ನಾಗಪ್ಪ ಇವರನ್ನು ಪತ್ತೆ ಮಾಡಿಕೊಡಬೇಕೆಂದು ಪದ್ಮಾವತಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:128/2021 ಕಲಂ: 302 IPC.

                  ದಿನಾಂಕ: 23-08-2021 ರಂದು ಸಂಜೆ 6-30 ಗಂಟೆಯಿಂದ ದಿನಾಂಕ: 24-08-2021 ರಂದು ಮುಂಜಾನೆ 9-10 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಯಾವುದೋ ಕಾರಣಕ್ಕಾಗಿ ದ್ವೇಷದಿಂದ ರಾಣೇಬೆನ್ನೂರು ಶಹರದ ಟಿ ಎ ಪಿ ಸಿ ಎಂ ಎಸ್ ಆವರಣದ ಗೋಡೌನ್ ನಂಬರ 36 ಮುಂದೆ ಸುಮಾರು 40-42 ವರ್ಷ ವಯಸ್ಸಿನ ಗಂಡಸು ವ್ಯಕ್ತಿಗೆ ಹೊಡೆದು ಕೆಡವಿ ಕಲ್ಲನ್ನು ತಲೆಯ ಮೇಲೆ ಎತ್ತಿ ಹಾಕಿ ಕೊಲೆ ಮಾಡಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:12/2021 ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ.

                     ನಿರ್ಮಲಾ ಕೋಂ ನಾಗರಾಜ ತೆಪ್ಪದ ವಯಾ: 52 ವರ್ಷ ಸಾ: ಸಾ: ಹಾವೇರಿ, ರಾಜೇಂದ್ರನಗರ 3ನೇ ಕ್ರಾಸ್ ಇವರಿಗೆ ಮದುಮೇಹದ ಖಾಯಿಲೆ ಇದ್ದು ಎಡಗಾಲ ಹೆಬ್ಬೆರಳನ್ನು ಕಟ್ ಮಾಡಿ ತೆಗೆದಿದ್ದು, ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ತನಗಿದ್ದ ಮಧುಮೇಹ ಖಾಯಿಲೆ ಆರಾಮ ಆಗಲಿಲ್ಲ ಅಂತ ಚಿಂತಿಸಿ, ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 23-08-2021 ರಂದು ಸಾಯಂಕಾಲ 19-00 ಘಂಟೆಯಿಂದ   ರಾತ್ರಿ 23-30 ಗಂಟೆಯ ನಡುವಿನ ಅವಧಿಯಲ್ಲಿ ತಾವು ವಾಸವಿದ್ದ ಮನೆಯ ಹಿಂದೆ ಇರುವ ಪಾಳುಬಿದ್ದ ಮನೆಯಲ್ಲಿನ ಅಡ್ಡ ತೊಲೆಗೆ ತನ್ನಷ್ಟಕ್ಕೆ ತಾನೇ ಸೀರೆ ಕಟ್ಟಿ ಕುತ್ತಿಗೆಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈಕೆಯ ಸಾವಿನಲ್ಲಿ ಯಾವುದೇ ಸಂಶಯ ಇರುವದಿಲ್ಲ ಅಂತಾ ಮೃತಳ ಗಂಡ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:20/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ .

                     ಪ್ರವೀಣ ತಂದೆ ಫಕ್ಕೀರಪ್ಪ ನಿಂಬಕ್ಕನವರ ವಯಾ- 30 ವರ್ಷ ಜಾತಿ-ಹಿಂದೂ ಗಂಗಾಮತ ಉದ್ಯೋಗ- ಒಕ್ಕುಲುತನ ಸಾ- ಹಳೇಹಲಸೂರ ತಾ- ಸವಣೂರ ಇವರ ತಂದೆಯ ಹೆಸರಿನಲ್ಲಿ ಹಳೇಹಲಸೂರ ಹದ್ದಿಯಲ್ಲಿ ರಿ.ಸ.ನಂಬರ- 22/ಬ+1 ಕ್ಷೇತ್ರ 2 ಎಕರೆ 2 ಗುಂಟೆ ಮತ್ತು ಕಲ್ಮಡವು ಹದ್ದಿಯಲ್ಲಿ ರಿ.ಸ.ನಂಬರ- 12 ಕ್ಷೇತ್ರ 1 ಎಕರೆ 30 ಗುಂಟೆ ಜಮೀನು ಇರುತ್ತದೆ. ಅದರ ಸಾಗುವಳಿಯನ್ನು ಪ್ರವೀಣ ಇವರು ನೋಡಿಕೊಂಡು ಹೋಗುತ್ತಿದ್ದರು. ತಮ್ಮ ಜಮೀನದ ಉಳುಮೆಗಾಗಿ ಸನ್ 2019 ರಲ್ಲಿ ಕೆ.ವ್ಹಿ.ಜಿ. ಬ್ಯಾಂಕ್ ತವರಮೆಳ್ಳಿಹಳ್ಳಿಯಲ್ಲಿ 1,50,000/- ರೂಪಾಯಿಗಳ, ಸನ್ 2016 ನೇ ಸಾಲಿನಲ್ಲಿ ಹಾವೇರಿಯ ಸುವರ್ಣ  ಬ್ಯಾಂಕ್ ದಲ್ಲಿ 1,50,000/- ರೂಪಾಯಿಗಳ ಸಾಲವನ್ನು ಮಾಡಿ ನಮ್ಮ ಜಮೀನದ ಉಳುಮೆಗೆ ಖರ್ಚು ಮಾಡಿದ್ದರು. ಆದರೆ ಕಳೆದ 3 ವರ್ಷಗಳಿಂದ ಸುರಿದ ಮಳೆಗೆ ನಮ್ಮ ಹೊಲದಲ್ಲಿ ವರದಾ ಹೊಳೆಯ ನೀರು ಹೋಗಿ ತಮ್ಮ ಹೊಲದಲ್ಲಿ ಹಾಕಿದ ಬೆಳೆಯು ಸಂಪೂರ್ಣ ಲುಕ್ಷಾನ್ ಆಗಿತ್ತು. ಇದರಿಂದ ಮಾನಸಿಕ ಮಾಡಿಕೊಂಡು ಜೀಚನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ-23/08/2021 ರ ರಾತ್ರಿ ತಮ್ಮ ಮನೆಯಲ್ಲಿ ಹಗ್ಗದಿಂದ ಉರುಲು ಹಾಕಿಕೊಂಡು ಜೋತಾಡುತ್ತಿದ್ದವನಿಗೆ ಹಗ್ಗದಿಂದ ಬಿಚ್ಚಿ ಉಸಿರಾಡುತ್ತಿದ್ದವನಿಗೆ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ ಫಲಿಸದೇ ದಿನಾಂಕ-23/08/2021 ರಂದು ರಾತ್ರಿ 21-00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಅದೆ. ಅವನ  ಸಾವಿನಲ್ಲಿ ಬೇರೆನೂ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:21/2021 ವ್ಯಕ್ತಿ ಸಾವು .

                     ಲಿಂಗರಾಜ ತಂದೆ ಬಸವಣ್ಣೆಪ್ಪ ಮೂಲಿಮನಿ ವಯಾ- 40 ವರ್ಷ ಜಾತಿ- ಹಿಂದೂ ವಾಲ್ಮೀಕಿ, ಉದ್ಯೋಗ- ಕೂಲಿಕೆಲಸ ಸಾ- ಹೊಸಳ್ಳಿ ತಾ- ಸವಣೂರ ಇವನು ದಿನಾಂಕ-22-08-2021 ರಂದು ಸಂಜೆ- 7-30 ಗಂಟೆ ಸುಮಾರಿಗೆ ತನ್ನ ಹೆಂಡತಿಯ ಊರಾದ ಕಲ್ಮಡ ಗ್ರಾಮಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋಗಿದ್ದನು. ನಂತರ ದಿನಾಂಕ-24-08-2021 ರಂದು ಕಲ್ಮಡವು ಗ್ರಾಮದಿಂದ ಯಾರೋ ಒಬ್ಬರು ಲಿಂಗರಾಜ ಇವರ ತಂದೆಯ ಮೊಬೈಲ್ ನಂಬರಿಗೆ ಪೋನ್ ಮಾಡಿ ನಿಮ್ಮ ಮಗ ದೇವರ ಗುಡಿಯಲ್ಲಿ ಮಲಗಿರುತ್ತಾನೆ ಅಂತಾ ಹೇಳಿ ಪೋನ್ ಕಟ್ ಮಾಡಿದ್ದು , ನಂತರ ವರದಿಗಾರರು ಅವರಿಗೆ ವಾಪಾಸ್ ಪೋನ್ ಮಾಡಿ ನನ್ನ ಮಗ ಯಾಕ ಗುಡಿಯಲ್ಲಿ ಮಲಗಿರುತ್ತಾನೆ ಅಂತಾ ಕೇಳಿ ವಿಚಾರಿಸಲು ಅವರು ನಮಗೆ ಏನು ಗೊತ್ತಲ್ಲಾರಿ ಅಂತಾ ಹೇಳಿದ್ದು, ಕೂಡಲೇ ವರದಿಗಾರರು ತಮ್ಮ ಓಣಿಯ  ಸುರೇಶ ತಂದೆ ಹನುಮಂತಪ್ಪ ಮೂಲಿಮನಿ, ಮಲ್ಲಪ್ಪ ತಂದೆ ಶಿವಮೂರ್ತೆಪ್ಪ ಚಿಕ್ಕಮುಗದೂರ ಇವರಿಬ್ಬರಿಗೂ ಸೇರಿ ಮೋಟಾರ್ ಸೈಕಲ್ ದಲ್ಲಿ ಕಲ್ಮಡವು ಗ್ರಾಮಕ್ಕೆ ಕಳುಹಿಸಿದ್ದು, ಅವರು ಅಲ್ಲಿ ಹೋಗಿ ಪೋನ್ ಮಾಡಿ ಲಿಂಗರಾಜನಿಗೆ ಅಂಬುಲೇನ್ಸ್ ದಲ್ಲಿ ಸವಣೂರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗ್ಯಾರ ನೀವು ಅಲ್ಲಿಗೆ ಬರ್ರಿ ಅಂತಾ ಹೇಳಿದ್ದು. ನಂತರ ವರದಿಗಾರರು ತನ್ನ ಹೆಂಡತಿ ಮತ್ತು ಊರಿನ ಹಿರಿಯರ ಜೊತೆಗೆ ಸವಣೂರ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲು ಅಲ್ಲಿ ಲಿಂಗರಾಜ ಇವನು ಮೃತಪಟ್ಟಿದ್ದನು. ಅವನ ಶವವನ್ನು ಶವಾಗಾರದಲ್ಲಿ ಹಾಕಿದ್ದರು. ಅವನ ಮುಖದ ಮೇಲೆ ಕೆತ್ತಿದ ಗಾಯಗಳು ಆಗಿದ್ದವು. ಇನ್ನುಳಿದಂತೆ ಮೈಮೇಲೆ ಯಾವುದೇ ಗಾಯ ಪೆಟ್ಟುಗಳು ಕಂಡುಬರುತ್ತಿಲ್ಲ. ಲಿಂಗರಾಜನ ಶವದ ಹತ್ತಿರ ಅವನ ಹೆಂಡತಿ  ಹಾಗೂ ಅವನ ದೊಡ್ಡಪ್ಪ ಹನುಮಂತಪ್ಪ ತಳವಾರ ಇವರ್ಯಾರು ಇರಲಿಲ್ಲ. ಲಿಂಗರಾಜ ತಂದೆ ಬಸವಣ್ಣೆಪ್ಪ ಮೂಲಿಮನಿ ಸಾ- ಹೊಸಳ್ಳಿ ತಾ- ಸವಣೂರ ಇವನು ದಿನಾಂಕ-22-08-2021 ರಂದು ಸಂಜೆ- 7-30 ಗಂಟೆ ಸುಮಾರಿಗೆ ನಮ್ಮ ಊರಿನಿಂದ ಕಲ್ಮಡವು ಗ್ರಾಮದ ತನ್ನ ಹೆಂಡತಿ ಮನೆಗೆ ಹೋಗಿ ಬರುವುದಾಗಿ ಅಂತಾ ಹೇಳಿ ಹೋಗಿ ದಿನಾಂಕ- 24-08-2021 ರಂದು ಬೆಳಿಗ್ಗೆ 7-30 ಗಂಟೆ ನಡುವಿನ ಅವಧಿಯಲ್ಲಿ ನನ್ನ ಮಗ ಲಿಂಗರಾಜ ಇವನು ಯಾವ ಕಾರಣಕ್ಕೆ ಮೃತಪಟ್ಟನು ಅನ್ನುವ ಬಗ್ಗೆ ಸಂಶಯ ವ್ಯಕ್ತಪಡಿಸಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:23/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                     ಭರತ @ ಕಿಟ್ಟಿ ತಂದೆ ಗುಡ್ಡಪ್ಪ ಮಡಿವಾಳರ ವಯಸ್ಸು 22 ವರ್ಷ ಜಾತಿ ಹಿಂದೂ ಮಡಿವಾಳರ ಉದ್ಯೋಗ: ಮಂಡಕ್ಕಿ ಭಟ್ಟಿಯಲ್ಲಿ ಕೂಲಿಕೆಲಸ ಸಾ: ರಾಣೇಬೆನ್ನೂರು, ಕುರುಬಗೇರಿ, ಮಾಯಮ್ಮನಗುಡಿ ಹತ್ತಿರ ಈತನು ಹೊಟ್ಟೆನೋವಿನ ಕಾಯಿಲೆಯಿಂದ ಬಳಲುತ್ತಿದ್ದು ಅವನು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನಷ್ಟಕ್ಕೆ ತಾನೇ ದಿನಾಂಕ; 23/08/2021 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ವಿಷಸೇವನೆ ಮಾಡಿ ತ್ರಾಸ ಮಾಡಿಕೊಂಡಿದ್ದವನಿಗೆ ಉಪಚಾರಕ್ಕೆ ಕರೆದುಕೊಂಡು ಆಸ್ಪತ್ರೆಗಳಿಗೆ ಹೋದಾಗ ದಾವಣಗೇರಿ ಚಿಗಟೇರಿ ಆಸ್ಪತ್ರೆಯ ವೈಧ್ಯರು ಪರೀಕ್ಷಿಸಿ ಮೃತಪಟ್ಟ ಬಗ್ಗೆ ಖಚಿತಪಡಿಸಿದ್ದು ಇರುತ್ತದೆ ಅವನ ಸಾವಿನಲ್ಲಿ ಯಾವುದೇರಿತಿಯ ಸಂಶಯ ವಗೈರೆ ಯಾರಮೇಲು ಜಇರುವುದಿಲ್ಲ ಅಂತಾ ಮೃತನ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 03-09-2021 01:42 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080