ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:31/2021 ಕಲಂ:153 IPC

                ದಿನಾಂಕ; 21-03-2021 ರಂದು ಸಾಯಂಕಾಲ ಹಾವೇರಿಯ ಮುನಸಿಪಲ್ ಮೈದಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಾಗೂ ಹಸಿರುಸೇನೆ, ಹಾವೇರಿ ಜಿಲ್ಲೆ ಸಂಯುಕ್ತ ಕಿಸಾನ ಮೋರ್ಚಾ, ಐಕ್ಯ ಹೊರಾಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ಗೊಳಿಸಿರುವ ರೈತ ವಿರೋದಿ ಕರಾಳ ಕಾನೂನುಗಳನ್ನು ಹಿಂಪಡೆಯಬೇಕು ಅನ್ನುವ ಉದ್ದೇಶದಿಂದ ಎರ್ಫಡಿಸಿದ್ದ ಸಭೆಯ ಕಾಲಕ್ಕೆ ವೇದಿಕೆಯ ಮೇಲೆ ಆಸೀನರಾಗಿದ್ದ ರಾಷ್ಟ್ರ ಮಟ್ಟದ ರೈತ ಪದಾಧಿಕಾರಿಗಳಾದ ಮಾನ್ಯ ಶ್ರೀ: ರಾಕೇಶ ಟಿಕಾಯತ್ ವಕ್ತಾರರು ಭಾರತೀಯ ಕಿಸಾನ ಯೂನಿಯನ್ ಇವರು ಸಭೆಯಲ್ಲಿ ನೆರೆದ ಸಾವಿರಾರು ರೈತರನ್ನು ಉದ್ದೇಶಿಸಿ ಸಾಯಂಕಾಲ 5:45 ಗಂಟೆಯಿಂದ 6:10 ಗಂಟೆಯವರೆಗೆ ಮಾಡಿದ ಭಾಷಣದಲ್ಲಿ ತನೂ ದೆಹಲಿಯಲ್ಲಿ ಮಾಡಿದಂತೆ ನೀವು ಸಹ ಬೆಂಗಳೂರಿನಲ್ಲಿ ತಮ್ಮ ತಮ್ಮ ಟ್ರ್ಯಾಕ್ಟರಗಳನ್ನು ಅಸ್ತ್ರಗಳನ್ನಾಗಿ ಬಳಸಿ ಪ್ರತಿಭಟನೆ ಮಾಡಿರಿ ಅಂತಾ ರೈತರು ಉದ್ರೇಕಗೊಳ್ಳುವಂತೆ ಭಾಷಣ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:39/2021 ಕಲಂ:379 IPC.

                ದಿನಾಂಕ: 23-03-2021 ರಂದು ಮುಂಜಾನೆ 08-30 ಗಂಟೆಯ ಸುಮಾರಿಗೆ ಆಡೂರ ಗ್ರಾಮದ ವರದಾ ನದಿಯ ದಂಡೆಯಲ್ಲಿ ಸರಕಾರದ ಖನೀಜ ಸ್ವತ್ತಾದ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಯಾವದೇ ಪಾಸ ವ ಪರ್ಮಿಟ್ ಇಲ್ಲದೇ ನಂಬರ ಇಲ್ಲದ ಟ್ರೈಲರ್ ಇದರ ಅ||ಕಿ|| 40, ಸಾವಿರ ರೂ ಹಾಗೂ ನ್ಯು ಹಾಲೆಂಡ್ ಕಂಪನಿಯ ಟ್ಯಾಕ್ಟರ್ ನಂಬರ ಕೆ.-27 ಟಿ.ಬಿ-1930 ಇದರ ಅ||ಕಿ|| 3 ಲಕ್ಷ ರೂಟ್ಯಾಕ್ಟರ್ನಲ್ಲಿ ಅ:ಕಿ: 3000/- ರೂ ಕಿಮ್ಮತ್ತಿನ ಮರಳನ್ನು ಸಾಗಾಣಿಕೆ ಮಾಡುತ್ತಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:43/2021 ಕಲಂ:379 IPC.

                 ಶಿಗ್ಗಾಂವ ಪೊಲೀಸ್ ಠಾಣಾ ಹದ್ದಿ ಪೈಕಿ, ಶಿಗ್ಗಾಂವ ಶಹರದ ಹೊಸ ಬಸ್ ನಿಲ್ದಾಣದ ಎದುರಿಗೆ ಇರುವ ಅಂಡರ ಬ್ರಿಡ್ಜ ಕೆಳಗೆ ಆಟೋ ನಿಲ್ದಾಣದ ಹತ್ತಿರ    ದಿನಾಂಕಃ 17-03-2021 ರಂದು ಮುಂಜಾನೆ 9-00 ಗಂಟೆಯಿಂದ ರಾತ್ರಿ 20.00 ಗಂಟೆಯ ನಡುವಿನ ಅವಧಿಯಲ್ಲಿ ಪ್ರಕಾಶ ಬಸಪ್ಪ ಬದ್ರಶೆಟ್ಟಿ ತನ್ನ ಮಾಲ್ಕಿಯ ಹಿರೋ ಸ್ಪಂಡರ ಪ್ಲಸ್ ಕಂಪನಿಯ ಮೋಟಾರ ಸೈಕಲ ನಂ:ಕೆಎ-27/ಡಬ್ಲೂ-8902 ಚೆಸ್ಸಿ ನಂಬರ : MBLHA10EYCHB87484 ಇಂಜನ್ ನಂ: HA10EFCHB94226  ಅದರ ಅ.ಕಿ: 20,000/-ರೂ ನೇದ್ದನ್ನು  ಇಟ್ಟು ದಿನಾಲು ಇಡುವಂತೆ ಸದರ ಸ್ಥಳದಲ್ಲಿ ಇಟ್ಟು ತಮ್ಮ ಕೆಲಸಕ್ಕೆ ಹೋಗಿ ರಾತ್ರಿ ವಾಪಸ್ಸು ಬಂದು ತನ್ನ ಮೋಟಾರ ಸೈಕಲ ನೋಡಲಾಗಿ ಅದು ಇರಲಿಲ್ಲ ಸದರ ಅವದಿಯಲ್ಲಿ ಯಾರೋ ಕಳುವು ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 24-03-2021 06:37 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080