ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:19 /2021 ಮಹಿಳೆ ಕಾಣೆ.

                ಶ್ರೀಮತಿ ಅನ್ನಪೂರ್ಣ ಗಂಡ ಸುಬ್ರಹ್ಮಣ್ಯ ಹೆಗಡೆ, ವಯಾ: 26 ವರ್ಷ ಇವಳು ದಿನಾಂಕ: 20-03-2021 ರಂದು ಬೆಳಗ್ಗೆ 10-00 ಗಂಟೆಗೆ ತನ್ನ ಗಂಡನಾದ ಸುಬ್ರಹ್ಮಣ್ಯ ಇವರಿಗೆ ಪೋನ್ ಮಾಡಿ ತನ್ನ ತಂದೆ ಬೆಂಗಳೂರಿಗೆ ಹೋಗಿದ್ದಾರೆ ತಾಯಿಗೆ ಆರೋಗ್ಯ ಸರಿಯಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಅಂತಾ ಹೇಳಿ ಹೋದವರು ಅಲ್ಲಿಯೂ ಹೋಗದೆ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ಹುಡುಕಿಕೊಡಬೇಕು ಅಂತಾ ಸುಬ್ರಹ್ಮಣ್ಯ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಕೆ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:41/2021 ಕಲಂ:379 IPC.

                ಹಿರೇ ಮಲ್ಲೂರ  ಗ್ರಾಮದ ಜಿ. ಹೆಚ್.ಪಿ.ಎಸ್ ಶಾಲೆಯ ಅಡಿಗೆ ಕೋಣೆ ಮೇಲೆ ಗಡೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗ ಶಿಗ್ಗಾಂವ ಇಲಾಖೆಯಿಂದ ದಿನಾಂಕಃ-08-02-2021 ರಂದು ಶಾಲೆಗೆ ಹಾಕಿದ  ಒಂದು ಹಳದಿ ಬಣ್ಣದ ಕಲರಿನ 500 ಲೀಟರ ಸೈಜಿನ ಸಿಂಟ್ಯಾಕ್ಸ  ಅಃಕಿಃ-2500-3000/- ರೂ ನೇದ್ದನ್ನು  ದಿನಾಂಕಃ-20-03-2021 ರಂದು ಶಾಲೆ ಬೀಡುವ ವೇಳೆಯಿಂದ ದಿನಾಂಕಃ-22-03-2020 ರಂದು ಮುಂಜಾನೆ 09-30 ಗಂಟೆ ನಡುವಿನ ಅವಧಿಯಲ್ಲಿ  ಯಾರೋ ಕಳ್ಳರು ಸಿಂಟ್ಯಾಕ್ಸನ್ನು   ಕಳುವು ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:42/2021 ಮಹಿಳೆ ಕಾಣೆ.

                 ಯಶೋದಾ ಕೃಷ್ಣಪ್ಪ ಕಡಕೊಳ, ವಯಾ 16 ವರ್ಷ ಇವಳು ಈ ಸಾರಿ 9 ನೇ ಕ್ಲಾಸಿನಲ್ಲಿ ತಮ್ಮ ಮನೆಯ ಸಮೀಪ ಇರುವ ಫಕ್ಕೀರಮ್ಮ ಫ ಮಂತ್ರೋಡಿ ಬಾಲಕಿಯರ  ಪ್ರೌಡ ಶಾಲೆ ಶಿಗ್ಗಾಂವದಲ್ಲಿ ಓದುತ್ತಿದ್ದು ದಿನಾಲು ಶಾಲೆಗೆ ಹೋಗಿ ಬಂದು ಮಾಡುತ್ತಿದ್ದು, ಅದರಂತೆ ದಿನಾಂಕ:20-03-2021 ರಂದು ಮುಂಜಾನೆ 9-15 ಗಂಟೆಗೆ ಮನೆಯಿಂದ ಶಾಲೆಗೆ ಹೋಗಿ ಬರುವದಾಗಿ ಯಶೋದಾ ಮತ್ತು ಇನ್ನೋಬ್ಬ ಮಗಳು ಶಾಂತಿ ಕೂಡಿಕೊಂಡು ಹೋಗಿದ್ದು ಮದ್ಯಾಹ್ನ 12-45 ಗಂಟೆಗೆ ಸಣ್ಣ ಮಗಳು ಶಾಂತಿ ಇವಳು  ಮನೆಗೆ ಬಂದಾಗ ತಾಯಿ ಮಂಜುಳಾ  ಅವಳಿಗೆ ನಿಮ್ಮಕ್ಕ ಯಶೋದಾ ಯಾಕೆ ಬರಲಿಲ್ಲ ಅಂತಾ ಕೇಳಿದಾಗ ಅವಳು  ಸ್ಕಾಲರಶಿಪ ಮಾಡಿಸಬೇಕು ಬಸ್ ನಿಲ್ದಾಣ ಹತ್ತಿರ ಅದೆ ನಾನು ಅಲ್ಲಿಗೆ ಹೋಗಿ ಬರುತ್ತೇನೆ ಅಂತಾ ಹೇಳಿದಳು ನಾನು ಬಂದಿರುತ್ತೇನೆ ಅಂತಾ ಹೇಳಿದ್ದು, ಮುಂದೆ ಸಂಜೆಯಾದರೂ ಮಗಳು ಮನೆಗೆ ಬಾರದ್ದರಿಂದ ಶಾಲೆ ಹತ್ತಿರ ಹೋಗಿ ವಿಚಾರಿಸಿ ನಂತರ ತಮಗೆ ತಿಳಿದ ಕಡೆಯಲ್ಲಾ ಹುಡುಕಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:42/2021 ಕಲಂ: 498A,504,506,34 IPC.

                ಭವಾನಿ ರಾಮಪ್ರಸಾದ ದೇಶಪಾಂಡೆ ಇವರ ಮದುವೆಯು ರಾಮಪ್ರಸಾದ ದೇಶಪಾಂಡೆ ಇವರೊಂದಿಗೆ ದಿನಾಂಕ; 17/02/2014 ರಂದು ಗುರುಹಿರಿಯರ ಸಮಕ್ಷಮ ಮದುವೆಯಾಗಿದ್ದು ಇರುತ್ತದೆ. ಮದುವೆಯಾದ ನಂತರ ಭವಾನಿ ಹುಬ್ಬಳ್ಳಿ ಶಹರದ ತನ್ನ ಗಂಡನ ಮನೆಯಲ್ಲಿ ಬಾಳ್ವೆ ಮಾಡುತ್ತಿರುವಾಗ ರಾಮಪ್ರಸಾದ ಹಾಗೂ ಅವರ ಮನೆಯವರು ಕೂಡಿಕೊಂಡು ಭವಾನಿಗೆ ನಿನಗೆ ಮಕ್ಕಳು ಆಗಿಲ್ಲ ಡೈವೋರ್ಸ ಕೊಡು ಅಂತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಾ ಬಂದಿದ್ದಕ್ಕೆ ಭವಾನಿ ಬೇಸರಗೊಂಡು ತನ್ನ ತವರು ಮನೆಯಾದ ರಾಣೇಬೆನ್ನೂರು ಶಹರದ ಮೃತ್ಯುಂಜಯ ನಗರಕ್ಕೆ ಬಂದು ವಾಸವಿದ್ದರೂ ಸಹ ರಾಮಪ್ರಸಾದ ರಾಣೇಬೆನ್ನೂರಿನ ಮನೆಗೆ ಬಂದು ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:04/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                ಕುಮಾರೇಶ್ವರ ತಂದೆ ಶಂಭುಲಿಂಗಪ್ಪ ಉಳಾಗಡ್ಡಿ. ವಯಾ-27 ವರ್ಷ. ಜ್ಯಾತಿ-ಹಿಂದೂ ಲಿಂಗವಂತ. ಉದ್ಯೋಗ-ಶೇತ್ಕಿ ಕೆಲಸ. ಸಾ-ಶೀಗಿಹಳ್ಳಿ. ತಾ-ಹಾನಗಲ್ಲ. ಇತನು ಕೃಷಿ ಕೆಲಸವನ್ನು ಹಾಗೂ ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದನು. ಇತನು ತನ್ನ ಹೆಸರಿನಲ್ಲಿರುವ ಹಾಗೂ ತನ್ನ ತಂದೆಯ ಹೆಸರಿನಲ್ಲಿರುವ ರಿ..ನಂ: 18/1, 29/5, 32/2, 32/9 ನೇದ್ದರಲ್ಲಿ ಒಟ್ಟು 4 ಎಕರೆ ಜಮೀನು ಇದ್ದು ಈ ಜಮೀನಿನ ಮೇಲೆ ಕೃಷಿ ಕೆಲಸಕ್ಕಾಗಿ ಹಾಗೂ ಮನೆತನದ ಖಚರ್ುವೆಚ್ಚದ ಸಲುವಾಗಿ 3,25,000/-ರೂ ಸಾಲವನ್ನು ಕೆ.ವಿ.ಜಿ ಬ್ಯಾಂಕ ಆಡೂರ ಶ್ಯಾಖೆಯಲ್ಲಿ ಪಡೆದುಕೊಂಡಿದ್ದು ಹಾಗೂ ತನ್ನ ಗ್ರಾಮದ ಜನರಲ್ಲಿ ಕೈಗಡ ರೂಪದಲ್ಲಿ 04 ಲಕ್ಷ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದು ಇರುತ್ತದೆ. ಆದರೆ ಕಳೆದ 2 ವರ್ಷಗಳಿಂದ ಅತೀವೃಷ್ಟಿಯಿಂದಾಗಿ ಬೆಳೆ ಲುಕ್ಸಾನು ಆಗಿದ್ದರಿಂದ ಕೃಷಿ ಕೆಲಸಕ್ಕಾಗಿ ಹಾಗೂ ಮನೆತನದ ಖರ್ಚುವೆಚ್ಚದ ಸಲುವಾಗಿ ಮಾಡಿ ಸಾಲವನ್ನು ತೀರಿಸುವುದು ಹೇಗೆ ಅಂತಾ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜೀಗುಪ್ಸೆಗೊಂಡು ದಿನಾಂಕ: 22-03-2021 ರಂದು ಮಧ್ಯಾಹ್ನ 12-00 ಘಂಟೆಯಿಂದ 13-00 ಘಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಅಡುಗೆ ಕೋಣೆಯಲ್ಲಿರುವ ಜಂತಿಗೆ ವೈರ್ ಹಗ್ಗದಿಂದ ಉರುಲು ಹಾಕಿಕೊಂಡು ಉಸಿರುಗಟ್ಟಿ ಮೃತ ಪಟ್ಟಿರುತ್ತಾನೆ ಮತ್ತು ಮೃತನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ಶಂಬುಲಿಂಗಪ್ಪ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬಂಕಾಪೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:04/2021 ಹಾವು ಕಡಿತದಿಂದ ಮಹಿಳೆ ಸಾವು.

                ಶ್ರೀಮತಿ ಜರಿನಬಿ ರಸುಲಸಾಬ ಮುಕಾಶಿ ಸಾ ಬಂಕಾಪೂರ ಇವರು ದಿನಾಂಕ:06-03-2021 ರಂದು ಮದ್ಯಾಹ್ನ 01.30 ಗಂಟೆ ಸುಮಾರಿಗೆ ಬಂಕಾಪೂರದ ಪೈರೋಜಖಾನ ಇವರ ಜಮೀನದಲ್ಲಿ ಗೋವಿನಜೋಳದ ತೆನೆಗಳನ್ನು ಮಿಷನಗೆ ಹಾಕುವಾಗ ತನ್ನ ಎಡಕಾಲ ಪಾದದ ಹತ್ತಿರ ಯಾವದೋ ಒಂದು ವಿಷಕಾರ ಹಾವು ಕಚ್ಚಿದ್ದರಿಂದ ಕಾಲಿಗೆ ರಕ್ತ ಬಂದಿದ್ದು ಸದರಿ ಮೃತಳಿಗೆ ನಾಟಿ ಔಷಧಿ ಅಂತಾ ಹಾನಗಲ್ ತಾಲೂಕ ಬಸಾಪೂರದಲ್ಲಿ ಕೊಡಸಿದ್ದು ಸದ್ಯಕ್ಕೆ ಆರಾಮ ಆಗಿದ್ದು ಮತ್ತೆ ದಿನಾಂಕ: 10-03-2021 ರಂದು ಸಾಯಂ ಕಾಲ 04.00 ಗಂಟೆ ಸುಮಾರಿಗೆ ತ್ರಾಸ ಆಗಿದ್ದು ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲ ಮಾಡಿದ್ದು ಉಪಚಾರ ಫಲಿಸದೇ ದಿನಾಂಕ: 22-03-2021 ರಂದು ಬೆಳಗಿನ ಜಾಗ 02.15 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅವಳ ಸಾವಿನಲ್ಲಿ ಬೇರೆ ಏನು ಸಂಶ ಇರುವದಿಲ್ಲ ಅಂತಾ ಮೃತಳ ಮಗ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಿರೇಕೆರೂರ  ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:08/2021 ಮಹಿಳೆ ಸಾವು.

                ನೀಲಮ್ಮ ಗಂಡ ಬಸಪ್ಪ ಉಪ್ಪಾರ @ ಗ್ವಾರಪ್ಪನವರ ವಯಾ: 61 ವರ್ಷ, ಜಾತಿ: ಹಿಂದೂ ಉಪ್ಪಾರ, ಉದ್ಯೋಗ: ಹೊಲಮನನಿಕೆಲಸ, ಸಾ: ಹಳೇನಿಡನೇಗಿಲು, ತಾ: ಹಿರೇಕೆರೂರ ಇವರಿಗೆ 02 ಜನ ಹೆಣ್ಣುಮಕ್ಕಳಿದ್ದು ಅದರಲ್ಲಿ ಒಬ್ಬ ಮಗಳು ತೀರಿಕೊಂಡ ನಂತರ ಅದನ್ನೆ ಮಾನಸಿಕ ಮಾಡಿಕೊಂಡು ಸಾರಾಯಿ ಕುಡಿಯುವ ಚಟಕ್ಕೆ ಬಿದ್ದು ಅದನ್ನು ಬಿಡಲಿಕ್ಕೆ ಆಗದೇ ದಿನಾಂಕ: 21/03/2021 ರಂದು 19-30 ಗಂಟೆಯಿಂದ 20-30 ಗಂಟೆ ನಡುವಿನ ಅವದಿಯಲ್ಲಿ ಹಳೇನಿಡನೇಗಿಲು ಗ್ರಾಮದ ತಮ್ಮ ಜಮೀನದಲ್ಲಿ ಯಾವುದೋ ವಿಷ ಸೇವನೆ ಮಾಡಿ ಬಿದ್ದು ಒದ್ದಾಡುತ್ತಿದ್ದವಳಿಗೆ ಉಪಚಾರಕ್ಕೆ ಮಾಸೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲಿಸಿ ಉಪಚಾರಪಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರಕ್ಕೆ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದಾಗ ಉಪಚಾರದಿಂದ ಚೇತರಿಸಿಕೊಳ್ಳದೇ ದಿನಾಂಕ: 21/03/2021 ರಂದು 23-30 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಮೃತಳ ಸಾವಿನಲ್ಲಿ ಯಾವದೇ ಸಂಶಯವಿರುವದಿಲ್ಲ ಅಂತಾ ಹನುಮಂತಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 24-03-2021 06:35 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ