ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:09/2021 ಮಹಿಳೆ ಕಾಣೆ.

                 ದೀಕ್ಷಾ ತಂದೆ ಫಕ್ಕಿರೇಶ ಬಾಲಣ್ಣನವರ ವಯಸ್ಸು 17 ವರ್ಷ 05 ತಿಂಗಳು ಇವಳು ದಿನಾಂಕ: 18-02-2021 ರಂದು  ಮುಂಜಾನೆ 09-30 ಗಂಟೆಗೆ ದೀಕ್ಷಾ ಇವಳು ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮರಳಿ ಮನೆಗೆ ಬಾರದೆ ಇದ್ದುದ್ದರಿಂದ ಅವಳನ್ನು ಈವರೆಗೆ ಹುಡಕಾಡಿದ್ದು ಸಿಕ್ಕಿರುವುದಿಲ್ಲಾ ಮತ್ತು ಅವಳು ಅಲ್ಪವಯಿ ಇದ್ದುದ್ದರಿಂದ ಅವಳನ್ನು ಯಾರೋ,ಯಾವದೋ ಉದ್ದೇಶಕ್ಕಾಗಿ ಆಸೆ ಮತ್ತು ಆಮಿಷ ತೋರಿಸಿ ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ಸಂಶಯವಿದ್ದು ಈ ಕುರಿತು ತಮ್ಮ ಮಗಳನ್ನು ಹುಡುಕಿಕೊಡುವಂತೆ ಕಾಣೆಯಾದವಳ ತಂದೆ ‍ಪಕ್ಕಿರೇಶ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:10/2021 ಕಲಂ: DOWRY PROHIBITION ACT, 1961 (U/s-4);  304B, 306, 498A, 34 IPC. 

                  ನವಿನ ಬಸಯ್ಯ ಕಲಗುಡಿ ಸಾ|| ಕಿತ್ತೂರ ಇವರನ್ನು  ಪಾರ್ವತಿ ಇವಳೊಂದಿಗೆ  2 ವರ್ಷಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿದ್ದು ಇರುತ್ತದೆ. ಮದುವೆಯ ನಂತರ ನವಿನ ಪಾರ್ವತಿಗೆ ಕಿರುಕುಳ ಕೊಡುತ್ತಿದ್ದುದು, ಅಲ್ಲದೆ ಹೊಡಿ ಬಡಿ ಮಾಡುತ್ತಿದ್ದು, 2-3 ಸಾರಿ ರಾಜಿ ಸಂದಾನ ಮಾಡಿದ್ದು, ಆದರೂ ನವಿನ ಹಾಗೂ ಅವರ ಮನೆಯವರು ಪಾರ್ವತಿ ಇವಳಿಗೆ ಹೊಡಿ ಬಡಿ ಮಾಡಿ ನೀನು ನಿನ್ನ ತವರು ಮನೆಗೆ ಹೋಗಿ 20,000/- ರೂ ವರದಕ್ಷಿಣೆಯಾಗಿ ಹಣವನ್ನು ತೆಗೆದುಕೊಂಡು ಬಾ ಇಲ್ಲ ಅಂದ್ರೆ ನೀನು ನನ್ನ ಮನೆಗೆ ಬರಬೇಡ ಎಲ್ಲಿಯಾದರು ಹೋಗು, ಇಲ್ಲ ಸತ್ತು ಆದರೂ ಹೋಗು ನೀನು ಸತ್ತರೆ ನಾನು ಇನ್ನೊಂದು ಮದುವೆ ಮಾಡಿಕೊಂಡು ಆರಾಮಾಗಿ ಇರುತ್ತೇನೆ ಅಂತಾ ಕಳೆದ 4-5 ತಿಂಗಳ ಹಿಂದೆ ಹೊಡಿ ಬಡಿ ಮಾಡಿ ಮೃತಳಿಗೆ ಅವಳ ತವರು ಮನೆಗೆ ಕಳಿಸಿದ್ದು ಆಗ, ರಾಜಿ ಸಂದಾನ ಮಾಡಿ ಮತ್ತೆ ಪಾರ್ವತಿಯನ್ನು ತನ್ನ ಗಂಡನ ಮನೆಗೆ ಕಳಿಸಿದ್ದು ಇರುತ್ತದೆ. ಆದರೂ ಹೊಡಿ ಬಡಿ ಮಾಡುತ್ತಿದ್ದರು.ಹಾಗೂ ಹೊಡಿ ಬಡಿ ಮಾಡಿ ನೀನು ಸತ್ತು ಹೋಗು ನೀನು ಸತ್ತರೆ ನಾನು ಇನ್ನೊಂದು ಮದುವೆಯಾಗುತ್ತೇನೆ ಎಂದು ಪದೆ ಪದೆ ಹೇಳುತ್ತಿದ್ದರಿಂದ ಮನ ನೊಂದು ದಿನಾಂಕ 16-02-2021 ರಂದು ಮದ್ಯಾಹ್ನ 02-00 ಗಂಟೆ ಸುಮಾರಿಗೆ ಯಾವುದೋ ವಿಷ ಸೇವನಿಗೆ ಮಾಡಿರಬಹುದು ಅಥವಾ ನವಿನ ಹಾಗೂ ಅವರ ಮನೆಯವರೆ ವಿಷ ಕುಡಿಸಿದ್ದರಿಂದ ಅವಳಿಗೆ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ದಾಖಲಿದಾಗ ಉಪಚಾರ ಫಲಿಸದೆ ದಿನಾಂಕ 18-02-2021 ರಂದು ರಾತ್ರಿ 08-00 ಗಂಟೆಗೆ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:30/2021 ಮಹಿಳೆ ಕಾಣೆ.

                 ಪವಿತ್ರಾ ತಂದೆ ನಿಂಗಪ್ಪ ಉದಗಟ್ಟಿ ವಯಾ: 21 ವರ್ಷ ಜಾತಿ;ಗಂಗಾಮತ ಉದ್ಯೋಗ: ಮನೆ ಕೆಲಸ ಸಾ: ಬುಡಪನಹಳ್ಳಿ ಇವಳು ದಿನಾಂಕ;26-01-2021 ರಂದು ಮುಂಜಾನೆ 09-30 ಗಂಟೆಗೆ ಗುತ್ತೇಮ್ಮನ ಗುಡಿಗೆ ಹೋಗಿ ನಂತರ ಬೀಗರ ಮನೆಗೆ ಹೋಗುವದಾಗಿ ಹೇಳಿ ಹೊದವಳು  ಬೀಗರಮನೆಗೂ ಹೊಗದೆ ಮತ್ತು ಮರಳಿ ಮನೆಗೆ ಬಾರದೇ ಇರುವದರಿಂದ ಇವಳಿಗೆ ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಕಾರಣ ಪವಿತ್ರಾ ಇವಳು ಎಲ್ಲಿಯೋ ಹೋಗಿ ಕಾಣೆಯಾಗಿರಬಹುದು ಕಾಣೆಯಾವಳನ್ನು ಹುಡುಕಿಕೊಡಬೇಕು ಅಂತಾ ಗುಡ್ಡಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನ ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:40/2021 ಮಹಿಳೆ ಕಾಣೆ.

                 ಕು.ರಾಧಿಕಾ ತಂದೆ ಸುರೇಶ ಭೋವಿ ವಯಾ:17ವರ್ಷ 6 ತಿಂಗಳು ಜಾತಿ-ಹಿಂದೂ ಗಂಗಾಮತ ಉದ್ಯೋಗ-ಮನೆಗೆಲಸ ಸಾ||ಇನಾಂಯಲ್ಲಾಪುರ ತಾ||ಹಾನಗಲ್ಲ ದಿನಾಂಕಃ-14-01-2021 ರಂದು ಮುಂಜಾನೆ:11-00 ಗಂಟೆಯ ಸುಮಾರಿಗೆ ಇವಳಿಗೆ ಅಕ್ಕಮ್ಮಾ ಇವರು ಹೂವು ಹರಿದುಕೊಂಡು ಬಾ ಅಂತಾ ಇನಾಂಯಲ್ಲಾಪುರ ಗ್ರಾಮದ ಸ್ವಾಮೇರ ಮನೆಗೆ ಕಳುಹಿಸಿದ್ದು ಹೂವು ಹರಿಯಲು ಹೋದ ರಾಧಿಕಾ ಇನಾಂಯಲ್ಲಾಪುರ ಗ್ರಾಮಕ್ಕೆ ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ, ಕಾಣೆಯಾದ ನನ್ನ ಮಗಳಿಗೆ ಕಾಣೆಯಾದಾಗಿನಿಂದ ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವದಿಲ್ಲಾ ಕಾರಣ ಕಾಣೆಯಾದವಳಿಗೆ ಪತ್ತೆ ಮಾಡಿಕೊಡುವಂತೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:41/2021 ಕಲಂ:392 IPC.

               ದಿನಾಂಕ:18/02/2021 ರಂದು ಮದ್ಯಾಹ್ನಃ12-00 ಗಂಟೆಯ ಸುಮಾರಿಗೆ ಹಾನಗಲ್ಲ ಪೊಲೀಸ್ ಠಾಣಾ ವ್ಯಾಪ್ತಿ ಬೊಮ್ಮನಹಳ್ಳಿ ಗ್ರಾಮದ ರಾಮನಗೌಡ ಪಾಟೀಲ್ ಇವರ ಜಮೀನಿನಲ್ಲಿ ಯಲ್ಲಪ್ಪ ಮಹದೇವಪ್ಪ ಜಕ್ಕಣ್ಣನವರ ಸಾ ಹನುಮಸಾಗರ ಇವರು ಶ್ರೀಮತಿ ರೇಣುಕಾಬಾಯಿ ಕೋಂ  ಚಟ್ಟುರಾಮಸಿಂಗ್ ರಜಪೂತ ವಯಾಃ55 ವರ್ಷ ಜಾತಿಃಹಿಂದೂ ರಜಪೂತ ಉದ್ಯೋಗಃಮನೆಗೆಲಸ ಸಾಃಬೊಮ್ಮನಹಳ್ಳಿ ಭೋವಿ ಓಣಿ ತಾಃಹಾನಗಲ್ಲ ಇವಳ ಕೈಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕೈಯಿಂದ ಹೊಡಿ ಬಡಿ ಮಾಡಿ ಕೊರಳಲ್ಲಿದ್ದ ಅರ್ದ ತೊಲೆಯ ಬಂಗಾರದ ಗುಂಡಿನ ಸರವನ್ನು ಕಿತ್ತುಕೊಂಡು ಓಡಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:04/2021 ವ್ಯಕ್ತಿ ಸಾವು . 

               ಮಲ್ಲಪ್ಪ ತಂದೆ ಕೇಶಪ್ಪ ಹೈನಳ್ಳಿ ತಾ||ಹೈನಳ್ಳಿ ತಾ||ಶಿರಹಟ್ಟಿ ಜಿ||ಗದಗ ವಯಾ 60 ವರ್ಷ ಜಾತಿ ವಡ್ಡರ ವೃತ್ತಿ ಗೌಂಡಿಕೆಲಸ ಇವರು ಈಗ ಸುಮಾರು ವರ್ಷಗಳ ಹಿಂದಿನಿಂದ ಸೆರಾಯಿ ಕುಡಿಯುತ್ತಿದ್ದು ಇವನು ಹಾಗೂ ಇವನ ಹೆಂಡತಿ ದೇವಮ್ಮಾ ಕೂಡಿಕೊಂಡು ದಿನಾಂಕ: 16-02-2021 ರಂದು ಹಾವನೂರ ಗ್ರಾಮದ ದ್ಯಾಮವ್ವನ ಜಾತ್ರೆಗೆ ಬಂದಿದ್ದು, ಹಾವನೂರ ಗ್ರಾಮದಲ್ಲಿ ಅತಿಯಾದ ಸೆರಾಯಿ ಕುಡಿದು ದಿನಾಂಕ: 18-02-2021 ರಂದು ಸಾಯಂಕಾಲ 6-00 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ ವಿನಃ ನನ್ನ ತಂದೆಯ ಮರಣದಲ್ಲಿ ಬೇರೆ ಏನು ಸಂಶಯ ಇರುದಿಲ್ಲ ಅಂತ ಮೃತನ ಮಗ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಿರೆಕೇರೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:06/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ. 

                 ಅಶೋಕ ತಂದೆ ನಾಗಪ್ಪ ದೊಡ್ಡಮನಿ ವಯಾ: 50 ವರ್ಷ, ಜಾತಿ: ಹಿಂದೂ ಬೋವಿವಡ್ಡರ್, ಉದ್ಯೋಗ: ಕೂಲಿಕೆಲಸ, ಸಾ: ಹಿರೇಕೆರೂರ ಬಿ.ಜಿ.ಬಣಕಾರ ಬಡಾವಣೆ, ಇವರಿಗೆ 03 ಜನ ಹೆಣ್ಣುಮಕ್ಕಳಿದ್ದು ಅವರೂ ವಯಸ್ಸಿಗೆ ಬಂದ ನಂತರ ಅವರನ್ನು ಮದುವೆ ಮಾಡಿಕೊಡುವದು ಹೇಗೆ ಅಂತಾ ಮಾನಸಿಕ ಮಾಡಿಕೊಂಡು ಸಾರಾಯಿ ಕುಡಿಯುವ ಚಟಕ್ಕೆ ಬಿದ್ದು ಅದನ್ನು ಬಿಡಲಿಕ್ಕೆ ಆಗದೇ ದಿನಾಂಕ: 14/02/2021 ರಂದು ಮುಂಜಾನೆ 10-30 ಗಂಟೆಯಿಂದ 14-00 ಗಂಟೆ ನಡುವಿನ ಅವದಿಯಲ್ಲಿ ಹಿರೇಕೆರೂರ ಶಹರದ ಸರ್ಕಾರಿ ಪಿ.ಯು, ಕಾಲೇಜ್ ಹಿಂಭಾಗ ರಸ್ತೆಯ ಮೇಲೆ, ಯಾವುದೋ ವಿಷ ಸೇವನೆ ಮಾಡಿ ಮಲಗಿದ್ದವನಿಗೆ ಉಪಚಾರಕ್ಕೆ ಹಿರೇಕೆರೂರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲಿಸಿ ಉಪಚಾರಪಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರಕ್ಕೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದಾಗ ಉಪಚಾರದಿಂದ ಚೇತರಿಸಿಕೊಳ್ಳದೇ ದಿನಾಂಕ: 19/02/2021 ರಂದು ಬೆಳಗಿನ ಜಾವ 03-30 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಮೃತನ ಸಾವಿನಲ್ಲಿ ಯಾವದೇ ಸಂಶಯವಿರುವದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ಸುಮಾ ದೊಡ್ಡಮನಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 20-02-2021 04:52 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080