ಅಭಿಪ್ರಾಯ / ಸಲಹೆಗಳು

ರಾಣೆಬೇನ್ನೂರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:128/2021  ಕಲಂ: 279,304(A) IPC.

              ದಿನಾಂಕ: 17/07/2021 ರಂದು 12-00 ಗಂಟೆಯ ಸುಮಾರಿಗೆ ನಾಗರಾಜ ಬಸವರಾಜ ಕಾಯಕೊಡ ವಯಾ: 34 ಸಾ|| ಮೆಡ್ಲೆರಿ ತನ್ನ ಬಾಬತ್ ಬಜಾಜ್ ಪ್ಲಾಟೀನಾ ಮೋಟಾರ ಸೈಕಲ್ ನಂ; ಕೆಎ-27ಡಬ್ಲೂ-9642 ನೆದ್ದನ್ನು ರಾಣೆಬೆನ್ನೂರ ಕಡೆಯಿಂದ ಮೇಡ್ಲೇರಿ ಕಡೆಗೆ ಹೋಗಲು ರಾಣೇಬೆನ್ನೂರ ಸಂಚಾರ ಪೊಲೀಸ್ ಠಾಣಾ ಹದ್ದು ರಾಣೇಬೆನ್ನೂರ ಶಹರದ ಜೇಂಡಾ ಕಟ್ಟಿ ದಗರ್ಾದ ಎದುರಿನ ರಸ್ತೆ ಮೇಲೆ ಅತೀ ಜೋರಿನಿಂದ , ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನೇ ರಸ್ತೆ ಎಡಗಡೆ ಸ್ಶೆಡಿಗೆ ತನ್ನಷ್ಟಕ್ಕೆ ತಾನೇ ಸ್ಕಿಡ್ಡ್ ಮಾಡಿಕೊಂಡು ಅಪಘಾತಪಡಿಸಿಕೊಂಡು ತಲೆ ಹಚ್ಚಿ ನೆಲಕ್ಕೆ ಬಿದ್ದು ಭಾರಿ ರಕ್ತಗಾಯಪಡಿಸಿಕೊಂಡಿದ್ದಲ್ಲದೆ, ಮೂಗಿನಲ್ಲಿ ರಕ್ತ ಬರಿಸಿಕೊಂಡು ಒಳಪೆಟ್ಟು ಮಾಡಿಕೊಂಡು ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:96/2021  ಕಲಂ: 454,457,380 IPC.

              ದಿನಾಂಕ; 17-07-2021 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ: 18-07-2021 ರಂದು ಬೆಳಗಿನ 06-00 ಗಂಟೆಯ ನಡುವಿನ ಅವಧಿಯಲ್ಲಿ, ಯಾರೋ ಕಳ್ಳರು ಸಂಗೂರ ಗ್ರಾಮದ ಶೈಲಾ ಕುಮಾರ ಬಾರ್ಕಿ ಸಾ|| ಸಂಗೂರ ಮನೆಗೆ ಹಾಕಿದ ಬೀಗವನ್ನ ಮೀಟಿ ಮುರಿದು ಮನೆಯ ಒಳಗೆ ಹೋಗಿ ಟ್ರಂಕಿನಲ್ಲಿ ಇಟ್ಟ 1] 19,000/- ರೂ ನಗದು ಹಣ, 2] ಎರಡು ಜೊತೆ ಸಣ್ಣ ಬಂಗಾರದ ಬಟನ್ಸಗಳು, ಅಕಿ: 15,000/-, 3] ಒಂದು ಜೊತೆ ಜುಮುಕಿ, ಅಕಿ: 6000/-  4] ಎರಡು ಜೊತೆ ಬೆಳ್ಳಿ ಕಾಲು ಚೈನ್ 3000/- , 5] ಒಂದು ಬೆಳ್ಳಿ ಕಡಗ, ಅಕಿ: 600/-, 6] ಒಂದು ಬೆಳ್ಳಿ ಬ್ರಾಸ್ಲೈಟ್, ಅಕಿ: 700/-, 7] ಒಂದು ಕಾರ್ಬನ್ ಕಂಪನಿಯ ಮೊಬೈಲ್ ಪೋನ್ ಅದರಲ್ಲಿ ವೋಡಾ ಸಿಮ್ ನಂ: 7406157461 ನೇದ್ದು, ಅಕಿ: 500/- ರೂ. ಗಳನ್ನ ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:124/2021  ಮಹಿಳೆ ಕಾಣೆ.

              ಜ್ಯೋತಿ ತಂದೆ ಹನುಮಂತಪ್ಪ ಹೊನ್ನತ್ತೆಪ್ಪನವರ ವಯಾ 21 ವರ್ಷ ಸಾಃಚಿಕ್ಕಕುರವತ್ತಿ ಇವರು ದಿನಾಂಕಃ14-07-2021 ರಂದು 10-00 ಗಂಟೆಗೆ ರಾಣೆಬೆನ್ನೂರಿನ ಎಸ್.ಜೆ.ಎಂ.ವ್ಹಿ ಕಾಲೇಜಿಗೆ ಹೋಗಿ ವಾಕ್ಸಿನೇಷನ್ ಹಾಕಿಸಿಕೊಂಡ ಮಾಹಿತಿಯನ್ನು ನೀಡಿ ಬರುತ್ತೇನೆ. ಅಂತಾ ಹೇಳಿ ಚಿಕ್ಕಕುರವತ್ತಿ ಗ್ರಾಮದ ತನ್ನ ಮನೆಯಿಂದ ಹೋದವಳು ಕಾಲೇಜಿಗೂ ಹೋಗಿರುವುದಿಲ್ಲ ಮರಳಿ ಮನೆಗೆ ಬಂದಿರುವುದಿಲ್ಲ ಕಾರಣ ಕಾಣೆಯಾದ ಜ್ಯೋತಿ ಇವಳನ್ನು ತಮಗೆ ತಿಳಿದಕಡೆಯಲ್ಲಾ ಹುಡುಕಾಡಿದ್ದು ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದವಳನ್ನು ಹುಡುಕಿಕೊಡಬೆಕೆಂದು ಕಾಣೆಯಾದವಳ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬಂಕಾಪೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2021  ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

             ಪಂಡಪ್ಪ ಗಂಗಪ್ಪ ಮಾಸನಕಟ್ಟಿ ವಯಾ:50 ಸಾ|| ಕೊಣನಕೇರಿ ಇವರು ದಿನಾಂಕ: 11-07-2021 ರಂದು 22-00 ಗಂಟೆ ಸುಮಾರಿಗೆ ತನ್ನ ಮತ್ತು ಲಾವಣಿ ಜಮೀನಿಗೆ ಅಂತಾ ಕೈಗಡ ಮತ್ತು ಬ್ಯಾಂಕದಲ್ಲಿ ಮಾಡಿದ ಸಾಲ ಹೇಗೆ ತಿರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ತನ್ನ ಮನೆಯಲ್ಲಿ ಭತ್ತಕ್ಕೆ ಹೊಡೆಯುವ ಕೀಟ ನಾಶಕ ಎಣ್ಣೆಯನ್ನು ಸೇವನೆ ಮಾಡಿ ಉಪಚಾರಕ್ಕೆ ಶಿಗ್ಗಾಂವ ಮತ್ತು ಹುಬ್ಬಳ್ಳಿ ಕಿಮ್ಸ್  ಆಸ್ಪತ್ರೆಯಲ್ಲಿ ದಾಖಲಿಸಿದ್ದು ಉಪಚಾರ ಫಲಿಸದೇ ದಿನಾಂಕ: 17/07/2021 ರಂದು ಸಾಯಂಕಾಲ 6-40 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ ವಿನ: ಆತನ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲಾ ಅಂತಾ ಮೃತನ ಪತ್ನಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:16/2021  ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

              ಬಸವರಾಜ ತಂದೆ ರಾಮಪ್ಪ ಹಂಪಣ್ಣನವರ ವಯಾ- 50 ವರ್ಷ ಜಾತಿ- ಹಿಂದೂ ಲಿಂಗವಂತ ಉದ್ಯೋಗ- ವ್ಯವಸಾಯ ಸಾ: ಕೂಸನೂರ ತಾ: ಹಾನಗಲ್ಲ ಇವರು ದಿನಾಂಕ: 01-07-2021 ರಂದು ಮುಂಜಾನೆ 07-00 ಘಂಟೆ ಸುಮಾರಿಗೆ ಮನೆಯಲ್ಲಿ ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿ ವಾಪಾಸ ಮನೆಗೆ ಬಾರದೇ ಇದ್ದರಿಂದಾ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದು ಇತ್ತು. ಆದರೆ ಬಸವರಾಜ ಇವನು ತನಗೆ ಇದ್ದ ಅನಾರೋಗ್ಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ; 01/07/2021 ರಂದು ಮುಂಜಾನೆ 07-00 ಘಂಟೆಯಿಂದಾ ದಿನಾಂಕ: 17-07-2021 ರ ಮುಂಜಾನೆ 09-00 ಘಂಟೆಯ ನಡುವಿನ ಅವಧಿಯಲ್ಲಿ ಕ್ರೀಮಿನಾಶಕ ವಿಷ ಸೇವನೆ ಮಾಡಿ ಕುಸನೂರ ಗ್ರಾಮದ ಸಂತೋಷ ಶಾಂತಪ್ಪ ಹಂಪಣ್ಣನವರ ಇವರ ಜಮೀನದಲ್ಲಿ  ಮರಣ ಹೊಂದಿದ್ದು ಮೃತನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ರಮೇಶ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:23/2021  ಮಹಿಳೆ ಸಾವು.

              ಮಂಜವ್ವ ಶಿವಪ್ಪ ಕರಡಿ ವಯಾ:52 ಸಾ|| ನೀರಲಗಿ ಇವಳು ದಿನಾಂಕ: 16/07/2021 ರಂದು ಮಧ್ಯಾಹ್ನ ನೀರಲಗಿ ಗ್ರಾಮದ ಹತ್ತಿರ ಇರುವ ವರದಾ ನದಿಗೆ ಬಟ್ಟೆ ತೊಳೆಯಲು ಹೋಗಿ ನದಿಯಲ್ಲಿ ಮದ್ಯಾಹ್ನ 03-30 ಗಂಟೆಗೆ ಆಕಸ್ಮಾತ್ ಕಾಲು ಜಾರಿ ಬಿದ್ದು ನದಿಯಲ್ಲಿ ಮುಳಗಿದ್ದು ದಿನಾಂಕ: 17/07/2021 ರಂದು ಮಧ್ಯಾಹ್ನ  03-00 ಗಂಟೆಗೆ ಮೃತಳ ಶವ ಸಿಕ್ಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 28-07-2021 12:24 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ