ಅಭಿಪ್ರಾಯ / ಸಲಹೆಗಳು

ರಾಣೆಬೇನ್ನೂರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:12/2021 ಕಲಂ: 279,337,304(A) IPC.  

                 ದಿನಾಂಕಃ 18-02-2021 ರಂದು  03-00  ಗಂಟೆಯಿಂದ 3-30 ಗಂಟೆಯ ನಡುವಿನ ಅವಧಿಯಲ್ಲಿ  ಸುರೇಶ ಕೃಷ್ಣಪ್ಪ ಆಚಾರಿ ಇವರು ತನ್ನ ಬಾಬತ್ ಟೆಂಪೋ ಟ್ರಾವೆಲ್ಸ್  ಗಾಡಿ  ನಂಬರ; KA-53ಎ-5943 ನೆದ್ದನ್ನು ದಾವಣಗೇರಿ ಕಡೆಯಿಂದ ಹಾವೇರಿ  ಕಡೆಗೆ ಅತೀಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು  ಬಂದವನೇ  ರಾಣೆಬೆನ್ನೂರ ಬೈಪಾಸ್ ಹಲಗೇರಿ ಅಂಡರ ಬ್ರಿಡ್ಜ ಸಮೀಪ ದಾವಣಗೇರಿ- ಹಾವೇರಿ ಎನ್ ಎಚ್-4 ಪಿ ಬಿ ರಸ್ತೆ ಮೇಲೆ  ತನ್ನ ಮುಂದೆ ಹೊರಟಿದ್ದ  ಮಹಿಂದ್ರಾ ಬುಲೆರೋ ಗಾಡಿ ನಂಬರ; ಎಪಿ-21-ಟಿವಾಯ್-5370 ನೆದ್ದರ ಹಿಂದಿನ ಎಡಗಡೆ  ಬೌಡಿಗೆ ತನ್ನ ಗಾಡಿಯ ಮುಂದಿನ ಬಲಗಡೆ ಭಾಗದಿಂದ ಡಿಕ್ಕಿ ಮಾಡಿ ಅಪಘಾತಪಡಿಸಿದ್ದರಿಂದ ಮಹಿಂದ್ರಾ ಬುಲೆರೋ ಗಾಡಿ ನಿಯಂತ್ರಣ ತಪ್ಪಿ ಎಡಗಡೆ ಹೋಳಾಗಿ ಪಲ್ಟಿಯಾಗಿ ಬೀಳುವಂತೆ ಮಾಡಿ  ಆ ಗಾಡಿಯ ಮೇಲೆ ಇದ್ದ ಮುನಿಸ್ವಾಮಿ ತಂದೆ ಹನುಮಂತಪ್ಪ  ಅವರ ತಲೆಯ ಹಿಂಭಾಗಕ್ಕೆ ಭಾರಿ ಒಳಪೆಟ್ಟು ಮಾಡಿದ್ದು ಇವರಿಗೆ ಉಪಚಾರಕ್ಕೆ ರಾಣೆಬೆನ್ನೂರ ಸರ್ಕಾರಿ ಆಸ್ಪತ್ರೆಗೆ 04-06 ಗಂಟೆಗೆ ದಾಖಲಿಸಿದಾಗ  ಮರಣ ಹೊಂದುವಂತೆ ಮಾಡಿದ್ದು ಅಲ್ಲದೆ  ಆ ಗಾಡಿಯಲ್ಲಿ  ಬಸವರಾಜ ತಂದೆ ಸಂತಯ್ಯ , ಕುಮಾರ ತಂದೆ ಮಾರಣ್ಣ , ಶಿವಪ್ಪ ತಂದೆ ಚಿನ್ನಾರಡ್ಡಿ, ರಾಘು ತಂದೆ ಚಿನ್ನಾರಡ್ಡಿ ಇವರ ಸೊಂಟಕ್ಕೆ, ಚಪ್ಪೆಗಳಿಗೆ, ಕೈಕಾಲುಗಳಿಗೆ ಸಾದಾ  ರಕ್ತಗಾಯ ಒಳಪೆಟ್ಟು ಪಡಿಸಿದಲ್ಲದೆ  ತನ್ನ ಬಲಗಾಲಿಗೆ ಗಾಯ ಒಳಪೆಟ್ಟು ಪಡಿಸಿಕೊಂಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:15/2021 ಕಲಂ: 392 IPC. 

                 ದಿನಾಂಕ; 17-02-2021 ರಂದು ಸಾಯಂಕಾಲ 6:45 ಗಂಟೆ ಸುಮಾರಿಗೆ ಕಮಲಾ ಚತ್ರಪತಿ ಬ್ಯಾಡಗಿ ಸಾ|| ಹಾವೇರಿ ಇವರು ತನ್ನ ಮನೆಯ ಎದುರಿನ ಲೀನಾ ದೇಸಾಯಿ ಅನ್ನುವವರೊಂದಿಗೆ ಹಾವೇರಿ  ವಿದ್ಯಾನಗರ ಫೂರ್ವ ಭಾಗದಲ್ಲಿರುವ ತನ್ನ ಮನೆಯ  ಹಿಂದಿನ ರಸ್ತೆಯಲ್ಲಿ ವಾಯುವಿಹಾರ ಮಾಡುತ್ತಿದ್ದಾಗ  ಯಾರೋ ಎರಡು ಜನ ಆರೋಪಿತರು ಒಂದು ಮೋಟಾರ ಸೈಕಲ್ಲದಲ್ಲಿ ಎದರುಗಡೆಯಿಂದ ಬಂದು ಕಮಲಾ ಪಕ್ಕದಲ್ಲಿ   ಮೊಟಾರ ಸೈಕಲ್ ನಿಲ್ಲಿಸಿ ಮೊಟಾರ ಸೈಕಲ್ಲಿನ ಹಿಂದೆ ಕುಳಿತವನು ಒಮ್ಮೇಲೆ ಕಮಲಾ ಇವರ  ಕೊರಳಿಗೆ ಕೈ ಹಾಕಿ ಕೊರಳಲ್ಲಿದ್ದ ಸುಮಾರು 60 ಗ್ರಾಂ ತೂಕದ ಎರಡು ಎಳೆಯ ಬಂಗಾರದ ತಾಳಿಸರ ಅ:ಕಿ: 2.40.000/-ರೂ ನೇದ್ದನ್ನು ಕಿತ್ತುಕೊಂಡು  ಕಮಲಾ ಇವರನ್ನು ದೂಡಿ ನೆಲಕ್ಕೆ ಕೆಡವಿ ದುಖಾಃಪತ್ತ ಪಡಿಸಿ ಪರಾರಿ ಆಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:03/2021 ವ್ಯಕ್ತಿ ಸಾವು . 

                 ಶಿವಪ್ಪ ಸೊಮಪ್ಪ ಕುಪ್ಪೆಲೂರ ಸಾ|| ಕೊಡಬಾಳ ಇವರು 2 ವರ್ಷಗಳ ಹಿಂದಿನಿಂದ ಒಬ್ಬರೆ ಮಾತಾಡುವುದು ತನಗೆ ತಿಳಿದಂತೆ ಮಾಡುವುದು ಮಾಡುತ್ತಾ ತೆಲೆಕಟ್ಟವರಂತೆ ಮಾಡುತ್ತಿದ್ದು ಈ ಬಗ್ಗೆ ಹಲವಾರು ಆಸ್ಪತ್ರೆಯಲ್ಲಿ ಮಾನಸಿಕ ತಜ್ಞರ ಕಡೆಗೆ ತೋರಿಸಿದ್ದು, ಗುಣವಾಗಿರಲಿಲ್ಲ. ದಿನಾಂಕ: 07-12-2020 ರಂದು ಮದ್ಯಾನ್ನ 3-00 ಗಂಟೆಗೆ ತಮ್ಮ ಮನೆಯಲ್ಲಿ ಊಟ ಮಾಡಿ ಮನೆಯಿಂದ ಹೊರಗೆ ಹೋದವರು ಮನೆಗೆ ಬಾರದ್ದರಿಂದ ಅವರಿಗೆ ಹುಡುಕಾಡಿದ್ದು ಪತ್ತೆ ಆಗದ್ದರಿಂದ ಗುತ್ತಲ ಠಾಣೆಯಲ್ಲಿ ಪಿರ್ಯಾದಿ ಕೊಟಿದ್ದು ಇತ್ತು. ಅವ್ರಿಗೆ ಈವರೆಗೆ ಹುಡುಕಾಡಿದ್ದು ಪತ್ತೆ ಆಗಿರಲಿಲ್ಲ. ದಿನಾಂಕ 07-12-2020 ರಂದು ಮನೆಯಿಂದ ಹೋಗಿ ಅದೆ ದಿನ ಮದ್ಯಾಹ್ನ 03-00 ಗಂಟೆಯಿಂದ ದಿನಾಂಕ 18-02-2021 ರಂದು ಮುಂಜಾನೆ 09-00 ಗಂಟೆ ನಡುವಿನ ಅವದಿಯಲ್ಲಿ ಕೋಡಬಾಳ ಗ್ರಾಮದ ಹತ್ತಿರ ಇರುವ ಹಳ್ಳದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮರಣ ಹೊಂದಿರುತ್ತಾರೆ ವಿನಃ ನನ್ನ ತಂದೆಯ ಮರಣದಲ್ಲಿ ಬೇರೆ ಏನು ಸಂಶಯ ಇರುದಿಲ್ಲ ಅಂತಾ ಮೃತನ ಮಗ ಸಂತೋಷ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ. 

                 ಅಜ್ಜಪ್ಪ ತಂದೆ ಕಿಶೋರ ಗುತ್ತಲ  ಸಾ:ರಾಣೇಬೆನ್ನೂರು ಮಾರುತಿ ನಗರ ಇವನು ಸುಮಾರು 9-10 ವರ್ಷಗಳಿಂದ ವಿಪರೀತ ಮಧ್ಯಪಾನ ಮಾಡುತ್ತಾ ಬಂದಿದ್ದು ಇವನು ತನ್ನ ಮಧ್ಯಪಾನ ಮಾಡುವ ಚಟವನ್ನು ಬಿಡಲಾಗದೇ ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ದಿನಾಂಕ: 18-02-2021 ರಂದು ಮುಂಜಾನೆ 11-00 ಗಂಟೆಯಿಂದ ಮದ್ಯಾಹ್ನ 12-30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬೆಡರೂಮದಲ್ಲಿರುವ ಆರ್ ಸಿ ಸಿ ಗೆ ಹಾಕಿರುವ ಕಬ್ಬಿಣದ ಉಕ್ಕಿಗೆ ಹಗ್ಗದ ಸಹಾಯದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಅವನ ಸಾವಿನಲ್ಲಿ ನಮಗೆ ಯಾವುದೇ ಸಂಶಯ ಇರುವುದಿಲ್ಲ ಅಂತಾ ಮಾದೇವಕ್ಕ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 20-02-2021 04:14 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ