ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:48/2021 ಮಹಿಳೆ ಕಾಣೆ.

                  ಪೂಜಾ ತಂದೆ ಬಸವಣ್ಣೆಪ್ಪ ಬಳ್ಳಿ, ವಯಾ: 18 ವರ್ಷ 1 ತಿಂಗಳು ಇವಳು ದಿನಾಂಕ: 16-08-2021 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ಲಕ್ಷ್ಮೀ ಇವರ ಮುಂದೆ ಹಾವೇರಿಗೆ ಹೋಗಿ ಸಿ.ಇ.ಟಿ ಪರೀಕ್ಷೆಯ ಪ್ರವೇಶ ಪತ್ರ ತೆಗೆಸಿಕೊಂಡು ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು ಪರ್ತ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ಈವರೆಗೂ ಹುಡುಕಲಾಗಿ ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ಪೂಜಾ ಇವಳನ್ನು ಹುಡುಕಿಕೊಡಬೇಕೆಂದು ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ  ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:123/2021 ವ್ಯಕ್ತಿ ಕಾಣೆ.

                  ವಿರುಪಾಕ್ಷಯ್ಯ ಈ‍‍ಶ್ವರ ಹಲರ್ಣಿಮಠ ವಯಾ: 48 ಸಾ|| ರಾಣೆಬೇನ್ನೂರ ಇವರು ದಿನಾಂಕ; 23/03/2021 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ರಾಣೇಬೆನ್ನೂರಿನ ತಮ್ಮ ಮನೆಯಿಂದ ಹೋಟಲ್ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಕಾಣೆಯಾದವನನ್ನು ಹುಡುಕಿಕೊಡಬೇಕೆಂದು ಈಶ್ವರ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:149/2021 ಕಲಂ: 380,454,457 IPC.

                  ದಿನಾಂಕ; 15-08-2021 ರಂದು ರಾತ್ರಿ 10-00 ಘಂಟೆಯಿಂದ ದಿನಾಂಕ; 16-08-2021 ರಂದು ಬೆಳಿಗ್ಗೆ 10-00 ಘಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಹಾನಗಲ್ಲ ಪಿಎಸ್ ಹದ್ದಿ ಪೈಕಿ ಬಮ್ಮನಹಳ್ಳಿ ಗ್ರಾಮದ ಮಹಾಲಕ್ಷ್ಮೀ ವೈನ ಶಾಪಿನ ಒಂದು ತಗಡಿನ ಶೀಟಿಗೆ ಹಾಕಿದ್ದ ನಟ್ಗಳನ್ನು ಬಿಚ್ಚಿ ತಗಡಿನ ಶೀಟನ್ನು ತೆರೆದು ಒಳಗಡೆ ಬಂದು ಕ್ಯಾಶ್ ಕೌಂಟರ್ ಡ್ರಾದಲ್ಲಿ ಇಟ್ಟಿದ್ದ 55,000/- ರೂಗಳು ಹಣವನ್ನು ಹಾಗೂ ಸಿ.ಸಿ ಕ್ಯಾಮರಾದ ಡಿ.ವ್ಹಿ.ಆರ್ ಅ;ಕಿ; 3000/- ರೂಗಳು ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 13-09-2021 11:31 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080