ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:26/2021 ಕಲಂ: PROTECTION OF CHILDREN FROM SEXUAL OFFENCES ACT 2012 (U/s-6);  465,471,420,504,506,149,376,376(2)(n)) IPC.

             ದಿವ್ಯಶ್ರೀ ಎನ್.ಕೆ ಇವರು ರಾಣೆಬೆನ್ನೂರಿನಲ್ಲಿ ವಾಸವಾಗಿದ್ದು, ಅವಳು 15 ವರ್ಷ ಅಪ್ರಾಪ್ತಳಾಗಿದ್ದಾಗಿನಿಂದ ಅವಳ ಮನೆಗೆ ವಿರೇಶ ಜಯಪ್ಪ ಅಡಿವೆಪ್ಪನವರ ಈತನು ಆಗಾಗ ಬಂದು ಹೋಗಿ ಮಾಡುತ್ತಿದ್ದನು .ಆತನು ವಿದ್ಯಾ ಇವಳೊಂದಿಗೆ ಸಲುಗೆ ಬೆಳಸಿಕೊಂಡು, ಖಾಸಗಿ ಪೋಟೋ ವಿಡೀಯೊಗಳನ್ನು ತೆಗೆದಿಟ್ಟುಕೊಂಡು ವಿಧ್ಯಾ ಹಾಗೂ ಅವರ ಕುಟುಂಬದವರಿಗೆ ಮರ್ಯಾದೆ ತೆಗೆಯುವುದಾಗಿ ಹೆದರಿಸುತ್ತಿದ್ದಲ್ಲದೆ, ನಿರಂತರ ಅತ್ಯಾಚಾರ ಎಸಗಿದ್ದಲ್ಲದೇ, ಖಾಸಗಿ ಭಾವಚಿತ್ರ ವಿಡೀಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹೆದರಿಸಿ ಬೆದರಿಸಿದ್ದು ಹಾಗೂ ಮದುವೆಯಾಗುವುದಾಗಿ ನಕಲಿ ದಾಖಲೆ ಸೃಷ್ಠಿಸಿ ವಿಧ್ಯಾ ಇವಳಿಗೆ ಮೋಸ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:52/2021 ಕಲಂ: 379 IPC.

                 ದಿನಾಂಕ:13-04-2021 ರಂದು ಬೆಳಗಿನ ಜಾವ 12-30 ಗಂಟೆಯಿಂದ ಬೆಳಗಿನ ಜಾವ 3-30 ಗಂಟೆ ನಡುವಿನ ಅವದಿಯಲ್ಲಿ ಮಾಗೋಡ ಗ್ರಾಮದ ಕೆ ಎಚ್ ಬಿ ಕಾಲೊನಿ ಹತ್ತಿರ ಸಿದ್ದಪ್ಪ ಕೊಪ್ಪದ ಇವರ ಜಮೀನದಲ್ಲಿರುವ ನಮ್ಮ ಜಿಯೋ ಟವರ್ ಐಡಿ - I-KA-RBRR-ENB-9057 ನೇದ್ದರ ಸೈಟ್ ಒಳಗೆ  ಹೋಗಿ  ಅಲ್ಲಿ  ODC.   ಕ್ಯಾಬೀನ್ ನಿಂದ ಪ್ರಾರಂಬಿಸಿ ಟವರ್ ಮೇಲಿನ ಆರ್ ಆರ್ ಎಚ್ ಸಿಸ್ಟಮ್ ಗೆ ಜೋಡಿಸಿದ  ಸುಮಾರು 35 ಮೀಟರ್ ಉದ್ದದ ಒಟ್ಟು 09 ಕೇಬಲ್ಗಳು   ಒಟ್ಟು ಉದ್ದ ಸುಮಾರು 315 ಮೀಟರ್ ಇವುಗಳ ಅಂದಾಜು ಕಿಮ್ಮತ್ತು  38.000/- ರೂ ಇವನ್ನು ಯಾರೋ ಅಪರಿಚಿತರು ಕಳ್ಳತನ ಮಾಡಿಕೊಂಡು ಹೊಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:72/2021 ಕಲಂ: 304 IPC.

                 ದಿನಾಂಕಃ16/04/2021 ರಂದು ಬೆಳಗಿನ ಜಾವಃ04-00 ಗಂಟೆಯಿಂದ ಮುಂಜಾನೆಃ08-00 ಗಂಟೆಯ ನಡುವಿನ ಅವಧಿಯಲ್ಲಿ ಶ್ರೀ ಚನ್ನವಿರೇಶ್ವರ ವಿರಕ್ತಮಠದ ಹಿಂದಿರುವ ಸುಮಾರು 5 ಎಕರೆ ಜಮೀನಿಗೆ ಗೋವಿನ ಜೊಳದ ಬೆಳೆಯ ಸುತ್ತಲೂ ತಂತಿಯನ್ನು ಹಾಕಿ ಅದಕ್ಕೆ ಟಿಸಿಯಿಂದ ವಾಯರ್ ಮುಖಾಂತರ ತಂತಿಗೆ ಕಲೆಕ್ಷನ್ ಕೊಟ್ಟು ಇದರಿಂದ ಮಾನವನ ಪ್ರಾಣಕ್ಕೆ ಅಪಾಯವಿರುವ ಸಂಬಂವವಿದೆ ಎಂದು ಗೊತ್ತಿದ್ದರೂ ಸಹ ಮನುಷ್ಯರು ಹಾಗೂ ಪ್ರಾಣಿಗಳು ದನಕರುಗಳು ಬರಬಾರದೆಂದು ಗೋವಿನ ಜೋಳದ ಜಮೀನಿನ ಸುತ್ತಲು ಎರೆಡು ಎಳೆ ತಂತಿಯನ್ನು ಹಾಕಿ ಆ ತಂತಿಗೆ ಜಮೀನಿನಲ್ಲಿರುವ ವಿಧ್ಯುತ್ ಟಿಸಿಯಿಂದ ವಾಯರ್ ಮುಖಾಂತರ ಕರೆಂಟ್ ಬಿಟ್ಟಿದ್ದು ಮಾರುತಿ ಗುತ್ತೆಪ್ಪ ಹಿತ್ಲಳ್ಳಿ ಇವರ ಮಗ ಜಮೀನಿನ ಹತ್ತಿರ ಹಾಯ್ದು ಬರುತ್ತಿದ್ದಾಗ ವಿದ್ಯುತ್ ಚಾಲು ಇರುವ ತಂತಿಯು ಬಲಗೈ ಮಧ್ಯದ ಬೆರಳಿಗೆ ಹಾಗೂ ಉಂಗುರ ಬೆರಳಿಗೆ ಹಾಗೂ ಎಡಗೈ ಮಧ್ಯದ ಬೆರಳಿನ ಹತ್ತಿರ ವಿಧ್ಯುತ್ ತಂತಿಯು ತಾಗಿ ಸುಟ್ಟು ಕಪ್ಪಾಗಿ ಸ್ಥಳದಲ್ಲಿಯೇ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:59/2021 ಕಲಂ: 379 IPC.

                 ದಿನಾಂಕ:16-04-2021 ರಂದು ಮುಂಜಾನೆ 04-00 ಗಂಟೆಯ ಸುಮಾರಿಗೆ ಕೂಸನೂರ-ಕನ್ನೇಶ್ವರ ರಸ್ತೆಯ ವೀರುಪಾಕ್ಷಪ್ಪ ಗದ್ದಿ ಇವರ ಜಮೀನಿನ ಹತ್ತಿರ ರಸ್ತೆ ಮೇಲೆ ಕೃಷ್ಣ ತಂದೆ ಗಣೇಶಪ್ಪ ಕಳಗೊಂಡರ ವಯಾ-25 ವರ್ಷ, ಜಾತಿ-ಹಿಂದೂ ಲಿಂಗವಂತ, ಉದ್ಯೋಗ-ಚಾಲಕ ಸಾ; ಬ್ಯಾಗವಾದಿ ತಾ; ಹಾನಗಲ್ಲ ಇವನು ಹಾಗೂ ಸದರ ಟ್ರ್ಯಾಕ್ಟರ್ ಮಾಲಕ ಸರಕಾರದ ಖನೀಜ ಸ್ವತ್ತಾದ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಯಾವುದೇ ಪಾಸ ವ ಪಮರ್ಮಿಟ್ ಇಲ್ಲದೇ ಟ್ಯಾಕ್ಟರ ನಲ್ಲಿ ಸಾಗಾಣಿಕೆ ಮಾಡುತ್ತಿದ್ದಾಗ ಮರಳು ಸಮೇತ ಸಿಕ್ಕದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:11/2021 ವ್ಯಕ್ತಿ ಸಾವು.

                 ನೂರಅಹ್ಮದ ತಂದೆ ಇಮಾಮಸಾಬ ಶೇಖಸನದಿ. ವಯಾ-53 ವರ್ಷ, ಸಾ; ಚಿಕ್ಕೇರೂರ ಇವರು ಸುಮಾರು ವರ್ಷದಿಂದ ಯಾವುದೇ ಕೆಲಸವನ್ನು ಮಾಡದೇ ಮನೆಯಲ್ಲಿಯೇ ಒಬ್ಬನೇ ಇದ್ದು ಮಾನಸಿಕ ಅಸ್ವಸ್ಥನಾಗಿ ಯಾವುದೇ ಕೆಲಸವನ್ನು ಮಾಡದೆ ಸೊಂಟ ಬಾಗಿದ್ದು, ಮಾನಸಿಕ ಅಸ್ವಸ್ಥನಾದ ಕಾರಣ ಮನೆಯಿಂದ ಎಲ್ಲಿಗಾದರೂ ಹೊದಾನು ಅಂತಾ ಮನೆಯ ಜನರು ಹೊರಗೆ ಬಿಡದೆ ಕಾಯುತ್ತಾ ಇದ್ದು, ದಿನಾಂಕ; 14-04-2021 ರಂದು  ತಾಯಿ ಮರಣ ಹೊಂದಿದ ಕಾರಣ ಶವ ಸಂಸ್ಕಾರ ಮಾಡಿ ಮದ್ಯಾಹ್ನ 3-00 ಗಂಟೆಗೆ ಮನೆಯಿಂದ ಹೊರಗೆ ಹೋಗಿ ಮನೆಗೆ ಬಾರದೆ ದಿನಾಂಕ; 16-04-2021 ರಂದು ಸಂಜೆ 6-00 ಗಂಟೆ ನಡುವಿನ ಅವದಿಯಲ್ಲಿ ತನ್ನಸ್ಟಕ್ಕೆ ತಾನೇ ಚಿಕ್ಕೇರೂರ ಗ್ರಾಮದ ಆನೆ ಹೊಂಡದಲ್ಲಿ ಬಿದ್ದು ನೀರು ಕುಡಿದು ಉಸುರುಕಟ್ಟಿ ಮೃತಪಟ್ಟಿದ್ದು ಇರುತ್ತದೆ ನನ್ನ ಗಂಡನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವದಿಲ್ಲ ಅಂತಾ ಮೃತನ ಹೆಂಡತಿ ತನ್ನ ವರದಿ ಕೊಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:14/2021 ನೇಣು ಹಾಕಿಕೊಂಡು ಮಹಿಳೆ ಆತ್ಮ ಹತ್ಯೆ.

                 ಶ್ರೀಮತಿ ದಾನೇಶ್ವರ ಕೋಂ ಮುತ್ತನಗೌಡ ಪಾಟೀಲ ವಯಾ- 25ವರ್ಷ.ಜಾತಿ-ಹಿಂದೂ-ಲಿಂಗಾಯತ, ಉದ್ಯೋಗ-ಮನೆಕೆಲಸ. ಸಾ-ಬೆಣ್ಣೆಪೇಟೆ ಬ್ಯಾಡಗಿ ಇವಳಿಗೆ ಈಗ ಮದುವೆಯಾಗಿ 03 ವರ್ಷವಾದರೂ ಮಕ್ಕಳು ಆಗಲಿಲ್ಲ ಅಂತಾ ಚಿಂತೆ ಮಾಡುತ್ತಿದ್ದು. ತಂದೆ-ತಾಯಿ ಇನ್ನೂ ನಿನಗೆ ವಯಸ್ಸಿದೆ ಮಕ್ಕಳು ಆಗುತ್ತವೆ ಚಿಂತೆ ಮಾಡಬೇಡ ಅಂತಾ ಬುದ್ಧಿವಾದ ಹೇಳಿದರೂ ಸಹ ಚಿಂತೆ ಮಾಡುವದನ್ನು ಬಿಟ್ಟಿರಲಿಲ್ಲ. ಮಕ್ಕಳು ಆಗಲಿಲ್ಲ ಅಂತಾ ಮಾನಸಿಕ  ಮಾಡಿಕೊಂಡು ಅದೇ ಚಿಂತೆಯಲ್ಲಿ ದಿನಾಂಕ:16-04-2021 ರಂದು ಮುಂಜಾನೆ 10-30 ಘಂಟೆಯಿಂದ 12-00 ಘಂಟೆ ನಡುವಿನ ಅವಧಿಯಲ್ಲಿ ತನ್ನಷ್ಟಕ್ಕೆ ತಾನೇ ತಮ್ಮ ವಾಸದ ಮನೆಯ ರೂಮಿನಲ್ಲಿ ಪ್ಯಾನಿಗೆ ನೇಣು ಹಾಕಿಕಂಡು ಮರಣ ಹೊಂದಿರುತ್ತಾಳೆ ವಿನಃ ಅವಳ ಮರಣದಲ್ಲಿ ಬೇರೆ ಯಾವ ಸಂಶಯವಿರುವದಿಲ್ಲ ಅಂತಾ ಶಿವಕುಮಾರ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

     

 

ಇತ್ತೀಚಿನ ನವೀಕರಣ​ : 22-04-2021 12:54 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ