ಅಭಿಪ್ರಾಯ / ಸಲಹೆಗಳು

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:21/2021 ಕಲಂ: INDIAN MOTOR VEHICLES ACT, 1988 (U/s-187) ; 279, 304(A) IPC.

                ದಿನಾಂಕ:14-02-2021 ರಂದು ಮುಂಜಾನೆ 08-45 ಗಂಟೆಯಿಂದ 09-00 ಗಂಟೆ ಸುಮಾರಿಗೆ ಹರಿಹರ-ರಾಣೇಬೆನ್ನೂರು ಏಕಮುಖೀಯ ಎನ್ ಹೆಚ್ 04 ರಸ್ತೆಯ ಮೇಲೆ ಯಾವುದೋ ಒಂದು ಕಾರನ್ನು ಆರೊಪಿ ಚಾಲಕನು ತಾನು ನಡೆಸುತ್ತಿದ್ದ ಕಾರನ್ನು ಹರಿಹರ ಕಡೆಯಿಂದ ರಾಣೇಬೆನ್ನೂರು ಕಡೆಗೆ ಅತೀ ಜೋರಿನಿಂದ ವ ತಾತ್ಸಾರತನ್ನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಮದೋಡ ಕ್ರಾಸ್ ಹತ್ತಿರ ಇರುವ ಎನ್ ಹೆಚ್ 04 ರಸ್ತೆಯ ಬ್ರಡ್ಜ್ ರಸ್ತೆಯ ಮೇಲೆ ಬಸಮ್ಮ ಕೋಂ ದುರಗಪ್ಪ ಹುಲ್ಲತ್ತಿ ವಯಾ: 66 ವರ್ಷ, ಜಾತಿ: ಹಿಂದೂ ವಾಲ್ಮೀಕಿ, ಉದ್ಯೋಗ: ಕೂಲಿ, ಸಾ: ಕಮದೋಡ ಇವರು ರಸ್ತೆಯನ್ನು ಕ್ರಾಸ್ ಮಾಡಿಕೊಂಡು ಕಮದೋಡ ಬ್ರಡ್ಜ್ ಕಡೆಗೆ ಹೊರಟಾಗ ಆರೋಪಿ ಕಾರ್ ಚಾಲಕನು ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದ ಬಸಮ್ಮ ಕೋಂ ದುರಗಪ್ಪ ಹುಲ್ಲತ್ತಿ ಇವರಿಗೆ ಡಿಕ್ಕಿ ಮಾಡಿ ಅಪಘಾತಪಡೆಸಿ ಬಾರಿ ಗಾಯ ಪೆಟ್ಟು ಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿ ಅಪಘಾತದ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡದೇ ಪರಾರಿಯಾಗಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನ ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:29/2021 ವ್ಯಕ್ತಿ ಕಾಣೆ.

                 ವಿನಾಯಕ ತಂದೆ ಲಕ್ಷ್ಮಣ ಕುಲಸಾಪುರ ವಯಸ್ಸು: 26 ವರ್ಷ, ಜಾತಿ: ಹಿಂದೂ ಆರೇರ, ಉದ್ಯೋಗ: ಕೂಲಿ ಕೆಲಸ ಸಾ: ಜೋಶಿ ಓಣಿ ಸವಣೂರ ಇವರು  ದಿನಾಂಕ: 18-02-2021 ರಂದು ಸಾಯಂಕಾಲ 08-00 ಗಂಟೆಗೆ ಸವಣೂರ ಶಹರದ ಬರಮದೇವರ ಸರ್ಕಲ್ ನಿಂದ ಹೋದವರು ಎಲ್ಲಿಗೋ ಹೋಗಿ ಕಾಣೆಯಾಗಿದ್ದು ವಾಪಸ್ಸ ಮನೆಗೆ ಬಂದಿರುವುದಿಲ್ಲ, ಇವರು 5 ಪೂಟು 4 ಇಂಚು ಎತ್ತರವಾಗಿದ್ದು, ಕಪ್ಪು ವರ್ಣ, ಸಾದಾರಣ ಮೈಕಟ್ಟು, ಕೋಲು ಮುಖ, ತಲೆಯಲ್ಲಿ ಕಪ್ಪು ಬಣ್ಣದ ಕೂದಲಗಳು, ಉದ್ದ ಮೂಗು, ಹೋಗುವಾಗ ಬೂದಿ ಬಣ್ಣದ ಅಂಗಿ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು ಅದೆ. ಇವರು ಕನ್ನಡ, ಭಾಷೆಯನ್ನು ಮಾತನಾಡುತ್ತಾರೆ. ಕಾಣೆಯಾದ ಇವರಿಗೆ ಹುಡುಕಿ ಕೊಡುವಂತೆ ಪೂರ್ಣಿಮಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:37/2021 ಕಲಂ: 506, 34, 323, 353, 504 IPC.

                 ಹಾನಗಲ್ ಪಿ.ಎಸ್. ಹದ್ದಿ ಪೈಕಿ ಹಾನಗಲ್ ಶಹರದ ಶಹರದ ಹೊಸ ಬಸ್ ನಿಲ್ದಾಣದಲ್ಲಿ ದಿನಾಂಕಃ-14-02-2021 ರಂದು ಮಧ್ಯಾಹ್ನ:03-30 ಗಂಟೆಯ ಸುಮಾರಿಗೆ ಕರ್ತವ್ಯದ ಮೇಲಿದ್ದ ಹನುಮಂತಪ್ಪ ಬಸಪ್ಪ ಜನಗೇರಿ ಹಾಗೂ ಕುಮಾರ ವಿ ಹಿರೇಮಠ ಇವರು ಮೇಲಾಧಿಕಾರಿಗಳ ಆದೇಶದ ಮೇರೆಗೆ ಹಾನಗಲ್ಲ ಬಸ್ ನಿಲ್ದಾಣದಲ್ಲಿ ಮೊಬೈಲ್ ಕಳವು ಮಾಡಲು ಹೋದ ಸುನೀಲ ಹುಲುಗಪ್ಪ ಬಂಡಿವಡ್ಡರ ಸಾ ಹುಲಗಿನಕೊಪ್ಪ ಹಾಗೂ ಸೋಮಶೇಖರ ಕುಂದಗೊಳ ಸಾ ಹುಲಗಿನಕೊಪ್ಪ ಇವರುಗಳನ್ನು ಸಾರ್ವಜನಿಕರು ಹಿಡಿದು ಕೂರಿಸಿದಾಗ ವಿಚಾರಣೆ ಮಾಡುವ ಕಾಲಕ್ಕೆ ಸೊಮಶೇಖರ ಅಲ್ಲಿಗೇ ಬಂದವನೇ ಕರ್ತವ್ಯದಲ್ಲಿ ನಿರತನಾದ ಹನುಮಂತ ಮತ್ತು ಕುಮಾರ ಜೊತೆ ವಾಗ್ವಾದಕ್ಕೆ ಇಳಿದು ಏನು ಪೊಲೀಸರು ನೀವು ನಮ್ಮ ದೋಸ್ತನಿಗೆ ಹಿಡಿದು ಕೂರಿಸಿಕೊಂಡಿರಿ ಅವನು ಏನು ಮಾಡ್ಯಾನ ಅಂತಾ ಏಕವಚನದಲ್ಲಿ ಮಾತನಾಡಿ ಅವಾಚ್ಯವಾಗಿ ಬೈಯ್ದು ನಿಮಗೆ ಇಲ್ಲೇ ಹೊಡೆದು ಬಿಡುತ್ತೇನೆ ಅಂತಾ ಕರ್ತವ್ಯದ ಮೇಲಿದ್ದ ಪೊಲೀಸರಿಗೆ ಕರ್ತವ್ಯಕ್ಕೆ ಅಡೆತಡೆ ಮಾಡಿದ್ದು ಅಲ್ಲದೇ, ಏರು ಧ್ವನಿಯಲ್ಲಿ ಮಾತನಾಡಿ ಕರ್ತವ್ಯ ನೀರತ ಹನುಮಂತ ಇವರ ಅಂಗಿಯ ಕೊರಳಪಟ್ಟಿ ಹಿಡಿದು ತನ್ನ ಕೈಯಿಂದ ಮುಷ್ಠಿ ಮಾಡಿ ಎದೆಗೆ, ಕತ್ತಿಗೆಗೆ ಗುದ್ದಿ ಒಳನೋವು ಪಡಿಸಿದನು. ಅಷ್ಟರಲ್ಲೇ ಸುಮ್ಮನೇ ಕೂತಿದ್ದ ಸುನೀಲ ನೀವು ಏನು ಹೇಳ್ತಿರಲೇ ಪೋಲಿಸ ಬೋಸಡಿ ಮಕ್ಳಾ ಅಂತಾ ಅವಾಚ್ಯ ಬೈದಾಡಿ ಕರ್ತವ್ಯದ ಮೇಲಿದ್ದ ಸಿಪಿಸಿ-906 ನೇದ್ದವರ ಅಂಗಿಯ ಕೊರಳಪಟ್ಟಿಯನ್ನು ಹಿಡಿದು ಕೈಯಿಂದ ಕೆನ್ನೆಗೆ ಹೊಡೆದು ಇಬ್ಬರೂ ಅವಾಚ್ಯ ಬೈದಾಡಿ ಜೀವಧ ಧಮಕಿ ಹಾಕುತ್ತಾ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 16-02-2021 05:44 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ