ಅಭಿಪ್ರಾಯ / ಸಲಹೆಗಳು

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:13/2021 ಕಲಂ: DOWRY PROHIBITION ACT, 1961 (U/s-3,4); 143,147,149,323,325,498A,504 IPC.

                ಎರೇಶಪ್ಪ ದಾವಣಗೇರಿ ಮೃತ್ಯುಂಜಯ ನಗರ ದಾವಣಗೇರಿ ಇವರು ಕವಿತಾಬಾಯಿ ಇವರೊಂದಿಗೆ ಮದುವೆಯಾಗಿದ್ದು ಮದುವೆಗೆ ವರದಕ್ಷಿಣೆ ವರೋಪಚಾರ ಅಂತಾ ಒಂದು ಬೈಕು, 5 ಲಕ್ಷ ರೂಪಾಯಿ ಹಣ ಹಾಗೂ ಬಂಗಾರದ ಆಭರಣಗಳನ್ನು ಪಡೆದುಕೊಂಡಿದ್ದು, ತದನಂತರ ಕವಿತಾಬಾಯಿ ಹಾಗೂ ಎರೇಶಪ್ಪರಾಣೇಬೆನ್ನೂರು ಶಹರದ ಮೃತ್ಯುಂಜಯ ನಗರದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡಿರುವ ಕಾಲಕ್ಕೆ ಎರೇಶಪ್ಪ ಹಾಗೂ ಅವರ ಮನೆಯವರು ಕೂಡಿಕೊಂಡು ಕವಿತಾಬಾಯಿ ಇವರಿಗೆ ತವರು ಮನೆಯಿಂದ ಇನ್ನೂ ಹೆಚ್ಚಿನ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿದ್ದು ಅಲ್ಲದೇ ದಿನಾಂಕ: 23/01/2021 ರಂದು ಮಧ್ಯಾಹ್ನ 02-30 ಗಂಟೆಗೆ ಎರೆಶ್ಪಪ ಕವಿತಾಬಾಯಿ ಇವರಿಗೆ ಮನೆಯಲ್ಲಿ ಅವಾಚ್ಯವಾಗಿ ಬೈದಾಡಿ, ಕೈಯಿಂದ ಹೊಡಿಬಡಿ ಮಾಡಿ, ಕೈಮುಷ್ಟಿಯಿಂದ ತುಟಿಗೆ ಗುದ್ದಿ ಕವಿತಾಬಾಯಿ ಇವರ ಹಲ್ಲುಗಳನ್ನು ಮುರಿದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:12/2021 ಕಲಂ: 379 IPC.

                 ದಿನಾಂಕ:11/02/2021 ರಂದು ಬೆಳಗ್ಗೆ 07-45 ಗಂಟೆಯಿಂದ ದಿನಾಂಕ:12/02/2021 ರಂದು  ಮದ್ಯಾಹ್ನ 12-00 ಗಂಟೆಯ ನಡುವಿನ ಅವಧಿಯಲ್ಲಿ ಕೋಡಿಯಾಲ ಹೋಸಪೇಟೆ ಗ್ರಾಮದ ಸಿದ್ಲಿಂಗಪ್ಪ ಅರಳಿಕಟ್ಟಿ ಇವರ ಮನೆಯ ಮುಂದಿನ ರಸ್ತೆಯ ಬದಿಯಲ್ಲಿ ಉಮಾಶಂಕರ ಶರ್ಮಾ ಇವರ ಅ;ಕಿ:155000/-(ಮೂರು ಲಕ್ಷ ರೂಪಾಯಿಗಳ ಮೌಲ್ಯದ) ಸಿಲ್ವರ್ ಬಣ್ಣದ ಬೋಲೆರೊ ಕ್ಯಾಂಪರ್ ಗೊಲ್ಡ್ ಸರಕು ವಾಹನ  ನಂಬರ: ಕೆಎ:27/ಎಮ್-3958 ಇದರ ಇಂಜನ್ ನಂಬರ: GA94F56204 ಹಾಗೂ ಚಸ್ಸಿ ನಂಬರ: MA1RY2GAK9F71833 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:06/2021 ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ.

                 ಲಲಿತಾ @ ಮಂಜುಳಾ ಗಂಡ ನಾಗರಾಜ ಬಾಲೇಹೊಸೂರ ಸಾ:ರಾಣೇಬೆನ್ನೂರು ಉಮಾಶಂಕರ ನಗರ ಇವರು ಸುಮಾರು 2-3 ವರ್ಷಗಳಿಂದ ಬೆನ್ನು ನೋವಿನ ಸಮಸ್ಯಯಿಂದ ಬಳಲುತ್ತಿದ್ದು ಇವಳು ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ದಿನಾಂಕ: 13-02-2021 ರಂದು ಮುಂಜಾನೆ 8-40 ಗಂಟೆಯಿಂದ 9-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸದ ಮನೆಯ ಬೆಡ್ ರೂಮಿನಲ್ಲಿ ಹಾಕಿರುವ ಸಿಲಿಂಗ್ ಪ್ಯಾನಿಗೆ ಸೀರೆಯ ಸಹಾಯದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಅವಳ ಸಾವಿನಲ್ಲಿ ನಮಗೆ ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತಾ ಗಣೇಶ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 16-02-2021 05:42 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ