ಅಭಿಪ್ರಾಯ / ಸಲಹೆಗಳು

 

ಬಂಕಾಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:60/2021 ಮಹಿಳೆ ಕಾಣೆ.

                ಗೀತಾ ಬಸಪ್ಪ ಕೊಟಿ ವಯಾ:17 ವರ್ಷ ಸಾ|| ಮುಗಳಿಕಟ್ಟಿ ಇವಳಿಗೆ ದಿನಾಂಕ; 06-06-2021  ರಂದು ರಾತ್ರಿ 08-30 ಗಂಟೆ ಸುಮಾರಿಗೆ ಮುಗಳಿಕಟ್ಟಿ ಗ್ರಾಮದಿಂದ ಯಾರೋ ಯಾವುದೋ ಆಸೆ ತೋರಿಸಿ, ನಂಬಿಸಿ, ಅಪಹರಿಸಿಕೊಂಡು ಹೋಗಿರಬಹುದು ಅಂತಾ ಸಂಶಯವಿದ್ದು ನಾವು ಇದುವರೆಗೂ ನನ್ನ ಮಗಳಿಗೆ ಹುಡುಕಾಡಿದ್ದು ಎಲ್ಲಿಯೂ ಸಿಗದಿದ್ದ ಕಾರಣ ಕಾರಣ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ಕಾಣೆಯಾದವಳ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:96/2021 ಮಹಿಳೆ ಕಾಣೆ.

                ನಸೀಮಾಬಾನು ಮೌಲಾಲಿ ಕುಪ್ಪೆಲೂರ ವಯಾ: 38 ಸಾ|| ಪರವಸಿದ್ದಿಗೇರಿ  ಇವಳು ದಿನಾಂಕ; 08/06/2021 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ರಾಣೇಬೆನ್ನೂರು ಶಹರದ ಚೌಡೇಶ್ವರಿ ನಗರದಲ್ಲಿರುವ ತನ್ನ ಅಕ್ಕ ರಜಿಯಾ ಸತ್ತರಸಾಬ ಕೋಡ ಇವರ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಹೋದವಳು ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಕಾಣೆಯಾದವಳನ್ನು ಇವರೆಗೂ ಹುಡುಕಲಾಗಿ  ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ಕಾಣೆಯಾದವಳ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:94/2021 ಕಲಂ: INDIAN MOTOR VEHICLES ACT, 1988 (U/s-134(A&B),187); 279,338,304(A) IPC.               

                 ಪ್ರಕಾಶ ತಂದೆ ಅಡಿವೇಪ್ಪ ಸುಂಕದ. ವಯಾ-20 ವರ್ಷ. ಜ್ಯಾತಿ-ಹಿಂದೂ ವಾಲ್ಮೀಕಿ. ಉದ್ಯೋಗ-ಕೂಲಿ ಕೆಲಸ. ಸಾ-ಕಾಲ್ವೇಯಲ್ಲಾಪೂರ. ತಾ-ಹಾನಗಲ್ಲ ಇವನು ದಿನಾಂಕ: 12-06-2021 ರಂದು ಮುಂಜಾನೆ 07-00 ಘಂಟೆ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂಬರ: ಕೆಎ-27 ಇಎಮ್-2012 ನೇದ್ದರಲ್ಲಿ ಹಿಂದೆ ಹರೀಶ ತಂದೆ ನಾಗಪ್ಪ ಬೊಳಮ್ಮನವರ. ವಯಾ-25 ವರ್ಷ. ಜ್ಯಾತಿ-ಹಿಂದೂ ವಾಲ್ಮೀಕಿ. ಉದ್ಯೋಗ-ಕೂಲಿ ಕೆಲಸ. ಸಾ-ಕೊಂಡೋಜಿ. ತಾ-ಹಾನಗಲ್ಲ.ಇವನಿಗೆ ಕೂರಿಸಿಕೊಂಡು ಕೊಂಡೋಜಿ ಗ್ರಾಮದಿಂದ ಹಿರೇಕಾಂಶಿ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ವಾಪಾಸ್ ಕೊಂಡೋಜಿ ಗ್ರಾಮಕ್ಕೆ ಮಧ್ಯಾಹ್ನ 03-30 ಘಂಟೆ ಸುಮಾರಿಗೆ ಹಾನಗಲ್ಲ-ಶಿವಮೊಗ್ಗ ರಸ್ತೆಯ ಮಕರವಳ್ಳಿ ಗ್ರಾಮದಿಂದ ಕೊಂಡೋಜಿ ಕ್ರಾಸ್ ಕಡೆಗೆ ರಸ್ತೆಯ ಎಡಬದಿಯಲ್ಲಿ ಪ್ರಕಾಶ ಇತನು ತನ್ನ ಮೋಟಾರ್ ಸೈಕಲ್ ನಂಬರ ಕೆಎ-27/ಇಎಮ್-2012 ನೇದ್ದರಲ್ಲಿ ಹರೀಶ ಇವನಿಗೆ ಬೈಕಿನ ಹಿಂಬದಿಯಲ್ಲಿ ಕೂರಿಸಿಕೊಂಡು ಹೋಗುತ್ತಿರುವಾಗ,ಯಾವುದೋ ಲಾರಿ ಚಾಲಕನ ಹೆಸರು ವಿಳಾಸ ವಾಹನದ ನಂಬರ ತಿಳಿದು ಬಂದಿದ್ದು ಇರುವದಿಲ್ಲ, ಇವನು ತನ್ನ ಲಾರಿಯನ್ನು ನಿರ್ಲಕ್ಷತನದಿಂದ ರಸ್ತೆಯ ಎಡ ಬದಿಯಲ್ಲಿ ಯಾವುದೇ ರೀತಿಯ ಸೂಚನೆಯನ್ನು ನೀಡದೆ ಲಾರಿಯನ್ನು ನಿಲ್ಲಿಸಿದ್ದರಿಂದ ಮೃತನು ಚಲಾಯಿಸುತ್ತಿದ್ದ ಬೈಕಿಗೆ ಅಪಘಾತ ಆಗುವಂತೆ ಮಾಡಿದ್ದರಿಂದ ಪ್ರಕಾಶನಿಗೆ ಹಣೆಗೆ ಬಲವಾದ ರಕ್ತಘಾಯ ಹಾಗೂ ಎದೆಗೆ ಮೈಕೈ ಮೇಲೆ ಘಾಯ ನೋವುಗಳು ಆಗುವಂತೆ ಮಾಡಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಅಲ್ಲದೆ, ಬೈಕಿನ ಹಿಂದೆ ಕುಳಿತ ಹರೀಶನಿಗೆ ತಲೆಗೆ,ಮುಖಕ್ಕೆ ಬಲವಾದ ಘಾಯನೋವು ಆಗುವಂತೆ ಮಾಡಿದ್ದು ಅಲ್ಲದೆ, ಸದರ ಅಫಘಾತದ ಸುದ್ದಿಯನ್ನು ಹತ್ತಿರದ ಠಾಣೆಗೂ ತಿಳಿಸದೆ ಮತ್ತು ಗಾಯಾಳುವಿಗೆ ಹತ್ತಿರದ ಆಸ್ಪತ್ರೆಗೂ ಸೇರಿಸದೆ ಲಾರಿ ಸಮೇತ ಪರಾರಿ ಆಗಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:15/2021 ವ್ಯಕ್ತಿ ಸಾವು.

                 ಸಧಾನಂದ ಶಿವಾನಂದ ಮತ್ತಿ ವಯಾ: 24 ಸಾ|| ನಾಯಕೆರೂರ ಇವನು ಶಿಗ್ಗಾಂವ ಮಣಪುರಂ ಗೋಲ್ಡಲೋನ್ ಶಾಖೆಯಲ್ಲಿ ಕ್ಯಾಶರ್ ಆಗಿ ಕೆಲಸ ಮಾಡುತ್ತಿದ್ದು ಈ ಶಾಖೆಯಲ್ಲಿ ದಿನಾಂಕ: 10-06-2021 ರಂದು 1,51,000 ರೂ ಹಣದ ವೈತ್ಯಾಸ ಕಂಡುಬಂದಿರುತ್ತದೆ ಅಂತಾ ಶಾಖಾ ಮ್ಯಾನೇಜರ ಮತ್ತು ಸದಾನಂದನಿಗೆ ಏರಿಯಾ ಮ್ಯಾನೇಜರ ಇವರು ವಿಚಾರಣೆ ಮಾಡುತ್ತಾರೆ ಅಂತಾ ತಿಳಿದು ದಿನಾಂಕ:12-06-2021 ರಂದು ಮುಂಜಾನೆ 6-00 ಗಂಟೆಯಿಂದ ಮುಂಜಾನೆ 8-30 ಗಂಟೆಯ ನಡುವಿನ ಅವಧಿಯಲ್ಲಿ ನಾಯಕೆರೂರ ಗ್ರಾಮದ ಚನ್ನಪ್ಪ ಉಜ್ಜಪ್ಪ ಮಟ್ಟಿ ಇವರ ಹೊಲದಲ್ಲಿರುವ ಬೇವಿನಗಿಡದ ಟೊಂಗೆಗೆ ತನ್ನ ಟವಲದಿಂದಾ ಉರಲು ಹಾಕಿಕೊಂಡು ಮರಣ ಹೊಂದಿರುತ್ತಾನೆ ಅಂತಾ ಮೃತನ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 16-06-2021 04:19 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080