ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:12/2021 ಕಲಂ: The Scheduled Castes and the Scheduled Tribes (Prevention of Atrocities) Amendment Bill, 2015 (U/s-3(1)(r),3(2)(va)); 323,307,353,504,506,34) IPC.

                 ಕಿರಣ ಪಕ್ಕಿರಪ್ಪ ಬೊಮ್ಮಣ್ಣನವರ ಸಾ ತೋಟದಯಲ್ಲಾಪೂರ ಇವರ ಹೆಂಡತಿಯಾದ ಗಂಗಮ್ಮ  ನಗರಸಭೆ ಹಾವೇರಿಯಲ್ಲಿ ಅಕೌಂಟ್ ಕನಸಲ್ಟಂಟ್ ಅಂತ ಕೆಲಸ ಮಾಡುತ್ತಿದ್ದು ಸದರಿಯವಳ ವೇತನವನ್ನು ನಗರಸಭೆ ಹಾವೇರಿಯ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮರೆಪ್ಪ ಕರೆಪ್ಪ ಮುಗುಳಿ ವೇತನವನ್ನು ಇವರು ಮಾಡದೇ ಇದ್ದುದರಿಂದ ಸಿಟ್ಟಾಗಿ ದಿನಾಂಕ: 12-02-2021 ರಂದು ಮುಂಜಾನೆ 11-00 ಘಂಟೆಗೆ ಹಾವೇರಿ ನಗರಸಭೆಯ ಪೌರಾಯುಕ್ತರ ಕೊಠಡಿಯಲ್ಲಿ ಕಿರಣ ಮರೆಪ್ಪ ಇವರನ್ನು ಕೊಲೆ ಮಾಡುವ ಉದ್ದೇಶದಿಂದ ಆತನ ಬಲಗೈ ಬೆರಳುಗಳನ್ನು ತಿರುವಿ, ಎಡಕಿವಿ ಹತ್ತಿರ ಚೂರಿ, ದೂಡಾಡಿ ಕೆಳಗೆ ಕೆಡವಿ ಕಾಲಿನಿಂದ ಒದ್ದಿದ್ದಲ್ಲದೆ ತನ್ನ ಹೆಂಡತಿ ಯೊಂದಿಗೆ ಸೇರಿಕೊಂಡು ಮರೆಪ್ಪ ಇವರಿಗೆ ಅವಾಚ್ಯವಾಗಿ ಬೈದಾಡಿ ಲೇ ಹೊಲಿಯಾ ಸೂಳೇಮಕ್ಕಳ, ನಿಮ್ಮಪ್ಪನ ಮನೆಯಿಂದ ಪಗಾರ ಕೊಡ್ತಿಯಾ, ಸೂಳೇಮಕ್ಕಳ ಅಂತ ಬೈದಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿ ಜಾತಿನಿಂದನೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:13/2021 ಕಲಂ: 323, 307, 354(B), 504, 506, 34 IPC.

                 ಮರೆಪ್ಪ ಕರೆಪ್ಪ ಮುಗಳಿ ಇವರು ಹಾವೇರಿ ನಗರಸಭಯಲ್ಲಿ ಅಕೌಂಟ್ ಕನಸಲ್ಟಂಟ್ ಅಂತ ಕೆಲಸ ಮಾಡುತ್ತಿದ್ದು, ಕಿರಣ ಶಿವಬಸಪ್ಪ ಬಮ್ಮಣ್ಣನವರ ಇವರ ಹೆಂಡತಿಯ ಕಳೆದ 10 ತಿಂಗಳಿನ ವೇತನವನ್ನು ಮಾಡದೇ ಇದ್ದುದರಿಂದ ದಿನಾಂಕ: 12-02-2021 ರಂದು ಮುಂಜಾನೆ 11-15 ಘಂಟೆಗೆ ಹಾವೇರಿ ನಗರಸಭೆಯ ಪೌರಾಯುಕ್ತರ ಕೊಠಡಿ ಯಲ್ಲಿ ಕಿರಣ ಹಾಗೂ ಅವರ ಹೆಂಡತಿ ಸೇರಿಕೊಂಡು ಕಮೀಷನರ್ ಅವರ ಹತ್ತಿರ ವೇತನ ಕೇಳಲು ಹೋಗಿದ್ದಾಗ ಮರೆಪ್ಪ ಅವಾಚ್ಯವಾಗಿ ಬೈದಾಡಿಕಿರಣನಿಗೆ ಕೊಲೆ ಮಾಡುವ ಉದ್ದೇಶದಿಂದ ಕೈಮುಷ್ಠಿ ಮಾಡಿ ಕಿರಣ ಇವರ ಮೂಗಿಗೆ, ಹಣೆಗೆ, ಕುತ್ತಿಗೆಗೆ  ಹೊಡೆದಿದ್ದು ಬಿಡಿಸಲು ಹೋದ ಕಿರಣ ಇವರ ಹೆಂಡತಿ ಗರ್ಭಿಣಿ ಅಂತ ತಿಳಿದಿದ್ದರೂ ಸಹ ಆಕೆಯ ಹೊಟ್ಟೆಗೆ ಕೈಯಿಂದ ಹೊಡೆದು, ಆಕೆಯ ಮೈಮೇಲಿನ ಬಟ್ಟೆಗಳನ್ನು ಹಿಡಿದು ಎಳೆದಾಡಿ ಅವಮಾನಗೊಳಿಸಿ ಇನ್ನೊಮ್ಮೆ ಪೇಮೆಂಟ್ ಕೇಳಲು ಬಂದ್ರ ನಿಮ್ಮನ್ನ ಹುಟ್ಟಲಿಲ್ಲಾ ಅನ್ನಿಸಿಬಿಡ್ತನಿ ಅಂತ ಜೀವದ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:12/2021 ಮಹಿಳೆ ಕಾಣೆ.

                 ಬಿಬನ್ ಕೊಂ ಪೈರೊಜಖಾನ ಖಾನಜಾದೆ ವಯಸ್ಸು: 28 ವರ್ಷ, ಜಾತಿ: ಮುಸ್ಲಿಂ, ಉದ್ಯೋಗ: ಮನೆ ಕೆಲಸ ಸಾ: ಬಸವನಕೊಪ್ಪ ತಾ: ಸವಣೂರ  ಇವರು ದಿನಾಂಕ: 08-02-2021 ರಂದು ಬೆಳಿಗ್ಗೆ 10-00 ಗಂಟೆಗೆ  ಸವಣೂರ ತಾಲೂಕ ಬಸನಕೊಪ್ಪ ಗ್ರಾಮದ ಮನೆಯಿಂದ ಹೋದವರು ಎಲ್ಲಿಗೋ ಹೋಗಿ ಕಾಣೆಯಾಗಿದ್ದು ವಾಪಸ್ಸ ಮನೆಗೆ ಬಂದಿರುವುದಿಲ್ಲ, ಇವಳು 5 ಪೂಟು 4 ಇಂಚು ಎತ್ತರವಾಗಿದ್ದು, ಕಪ್ಪು ವರ್ಣ, ಸಾದಾರಣ ಮೈಕಟ್ಟು, ಕೋಲು ಮುಖ, ತಲೆಯಲ್ಲಿ ಕಪ್ಪು ಬಣ್ಣದ ಕೂದಲಗಳು, ಉದ್ದ ಮೂಗು, ನನ್ನ ಗಂಡ ಹೋಗುವಾಗ ನೆರಳೆ ಬಣ್ಣದ ಚೂಡಿ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು ಅದೆ. ಇವರು ಕನ್ನಡ, ಹಿಂದೆ ಭಾಷೆಯನ್ನು ಮಾತನಾಡುತ್ತಾರೆ. ಇವರಿಗೆ ಹುಡುಕಿ ಕೊಡುವಂತೆ ಪೈರೋಜಖಾನ್  ನೀಡಿದ ಪಿರ್ಯಾದಿಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 16-02-2021 05:40 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ