ಅಭಿಪ್ರಾಯ / ಸಲಹೆಗಳು

ಹಾವೇರಿ ಸಿಇಎನ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:20/2021 ಕಲಂ: NARCOTIC DRUGS AND PSYCHOTROPIC SUBSTANCES ACT, 1985 (U/s-20(b) (ii)(A)) IPC.

                ದಿನಾಂಕ:11-03-2021 ರಂದು ಆಶಿಪ್ ಮಹಮದ್ ಶಬ್ಬಿರ ಸಾ ದಾವಣಗೇರಿ ಇವರು ತಮ್ಮ ಬೈಕ್ ನಂ: ಕೆಎ 04 ಇಕ್ಯೂ 9736 ನೇದ್ದರಲ್ಲಿ ಬಂದು ರಾಣಿಬೆನ್ನೂರು ಶಹರದ ಆರ್ ಟಿ ಇ ಎಸ್ ಕಾಲೇಜ್ ಕಾಂಪೌಂಡ್ ಹತ್ತಿರ ಹಳೇ ಪಿ ಬಿ ರಸ್ತೆಯ ಪಕ್ಕದಲ್ಲಿ ನಿಂತುಕೊಂಡು ತಮ್ಮ ಲಾಭಕ್ಕಾಗಿ ನಿಷೇಧಿತ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಬಂದಾಗ ಒಬ್ಬ ಮಾಲು ಸಮೇತ ಸಿಕ್ಕಿದ್ದು ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡು ಓಡಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು  ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:34/2021 ಕಲಂ: 379 IPC.

                 ದಿನಾಂಕ:07-03-2021 ರಂದು ಬೆಳಿಗ್ಗೆ 07-45 ಗಂಟೆಯಿಂದ ರಾತ್ರಿ  23-45 ಗಂಟೆಯ ನಡುವಿನ ಅವಧಿಯಲ್ಲಿ ಸರ್ಜುನ್ ಮಾನೆಗರ ಸಾ|| ಹಾವೇರಿ ಇತನು ತನ್ನ ಮೋಟಾರ ಸೈಕಲನ್ನು ರಾಣೆಬೆನ್ನೂರು ಶಹರದ ಗೌರಿ ಶಂಕರ ನಗರದ ಬಿ..ಓ ಆಫೀಸ್ ಎದುರಿಗೆ ಇರುವ ತನ್ನ ಸ್ನೇಹಿತ ರಾಜು ಗುತ್ತಲ ಈತನ ಮನೆಯ ಮುಂದೆ ಒಂದು ಹಿರೋ ಹೊಂಡಾ ಸ್ಲಂಡರ್ ಪ್ಲಸ್ ಮೋಟಾರ ಸೈಕಲ್ ನಂ: ಕೆಎ-27/ಆರ್-7872 ಇದರ ಇಂಜಿನ ನಂಬರ:HA10EA9HEO5733 ಚಾಸ್ಸೀಸ್ ನಂಬರ:MBLHA10EE9HE06564  :ಕಿ:8,000/-ರೂಗಳು ನೇದ್ದನ್ನು ನಿಲ್ಲಿಸಿ ಬಳ್ಳಾರಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿ ಬರುವಷ್ಠರಲ್ಲಿಯೇ ಯಾರೋ ಕಳ್ಳರು ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು  ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:37/2021 ಕಲಂ: PROTECTION OF CHILDREN FROM SEXUAL OFFENCES ACT 2012 (U/s-4,6); The Scheduled Castes and the Scheduled Tribes (Prevention of Atrocities) Amendment Bill, 2015 (U/s-3(1)(w)(1),3(1)(w)(2)) ;376(2) IPC.

                 ಕುಮಾರಿ ನಂದಿನಿ ತಂದೆ ಮಲ್ಲೇಶಪ್ಪ ಮಾದರ  ವಯಾ-16 ವರ್ಷ  ಜಾತಿ: ಮಾದರ ಉದ್ಯೋಗ: ವಿದ್ಯಾರ್ಥಿನಿ ಸಾ||ಅರಳಿಕಟ್ಟಿ ತಾ||ಹಿರೇಕೆರೂರ ಹಿಂದುಳಿದ ಪರಿಶಿಷ್ಟ ಜಾತಿಗೆ ಸೇರಿದವಳು ಇದ್ದು ಮಾಲತೇಶ ರಾಮಪ್ಪ ಲಕ್ಕವಳ್ಳಿ ಸಾ ಅರಳಿಕಟ್ಟಿ ಇವನು ಕುರಬ ಜಾತಿಗೆ ಸೇರಿದವನು ಇದ್ದು ನಂದಿನಿ ಇವಳು ಅಲ್ಪವಯಸ್ಕಳು ಮತ್ತು ಪರಿಶಿಷ್ಟ ಜಾತಿಗೆ ಸೇರಿದವಳು ಅಂತಾ ಗೊತ್ತಿದ್ದು ಮಾಲತೇಶ ಕೊಕೊ ಮತ್ತು ಕಬ್ಬಡ್ಡಿ ಆಡುತ್ತಿದ್ದಾಗ ಮಾತನಾಡಿಸುವದು ನಿನಗೆ ಪ್ರೀತಿ ಮಾಡುತೇನೆ ನಿನ್ನ ಸಲುವಾಗಿ ಊಟ ತಿಂಡಿ ಬಿಟ್ಟಿರುತ್ತೇನೆ ನಾನು ಜಾತಿ-ಪಾತಿ ನೊಡುವದಿಲ್ಲಾ ನಾನು ನಿನ್ನನ್ನು ಕೈಬಿಡುವದಿಲ್ಲಾ ಮದುವೆಯಾಗುತ್ತೇನೆ ಅಂತಾ ನಂಬಿಸಿ ಅವಳಿಗೆ ಪ್ರೀತಿ ಮಾಡುತ್ತಾ ಬಂದಿದ್ದು ಅಲ್ಲದೆ ದಿನಾಂಕ: 15-02-2021 ರಂದು ಬ್ಯಾಡಗಿ ಸುಭಾಸ ಸರ್ಕಲ್ದಲ್ಲಿ  ನಂದಿನಿಗೆ ಮಾಲತೇಶ ನನ್ನ ಗೆಳೆಯ ಮತ್ತು ಅವನ ಲವರ್ ಬಂದಿದ್ದಾರೆ ಮಾತನಾಡಿಸಿಕೊಂಡು ಬರೋಣ ಅಂತಾ ಸುಳ್ಳು ಹೇಳಿ ಸೈಕಲ ಮೋಟರ ನಂ. ಕೆಎ-27/ಯು-0030 ನೇದ್ದರಲ್ಲಿ ಒತ್ತಾಯ ಮಾಡಿ ಕರೆದುಕೊಂಡು ಹೋಗಿ ಬ್ಯಾಡಗಿ ಶಹರದ ಬೆಟ್ಟದಮಲ್ಲೇಶ್ವರ ನಗರದಲ್ಲಿರುವ ಒಂದು ಮನೆಯಲ್ಲಿ ರೂಮಿನ ಒಳಗೆ ಒತ್ತಾಯಪೂರ್ವಕವಾಗಿ ನಂದಿನಿ ಜೊತೆ ಲೈಂಗಿಕ ಸಂಪರ್ಕ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:54/2021 ಕಲಂ: INDIAN MOTOR VEHICLES ACT, 1988 (U/s-134(A&B),187); 279,304(A) IPC.

                 ದಿನಾಂಕಃ10/03/2021 ರಂದು ರಾತ್ರಿಃ10-00 ಗಂಟೆಯಿಂದ ದಿನಾಂಕಃ11/03/2021 ರ ಬೆಳಗಿನ ಜಾವಃ12-10 ಗಂಟೆಯ ನಡುವಿನ ಅವಧಿಯಲ್ಲಿ ಕರಗುದರಿ ಗ್ರಾಮದ ಸಮೀಪ ಫಜಲ್ಅಹ್ಮದ ಡೊಳ್ಳೇಶ್ವರ ಇವರ ಜಮೀನಿನ ಬಾಜು ತಡಸ ಹಾನಗಲ್ಲ ರಸ್ತೆಯ ಮೇಲೆ ರಮೇಶ ತಂದೆ ಸೋಮಲೆಪ್ಪ ಲಮಾಣಿ ಸಾಃಜಾನಗುಂಡಿಕೊಪ್ಪ ತಾಃಹಾನಗಲ್ಲ ಈತನು ತನ್ನ ಬಾಬತ್ ಮೋಟಾರ್ ಸೈಕಲ್ ನಂಬರಃಕೆಎ-25/ಎಕ್ಸ್-8903 ನೇದ್ದನ್ನು ರತ್ನಾಪೂರ ಕಡೆಯಿಂದ ಹಾನಗಲ್ಲ ಕಡೆಗೆ ಬರುತ್ತಿದ್ದಾಗ ಯಾವುದೋ ಒಂದು ವಾಹನದ ಚಾಲಕನು ತಾನು ನಡೆಸುತ್ತಿದ್ದ ವಾಹನವನ್ನು ಅತೀ ಜೋರಾಗಿ ಮತ್ತು ನಿರ್ಲಕ್ಷ್ಯತನಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನನ್ನ ಮಗನ ಮೋಟಾರ್ ಸೈಕಲ್ಗೆ ಡಿಕ್ಕಿಪಡಿಸಿ ಅಪಘಾತಪಡಿಸಿ ಹಿಂದೆಲೆಗೆ ಭಾರಿ ಸ್ವರೂಪದ ರಕ್ತಗಾಯಪಡಿಸಿದ್ದು ಅಲ್ಲದೇ ಬಲಗಾಲು ಚೆಪ್ಪೆಗೆ ಭಾರಿ ಸ್ವರೂಪದ ಒಳಪೆಟ್ಟುಪಡಿಸಿ ಬಲಗೈಗೆ,ಎಡಗೈ ಮುಂಗೈ ಹತ್ತಿರ, ಎದೆಗೆ ತೆರಚಿದ ರಕ್ತಗಾಯಪಡಿಸಿ ಸ್ಥಳದಲ್ಲಿಯೇ ಮರಣಹೊಂದುವಂತೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 14-03-2021 12:54 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ