ಅಭಿಪ್ರಾಯ / ಸಲಹೆಗಳು

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:24/2021 ಕಲಂ: 380, 454, 457 IPC.

                 ದಿನಾಂಕ: 07-02-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 08-02-2021 ರ ಬೆಳಗಿನ 08-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಅಸ್ಲಾಮ ಪಠಾಣ ಸಾ|| ಸವಣೂರ ಇವರ ಮನೆಯ ಮುಂದಿನ ಬಾಗಿಲಿನ ಇಂಟರ್ ಲಾಕ್ ಮೀಟಿ ಕದ ತೆಗೆದು ಮನೆಯೊಳಗೆ  ಹೋಗಿ ಬೆಡ್ ರೂಮಿನಲ್ಲಿದ್ದ ಟ್ರಜರಿಯ ಕದ ಮತ್ತು ಕಪಾಟುಗಳನ್ನು ಮೀಟಿ ಮುರಿದು ಅದರಲ್ಲಿಟ್ಟಿದ್ದ ಒಟ್ಟು 2,28,000/- ರೂಪಾಯಿ ಕಿಮ್ಮತ್ತಿನ ವಿವಿಧ ನಮೂನೆಯ ಬಂಗಾರದ ಆಭರಣಗಳನ್ನು ಹಾಗೂ 1,10,000/- ನಗದು ಹಣ ಈ ಪ್ರಕಾರ ಒಟ್ಟು 3,38,000/-ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:25/2021 ಮಹಿಳೆ ಕಾಣೆ

                 ತೇಜಸ್ವೀನಿ  ತಂದೆ ರಮೇಶಪ್ಪ ಜೂಜಗಾರ ವಯಸ್ಸು: 22 ವರ್ಷ, ಜಾತಿ: ಹಿಂದೂ ದೇವಾಂಗ, ಉದ್ಯೋಗ: ಮನೆ ಕೆಲಸ, ಸಾ: ಸಿದ್ದಾಪುರ ತಾ: ಸವಣೂರ ಇವರು ದಿನಾಂಕ: 02-02-2021 ರಂದು ರಾತ್ರಿ 09-30 ಗಂಟೆಯ ಅವದಿಯಲ್ಲಿ ತಮ್ಮ ಮನೆಯಿಂದ ಹೋದವಳು ಎಲ್ಲಿಗೋ ಹೋಗಿ ಕಾಣೆಯಾಗಿದ್ದು ವಾಪಸ್ಸ ಮನೆಗೆ ಬಂದಿರುವುದಿಲ್ಲ, ಇವಳು 5 ಪೂಟು 2 ಇಂಚು ಎತ್ತರವಾಗಿದ್ದು, ಗೋದಿ ವರ್ಣ, ಸಾದಾರಣ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಕಪ್ಪು ಬಣ್ಣದ ಕೂದಲಗಳು, ದುಂಡನೇಯ ಮೂಗು, ಇರುತ್ತದೆ. ನನ್ನ ಮಗಳು ಹೋಗುವಾಗ ಹಳದಿ ಬಣ್ಣದ ಚೂಡಿ ಕಪ್ಪು ಬಣ್ಣದ ಪ್ಯಾಂಟ ಧರಿಸಿದ್ದು ಅದೆ. ಇವರು ಕನ್ನಡ ಭಾಷೆಯನ್ನು ಮಾತನಾಡುತ್ತಾರೆ, ಇವಳಿಗೆ ಹುಡುಕಿ ಕೊಡುವಂತೆ ನೀಡಿದ ಪಿರ್ಯಾದಿಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:04/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                    ಮಹೇಶಪ್ಪ ತಂದೆ ವೀರುಪಾಕ್ಷಪ್ಪ ನಾಯಕರ ವಯಾ 58 ವರ್ಷ, ಸಾಃಮೇಡ್ಲೇರಿ ತಾಃರಾಣೇಬೆನ್ನೂರು ಇವರು ಈಗ್ಗೆ 2 ವರ್ಷಗಳಿಂದ ಮಾನಸಿಕ ಕಾಯಲೆಯಿಂದ ಬಳುತ್ತಿದ್ದು ಧಾರವಾಡ ಮಾನಸಿಕ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಳ್ಳುತ್ತಿದ್ದ ಇದರಿಂದ ಜೀವನದಲ್ಲಿ ಜೀಗುಪ್ಸೆ ಹೊಂದಿ ದಿನಾಂಕಃ10-02-2021 ರಂದು ರಾತ್ರಿ 8-30 ಗಂಟೆ ಸುಮಾರಿಗೆ ತನ್ನ ಕಣದಲ್ಲಿ ಹೊಲಕ್ಕೆ ಹೊಡೆಯವ ಕ್ರಿಮಿನಾಶಕ ಔಷದಿಯನ್ನು ಕುಡಿದ ಇವನನ್ನು ರಾಣೇಬೆನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಉಪಚಾರ ಪಡೆದುಕೊಂಡು ಹೆಚ್ಚಿನ ಉಪಚಾರಕ್ಕೆ ದಾವಣಗೆರೆ ಸಿ.ಜೆ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಳ್ಳುವ ಕಾಲಕ್ಕೆ ದಿನಾಂಕಃ11-02-2021 ರಂದು 00-30 ಗಂಟೆ ಮೃತ ಪಟ್ಟಿದ್ದು ಇರುತ್ತದೆ ಇವರ ಸಾವಿನಲ್ಲಿ ಅನುಮಾನು ಇರುವುದಿಲ್ಲ ಅಂತಾ ರತ್ನಮ್ಮ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 14-02-2021 01:56 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ