ಅಭಿಪ್ರಾಯ / ಸಲಹೆಗಳು

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:15/2021 ಕಲಂ: DOWRY PROHIBITION ACT, 1961 (U/s-3,4); 498A IPC.

                 ಸತೀಶ ತಂದೆ ನಾಗಲಿಂಗಪ್ಪ ಬಳಿಗಾರ MESCOM ಲೈನಮನ್ ಶಿರಾಳಕೊಪ್ಪ ತಾ: ಶಿಕಾರಿಪುರ ಸಾ: ಕುಪ್ಪೆಲೂರ ತಾ: ರಾಣೇಬೆನ್ನೂರ ಇವನು ಶಿಲ್ಪಾ ಬಳಿಗಾರ ಸಾ ಕುಪ್ಪೇಲೂರ ಇವರನ್ನ  ದಿನಾಂಕ: 20-04-2017 ರಂದು ಗುರುಹಿರಿಯರ ಸಮಕ್ಷಮ ಕದರಮಂಡಲಗಿ ಆಂಜನೇಯಸ್ವಾಮಿ ಕಲ್ಯಾಣ ಮಂಟಪದಲ್ಲಿ 80000/ರೂ ಹಣ ಮತ್ತು 3.25 ತೊಲಾ ಬಂಗಾರ, ಬಟ್ಟೆಗೆ ಅಂತಾ 10000/ರೂ. ಹಣ ತೆಗೆದುಕೊಂಡು ಮದುವೆಯಾಗಿ ಶಿರಾಳಕೊಪ್ಪದಲ್ಲಿ ಕೆಲಸ ಮಾಡುವ ಕಾಲಕ್ಕೆ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿ 2019ನೇ ಸಾಲಿನ ಫೆಬ್ರುವರಿ ತಿಂಗಳಿನ ಪ್ರಾರಂಭದಿಂದ ಶಿಲ್ಪಾ ಇವರಿಗೆ ಇನ್ನೂ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲಾಂದ್ರ ಡೈವೋರ್ಸ್ ಕೊಡು ನನಗ ಬೇಕಾದಷ್ಟು ವರದಕ್ಷಿಣೆ ಕೊಡ್ತಾರಾ ಬೇರೆ ಮದುವೆ ಮಾಡಿಕೊಳ್ತೇನಿ ಅಂತಾ ಹೆಚ್ಚಿನ ವರದಕ್ಷಿಣೆ ಹಣಕ್ಕಾಗಿ ಪೀಡಿಸುತ್ತಾ ದೈಹಿಕ ವ ಮಾನಸಿಕ ಹಿಂಸೆ ನೀಡುತ್ತಾ ಬಂದು ದಿನಾಂಕ: 01-02-2021 ರ ಮದ್ಯಾನ್ಹ 12-00 ಗಂಟೆಯ ಸುಮಾರಿಗೆ ನಾನು ಇನ್ನೊಂದು ಮದುವೆ ಆಗೇನಿ ನನಗ ಡೈವೋರ್ಸ ಕೊಡು ಇಲ್ಲಾ ಅಂದ್ರ ನಿಮ್ಮಪ್ಪನ ಹತ್ರ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಹೇಳಿ ಕೈಯಿಂದ ಹೊಡಿಬಡಿ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:36/2021 ಕಲಂ: 380, 454 IPC.

                    ಹಾನಗಲ್ಲ ಪೊಲೀಸ ಠಾಣೆಯ ಹದ್ದಿ ಪೈಕಿ ಹುಲಗಿನಹಳ್ಳಿ ಕ್ರಾಸ್ ಹತ್ತಿರ ಗುಡ್ಡಪ್ಪ ಗುತ್ತೆಪ್ಪ ಕುಮರಿ ಸಾ:ಹುಲಗಿನಹಳ್ಳಿ ಹಾಗೂ ಇವರ ಚಿಕ್ಕಪ್ಪನ ವಾಸದ ಮನೆಯಲ್ಲಿ ದಿನಾಂಕ; 04-02-2021 ರಂದು ಬೆಳಿಗ್ಗೆ 08-30 ಘಂಟೆಯಿಂದ ಮದ್ಯಾಹ್ನ 12-30 ಘಂಟೆಯ ನಡುವಿನ ಅವಧಿಯಲ್ಲಿ ಬಿಳಿ ಬಣ್ಣದ ಕಾರ ನಂಬರ ಕೆಎ-03/ಎಇ-4661 ನೇದ್ದರಲ್ಲಿದ್ದ ಯಾರೋ 05 ಜನ ಅಪರಿಚಿತರು ಹುಲಗಿನಹಳ್ಳಿ ಕ್ರಾಸ್ ಹತ್ತಿರ ಇರುವ ಗುಡ್ಡಪ್ಪ ಇವರ ಮನೆಯ ಬಾಗಿಲನ್ನು ತೆರೆದು ಮನೆಯ ಒಳಗಡೆ ಬಂದು ದೇವರ ಮನೆಯಲ್ಲಿದ್ದ ಕಬ್ಬಿಣದ ತಿಜೋರಿಯನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಅದರಲ್ಲಿಟ್ಟಿದ್ದ 1) 05 ಗ್ರಾಂ ತೂಕದ ಬಂಗಾರದ ಗುಂಡಿನ ಸರ ಅ;ಕಿ;15,000/- ರೂಗಳು, 2) 10,000/- ರೂಗಳು ನಗದು ಹಣ ಹಾಗೂ ಪಕ್ಕದಲ್ಲಿರುವ ಗುಡ್ಡಪ್ಪ ಇವರ ಚಿಕ್ಕಪ್ಪನ ಮನೆಯ ಮುಂದಿನ ಬಾಗಿಲಿಗೆ ಹಾಕಿದ್ದ ಕೀಲಿಯನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಮನೆಯ ಒಳಗಡೆ ಹೋಗಿ ಅಲ್ಲಿದ್ದ ಕಬ್ಬಿಣದ ತಿಜೋರಿಯ ಬಾಗಿಲನ್ನು ತೆರೆದು ಅದರ ಒಳಗಡೆ ಇದ್ದ ಲಾಕರನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಅದರಲ್ಲಿಟ್ಟಿದ್ದ 1) 05 ಗ್ರಾಂ ತೂಕದ ಬಂಗಾರದ ಒಂದು ಜೊತೆ ಹ್ಯಾಂಗಿಂಗ್ಸ ಮತ್ತು ಬಂಗಾರದ ಒಂದು ಜೊತೆ ಬೆಂಡೋಲೆ ಅ;ಕಿ; 15,000/- ರೂಗಳು, 2) 05 ಗ್ರಾಂ ತೂಕದ ಬಂಗಾರದ ಒಂದು ಬೇವಿನಕಾಯಿ ಮಾಟದ ಸರ ಅ;ಕಿ; 15,000/- ರೂಗಳು, 3) 13,000/- ರೂಗಳು ನಗದು ಹಣ ಕಳ್ಳತನ ಮಾಡಿಕೊಂಡು ಹೊಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:38/2021 ಮಹಿಳೆ ಕಾಣೆ.

                    ಭಾಗ್ಯಾ ಮಲ್ಲೇಶಪ್ಪ ಪುಜಾರ ಸಾ|| ಹುಲ್ಲತ್ತಿ ದಿನಾಂಕ: 07-02-2021 ರಂದು ಇವಳು ಮನೆಯಲ್ಲಿ ಮಲಗಿದ್ದವಳು ಮಧ್ಯರಾತ್ರಿ ದಿನಾಂಕ: 08-02-2021 ರಂದು 02-00 ಗಂಟೆಗೆ ಹುಲ್ಲತ್ತಿ ಗ್ರಾಮದ ತನ್ನ ವಾಸದ ಮನೆಯಿಂದ ಎದ್ದು ಮನೆಯಲ್ಲಿ ಏನನ್ನೂ ಹೇಳದೇ ಮನೆಯಿಂದ ಹೊರಗೆ ಹೋಗಿ ಕಾಣೆಯಾಗಿರುತ್ತಾಳೆ. ಸದರಿಯವಳಿಗೆ ಸಂಬಂಧಿಕರ ಊರುಗಳಲ್ಲಿ ಹುಡುಕಾಡಿದ್ದು ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಬೇಕು ಅಂತಾ ಮಲ್ಲೇಶಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:05/2020 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                 ಲಾಲು ವಿ. ಸಿ ತಂದೆ ಚಂತು ವಯಾ-22 ವರ್ಷ, ಜಾತಿ-ಹಿಂದೂ ಪುಲಯ. ಉದ್ಯೋಗ-ಶುಂಠಿ ಕೆಲಸ, ಸಾ|| ವೆಣ್ಣಿಒಡು, ಪೊಸ್ಟ||ಕೊಟ್ಟಥರ, ತಾ||ವೈಥರಿ, ಜಿ|| ವೈನಾಡು, ಕೇಳರ ರಾಜ್ಯ, ಇವನು ತಮ್ಮ ಗ್ರಾಮದ ಪಕ್ಕದಲ್ಲಿ ಒಬ್ಬ ಹುಡುಗಿಯನ್ನು ಪ್ರೀತಿ ಮಾಡಿದ್ದು ಇರುತ್ತದೆ, ಆದರೆ ತಾನು ಪ್ರೀತಿ ಮಾಡಿದ ಹುಡುಗಿಯು ಬೇರೆ ಹುಡುಗನ ಜೊತೆಗೆ ಪ್ರೀತಿ ಮಾಡುತ್ತಿದ್ದರಿಂದ ಮನಸ್ಸಿಗೆ ಬೇಜಾರ ಮಾಡಿಕೊಂಡಾಗ ಶಶಿ ಲಾಗುಗೆ ಬುದ್ದಿ ಹೇಳಿದ್ದು ಇರುತ್ತದೆ ಆದರೆ ಸ್ವಲ್ಪ ದಿನದ ಹಿಂದೆ ಲಾಲು ಪ್ರೀತಿ ಮಾಡುದ್ದ ಹುಡುಗಿಯು ಬೇರೆ ಹುಡುಗನ ಜೊತೆಗೆ ಓಡಿ ಹೋಗಿದ್ದರಿಂದ ಮೃತನು ಊಟವನ್ನು ಬಿಟ್ಟು ಬೇಜಾರ ಮಾಡಿಕೊಂಡು ಇದೇ ಚಿಂತೆಯಲ್ಲಿ ದಿನಾಂಕ; 10-02-2021 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ತಾನು ಕೆಲಸ ಮಾಡುತ್ತಿದ್ದ ಶುಂಠಿ ಶೆಡ್ಡಿನಲ್ಲಿ ಲುಂಗಿಯಿಂದ (ಅರಿವೆಯಿಂದ) ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಹ ಬೇರೆ ಯಾವುದೇ ಸಂಶಯ ವಗೈರೆ ಇರವದಿಲ್ಲ ಅಂತಾ ಮೃತನ ಅಣ್ಣನು ವದರಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 14-02-2021 01:53 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080