ಅಭಿಪ್ರಾಯ / ಸಲಹೆಗಳು

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:71/2021ಮಹಿಳೆ ಕಾಣೆ.

                 ಫಕ್ಕೀರವ್ವ ತಂದೆ ತಿಪ್ಪಣ್ಣ ಪೂಜಾರ ವಯಾ-15 ವರ್ಷ,2 ತಿಂಗಳು 13 ದಿನಗಳು , ಉದ್ಯೋಗ-9 ನೇ ತರಗತಿಯಲ್ಲಿ ವಿಧ್ಯಭ್ಯಾಸ, ಜಾತಿ- ಭೋವಿ ವಡ್ಡರ, ಸಾ: ಕಾಲ್ವೇಕಲ್ಲಾಪುರ, ತಾ; ಹಾನಗಲ್ಲ ದಿನಾಂಕ: 08-05-2021 ರಂದು ರಾತ್ರಿ 11-00 ಘಂಟೆಯಿಂದ ದಿನಾಂಕ: 09-05-2021 ರಂದು ಮುಂಜಾನೆ 04-00 ಘಂಟೆಯ ನಡುವಿನ ಅವದಿಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿರಬಹುದು ಅಥವಾ ಯಾರೋ ಯಾವುದೋ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿರಬಹುದು ಕಾಣೆಯಾದವಳನ್ನೂ ಹಡುಕಿಕೊಡಬೇಕು ಅಂತಾ ಪಕ್ಕಿರವ್ವ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಸವಣೂರ  ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:13/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                ಅಸ್ಕರಅಲಿ ತಂದೆ ಮಾಬುಸಾಬ ಪರೀಟಿ, ವಯಸ್ಸು: 21 ವರ್ಷ, ಜಾತಿ: ಮುಸ್ಲಿಂ ಉದೋಗ: ಕೂಲಿಗೆಲಸ, ಸಾ: ಮಂತ್ರೋಡಿ ತಾ: ಸವಣೂರ ಇವನು ಕಳೆದ ಎರಡು ವರ್ಷಗಳಿಂದ ವಿಪರೀತ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ನಂತರ ಈ ದಿವಸ ದಿನಾಂಕ- 09-05-2021 ರಂದು ಬೆಳಿಗ್ಗೆ 074-30 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿ ಕುಡಿದ ಅಮಲಿನಲ್ಲಿ ತಮ್ಮ ಮನೆಯ ಅಡುಗೆ ಮನೆಯ ಕಟ್ಟಿಗೆಯ ಜಂತಿಗೆ ತನ್ನ ಟವೆಲ್ ದಿಂದ ಉರುಲು ಹಾಕಿಕೊಂಡು ಜೋತಾಡುತ್ತಿದ್ದಾಗ ಅವನು ಹಾಕಿಕೊಂಡ ಉರುಲು ಟವೆಲ್ ಕತ್ತರಿಸಿ ಹಿಂದೆಲೆಯನ್ನು ಹಚ್ಚಿ ಗ್ಯಾಸದ ಕಟ್ಟೆಗೆ ಬಿದ್ದು ಗಾಯವಾಗಿ ಅವನಿಗೆ ಉಪಚಾರಕ್ಕೆ ಸವಣೂರ ಸರ್ಕಾರಿ ಆಸ್ಪತ್ರೆ ನಂತರ ಹೆಚ್ಚಿನ ಉಪಚಾರಕ್ಕೆ  ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ ಫಲಿಸದೇ ಮದ್ಯಾಹ್ನ 03-45 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಬಿಟ್ಟು ಅವನ ಸಾವಿನಲ್ಲಿ ಬೇರೇನೂ ಸಂಶಯ ವಗೈರೆ ಇರುವುದಿಲ್ಲ ಅಂತಾ ಪಾತಿಮಾ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:13/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                ಭೀಮಪ್ಪ ತಂದೆ ಹೊನ್ನಪ್ಪ ಪೂಜಾರ ವಯಾ: 78 ವರ್ಷ, ಜಾತಿ: ಹಿಂದೂ ಕುರುಬರ, ಉದ್ಯೋಗ: ವ್ಯವಸಾಯ, ಸಾ: ಹಾರೋಗೋಪ್ಪ ಇವರು ತಮ್ಮ ಜಮೀನಿನ ಸಾಗುವಳಿ ಸಂಬಂಧ ಮತ್ತು ಮನೆತನದ ಸಂಬಂಧ ಹಿರೇಮಾಗನೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1,50,000/- ರೂಪಾಯಿ ಕೃಷಿ ಸಾಲವನ್ನು ಮತ್ತು ಅಲ್ಲಿ ಜನರ ಬಳಿ ಕೈಗಡವಾಗಿ 2,40,000/- ರೂಪಾಯಿ ಸಾಲವನ್ನು ಒಟ್ಟು 3,90,000/- ಸಾಲವನ್ನು ಮಾಡಿದ್ದು ಈಗ ಸುಮಾರು 3-4 ವರ್ಷಗಳಿಂದ ಮಳೆಯು ಅತೀ ವೃಷ್ಟಿ ಹಾಗೂ ಅನಾವೃಷ್ಟಿಯಿಂದ ತಾವು ಬೆಳೆದ ಬೇಳೆಯು ಸರಿಯಾಗಿ ಬಾರದೆ ಮತ್ತು ಈ ವರ್ಷವು ತಮ್ಮ ಜಮೀನಿನಲ್ಲಿ ಹಾಕಿ ಗೋವಿನ ಜೋಳ ಹಾಗೂ ಹತ್ತಿ ಬೆಳೆಗಳು ಸರಿಯಾಗಿ ಬಾರದೆ ಲುಕ್ಷಾಣು ಆಗಿದ್ದರಿಂದ ಮಾನಸಿಕ ಮಾಡಿಕೊಂಡು ದಿನಾಂಕ: 09-05-2021 ರಂದು ಬೆಳಗ್ಗಿನ ಜಾವ 04-00 ಗಂಟೆಯಿಂದ ಬೆಳಿಗ್ಗೆ 06-00 ಗಂಟೆಯ ನಡುವಿನ ಅವದಿಯಲ್ಲಿ ಹಾರೋಗೋಪ್ಪ ಗ್ರಾಮದ ಮೈಲಾರೇಪ್ಪ ಬನ್ನಿಹಟ್ಟಿ ಇವರ ಕಣದಲ್ಲಿ ಬೆಳೆಗಳಿಗೆ ಹೊಡೆಯುವ ಯಾವುದೋ ವಿಷಕಾರಕ ಎಣ್ಣಿ ಕುಡಿದು ಅಸ್ಥವ್ಯಸ್ಥನಾದವನಿಗೆ ರಾಣೇಬೆನ್ನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಉಪಚಾರ ಕೊಡಿಸುವ ಕಾಲಕ್ಕೆ ಉಪಚಾರ ಪಲೀಸದೇ ದಿನಾಂಕ: 09-05-2021 ರಂದು ಮುಂಜಾನೆ 08-40 ಗಂಟೆಯ ಸುಮಾರಿಗೆ ಮರಣ ಹೊಂದಿದ್ದು ಇರುತ್ತದೆ. ಇವರ ಸಾವಿನಲ್ಲಿ ಯಾವುದೆ ಸಂಶಯ ಇರುವದಿಲ್ಲ ಅಂತಾ ಮೃತನ ಪತ್ನಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:14/2021 ಅನಾಮದೇಯ ವ್ಯಕ್ತಿ ಸಾವು.

                ಸುಮಾರು 28 ರಿಂದ 30 ವರ್ಷದ ಅನಾಮದೇಯ ಗಂಡಸು    ಹೆಸರು ವಿಳಾಸ ತಿಳಿದಿರುವದಿಲ್ಲ ಇವನು ಹಲಗೆರಿ ಗ್ರಾಮದ ವಾಗೀಶ ಅಂದನೂರ ಇವರ ತೋಟದ ಹತ್ತಿರ ರಟ್ಟಿಹಳ್ಳಿ-ಹಲಗೇರಿ ರಸ್ತೆಯ ಪಕ್ಕದ ಹುಣಸೆ ಮರದ ಕೆಳಗೆ ದಿನಾಂಕ:08-05-2021 ರಂದು 18-00 ಗಂಟೆಯಿಂದ ದಿನಾಂಕ:09-05-2021 ರಂದು ಮದ್ಯಾಹ್ನ 12-00 ಗಂಟೆ ನಡುವಿನ ಅವದಿಯಲ್ಲಿ ತನಗಿದ್ದ ಯಾವುದೋ ಕಾಯಿಲೆಯಿಂದ  ಮರಣ ಹೊಂದಿದ್ದು ಇರುತ್ತದೆ ಇವನ ಚಹರೆ ಪಟ್ಟಿ ಎತ್ತರ 5 ಅಡಿ 6 ಇಂಚು,ಅಗಲ ಮುಖ, ನೀಟಾದ ಮೂಗು, ತಲೆಯಲ್ಲಿ ಕಪ್ಪ ಕುದಲು, ಕುರುಚಲು ಗಡ್ಡ, ಗೋದಿ ಮೈಬಣ್ಣ, ಇದ್ದು ಮೈ ಮೇಲೆ ಕಾಪಿ ಬಣ್ಣದ ಬಿಳಿ ಚುಕ್ಕೆ ಇರುವ ಹಾಪ್ ತೋಳಿನ ಟಿ ಶರ್ಟ, ಹಾಗೂ ಆಕಾಶ ನೀಲಿ ಬಣ್ಣದ ಜೀನ್ಸ ಪ್ಯಾಂಟ ದರಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:22/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                ಅರುಣ ತಂದೆ ನಿಂಗಪ್ಪ ಕರಿಯಪ್ಪನವರ ವಯಾ-20 ವರ್ಷ. ಜಾತಿ-ಹಿಂದೂ-ಲಿಂಗವಂತ, ಉದ್ಯೋಗ-ಶೇತ್ಕಿ ಕೆಲಸ. ಸಾ- ಕಲ್ಲೇದೆವರ ತಾ-ಬ್ಯಾಡಗಿ ಇವನಿಗೆ ಈಗ ಎರಡು ವರ್ಷಗಳಿಂದ ಹೊಟೆನೋವು ಬರುತ್ತಿದ್ದು ಅವನಿಗೆ ಬ್ಯಾಡಗಿ, ಹಾವೇರಿ, ದಾವಣಗೇರಿ ಆಸ್ಪತ್ರೆಗೆ  ತೊರಿಸಿದಾಗ ಅಪೆಂಡಿಕ್ಸ ಆಗಿದೆ ಎಣ್ಣಿ, ಗುಳಗಿಗೆ ಅರಾಮ ಆಗುತ್ತದೆ ಅಂತಾ ಹೇಳಿದ್ದರಿಂದ ಸದರಿಯವನಿಗೆ ಔಷದೋಪಚಾರ ಮಾಡಿಸಿದರು ಹೊಟ್ಟಿ ನೋವು ಗುಣವಾಗದ್ದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ದಿನಾಂಕ: 23-04-2021 ರಂದು ರಾತ್ರಿ 10-30 ಗಂಟೆಗೆ ಎಲ್ಲಿಯೋ ಯಾವುದೋ ವಿಷಕಾರಕ ಎಣ್ಣಿಯನ್ನು ಕುಡಿದು ಉಪಚಾರಕ್ಕೆ ಹಾವೇರಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರಗೆ ದಾಖಲ ಮಾಡಿದಾಗ ಉಪಚಾರ ಪಲಿಸದೆ ದಿನಾಂಕ: 09-05-2021 ರಂದು ಮುಂಜಾನೆ 10-30 ಗಂಟೆಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 11-05-2021 05:59 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080