ಅಭಿಪ್ರಾಯ / ಸಲಹೆಗಳು

 ಹಿರೇಕೆರೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:51/2021 ಕಲಂ: INDIAN MOTOR VEHICLE ACT, 1988  (U/s-134(A&B), 187) : 279, 304(A) IPC.

         ಹೇಮಪ್ಪ ತಂದೆ ಬಸವಣ್ಣೆಪ್ಪ ಹುಲ್ಲತ್ತಿ ವಯಾ: 47 ವರ್ಷ, ಸಾ: ದೂದಿಹಳ್ಳಿ ಇವರು ಪ್ರತಿ ದಿವಸದಂತೆ ದಿನಾಂಕ 09-04-2021 ರಂದು ಬೆಳಗಿನ ಜಾವ ವಾಕಿಂಗ್ ಗೆ ಅಂತಾ ದೂದಿಹಳ್ಳಿ ಹಿರೇಕೆರೂರ ರಸ್ತೆ ದೂದಿಹಳ್ಳಿ ಗ್ರಾಮದ ಮಾದೇವಗೌಡ ಕಲ್ಲನಗೌಡ ಮರ್ಕಳ್ಳಿ ಇವರ ಜಮೀನಿನ ಹತ್ತಿರ ರಸ್ತೆ ಎಡಬದಿಯಲ್ಲಿ ನೆಡೆದುಕೊಂಡು ಹೋಗುತ್ತಿದ್ದಾಗ ಲಾರಿ ನಂಬರ್ ಕೆಎ;20/ಸಿ-7129 ನೇದ್ದರ ಚಾಲಕನು ಲಾರಿಯನ್ನು ದೂದಿಹಳ್ಳಿ ಕಡೆಯಿಂದ  ಹಿರೇಕೆರೂರು  ಕಡೆಗೆ  ಅತೀ  ಜೋರಿನಿಂದಾ  ಮತ್ತು  ಅಜಾಗರುಕತೆಯಿಂದ  ಮಾನವೀಯ ಪ್ರಾಣಕ್ಕೆ  ಅಪಾಯವಾಗುವ  ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ಎಡಸೈಡಿಗೆ ನಡೆದುಕೊಂಡು ಹೊರಟಿದ್ದ ಹೇಮಪ್ಪ ಇವರಿಗೆ ಡಿಕ್ಕಿಪಡಿಸಿ ತಲೆಗೆ ಭಾರಿಸ್ವರೂಪದ ಗಾಯಪಡಿಸಿ ಸ್ಥಳದಲ್ಲಿಯೇ ಮರಣವನ್ನುಂಟುಪಡಿಸಿದ್ದು  ಅಲ್ಲದೇ  ಅಪಘಾತದ ಸಂಗತಿಯನ್ನು  ಠಾಣೆಗೆ  ತಿಳಿಸದೇ ಲಾರಿಯನ್ನು  ಹಾಗೇ  ಚಲಾಯಿಸಿಕೊಂಡು  ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:52/2021 ಮಹಿಳೆ ಕಾಣೆ.

                ಕು:ಹೊಳಲಮ್ಮ @ಜ್ಯೋತಿ ವಯಾ : 21 ವರ್ಷ ಉದ್ಯೋಗ ಟೆಲರಿಂಗ ಕೆಲಸ ಇವಳು ದಿನಾಂಕ : 31-03-2021 ರಂದು 11.30 ಗಂಟೆಗೆ ಮನೆಗೆ ಕೀಲಿ ಹಾಕಿ ಬಾಜು ಮನೆಯಲ್ಲಿ ಚಾವಿ ಕೊಟ್ಟು ನಾನು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ನಮ್ಮ ತಾಯಿ ಬಂದ ಮೇಲೆ ಚಾವಿ ಕೊಡ್ರಿ ಅಂತಾ ಹೇಳಿ ಹೋದವಳು ಈವರಗೂ ಮನೆಗೆ ವಾಪಸ ಮನೆಗೆ ಬಾರದೇ ಹೋಗಿ ಎಲ್ಲಿಯೋ ಕಾಣೆಯಾಗಿರುತ್ತಾಳೆ ಕಾಣೆಯಾದವಳನ್ನು ಈ ವರೆಗೂ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಿರೇಕೆರೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:52/2021 ಮಹಿಳೆ ಕಾಣೆ.

                ಕು: ಯಲ್ಲಮ್ಮ  ತಂದೆ  ಗದಿಗೆಪ್ಪ  ತುಮ್ಮಿನಕಟ್ಟಿ  ವಯಾ: 17 ವರ್ಷ 11 ತಿಂಗಳು  ಜಾತಿ: ಹಿಂದೂ ಉಪ್ಪಾರಉದ್ಯೋಗ: ಮನೆಗೆಲಸಸಾ: ಶಿರಗಂಬಿ ತಾ; ರಟ್ಟಿಹಳ್ಳಿ  ಇವಳು ಶಿರಗಂಬಿ  ಗ್ರಾಮದಲ್ಲಿರುವ  ತಮ್ಮ  ವಾಸದ  ಮನೆಯಿಂದ  ದಿನಾಂಕ: 05/04/2021  ರಂದು  ಬೆಳಗಿನ  ಜಾವ 04-00  ಗಂಟೆ  ಸುಮಾರಿಗೆ  ಹೋದವಳು  ಇದುವರೆಗೂ ಮನೆಗೆ  ಬಾರದೇ  ಎಲ್ಲಿಯೋ  ಹೋಗಿ  ಕಾಣಿಯಾಗಿ  ಹೋಗಿದ್ದು  ಸದರೀ  ಬಾಲಕಿಗೆ  ಯಲ್ಲಪ್ಪ ಮುದೇನೂರು  ಈತನು  ಯಲ್ಲಮ್ಮ  ಇವಳು  ಅಲ್ಪವಹಿ  ಅಂತಾ  ಗೊತ್ತಿದ್ದರೂ  ಅವಳಿಗೆ  ಬಟ್ಟೆಬಂಗಾರ ಹಣದ  ಆಸೆ  ಆಮಿಷ್ಯ  ತೋರಿಸಿ  ಯಾವುದೋ  ಉದ್ದೇಶದಿಂದ  ಅಪಹರಣ ಮಾಡಿಕೊಂಡು  ಹೋಗಿರುವುದಾಗಿ ಧರ್ಮಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪಿರ್ಯಾದಿ ಸ್ವಿಕರಿಸಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:14/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                 ಜಗದೀಶ ತಂದೆ ಬಸವಂತಪ್ಪ ಹುಳಕೇರ ವಯಾಃ38 ವರ್ಷ ಜಾತಿಃಹಿಂದೂ ಕುರುಬರ ಉದ್ಯೋಗಃಒಕ್ಕಲುತನ ಸಾಃಹುಲ್ಲತ್ತಿ ತಾಃಹಾನಗಲ್ಲ ಈತನು ಈಗ ಸುಮಾರು ವರ್ಷಗಳಿಂದ ನಮ್ಮ ಮನೆತನದ ಹಿರಿತನವನ್ನು ಮಾಡುತ್ತಾ ಬಂದಿದ್ದು ಮನೆತನಕ್ಕೆ ಊರಲ್ಲಿ ಕೈಗಡ ಸಾಲವನ್ನು ಮಾಡಿದ್ದು ಆ ಕೈಗಡ ಸಾಲವನ್ನು ಹೇಗೆ ತಿರಿಸುವುದು ಅಂತಾ ಮಾನಸಿಕಗೊಂಡು ದಿನಾಂಕಃ07/04/2021 ರಂದು ಮುಂಜಾನೆಃ07-15 ಗಂಟೆಯಿಂದ ಮುಂಜಾನೆಃ08-30 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವನೆ ಮಾಡಿ ವಾಂತಿ ಮಾಡುತ್ತಾ ಬಂದಿದ್ದು ನಂತರ ಉಪಚಾರಕ್ಕೆ ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರಕ್ಕೆ ದಾಖಲು ಮಾಡಿ ಉಪಚಾರ ಕೊಡಿಸಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲು ಮಾಡಿದ್ದು ಅಲ್ಲಿ ಉಪಚಾರ ಫಲಿಸದೇ ದಿನಾಂಕಃ09/04/2021 ರಂದು ಬೆಳಗಿನ ಜಾವಃ12-45 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ನನ್ನ ಮಗನ ಸಾವಿನಲ್ಲಿ ಬೇರೆ ಏನೂ ಸಂಶಯವಿರುವುದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಲು ಮೃತನ ತಂದೆಯು ವರದಿ ನೀಡಿದ್ದರ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 14-04-2021 10:09 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ