ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:25/2021 ಕಲಂ: 379 IPC.

                ಹಾವೇರಿ ಶಹರದ ಅಶ್ವೀನಿ ನಗರ 3 ನೇ ಕ್ರಾಸದಲ್ಲಿ ಸೋಮೆಶ್ವರ ವಿನಾಯಕ ಕುರುಡೆಕರ ಇವರು ಬಾಡಿಗೆ ತರೀಕ ವಾಸವಾಗಿರುವ ಮನೆಯ ಕಂಪೌಂಡ ಒಳಗೆ ದಿನಾಂಕ: 20/02/2021 ರಂದು ರಾತ್ರಿ 09-30 ಗಂಟೆಯಿಂದ ದಿನಾಂಕ: 21/02/2021 ರ ಬೆಳಿಗ್ಗೆ 08-30 ಗಂಟೆಯ ನಡುವಿನ ಅವಧಿಯಲ್ಲಿ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿದ ಹಿರೋ ಹೊಂಡಾ ಸೂಪರ್ ಸ್ಪೇಂಡರ್ ಕಂಪನಿಯ ಮೋಟರ್ ಸೈಕಲ ನಂ:ಕೆಎ-27/ಎಲ್-4912 ಅದರ ಚಸ್ಸಿ ನಂ: 06DACF20136 ಇಂಜಿನ್ ನಂ: 06DACE20081 ನೀಲಿ ಬಣ್ಣ ಅ.ಕಿ: 15,000/-ರೂ ಮೋಟಾರ ಸೈಕಲನ್ನು ಯಾರೋ ಕಳ್ಳರು ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:31/2021 ಕಲಂ:PROTECTION OF CHILDREN FROM SEXUAL OFFENCES ACT 2012 (U/s-4,6,12); 377,506 IPC.

                 ಲೊಕೇಶ ತಂದೆ ಬಸಪ್ಪ ಹರ್ತಿ ಸಾ: ದೇವಿಹೊಸುರ, ಈತನು ದಿನಾಂಕ: 05-03-2021 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಕಾರ್ತಿಕ ತಂದೆ ಸುರೇಶ ಹಾವೇರಿ ಸಾ: ದೇವಿಹೊಸೂರ ಇತನಿಗೆ 10 ರೂಪಾಯಿ ಕೊಡುವುದಾಗಿ ಹೇಳಿ ಪುಸಲಾಯಿಸಿ, ದೇವಿಹೋಸೂರ ಗ್ರಾಮದ ಹೊಸದಾಗಿ ಕಟ್ಟುತ್ತಿರುವ ತನ್ನ ಮನೆಗೆ ಕರೆದುಕೊಂಡು ಹೋಗಿ, ಬಾಲಕನ ಗುದದ್ವಾರದಲ್ಲಿ ತನ್ನ ಶಿಶ್ನವನ್ನ ಬಲತ್ಕಾರವಾಗಿ ತುರುಕಿ ಅನೈಸರ್ಗಿಕವಾಗಿ ಲೈಂಗಿಕ ಸಂಬೋಗ ಮಾಡಿದ್ದಲ್ಲದೇ, ಈ ವಿಷಯವನ್ನು  ಬೇರೆಯವರ ಮುಂದೆ ಹೇಳದಂತೆ ಸದರಿ ಬಾಲಕನಿಗೆ ಜೀವದ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:37/2021 ಕಲಂ: INDIAN MOTOR VEHICLES ACT, 1988 (U/s-190(1)); 279, 304(A) IPC.

                 ಶಿಗ್ಗಾಂವ ಪೊಲೀಸ್ ಠಾಣಾ ಹದ್ದಿ ಪೈಕಿ, ಕಾಮನಹಳ್ಳಿ ಗ್ರಾಮದ ಸೋಮಣ್ಣ ಬೇವಿನಮರದ ಎಂಬುವವರ ತೋಟದ ಸಮೀಪ ಎನ್,ಎಚ್.04 ರಸ್ತೆ ಮೇಲೆ ದಿನಾಂಕ : 08-03-2021 ರಂದು 17.30 ಗಂಟೆ ಸುಮಾರಿಗೆ ಹಳೇಯದಾದ ಟ್ರೇಲರ, ನಂಬರ ಇರುವದಿಲ್ಲಾ ಇದರ ಚಾಲಕ ತನ್ನ ಟ್ರೇಲರ ಹಿಂದುಗಡೆ ಬರುವ ವಾಹನದವರಿಗೆ ಗೊತ್ತಾಗುವುಂತೆ ಯಾವುದೇ ಸೂಚನೆ ಅಂದರೆ ರಿಪ್ಲಕ್ಟರಗಳನ್ನು ಅಳವಡಿಸದೇ ಮತ್ತು ಏನನ್ನು ವಾಹನದ ಹತ್ತಿರ ಮುಂಜಾಗ್ರತ ಕ್ರಮ ಕೈಗೊಳ್ಳದೇ ತನ್ನ ಟ್ರಾಕ್ಟರದ ಟ್ರೇಲರನ್ನು ರಸ್ತೆಯ ಮೇಲೆ ನಿಲ್ಲಿಸಿದ್ದು   ಮೋಟಾರ ಸೈಕಲ ನಂ : ಕೆಎ-25/ಎ ಎಸ್-5633 ನೇದ್ದರ ಸವಾರನು ತಾನು ನಡೆಸುತ್ತಿದ್ದ ಮೋಟಾರ ಸೈಕಲನ್ನು ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಹೋಗಿ ಮೋಟಾರ ಸೈಕಲನ್ನು ನಿಯಂತ್ರಿಸದೇ ತನ್ನ ಮುಂದೆ ರಸ್ತೆಯ ಮೇಲೆ ನಿಂತ ಟ್ರಾಕ್ಟರಗೆ ಹಿಂದೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತಾನು ಬಲವಾದ ಗಾಯ ಪೆಟ್ಟುಹೊಂದಿ ಸ್ಥಳದಲ್ಲಿಯೇ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                 ಕರಿಯಪ್ಪ ತಂದೆ ಫಕ್ಕೀರಪ್ಪ ಶಿಗ್ಗಾಂವಿ ವಯಾ-42  ವರ್ಷ ಜಾತಿ: ಹಿಂದೂ ವಾಲ್ಮೀಕಿ, ಉದ್ಯೋಗ: ಕೂಲಿಕೆಲಸ  ಸಾ: ಜಲ್ಲಾಪುರ  ತಾ: ಸವಣೂರ  ಇವನು ಕಳೆದ ಹತ್ತು ವರ್ಷಗಳಿಂದ ವಿಪರೀತ ಸಾರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಇದರಿಂದ ಅವರ ಸಂಸಾರದಲ್ಲಿ ಆಗಾಗ ಗಂಡ-ಹೆಂಡತಿ ನಡುವೆ ಜಗಳ ಆಗುತ್ತಿದ್ದವು. ಅವರ ತಾಯಿ ಮತ್ತು ಹೆಂಡತಿ ಕುಡಿಯುವುದನ್ನು ಬಿಡು ಅಂತಾ ಸಾಕಷ್ಟು ಸಲ ಹೇಳಿದ್ದರೂ ಅವನು ಕುಡಿಯುವುದನ್ನು ಬಿಟ್ಟಿರಲಿಲ್ಲ. ಹೀಗಿರುವಾಗ ದಿನಾಂಕ- 04-03-2021 ರಂದು ಕರಿಯಪ್ಪನ ಹೆಂಡತಿ ರೇಖಾ ಇವಳು ಕರಿಯಪ್ಪನ ಕುಡಿಯುವ ಚಟದಿಂದ ಬೇಸತ್ತು ತಮ್ಮ ಮನೆಯಿಂದ ಎಲ್ಲಿಯೋ ಮನೆ ಬಿಟ್ಟು ಹೋಗಿದ್ದು ಅದರಿಂದ ಕರಿಯಪ್ಪ ಇವನು ಮನಸ್ಸಿಗೆ ಹಚ್ಚಿಕೊಂಡು, ಬೇಜಾರು ಮಾಡಿಕೊಂಡು ದಿನಾಂಕ- 08-03-2021 ರ ರಾತ್ರಿ 11-00 ಗಂಟೆಯಿಂದ ದಿನಾಂಕ- 09-03-2021 ರ ಬೆಳಗಿನ 08-00 ಗಂಟೆ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನಿಷ್ಟಕ್ಕೇ ತಾನೇ ಪ್ಯ್ಲಾಸ್ಟಿಕ್ ಹಗ್ಗದಿಂದ ಮನೆಯ ಕಟ್ಟಿಗೆಯ ಜಂತಿಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ, ಅದು ಬಿಟ್ಟು ಅವನ ಸಾವಿನಲ್ಲಿ ಬೇರೆನೂ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತನ ತಾಯಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:09/2021 ಯುವಕ ಸಾವು.

                 ಕು.ಮಹ್ಮದಮುದಶೀರ ತಂದೆ ಗುಲಾಬಷಾ ಮಕಾಂದಾರ ವಯಾ:06 ವರ್ಷ ಜ್ಯಾತಿ: ಮುಸ್ಲಿಂ ಉದ್ಯೋಗ: ವಿದ್ಯಾರ್ಥಿ ಸಾ:ಯಳವಟ್ಟಿ ತಾ||ಹಾನಗಲ್ಲ ಜಿಲ್ಲಾ||ಹಾವೇರಿ ಈತನು ಶಾಲೆ ಮುಗಿಸಿಕೊಂಡು ಮನೆಗೆ ಬಂದು ತನ್ನ ಸ್ನೇಹಿತರೊಂದಿಗೆ ದಿನಾಂಕ:-09/03/2021 ರಂದು ಸಂಜೆ:04-30 ಗಂಟೆಯಿಂದ ಸಂಜೆ:05-15 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಸ್ನೇಹಿತರೊಂದಿಗೆ ಆಟವನ್ನು ಆಡಲು ಮನೆಯಿಂದ ಹೊರಗೆ ಹೋದವನು ಆಟ ಆಡುತ್ತಾ ತಮ್ಮ ಊರಿನ ದೋಬಿಘಾಟ ಹೊಂಡದಲ್ಲಿ ನೀರಿನಲ್ಲಿ ಇಳಿದು ಆಟ ಆಡುತ್ತಾ ಆಕಸ್ಮಾತಾಗಿ ಕಾಲು ಜಾರಿ ಹೊಂಡದ ನೀರಿನಲ್ಲಿ ಬಿದ್ದು ಈಜು ಬಾರದೇ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾನೆ ವಿನಃ ನನ್ನ ಮಗನ ಮರಣದಲ್ಲಿ ಬೇರೆ ಏನು ಸಂಶಯ ಇರುವದಿಲ್ಲ ಅಂತಾ ಮೃತನ ತಂದೆ ಗುಲಾಷಾ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 10-03-2021 06:40 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ