ಅಭಿಪ್ರಾಯ / ಸಲಹೆಗಳು

ಹಿರೆಕೇರೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:14/2020 ಕಲಂ: 379 IPC.

                 ದಿನಾಂಕ: 05-02-2021 ರಂದು 22-30 ಗಂಟೆಯಿಂದಾ ದಿನಾಂಕ: 06-02-2021 ರಂದು ಮುಂಜಾನೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಹಿರೇಕೆರೂರು ಶಹರದ ತಂಬಾಕದನಗರದಲ್ಲಿರುವ ಕಿರಣ ಕಾಂಡಕೆ ಸಾ ಹಿರೆಕೆರೂರ ಇವರ ವಾಸದ ಮನೆಯ ಮುಂದೆ ನಿಲ್ಲಿಸಿದ್ದ ಒಂದು ಕಪ್ಪು ಕೆಂಪು ಬಣ್ಣದ ಹಿರೋ ಸ್ಪ್ಲೇಂಡರ್ ಐ ಸ್ಮಾರ್ಟ ಮೋಟಾರ ಸೈಕಲ್ ನಂಬರ್; ಕೆ,, 27/ಇಜೆ-9466 ಇದರ ಇಂಜಿನ್ ನಂ; JA06EPGSK07954 ಮತ್ತು ಚಾಸ್ಸಿ ನಂ; MBLJA06AXG9K07598 ಇದರ ಅ;ಕಿ ; 50,000/-ರೂನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:20/2021 ಮಹಿಳೆ ಕಾಣೆ.

                    ಕು||ಲಲಿತಾ ತಂದೆ ಹನುಮಂತಪ್ಪ ಬಂಕಾಪೂರ ವಯಾ:18 ವರ್ಷ 08 ತಿಂಗಳು ಉದ್ಯೋಗ.ವಿಧ್ಯಾರ್ಥಿ ಸಾ||ನಿಸ್ಸಿಂಆಲದಕಟ್ಟಿ ತಾ||ಹಾನಗಲ್ಲ ಇವಳು ದಿನಾಂಕ : 05-02-2021 ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಯಾರಿಗು ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಈ ಬಗ್ಗೆ ತಮ್ಮ ಊರಲ್ಲಿ ಹಾಗೂ ತಮ್ಮ ಸಂಬಂಧಿಕರ ಊರುಗಳಲ್ಲಿ ಈವರೆಗೆ ಹುಡುಕಾಡಿದರು ಸಹಾ ಪತ್ತೆ ಆಗದೆ ಇರುವುದರಿಂದ ಕಾಣೆಯಾದ ಲಲಿತಾ ಇವಳನ್ನು ಪತ್ತೆ ಮಾಡಿಕೊಡುವಂತೆ ಶಂಕ್ರಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:04/2020 ವ್ಯಕ್ತಿ ಆತ್ಮಹತ್ಯೆ.

                 ಸಂಪತ್ ಕುಮಾರ ವಿ. ತಂದೆ: ವೀರಣ್ಣ ವಯಸ್ಸು: 46 ವರ್ಷ, ಜಾತಿ: ಹಿಂದೂ-ಬೋವಿ, ವೃತ್ತಿ: ಕೂಲಿ, ಸಾ: ವಿನೋಬನಗರ 13 ನೇ ಕ್ರಾಸ್ ಡಾವಣಗೇರಿ ಹಾಲಿ ವಸ್ತಿ ಮೈದೂಳಲು ಬೋವಿ ಕಾಲೋನಿ ತಾ: ಭದ್ರಾವತಿ ಜಿಲ್ಲೆ: ಶಿವಮೊಗ್ಗ ಇವನು ಸೋರಿಯಾಸಿಸ್ ಚರ್ಮದ ಕಾಯಲೆಯಿಂದ ಬಳಲುತ್ತಾ ಸರಿಯಾಗಿ ದುಡಿಯದೆ ಸರಾಯಿ ಕುಡಿದು ತಿರುಗಾಡುತ್ತಾ ಬಂದು ದಿನಾಂಕ: 04-02-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 08-02-2021 ರಂದು ಮದ್ಯಾಹ್ನ 02-00 ಗಂಟೆಯ ನಡುವಿನ ಅವದಿಯಲ್ಲಿ ಕುಪ್ಪೇಲೂರ ಗ್ರಾಮದ ವ್ಯಾಪ್ತಿಯಲ್ಲಿರುವ ಕುಮದ್ವತಿ ನದಿಯಲ್ಲಿ ತನ್ನಷ್ಟಕ್ಕೆ ತಾನೇ ಬಿದ್ದು ಈಜು ಬಾರದ್ದರಿಂದ ನೀರಿನಲ್ಲಿ ಮುಳುಗಿ ನೀರು ಕುಡಿದು ಮರಣ ಹೊಂದಿದ್ದು ಇದೆ ವಿನಃ ನನ್ನ ಗಂಡನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಯಾರ ಮೇಲು ಇರುವುದಿಲ್ಲಾ ಅಂತಾ ಮೃತ ಪತ್ನಿ ವರದಿ ನೀಡಿದ್ದರ ಮೇರೆಗೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:06/2020 ಮಗು ಸಾವು.

                 ಸ್ವಾತಿ ತಂದೆ ರವಿ ಲಮಾಣಿ ವಯಾ: 04 ವರ್ಷ ಅವಳು ಬುದ್ದಿಮಾಂದ್ಯ ಹಾಗೂ ಅಂಗವೈಕಲ್ಯ ಹೊಂದಿದ್ದರಿಂದ ಸದರಿ ಮಗುವಿನ ಪಾಲಕರು ಕಳೆದ ದಿ: 29-07-2018 ರಂದು ಮಗುವನ್ನು ಹಾವೇರಿಯ ಹಾನಗಲ್ ರಸ್ತೆಯಲ್ಲಿ ಬಿಟ್ಟುಹೋಗಿದ್ದು ನಂತರ  ಸದರಿ  ಮಗುವನ್ನು ಮರಳಿ ಪಡೆದುಕೊಳ್ಳಲು ಒಪ್ಪದೆ, ಸಾಕಲು ಆಗುವದಿಲ್ಲವೆಂದು ಹೇಳಿ ಮಗುವನ್ನು ಸ್ಪಂದನಾ ದತ್ತು ಸ್ವೀಕಾರ ಕೇಂದ್ರಕ್ಕೆ ಬರೆದುಕೊಟ್ಟು ಬಿಟ್ಟು ಹೋಗಿದ್ದರಿಂದ ಸದರಿ ಮಗುವನ್ನು ಸ್ಪಂದನಾ ವಿಷೇಶ ದತ್ತು ಸ್ವೀಕಾರ ಕೇಂದ್ರದಲ್ಲಿ ಇಟ್ಟುಕೊಂಡು ಸದರಿ ಮಗುವಿಗೆ ಸ್ವಾತಿ ಅಂತ ನಾಮಕರಣ ಮಾಡಲಾಗಿತ್ತು. ಸದರಿ ಮಗುವು ಅನಾರೋಗ್ಯದಿಂದ  ಬಳಲಿ ದಿನಾಂಕ; 08-02-2021 ರಂದು ಸಾಯಂಕಾಲ 19-15 ಘಂಟೆಯ ಸುಮಾರಿಗೆ ಸ್ಪಂದನಾ ದತ್ತು ಕೇಂದ್ರದಲ್ಲಿ ಮೃತಪಟ್ಟಿದ್ದು ಮಗುವಿನ ಸಾವಿನಲ್ಲಿ ಯಾವುದೇ ಸಂಶಯ ಇರುವದಿಲ್ಲ ಅಂತಾ ಸಂತೋಷ ಚಲವಾದಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:09/2020 ಯುವಕ ಸಾವು.

                 ಅಲ್ತಾಪ್ ತಂದೆ ಜಮಾಲಸಾಬ್ ದೊಡ್ಮನಿ ವಯಾ-13 ವರ್ಷ ಸಾ|| ಬಿಸಲಹಳ್ಳಿ ಇವನು ಹುಟ್ಟಿದಾಗಿನಿಂದಲೂ ಅರೇಹುಚ್ಚನಂತೆ ಊರಲ್ಲಿ ತಿರುಗಾಡುತ್ತಾ ಅದಕ್ಕೆ ಸಂಬಂಧಿಸಿದಂತೆ ಅನೇಕ ಆಸ್ಪತ್ರೆಗಲಿಗೆ ತೋರಿಸಿದರೂ ಸಹ ಗುಣವಾಗದೇ ಇದ್ದುದರಿಮದ ಮತ್ತಷ್ಟು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕವಾಗಿದ್ದು ಅದೇ ಚಿಂತೆಯಲ್ಲಿಯೇ ತನ್ನಷ್ಟಕ್ಕೆ ತಾನೇ ಮನೆಯಲ್ಲಿ ಇದ್ದ ಹತ್ತಿಗೆ ಹೊಡೆಯುವ ಪೌಡರ್ ಪಾಕೀಟ್ನ್ನು ತೆಗದುಕೊಂಡು ನೀರು ಬೆರೆಯಿಸಿಕೊಂಡು ದಿನಾಂಕ:07-02-2021 ರಂದು ಮುಂಜಾನೆ 08-00 ಘಂಟೆ ಸುಮಾರಿಗೆ ನಮ್ಮ ಮನೆಯ ಹಿತ್ತಲು ಬಯಲು ಜಾಗೆಯಲ್ಲಿ ಎಣ್ಣೆಯನ್ನು ಕುಡಿದವನಿಗೆ ಉಪಚಾರಕ್ಕೆ ಬ್ಯಾಡಗಿ ಸರ್ಕಾರಿ ಆಸ್ಪತ್ರೆಯಿಂದ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಅಲ್ಲಿಂದ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಉಪಚಾರ ಫಲಿಸದೇ ದಿನಾಂಕ:09-02-2021 ರಂದು ಮದ್ಯಾಹ್ನ 12-30 ಘಂಟೆಗೆ ಮರಣ ಹೊಂದಿದ್ದು ಅವನ ಮರಣದಲ್ಲಿ ಬೇರೆ ಏನೂ ಸಂಶಯವಿರುವದಿಲ್ಲ ಅಂತಾ ಮೃತನ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 14-02-2021 01:32 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080