ಅಭಿಪ್ರಾಯ / ಸಲಹೆಗಳು

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:41/2021 ವ್ಯಕ್ತಿ ಕಾಣೆ.

         ಚೈತನ್ಯ ತಂದೆ ರಾಚಯ್ಯ ಪಾಟೀಲ, ವಯಾ-45 ವರ್ಷ, ಜಾತಿ-ಹಿಂದೂ ಲಿಂಗಾಯತ, ಉದ್ಯೋಗ: ಕೃಷಿ ಕೆಲಸ, ಸಾ: ಚಿಕ್ಕೇರೂರ ಯಲ್ಲಾಪುರ, ತಾ: ಹಿರೇಕೆರೂರ, ಜಿ: ಹಾವೇರಿ. ಇವರು ದಿನಾಂಕ: 05-04-2021 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ:06-04-2021 ರಂದು ಬೆಳಗಿನ ಜಾವ 4-30 ಗಂಟೆಯ ನಡುವಿನ ಅವಧಿಯಲ್ಲಿ. ಚಿಕ್ಕೇರೂರ ಗ್ರಾಮದ ತನ್ನ ವಾಸದ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ ಕಾಣೆಯಾದವರು ಈ ವರೆಗೂ ಮನೆಗೆ ಬಾರದೆ ಎಲ್ಲಿಯೋ ಹೊಗಿದ್ದು ಕಾನೆಯಾದವರನ್ನು ಹುಡುಕಿಕೊಡಬೇಕೆಂದು ಚೈತನ್ಯ ಇವರ ಹೆಂಡತಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಕಾಗಿನೇಲೆ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2021 ವ್ಯಕ್ತಿ ಸಾವು.

                 ಹನುಮಂತಪ್ಪ ತಂದೆ ಅಡಿವೇಪ್ಪ ಹರಿಜನ ವಯಾ 55 ವರ್ಷ ಜಾತಿ ಹಿಂದೂ ಮಾದರ ಉದ್ಯೋಗ. ಕೂಲಿ ಕೆಲಸ ಸಾ||ಬೀರನಕೊಪ್ಪ ತಾಃಬ್ಯಾಡಗಿ ಈತನು ಬ್ರ್ಯಾಂಡಿ ಕುಡಿಯುತ್ತಿದ್ದು, ವಿಪರೀತ ಸರಾಯಿ ಕುಡಿದು ಮನೆಗೆ ಹೋಗಿ ತನ್ನ ಹೆಂಡತಿಯೊಂದಿಗೆ ವಿನಾಕಾರಣ ಜಗಳ ಮಾಡುತ್ತಾ ಬಂದಿದ್ದು ಅಲ್ಲದೆ. ದಿನಾಂಕಃ-03-04-2021 ರಂದು ಮುಂಜಾನೆ 7-30 ಗಂಟೆಯ ಸುಮಾರಿಗೆ ವಿಪರೀತ ಕುಡಿದು ತನ್ನ ಹೆಂಡತಿಯೊಂದಿಗೆ ಜಗಳ ಮಾಡಿ ಮನೆಯಿಂದ ಹೊದವನು ಮರಳಿ ಮನೆಗೆ ಹೊಗದ್ದರಿಂದ ಮನೆಯ ಜನರೇಲ್ಲರೂ ಕೂಡಿಕೊಂಡು ಹುಡುಕಾಡುತ್ತಿದ್ದಾಗ ದಿನಾಂಕಃ-08-04-2021 ರಂದು ಮುಂಜಾನೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಬೀರನಕೊಪ್ಪ ಗ್ರಾಮದ ಹದ್ದಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ವಿಪರೀತ ಬ್ರ್ಯಾಂಡಿ ಕುಡಿದ ಮತ್ತಿನಲ್ಲಿ  ಯಾವುದೋ ವಿಷಕಾರಕ ಏಣ್ಣಿಯನ್ನು ಕುಡಿದು ಶವವಾಗಿ ಸಿಕ್ಕಿದ್ದು ಮೃತನ ಸಾವಿನಲ್ಲಿ ಬೇರೆ ಏನು ಸಂಶಯ ಇರುವದಿಲ್ಲಾ ಅಂತಾ ಗಣೇಶ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:13/2021 ನೀರಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ.

                 ವಿನಾಯಕ ತಂದೆ ವಿರುಪಾಕ್ಷಪ್ಪ ಚಲವಾದಿ ವಯಾ:30 ವರ್ಷ ಜಾತಿ:ಹಿಂದೂ ಚಲವಾದಿ ಉದ್ಯೋಗ:ಕೂಲಿಕೆಲಸ ಸಾ||ಅಕ್ಕಿಆಲೂರ, ಹಳೇ ಚಲವಾದಿ ತಾ||ಹಾನಗಲ್ಲ ಜಿಲ್ಲಾ||ಹಾವೇರಿ ಈತನು ದಿನಾಂಕ:-08/04/2021 ರಂದು ಸಂಜೆ:05-30 ಗಂಟೆಯ ಸುಮಾರಿಗೆ ತನ್ನಷ್ಟಕ್ಕೆ ತಾನೇ ಅಕ್ಕಿಆಲೂರ ಗ್ರಾಮದ ಬಸವೇಶ್ವರ ನಗರದಲ್ಲಿರುವ ಹೊಂಬಣ್ಣನ ಬಾವಿಯ ನೀರಿನಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾನೆ ವಿನಃ ನನ್ನ ಅಳಿಯನ ಮರಣದಲ್ಲಿ ಬೇರೆ ಏನು ಸಂಶಯ ಇರುವದಿಲ್ಲಾ. ನನ್ನ ಅಳಿಯನ ಶವವನ್ನು ಅಕ್ಕಿಆಲೂರಿನಿಂದ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಹಾನಗಲ್ಲ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಹಾಕಿದ್ದು  ಮುಂದಿನ ಕ್ರಮ ಜರುಗಿಸುವಂತೆ ಇದರಲ್ಲಿಯ ಮೃತನ ಮಾವನು ವರದಿ ನೀಡಿದ್ದರ ಮೇರೆಗೆ ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳ ಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:13/2021 ವ್ಯಕ್ತಿ ಸಾವು.

                 ಬಸಪ್ಪ ತಂದೆ ಮೂಕಪ್ಪ ಗಡಿಗೋಳ ವಯಾ-55 ವರ್ಷ. ಜಾತಿ-ಹಿಂದೂ-ಲಿಂಗವಂತ. ಉದ್ಯೋಗ-ಶೇತ್ಕಿ, ಸಾಹೊಸ-ಶಿಡೇನೂರ, ತಾ-ಬ್ಯಾಡಗಿ ಇವರು ದಿನಾಂಕ:08-04-2021 ರಂದು ಮದ್ಯಾಹ್ನ 03-00 ಘಂಟೆಯಿಂದ ಸಂಜೆ 05-00 ಘಂಟೆಯ ನಡುವಿನ ಅವಧಿಯಲ್ಲಿ ಎತ್ತಿನ ಮೇ ತೊಳೆಯಲು ಶಿಡೇನೂರ ಗ್ರಾಮದ  ಹನುಮಂತ ದೇವರ ಕೆರೆಯಲಿ ಹೋದಾಗ ಆಕಸ್ಮಿಕವಾಗಿ ಕರೆಯ ನೀರಿನ ಕೆಸರಿನ ಹುದುವಿನಲ್ಲಿ ಮುಳುಗಿ ಮರಣ ಹೊಂದಿರುತ್ತಾರೆ ವಿನಃ ನನ್ನ ಅಣ್ಣನ ಸಾವಿನಲ್ಲಿ ಬೇರೆ ಏನೂ ಸಂಶಯವಿರುವದಿಲ್ಲ  ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮೃತನ ಅಣ್ಣ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 14-04-2021 10:07 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ