ಅಭಿಪ್ರಾಯ / ಸಲಹೆಗಳು

ರಾಣೆಬೇನ್ನೂರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:14/2021 ಕಲಂ: 287, 304(A)IPC.

                ದಿನಾಂಕ: 08/03/2021 ರಂದು ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ರಾಣೇಬೆನ್ನೂರ ಶಹರದ ಎಪಿಎಮ್ಸಿ ಮಾರ್ಕೆಟ್ ಆವರಣದ ವಿ ವಿ ಧ್ಯಾವಕ್ಕಳವರ ಇವರ ಅಂಗಡಿಯ ಮುಂದೆ ರಾನಸ್ಮಿ ಮಾಣಿಕ್ಕಂ ಇತನು ತಾನು ನೆಡೆಸುತ್ತಿದ್ದ ಲಾರಿ ನಂಬರ: ಟಿಎನ್:52/ಎ-2434 ನೇದ್ದನ್ನು ನಿರ್ಲಕ್ಷತನದಿಂದ ಹಾಗೂ ದುಡುಕಿನಿಂದ ಒಮ್ಮೇಲೆ ಹೊರಳಿಸಿ ತನ್ನ ಲಾರಿಯ ಹತ್ತಿರ ನಿಂತುಕೊಂಡ ಪ್ರಕಾಶ ತಂದೆ ಗುತ್ತೇಪ್ಪ ಕವಲೆತ್ತೇನವರ ವಯಾ:45 ವರ್ಷ ಜಾತಿ:ಹಿಂದೂ ಕುರುಬರ ವೃತ್ತಿ: ಕೂಲಿ ಕೆಲಸ ಸಾ:ದೊಗ್ಗಳ್ಳಿ ತಾ:ಹರಿಹರ ಇವರಿಗೆ ಡಿಕ್ಕಿ ಮಾಡಿ ಲಾರಿಯ ಗಾಲಿಯನ್ನು ಹತ್ತಿಸಿ ತಲೆಗೆ, ಕೈಕಾಲುಗಳಿಗೆ, ಗುಧದ್ವಾರಕ್ಕೆ ಮರಣಾಂತಿಕ ಗಾಯನೋವು ಪಡಿಸಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ತಡಸ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:43/2021 ಕಲಂ: 279, 338, 304(A)IPC.

                 ದಿನಾಂಕ:-07-03-2021 ರಂದು ರಾತ್ರಿ 09-10 ಘಂಟೆಯ ಸುಮಾರಿಗೆ ತಡಸ-ಹುಬ್ಬಳ್ಳಿ ರಸ್ತೆಯ ಮೇಲೆ ಗೆಂಗೇರಿ ಕೆರೆಯ ಪೂಲ್ ಕಟ್ಟೆಯ ಹತ್ತಿರ ಹನುಮಂತ ರಾಮಪ್ಪ ಗಡ್ಡದ ಸಾ ಹಿರೆಉಪ್ಪನಾಳ ಇತನು ತಾನು ನಡೆಸಿಕೊಂಡು ಹೊರಟಿದ್ದ ಲಾರಿ ನಂಬರ: ಕೆಎ-32/ಎ-4111 ನೇದ್ದನ್ನು ತಡಸ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಜನರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಿಸಿಕೊಂಡು ಹೋಗಿ ತನ್ನ ಎದುರಿಗೆ ತಡಸ ಕಡೆಗೆ ಹೊರಟಿದ್ದ, ಮೋಟರ ಸೈಕಲ ನಂ: ಕೆಎ-28/ ಇಡಿ-6319 ನೇದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ, ಅಪಘಾತದಲ್ಲಿ ಮೋಟರ ಸೈಕಲ ಸವಾರ ಮಂಜುನಾಥ ರಾಮಪ್ಪ ಕುಸುಗಲ್ ಮತ್ತು ವಿಜಯ ಸುರೇಶ ಮಡಿವಾಳರ ಸಾ: ಇಬ್ಬರೂ ತಡಸ ಇವರಿಗೆ ತಲೆಗೆ, ಮತ್ತು ಕೈ ಕಾಲುಗಳಿಗೆ ರಕ್ತಗಾಯಪೆಟ್ಟುಗೊಳಿಸಿದ್ದು ಅಲ್ಲದೇ ಮೋಟಾರ ಸೈಕಲದಲ್ಲಿದ್ದ ಅರಿಹಂತ ಜಯಪಾಲ ನವಲೂರ ವಯಾ- 19 ವರ್ಷ, ಸಾ: ತಡಸ ಇವನಿಗೆ ಮುಖಕ್ಕೆ, ತಲೆಗೆ, ಕೈ ಕಾಲುಗಳಿಗೆ ಬಲವಾದ ರಕ್ತಗಾಯಪಡಿಸಿ ಮರಣ ಹೊಂದುವಂತೆ ಮಾಡಿದ ಅಪರಾಧ.

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:24/2021 ಯುವಕ ಕಾಣೆ.

                 ತೇಜಸ್ಗೌಡ ತಂದೆ ಜಗದೀಶ ಮಲ್ಲಿಕೇರಿ ವಯಾ: 11 ವರ್ಷ ಸಾ: ಹಾವೇರಿ, ಅಶ್ವಿನಿ ನಗರ 1 ನೇ ಕ್ರಾಸ್, ಶಿವ ಪಾರ್ಕ್ ಹತ್ತಿರ ಈತನು ದಿನಾಂಕ; 07-03-201 ರಂದು ಮದ್ಯಾಹ್ನ 15-20 ಘಂಟೆಯ ಸುಮಾರಿಗೆ ಮನೆಯಿಂದ ನಡಕೋತ ಓಣಿ ಹಿಡಿದು ಹೋದವನು ಈವರೆಗೂ ಮರಳಿ ಮನೆಗೆ ಬಾರದೆ ಎಲ್ಲಿಗೋ ಹೋಗಿ ಕಾಣೆಯಾಗಿರಬಹುದು ಅಥವಾ ಯಾರೋ ಅವನನ್ನು ಅಪಹರಣ ಮಾಡಿರಬಹುದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು  ಸದರಿಯವನಿಗೆ ಪತ್ತೆ ಮಾಡಿ ಕೊಡುವಂತೆ ಕಾಣೆಯಾದನ ತಂದೆ ಜಗದೀಶ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:52/2021 ಮಹಿಳೆ ಕಾಣೆ.

                 ಕು.ಕೀರ್ತಿ ತಂಧೆ ಬಾಲಚಂದ್ರ ಬ್ಯಾತನಾಳ, ವಯಾಃ 18 ವರ್ಷ,3 ತಿಂಗಳು, ಉದ್ಯೋಗ-ವಿದ್ಯಾರ್ಥಿ, ಸಾಃಇನಾಂ ನೀರಲಗಿ, ತಾಃ ಹಾನಗಲ್ಲ ಈತಳು  ದಿನಾಂಕಃ 04/03/2021 ರಂದು ರಾತ್ರಿ 10-20 ಗಂಟೆಯಿಂದ ರಾತ್ರಿ 11-00 ಗಂಟೆಯ  ನಡುವಿನ ಅವಧಿಯಲ್ಲಿ  ವಾಸದ ಮನೆಯಿಂದ  ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೊರಗೆ ಹೋದವಳು ವಾಪಾಸ್ಸ್ ಇಲ್ಲಿಯವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು ಇರುತ್ತದೆ, ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ಬಾಲಚಂದ್ರ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:03/2021 ವ್ಯಕ್ತಿ ಸಾವು.

                 ಶಿಗ್ಗಾಂವ ಪೊಲೀಸ್ ಠಾಣಾ ಹದ್ದಿ ಪೈಕಿ ಕಾಮನಹಳ್ಳಿ ಗ್ರಾಮದಲ್ಲಿ ಊರಲ್ಲಿ  ದಿ:08/03/2021 ರಂದು ಶ್ರೀ ಪಾಂಡುರಂಗ ಸ್ವಾಮೀಯ ಜಾತ್ರೆ ಇದ್ದುದರಿಂದಾ ದಿ: 05/03/2021 ರಂದು ರಾತ್ರಿ 8-00 ಘಂಟೆಯ ಸುಮಾರಿಗೆ ಇದರಲ್ಲಿಯ ಮ್ರತ ಚಂದ್ರಪ್ಪ ತಂದೆ ರಾಮಪ್ಪ ಪಡವಳ್ಳಿ ಇತನು ತನ್ನ ಮನೆಯ ಮುಂದೇ ಪರಿ ಪರಿ ಹಾಳೆಯ ತೋರಣ (ಸರಾ)ಕಟ್ಟಲಿಕ್ಕೆ ಹೋಗಿ ಮಿಚಣಿಕೆ ಇಟ್ಟು ಅದರ ಮೇಲೆ ಹತ್ತಿ ತೋರಣ ಕಟ್ಟಿ ಕೇಳಗಡೆಗೆ ಇಳಿಯುವಾಗ  ಆಕಸ್ಮಿಕವಾಗಿ ಕಾಲು ಜಾರಿ ಕೇಳಗೆ ನೆಲಕ್ಕೆ ಬಿದ್ದಿದ್ದರಿಂದಾ ಅವನ ತಲೆಗೆ ಪೆಟ್ಟಾಗಿದ್ದು ಉಪಚಾರಕ್ಕೆ ಅಂತಾ ಶಿಗ್ಗಾಂವ ಸರಕಾರಿ ಆಸ್ಪತ್ರೆಗೆ ಒಯ್ದು ಇಲ್ಲಿಂದಾ ಹೆಚ್ಚಿನ ಉಪಚಾರಕ್ಕಾಗಿ ಕೀಮ್ಸ ಆಸ್ಪತ್ರೆ  ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿ ಉಪಚಾರ ಹೋಂದುವಾಗ  ಉಪಚಾರ ಪಲೀಸದೇ ದಿ:-07/03/2021 ರಂದು ರಾತ್ರಿ 7-30 ಘಂಟೆಯ ಸುಮಾರಿಗೆ ಮರಣ ಹೊಂದಿರುತ್ತಾನೆ, ವಿನಃ ನನ್ನ ಗಂಡನ ಮರಣದಲ್ಲಿ ಬೇರೆನು  ಸಂಶಯ ರುವುದಿಲ್ಲಾ ಅಂತಾ ಶೇಖವ್ವ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 10-03-2021 05:46 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ