ಅಭಿಪ್ರಾಯ / ಸಲಹೆಗಳು

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:10/2021 ಕಲಂ: 506, 34, 504, 420, 368, 369, 465 IPC.

                 ಮಾನ್ಯ 2 ನೇ ಹೆಚ್ಚುವರಿ ಹಿರಿಯ ದಿವಾಣಿ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ರಾಣೇಬೆನ್ನೂರು ರವರ ನ್ಯಾಯಾಲಯದ ಖಾಸಗಿ ಪಿರ್ಯಾದಿ ನಂಬರ: 189/2020 ನೇದ್ದು ತನಿಖೆಗಾಗಿ ಬಂದಿದ್ದು ಅದನ್ನು ಪರಿಶೀಲಿಸಿ ನೋಡಲಾಗಿ ಈ ಪ್ರಕರಣದಲ್ಲಿಯ ಪಿರ್ಯಾದಿ ಶ್ರೀಮತಿ ಬಸಮ್ಮ @ ಬಸವಣ್ಣೆಮ್ಮ ಕೊಂ ಬಸವಪ್ಪ ಬಿ ಇವರು ಹೊನ್ನಾಳಿ ಗ್ರಾಮದವರಾಗಿದ್ದು ಇವರ ಅಣ್ಣ ಜಯಪ್ಪ ಗುರಪ್ಪ ಹಡಪದ ಸಾ: ಮೂದೇನೂರ ತಾ: ರಾಣೇಬೆನ್ನೂರ ಗ್ರಾಮದವರಾಗಿದ್ದು ಮುದೇನೂರ ಗ್ರಾಮದ ರಿ..ನಂ. 29/1ಬಿ, 04 ಎಕರೆ, 08ಗುಂಟೆ ಜಮೀನನ್ನು ಜಯಪ್ಪತಾನೇ ಕಬಳಿಸಬೇಕು ಎನ್ನುವ ಉದ್ದೇಶದಿಂದ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿಕೊಂಡು ನ್ಯಾಯಾಲಯದಲ್ಲಿಯೂ ಖೊಟ್ಟಿ ಅರ್ಜಿಯನ್ನು ಸಲ್ಲಿಸಿ ಬಸವಣ್ಣೆಮ್ಮ ಇವರಿಗೆ ಬರಬೇಕಾದ ಆಸ್ತಿಯನ್ನು ಲಪಟಾಯಿಸಿ. ಇದನ್ನು ಕೇಳಿದ್ದಕ್ಕೆ ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:15/2020 ಕಲಂ: 323,324,448,504,506,34 IPC.

                 ಹನುಮಂತಪ್ಪ ಸೋಮಪ್ಪ ಕೊಳ್ಳಿ ಸಾ ಹಂಸಭಾವಿ ಹಾಗೂ ಇವರ ಸಹಚರರು ಸೇರಿ ಗಣೇಶ ಕಳ್ಳಿ ಇವರ ಅಣ್ಣನೊಂದಿಗೆ ಮನೆಯ ಹಿತ್ತಲದಲ್ಲಿ ಪಾಯಖಾನೆ ಕಟ್ಟಿಸುವ ಸಂಬಂದ ತಂಟೆ ತಕರಾರು ಮಾಡುತ್ತಾ ಬಂದಿದ್ದು ಇದೇ ಕಾರಣಕ್ಕೆ ದಿನಾಂಕ: 07-02-2021 ರಂದು ಬೆಳಿಗ್ಗೆ 7-30 ಗಂಟೆಯ ಸುಮಾರಿಗೆ ಹನುಮಂತಪ್ಪ ಹಾಗೂ ಅವರ ಸಹಚರರು ಸೇರಿ ಗಣೇಶ ಇವರ ಧನದ ಕೊಟ್ಟಿಗೆಗೆ ಅಕ್ರಮ ಪ್ರವೇಶ ಮಾಡಿ ಗಣೇಶನ ಅಣ್ಣನಿಗೆ ಲೇ ಸೋಳೆ ಮಗನಾ ಹಿತ್ತಲದಾಗ ಕಂಪೌಡ್ ಕಟ್ಟಿಸುತ್ತಿಯಾ ಅಂತಾ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದಾಡಿದ್ದು ಆಗ ಏಕೆ ಈ ರೀತಿ ಮಾತನಾಡುತ್ತಿರಿ  ಅಂತಾ ಕೇಳಿದ್ದಕ್ಕೆ, ಲೇ ನಮಗಾ ಹೊಳ್ಳಿ ಮಾತನಾಡುತ್ತಿಯಾ ಅಂದವರೆ ಕೈಯಿಂದ ಮತ್ತು ತಮ್ಮ ಕೈಯಲ್ಲಿ ಇದ್ದ ಬಡಿಗೆಗಳಿಂದ ಗಣೇಶನ ಅಣ್ಣನ ಕೈಗೆ, ತಲೆಗೆ, ಕಾಲಿಗೆ ಸಿಕ್ಕಸಿಕ್ಕಲ್ಲಿ ಮೈ ಕೈಗೆ ಹೊಡೆದು ಕಾಲಿನಿಂದ ಒದ್ದು ನೆಲಕ್ಕೆ ಕೆಡವಿ ಕೂಡಿದ ಜನರು ಜಗಳ ಬಿಡಿಸಿದಾಗ ಇನ್ನೊಮ್ಮೆ ಒಬ್ಬನ ಸಿಗು ಕೊಂದು ಬಿಡುತ್ತೇವೆ ಎಷ್ಟು ದುಡ್ಡು ಹೋದರು ನೋಡಿಕೊಳ್ಳುತ್ತೆವೆ ಅಂತಾ ಜೀವಧ ಧಮಕಿ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:37/2021 ಕಲಂ; 427, 504, 447, 143, 147, 149  IPC.

                    ಗುಡ್ಡಪ್ಪ ನಿಂಗಪ್ಪ ನಾಡದ ಸಾ|| ಹನುಮಾಪೂರ ಹಾಗೂ ನಿಂಗಪ್ಪ ತಿಪ್ಪಣ್ಣ ಕೊರವರ ಹಾಗೂ ಇವರ ಸಹಚರರು ಹನುಮಾಪೂರ ಗ್ರಾಮದವರು ಇದ್ದು ಗ್ರಾಮ ಪಂಚಾಯಿತಿ ಆಸ್ತಿ ನಂಬರ 167/1 ರ ಕಣದ ಮತ್ತು ಮನೆಯ ವಿಚಾರವಾಗಿ ಇಬ್ಬರು ಮದ್ಯ ತಂಟೆ ಇದ್ದು ಇದು ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಇರುತ್ತದೆ. ಇದೇ ವಿಚಾರ ಇಟ್ಟುಕೊಂಡು ದಿನಾಂಕಃ25-01-2021 ರಂದು ಸಾಯಾಂಕಾಲ 6-00 ಗಂಟೆ ಸುಮಾರಿಗೆ ಗುಡ್ಡಪ್ಪ ಇವರು ಮನೆಯಲ್ಲಿ ಇಲ್ಲದೇ ಇದ್ದಾಗ ನಿಂಗಪ್ಪ ಹಾಗೂ ಇವರ ಸಹಚರರು ಎಲ್ಲರೂ ಅಕ್ರಮ ಗುಂಪು ಕಟ್ಟಿಕೊಂಡು ಬಂದು ಕಲ್ಲುಗಳಿಂದ ಮನೆಯ ಮುಂದಿನ ಕಟ್ಟಿಗೆ ಗೇಟ್ ಮತ್ತು 8 ತಗಡುಗಳನ್ನು 2 ಕಬ್ಬಿಣದ ಪೈಪುಗಳು ಮತ್ತು ಕಟ್ಟಿಗೆಗಳನ್ನು ಹಾಳು ಮಾಡಿ ಸುಮಾರು 35,000/- ರೂ ಲುಕ್ಷಾಣು ಮಾಡಿ ಅವ್ಯಾಚ್ಯವಾಗಿ ಬೈದಾಡಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:04/2020 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                 ಬಸನಗೌಡ ತಂದೆ ವೀರಭದ್ರಪ್ಪ ಮಳವಳ್ಳಿ, ವಯಾ-55 ವರ್ಷ, ಜಾತಿ-ಹಿಂದೂ-ಲಿಂಗಾಯತ, ಉದ್ಯೋಗ-ಕೃಷಿ ಕೆಲಸ, ಸಾ; ವಡೆಯನಪೂರ, ತಾ; ಹಿರೇಕೆರೂರ, ಇವನು ತನ್ನ ಜಮೀನು ರಿ ಸ ನಂ: 109/2ಎ, 2 ಎಕರೆ 2 ಗುಂಟೆ ಮತ್ತು ರಿ ಸ ನಂ 86/2ಬ, 1 ಎಕರೆ 27 ಗುಂಟೆ ಜಮೀನಿನ ಉಳುಮೆ ಮತ್ತು ಕೃಷಿ ಕೆಲಸಕ್ಕಾಗಿ ತನ್ನ ಹೆಸರಿನಲ್ಲಿ ಎಸ್ ಬಿ ಐ ಬ್ಯಾಂಕ ಹಿರೇಕೆರೂರಲ್ಲಿ 3.00.000/-ರೂ ಮತ್ತು ಊರಲ್ಲಿ ಕೈಗಡ ಅಂತಾ 3.00.00/- ರೂಗಳ ಸಾಲ ಮಾಡಿದ್ದು ಈ ವರ್ಷದ ಮಳೆ ಬೆಳೆ ಸರಿಯಾಗಿ ಬಾರದೆ ಹೊ ಕೂಸು ಮತ್ತು ಗೋವಿನ ಜೋಳದ ಬೆಳೆ ಸರಿಯಾಗಿ ಬಾರದೆ ಇದ್ದ ಕಾರಣ ತಾನು ಮಾಡಿದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಚಿಂತಿ ಮಾಡಿ ಮನಸ್ಸಿಗೆ ಬೇಜಾರು ಮಾಡಿಕೊಂಡು ಸಾಲದ ಬಾದೆಯನ್ನು ತಾಳಲಾರದೆ ದಿನಾಂಕ 04-02-2021 ರಂದು ಸಂಜೆ 7-00 ಗಂಟೆಯಿಂದ ದಿನಾಂಕ: 08-02-2021 ರ ಬೆಳಿಗ್ಗೆ 9-00 ಗಂಟೆಯ ನಡುವಿನ ಅವಧಿಯಲ್ಲಿ ತಾನು ಲಾವಣಿ ಹಾಕಿಕೊಂಡು ಉಳುಮೆ ಮಾಡುತ್ತಿದ್ದ ವಡೆಯನಪೂರ ಗ್ರಾಮದ ಮಲ್ಲೇಶಪ್ಪ ತಂದೆ ಗೀರಿಯಪ್ಪ ಚಿನ್ನಿಕಟ್ಟಿ ಇವರ ಜಮೀನದಲ್ಲಿ ಯಾವೂದೋ ವಿಷಕಾರಕ ಎಣ್ಣೆಯನ್ನು ಸೇವನೆ ಮಾಡಿ ಮೃತ ಪಟ್ಟಿದ್ದು ಮೃತ ನನ್ನ ಗಂಡನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 10-02-2021 02:11 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ