ಅಭಿಪ್ರಾಯ / ಸಲಹೆಗಳು

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:123/2021 ಕಲಂ: 511, 379 IPC.

                     ದಿನಾಂಕ: 07-09-2021 ರಂದು 12-00 ಗಂಟೆಗೆ ಕೋಟಿಹಾಳ ಗ್ರಾಮದ ಹದ್ದಿಯಲ್ಲಿರುವ ಸ್ಮಾಶನದ ದಾರಿಗೆ ಬರುವ ತುಂಗಭದ್ರಾ ನದಿಪಾತ್ರದಲ್ಲಿ ಮಹಂತೇಶಗೌಡ ವೀರನಗೌಡ ಯಡಚಿ ಸಾ|| ಕೊಟಿಹಾಳ ಹಾಗೂ ಇವರ ಇಬ್ಬರು ಸಹಚರರು ಸೇರಿ ತಾವು ನಡೆಸುತ್ತಿದ್ದ ಟ್ರ್ಯಾಕ್ಟರ ಇಂಜಿನ್ಗಳ ಸಹಾಯದಿಂದ ಸರಕಾರದ ಖನಿಜ ಸ್ವತ್ತಾದ ಮರಳನ್ನು ಕಳ್ಳತನದಿಂದ ತುಂಬುವ ಕುರಿತು ಅಕ್ರಮವಾಗಿ ಸಂಗ್ರಹ ಮಾಡುತ್ತಿದ್ದಾಗ, ಮಾಹಿತಿ ಮೇರೆಗೆ ಪಿಇಸ್‌ಐ ಹಾಗೂ ಸಿಬ್ಬಂದಿ ಜನರು ಸೇರಿ ದಾಳಿ ಮಾಡಿದ ಕಾಲಕ್ಕೆ ಟ್ರ್ಯಾಕ್ಟರಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಿರೆಕೇರೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ:145/2021 ಕಲಂ: 279, 304(A) IPC.

                     ಬಸಪ್ಪ ತಂದೆ ಫಕ್ಕೀರಪ್ಪ ಸಂಕಣ್ಣನವರ ವಯಾ: 60 ವರ್ಷ ಜಾತಿ ಹಿಂದೂ ಲಿಂಗಾಯತ ಉದ್ಯೋಗ ವ್ಯೆವಸಾಯ ಸಾ: ಹಾದ್ರಿಹಳ್ಳ್ಳಿ ತಾ: ಹಿರೇಕೆರೂರು. ಈತನು ತನ್ನ ಬಾಬತ್ ಮೋಟಾರ ಸೈಕಲ್ಲ ನಂಬರ ಕೆ,ಎ,64/ಎಚ್-9320 ನೇದ್ದನ್ನು ತೆಗೆದುಕೊಂಡು ಹಾದ್ರಿಹಳ್ಳಿ ಗ್ರಾಮದಿಂದ ದಿನಾಂಕ ; 05-09-2021 ರಂದು 18-00 ಗಂಟೆಗೆ ಹಿರೇಕೆರೂರಿಗೆ ಬಂದು ಮರಳಿ ಊರಿಗೆ ಹಿರೇಕೆರೂರು ಹಂಸಭಾವಿ ರಸ್ತೆಯ ಮೇಲೆ ಕಲ್ಲಕಟ್ಟಿ ಕೇರೆಯ ಹಳ್ಳದ ಹತ್ತಿರ ದಿನಾಂಕ ; 05-09-2021 ರಂದು 18-00 ಗಂಟೆಯಿಂದ ದಿನಾಂಕ ; 06-09-2021 ರಂದು 14-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮೋಟಾರ ಸೈಕಲ್‌ನ್ನ ಹಿರೇಕೆರೂರು ಕಡೆಯಿಂದ ಹಂಸಭಾವಿ ಕಡೆಗೆ ಅತೀಜೋರಿನಿಂದ ನಿಷ್ಕಾಳಜಿತನದಿಂದ ಓಡಿಸಿಕೊಂಡು ಹೋಗಿ ಕಲ್ಲಕಟ್ಟಿ ಹಳ್ಳದ ನೀರಿನಲ್ಲಿ ಮೋಟಾರ ಸೈಕಲ್ಲ ಸಮೇತ ಬಿದ್ದು ಅಪಘಾತ ಪಡಿಸಿಕೊಂಡು ಸ್ಥಳದಲ್ಲೇ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:145/2021 ಕಲಂ: 506,34,504,307,323,324 IPC.

                     ಸಿದ್ದಲಿಂಗಪ್ಪ ಮಾಲಿಂಗಪ್ಪ ಶಂಕ್ರಿಕೊಪ್ಪ ಸಾ||ಆಡೂರ ಇವರು ದಿನಾಂಕ: 07-09-2021 ರಂದು ಮಧ್ಯಾಹ್ನ 12-45 ಘಂಟೆಗೆ ಆಡೂರ ಗ್ರಾಮದ ಕಂಚೀನೆಗಳೂರ ರಸ್ತೆಯ ಮೇಲೆ ಸಾರ್ವಜನಿಕರೊಂದಿಗೆ ಆಡೂರ ಕಂಚೀನೆಗಳೂರ ರಸ್ತೆಯ ಕಾಮಗಾರಿ ಕಳೆದ 10 ತಿಂಗಳಿನಿಂದ ನಿಂತಿದ್ದರಿಂದ ಈ ಬಗ್ಗೆ ಚರ್ಚೆ ಮಾಡುತ್ತೀರುವಾಗ ಶ್ರೀಕಾಂತ ಕೊಂಚಿಗೇರಿ ಹಾಗೂ ಶಂಭೂಕೊಂಚಿಕೇರಿ ಇವರು ಬಂದವರೆ ಸಿದ್ದಲಿಂಗಪ್ಪಗೆ  ಲೇ ಸೂಳೆ ಮಗನ ನೀನು ಈ ರಸ್ತೆಯ ಹಣವನ್ನು ತಿನ್ನಲು ಬಂದಿದ್ದಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಶರ್ಟನ್ನು ಹರಿದು ಹಾಕಿ ಕೊಲ್ಲುವ ಉದ್ದೇಶದಿಂದ ಕುತ್ತಿಗೆಯನ್ನು ಬಲವಾಗಿ ಹೀಚುಕಿ ಉಸಿರುಗಟ್ಟಿಸಿದಾಗ ಬಿಡಿಸಿಕೊಳ್ಳಲು ಬಂದ ಮಹಾಂತೇಶ ಇವರಿಗೂ ಸಹ ಎರಡು ಜನ ಕೂಡಿಕೊಂಡು ನಿಮಗೆ ಒಂದು ಗತಿ ಕಾಣಿಸುತ್ತೇವೆ ಅಂದವರೆ ಎಳದಾಡಿ ಕಾಲಿನಿಂದ ಸಿಕ್ಕಸಿಕ್ಕಲ್ಲಿ ಒದ್ದು ಕೈಯಿಂದ ಹೊಡಿಬಡಿ ಮಾಡಿದ್ದು ಅಲ್ಲದೆ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಹೊಡಿ ಬಡಿ ಮಾಡಿದ್ದು ಅಲ್ಲದೆ ಜೀವ ಬೇದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಬಾವಿಕ ಮರಣ ಸಂಖ್ಯೆ29/2021 ಅನಾಮದೇಯ ವ್ಯಕ್ತಿ ಸಾವು.

                ಸುಮಾರು 40-45 ವರ್ಷ ವಯಸ್ಸಿನ ಅನಾಮದೇಯ ವ್ಯಕ್ತಿಯು ಸರಿಯಾಗಿ ಊಟ ಮಾಡದೇ, ಯಾವುದೋ ಖಾಯಿಲೆಯಿಂದಾ ದಿನಾಂಕ 06-09-2021 ರಂದು ರಾತ್ರಿ 9-00 ಗಂಟೆಯಿಂದಾ ದಿ: 07-09-2021 ರಂದು ಬೆಳಗಿನ 8-00 ಗಂಟೆಯ ನಡುವಿನ ಅವದಿಯಲ್ಲಿ ರಾಣೆಬೆನ್ನೂರದಿಂದಾ ಹಾವೇರಿ ಕಡೆಗೆ ಹೋಗುವ ರಸ್ತೇಯಲ್ಲಿ ಬಾಯಿಪಾಸ್ ಸಮೀಪ ಸೈಯದರೆಹಮುತುಲ್ಲಾ ಮಹ್ಮದಹಾಸಮಸಾಬ ಸವಣೂರ ಇವರ ಗುಜರಿ ಅಂಗಡಿಯ ಹತ್ತಿರ  ಮೃತ ಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಬಾವಿಕ ಮರಣ ಸಂಖ್ಯೆ29/2021 ವ್ಯಕ್ತಿ ಸಾವು.

                ಪ್ರಕಾಶ ತಂದೆ ನಾಗಪ್ಪ ಪೂಜಾರ ವಯಾ-33 ವರ್ಷ ಜ್ಯಾತಿ: ಹಿಂದೂ ಲಿಂಗಾಯತ  ಉದ್ಯೋಗ: ಲಾರಿ ಡ್ರೈವರ ಸಾ|| ದೇವಗೀರಿ ತಾ|| ಹಾವೇರಿ ಇವನು ಬೆಂಗಳೂರಿನಲ್ಲಿ ಲಾರಿ ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದು ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಟ್ಟಿದ್ದು ಸದರಿಯವನಿಗೆ ಅವನ ಮನೆಯವರು ಕುಡಿಯಬೇಡಾ ಅಂತಾ ಬುದ್ದಿ ಹೇಳಿದರೂ ಸಹ ಅವರ ಮಾತಿಗೆ ಬೆಲೆ ಕೊಡದೆ ಕುಡಿಯುತ್ತಿದ್ದು ಪಂಚಮಿ ಹಬ್ಬಕ್ಕೆ ತನ್ನ ಹೆಂಡತಿ ಮಕ್ಕಳ ಜೊತೆ ಊರಿಗೆ ಬಂದವನು ಹಬ್ಬದ ನಂತರ ದಿನಾಂಕಃ 13-08-2021 ರಂದು ಮದ್ಯಾಹ್ನ 3-00 ಘಂಟೆ ಸುಮಾರಿಗೆ ಹಾವೇರಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಕುಡಿದ ನಿಷೆಯಲ್ಲಿ ದಿನಾಂಕಃ 13-08-2021 ರಂದು ಮದ್ಯಾಹ್ನ 3-00 ಘಂಟೆಯಿಂದ ದಿನಾಂಕಃ 07-09-2021 ರಂದು ಮದ್ಯಾಹ್ನ 12-30 ಘಂಟೆ ನಡುವಿನ ಅವಧಿಯಲ್ಲಿ ತನ್ನಷ್ಟಕ್ಕೆ ತಾನೇ ವರದಾ ಹೊಳಿಯ ನೀರಿನಲ್ಲಿ ಮುಳಗಿ ಮರಣ ಹೊಂದಿರುತ್ತಾನೆ, ಇತನ ಸಾವಿನಲ್ಲಿ ಯಾರ ಮೇಲೂ ಸಂಶಯವಿರುವದಿಲ್ಲ ಅಂತಾ ಮೃತನ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

 

ಇತ್ತೀಚಿನ ನವೀಕರಣ​ : 17-09-2021 06:21 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ