ಅಭಿಪ್ರಾಯ / ಸಲಹೆಗಳು

ಬಂಕಾಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:18/2021 ಕಲಂ: 279, 304(A) IPC.

                 ಮಾಲತೇಶ ಶಿವಪ್ಪ ಮಡಿವಾಳರ ಸಾ:ಹಿರೇಲಿಂಗದಳ್ಳಿ ಇವರು ದಿನಾಂಕ: 07/02/2021 ರಂದು ಮುಂಜಾನೆ 01.00 ಗಂಟೆಯಿಂದ 03.00 ಗಂಟೆಯ ನಡುವಿನ ಅವದಿಯಲ್ಲಿ ತಾನು ಚಲಾಯಿಸುತ್ತಿದ್ದ ಟಿಪ್ಪರ ಲಾರಿ ನಂ: ಕೆಎ33 ಎ 7177 ನೇದ್ದನ್ನು ಬಂಕಾಪೂರ- ಹಾನಗಲ್ ರಸ್ತೆ ಮೇಲೆ ಹಾನಗಲ್ ಕಡೆಯಿಂದ ಬಂಕಾಪೂರ ಕಡೆಗೆ ಜೋಗಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬರುವಾಗ ವಾಹನದ ನಿಯಂತ್ರಣ ಕಳೆದುಕೊಂಡು ಹೋಗಿ ರಸ್ತೆಯ ಬಲ ಬದಿ ಇರುವ ಮರಕ್ಕೆ ತಾನೆ ಡಿಕ್ಕಿ ಮಾಡಿ ಅಪಘಾತ ಪಡಿಸಿಕೊಂಡು ವಾಹನದ ಶೀಟನಲ್ಲಿ ಸಿಕ್ಕಿ ಹಾಕಿಕೊಂಡು ಹೊರ ಬರದೆ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:20/2020 ಕಲಂ: 279, 337, 304(A)IPC.

                 ಬಸವರಾಜ ತಂದೆ ಚನ್ನಬಸಪ್ಪ ಹೆಗ್ಗಣ್ಣನವರ @ ಪುಟ್ಟಣ್ಣನವರ, ವಯಸ್ಸು: 44 ವರ್ಷ, ಸಾ: ಸಂಗೂರ, ತಾ: ಹಾವೇರಿ ಇವರು ದಿನಾಂಕ 18-12-2019 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಸಂಗೂರ ಗ್ರಾಮದ ತಮ್ಮ ಮನೆಯಿಂದ ಹಾವೇರಿಗೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ಇಲ್ಲಿಯವರೆಗೆ ಮರಳಿ ಮನೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ಬಸವರಾಜ ಇವರನ್ನು ಇವರೆಗು ಹುಡುಕಾಡಿದ್ದು ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ನನ್ನ ಗಂಡನ್ನು ಹುಡುಕಿಕೊಡಬೇಕೆಂದು ವಿನೋದಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೇಕೆರೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:05/2020 ವ್ಯಕ್ತಿ ಆತ್ಮಹತ್ಯೆ.

                 ಸಿದ್ದಪ್ಪ ತಂದೆ ಬಸವಣ್ಣೆಪ್ಪ ಮುತ್ತಣ್ಣನವರ ವಯಾ: 50 ವರ್ಷ, ಜಾತಿ: ಹಿಂದೂ ಕುರುಬರ, ಉದ್ಯೋಗ: ವ್ಯಾಪಾರ, ಸಾ: ಮಾಸೂರು ಶಿದ್ದೇಶ್ವರನಗರ ತಾ:ರಟ್ಟಿಹಳ್ಳಿ ಇವರಿಗೆ ಸಂಸಾರಿಕ ಜೀವನದಲ್ಲಿ ಮಕ್ಕಳಾಗದೇ ಇದ್ದು ಸದರಿಯವನು ಅತೀಯಾಗಿ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಅಲ್ಲದೇ ತನಗೆ ಮಕ್ಕಳಾಗಲಿಲ್ಲಾ ಅಂತಾ ಅದನ್ನೆ ಮಾನಸಿಕ ಮಾಡಿಕೊಂಡು ತನ್ನಸ್ಟಕ್ಕೆ ತಾನೇ ದಿನಾಂಕ : 31/01/2021 ರಂದು ಮಧ್ಯಾಹ್ನ 01-00 ಗಂಟೆಗೆ ಮಾಸೂರು ಗ್ರಾಮದ ಸಂತೆಯಿಂದ ಮನೆಗೆ ಬಂದವನೇ ತಮ್ಮ ಮನೆಯಲ್ಲಿಯ ಸೀಮೆಎಣ್ಣೆಯನ್ನು ತೆಗೆದುಕೊಂಡು ಹೋಗಿ ತಮ್ಮ ಮನೆಯ ಹಿತ್ತಲದಲ್ಲಿ ಮೈಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಸುಟ್ಟಗಾಯಗಳಾಗಿದ್ದರಿಂಧಾ ಸಿದ್ದಪ್ಪ ಈತನಿಗೆ ಕೂಡಿದ ಜನರು ಉಪಚಾರಕ್ಕೆ ಮಾಸೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ  ಉಪಚಾರಕ್ಕೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಧಾಖಲಿಸಿದ್ದಾಗ ದಿನಾಂಕ : 06/02/2021 ರಂದು ರಾತ್ರಿ 10-00 ಗಂಟೆಗೆ ಉಪಚಾರ ಫಲಿಸದೇ ತೀರಿಕೊಂಡಿರುತ್ತಾನೆ ಅಂತಾ ರಾಯಮ್ಮ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2020 ಯುವಕ ಸಾವು.

                 ಪಂಕಜ್ ತಂದೆ ಶ್ರೀಕಾಂತ ಚಿಕ್ಕಾಂಶಿ ವಯಾ:11 ವರ್ಷ ಜ್ಯಾತಿ: ಹಿಂದೂ ವಡ್ಡರ ಉದ್ಯೋಗ: ವಿದ್ಯಾರ್ಥಿ ಸಾ:ಕೋಣನಕೊಪ್ಪ ತಾ||ಹಾನಗಲ್ಲ ಜಿಲ್ಲಾ||ಹಾವೇರಿ ಈತನು ತನ್ನ ಮನೆಯ ಎತ್ತುಗಳಿಗೆ ನೀರು ಕುಡಿಸಲು ದಿನಾಂಕ:-07/02/2021 ರಂದು ಮಧ್ಯಾಹ್ನ:01-30 ಗಂಟೆಯ ಸುಮಾರಿಗೆ ಮನೆಯಿಂದ ಹಿಡಿದುಕೊಂಡು ಹೋದವನು ಕೋಣನಕೊಪ್ಪ ಗ್ರಾಮದ ಹೊಸಕಟ್ಟೆ ಕೆರಯಲ್ಲಿ ಎತ್ತುಗಳಿಗೆ ನೀರು ಕುಡಿಸುವಾಗ ಎತ್ತು ಬೇದರಿ ನೀರಿಗೆ ಹಾರಿದ್ದರಿಂದ ಒಂದು ಎತ್ತಿನ ಹಗ್ಗವು ಕಾಲಿಗೆ ಸುತ್ತಿಕೊಂಡು ನೀರಿಗೆ ಹೋಗಿ ಬಿದ್ದಾಗ ಈಜು ಬಾರದೇ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾನೆ ವಿನಃ ನನ್ನ ಮಗನ ಮರಣದಲ್ಲಿ ಬೇರೆ ಏನು ಸಂಶಯ ಇರುವದಿಲ್ಲಾ ಅಂತಾ ಶ್ರೀಕಾಂತ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 10-02-2021 02:13 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ