ಅಭಿಪ್ರಾಯ / ಸಲಹೆಗಳು

ತಡಸ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:55/2021 ಮಹಿಳೆ ಕಾಣೆ.

              ಕುಮಾರಿ ಸುಮಾ ತಂದೆ ಬಸಪ್ಪ ಲಮಾಣಿ, ವಯಾ:-20 ವರ್ಷ ಜಾತಿ:- ಹಿಂದೂ ಲಮಾಣಿ, ಉದ್ಯೋಗ:- ವಿದ್ಯಾರ್ಥಿನಿ, ಸಾ|| ಯತ್ತಿನಹಳ್ಳಿ ತಾಂಡಾ, ತಾ|| ಶಿಗ್ಗಾಂವ ಇವಳು ದಿನಾಂಕ:- 03/07/2021 ರಂದು ರಾತ್ರಿ 08-00 ಘಂಟಗೆ ಮನೆಯಲ್ಲಿ ಬರ್ಹಿದೇಶಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮನೆಗೆ ಮರಳಿ ಬರದೇ ಎಲ್ಲಿಯೋ ಕಾಣೆಯಾಗಿ ಹೋಗಿರುತ್ತಾಳೆ. ಕಾಣೆಯಾದ ಸುಮಾ ಇವಳನ್ನು ತಮಗೆ ತಿಳಿದ ಎಲ್ಲಾ ಕಡೆಯು ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದವಳನ್ನು ಹುಡುಕಿಕೊಡುವಂತೆ ಅನಸವ್ವ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಕೆ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:137/2021 ಮಹಿಳೆ ಕಾಣೆ.

             ಕು: ಚನ್ನಮ್ಮ ತಂದೆ ನಿಂಗಪ್ಪ ಬಾರ್ಕಿ ವಯಸ್ಸು: 22 ವರ್ಷ, ಜಾತಿ: ಹಿಂದೂ ಗಂಗಾಮತ, ಉದ್ಯೋಗ: ಕೂಲಿಕೆಲಸ, ಸಾ: ಕಡಕೋಳ ತಾ: ಸವಣೂರ ಇವಳು  ದಿನಾಂಕ 30-06-2021 ರಂದು ಮದ್ಯಾಹ್ನ  12-00 ಗಂಟೆಗೆ ತಮ್ಮ ಮನೆಯಿಂದ  ಹೋದವಳು ಎಲ್ಲಿಗೋ ಹೋಗಿ ಕಾಣೆಯಾಗಿದ್ದು ವಾಪಸ್ಸ ಮನೆಗೆ ಬಂದಿರುವುದಿಲ್ಲ, ಕಾರಣ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡುವಂತೆ ಕಾಣೆಯಾದವಳ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:05/2021 ವ್ಯಕ್ತಿ ಸಾವು.

            ಹೊನ್ನಪ್ಪ ತಂದೆ ಬಸಪ್ಪ ಇಟಗಿ ವಯಾ: 65 ವರ್ಷ ಜಾತಿ:ಹಿಂದೂ ಕುರುಬ ಉದ್ಯೋಗ:ವ್ಯವಸಾಯ ವಾಸ:ಹುಲಿಕಟ್ಟಿ ತಾ:ರಾಣೆಬೆನ್ನೂರು ಇವರು ದಿನಾಂಕ:05/07/2021 ರಂದು ಸಾಯಂಕಾಲ 07-30 ಗಂಟೆ ಸುಮಾರಿಗೆ ಹುಲಿಕಟ್ಟಿ ಗ್ರಾಮದ ರಾಜುಗೌಡ ತಂದೆ ತಿರಕನಗೌಡ ಮುದಿಗೌಡರ  ರವರ ಎದುರಿನ ಅಂಗಡಿಯ ಮುಂದಿನ ಚರಂಡಿಯು ಮಳೆಯ ನೀರಿನಿಂದ ತುಂಬಿ ಹರಿಯುತ್ತಿದ್ದು ಅದರಲ್ಲಿ ಕಾಲು ಜಾರಿ ಬಿದ್ದು ಮಳೆಯ ನೀರಿನ ರಭಸಕ್ಕೆ ತೆಲಿಕೊಂಡು ಹೊಗಿ ಮೃತ ಪಟ್ಟಿದ್ದು ಇರುತ್ತದೆಯೇ ವಿನಃ ಅವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ರೇವಣ ಸಿದ್ದಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:17/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

             ನಿಂಗಪ್ಪ ರಾಮಣ್ಣ ಕೋಟಿ ವಯಾ : 24 ವರ್ಷ,ಜಾತಿ: ಹಿಂದೂ ಮರಾಠ , ಉದ್ಯೋಗ: ಒಕ್ಕುಲುತನ, ಸಾ: ಚವಡಾಳ ತಾ: ಸವಣೂರ ಇವನು ಕಳೆದ 03 ವರ್ಷಗಳಿಂದ ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಯಾವುದೆ ಕೆಲಸವನ್ನು ಮಾಡದೆ ಮನೆಯಲ್ಲಿ ಜಗಳ ಮಾಡುತ್ತಾ ಇದ್ದು .ಅವರ ಮನೆಯಲ್ಲಿ ಸರಾಯಿ ಕುಡಿಯುದನ್ನು ಬಿಡು ಅಂತಾ ಸಾಕಷ್ಟು ಸರಿ ಹೇಳಿದರು ಅವನು ಬಿಟ್ಟಿರಲಿಲ್ಲ .ಹೀಗಿರುವಾಗ ದಿನಾಂಕ: 03-07-2021 ರಂದು ಸಂಜೆ 6-00 ಗಂಟೆ ಸುಮಾರಿಗೆ ಜೇಕಿನಕಟ್ಟಿ ರಸ್ತೆಯಲ್ಲಿ ಮಲ್ಲಕಾರ್ಜುನ  ಸೊಪ್ಪನ ಇವರ ಹೊಲದ ಹತ್ತಿರ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವಿಸಿ ಒದ್ದಾಡುತ್ತಿದಾಗ ಅವನಿಗೆ ಉಪಚಾರಕ್ಕೆ ಸವಣೂರ ಸರ್ಕಾರಿ ಆಸ್ಪತ್ರೆ ನಂತರ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ ಫಲಿಸದೆ ದಿನಾಂಕ: 06-07-2021 ರಂದು ಬೆಳಿಗ್ಗೆ 5-00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:21/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

             ಮಂಜುನಾಥ ಮರಿಯಪ್ಪ ಪೂಜಾರ  ವಯಾ: 40 ವರ್ಷ ಜಾತಿ: ಹಿಂದೂ ಕುರಬರ  ವೃತ್ತಿ- ಒಕ್ಕಲುತನ, ಸಾ|| ಬಮ್ಮನಕಟ್ಟಿ ತಾ|| ಹಾವೇರಿ. ಇವನು ಮೊದಲಿನಿಂದಲು ಸರಾಯಿ ಕುಡಿಯುತ್ತಿದ್ದು ಇತ್ತಿತ್ತಲಾಗಿ ಅತಿಯಾಗಿ ಸರಾಯಿ ಕುಡಿಯುತ್ತಿದ್ದು ಮನೆಯವರು ಹೇಳಿದರು ಕೇಳುತ್ತಿರಲಿಲ್ಲ. ದಿನಾಂಕ 05-07-2021 ರಂದು ರಾತ್ರಿ 08-30 ಗಂಟೆಗೆ ಸುಮಾರಿಗೆ ತನ್ನ ಮನೆಯಲ್ಲಿ ಕುಡಿದ ಅಮಲಿನಲ್ಲಿ ಯಾವುದೋ ವಿಷಕಾರಕ ಎಣ್ಣೆಯನ್ನು ಕುಡಿದು ಒದ್ದಾಡುತ್ತಿದ್ದು ಅವನಿಗೆ ಉಪಚಾರಕ್ಕೆ ಗುತ್ತಲ ಸರಕಾರಿ ಆಸ್ಪತ್ರೆ ಕರೆದುಕೊಂಡು ಬಂದು ಉಪಚಾರ ಮಾಡಿಸಿ, ಹೆಚ್ಚಿನ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದಾಗ ಉಫಚಾರ ಫಲಿಸದೆ ದಿನಾಂಕ 06-07-2021 ರಂದು ಬೆಳಗಿನ 02-00 ಗಂಟೆಗೆ ಮರಣ ಹೊಂದಿರುತ್ತಾನೆ ವಿನಃ ನನ್ನ ಗಂಡನ ಸಾವಿನಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 09-07-2021 07:25 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ