ಅಭಿಪ್ರಾಯ / ಸಲಹೆಗಳು

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 30/2021 ಕಲಂ: 379,551 IPC.

               ದಿನಾಂಕ-06/05/2021 ರಂದು ಸಮಯ:11-45 ಗಂಟೆಯ ಸುಮಾರಿಗೆ ಕೊಡಿಯಾಲ ಹೋಸಪೇಟೆ ಗ್ರಾಮದ ವಿದ್ಯಾನಗರದ ತುಂಗಭದ್ರ ನದಿ ದಂಡೆಯ ಹತ್ತಿರ ಯಾರೋ 05 ರಿಂದ 06 ಜನರುಗಳು ತುಂಗಾಭದ್ರ ನದಿಯಿಂದ  ಅಕ್ರಮವಾಗಿ ಕಳ್ಳತನದಿಂದ  ಮರಳನ್ನು ತೆಗೆದು ತುಂಗಾಭದ್ರ ನದಿಯ ದಡದಲ್ಲಿ ಸಂಗ್ರಹ ಮಾಡುವಾಗ ಪಿ ಎಸ್ ಐ ಹಾಗೂ ಸಿಬ್ಬಂದಿ ಜನರು ಸೇರಿ ಕೆಡ್ ಮಾಡಿದ ಕಾಲಕ್ಕೆ ಆರೋಪಿತರು ಓಡಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 32/2021 ಕಲಂ: PROTECTION OF CHILDREN FROM SEXUAL OFFENCES ACT 2012 (U/s-12); 323,324,34 IPC.

           ವೇಧಾ ವೀರಭದ್ರಪ್ಪ ಗೊಣೆಮ್ಮನವರ ವಯಾ: 15 ವರ್ಷ ಸಾ||ವಿದ್ಯಾನಗರ ಹಾವೇರಿ ಇವರ ತಂದೆ-ತಾಯಿಗೆ ಕೋರ್ಟನಲ್ಲಿ ಡೈವರ್ಸ ಆಗಿದ್ದು, ಕು.ವೇದಾ ಇವಳು ದಿ: 06-05-2021 ರಂದು 11 ಗಂಟೆ ಸುಮಾರಿಗೆ ಗೌಳಿಗಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ ಪರ್ತ ಸಾಯಂಕಾಲ 6-00 ಗಂಟೆ ಸುಮಾರಿಗೆ ತಮ್ಮ ರಾಕೇಶ ಇತನೊಂದಿಗೆ ಬಸವೇಶ್ವರನಗರದ ತಮ್ಮ ಮನೆಗೆ ಬಂದಾಗ ಬಾಲಕೃಷ್ಣ ಕಲಾಲ್ ಇವನು ಸುಮಂಗಲಾ ಗೊಣೆಮ್ಮನವರ ಇವರ ಮನೆಯಲ್ಲಿ ಅನೈತಿಕವಾಗಿ ಮಲಗಿಕೊಂಡಿದ್ದನ್ನು ಕಂಡ ವೇದಾ  ಈ ರೀತಿ ಅಸಹ್ಯವಾಗಿ ನಡೆದುಕೊಳ್ಳುವುದು ಮಾಡಬೇಡಾ ಅಂತಾ ಹೇಳಿದ್ದಕ್ಕೆ ಬಾಲಕೃಷ್ಣ ಇತನು ವೇದಾ ಅಪ್ರಾಪ್ತ ಬಾಲಕಿ ಅಂತಾ ಗೊತ್ತದ್ದರು ಸಹ ಕೈ ಹಿಡಿದು ನೀನು ನನ್ನ ಸಂಗಡ ಮಲಗಿಕೊಳ್ಳು ಬಾ ಅಂತಾ ಎಳೆದಾಡಿದ್ದು, ಆಗ ಸುಮಂಗಲಾ ವೇಧಾಳಿಗೆ ಮನೆಯಲ್ಲಿದ್ದ ಲಟ್ಟಣಿಗೆಯಿಂದ ಬಲಗಡೆ ಹುಬ್ಬಿನ ಮೇಲೆ ಹೊಡೆದು ಗಾಯ ಪಡಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 11-05-2021 05:53 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ