ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:23/2021 ಮಹಿಳೆ ಕಾಣೆ.

                 ರೋಜಾ ತಂದೆ ವಿರೇಶ ರಾಗೇರ ವಯಾ: 20 ವರ್ಷಇವಳು ಮನೆಯಿಂದ  ದಿ: 02-04-2021 ರಂದು ರಾತ್ರಿ 08-15 ಗಂಟೆ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇಲ್ಲಿಯವರೆಗೂ ಮರಳಿ ಮನೆಗೆ ಬಾರದೆ ಇದ್ದಿದ್ದಕ್ಕೆ ತಮಗೆ ತಿಳಿದ ಕಡೆಯಲ್ಲಾ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲಾ ಕಾರಣ ಕಾಣೆಯಾದ ರೋಜಾ ಇವಳನ್ನು ಹುಡುಕಿಕೊಡಬೇಕೆಂದು ಕಾಣೆಯಾದವಳ ತಾಯಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:48/2021 ಕಲಂ: DOWRY PROHIBITION ACT, 1961 (U/s-3, 4) ; 302, 304B, 498A, 34 IPC.

                 ಶ್ರೀಮತಿ.ಶ್ವೇತಾ ಕೋಂ ವಿಶ್ವನಾಥ ಚಿಕ್ಕೇರಿ, ವಯಾ-23 ವರ್ಷ, ಜಾತಿ-ಹಿಂದು ಲಿಂಗವಂತ, ಉದ್ಯೋಗ-ಮನೆ ಕೆಲಸ, ಸಾ; ಅರಳೇಶ್ವರ, ತಾ.ಹಾನಗಲ್ಲ ಇವಳನ್ನು ದಿನಾಂಕ:15-06-2020 ರಂದು ಅರಳೇಶ್ವರ ಗ್ರಾಮದ ವಿಶ್ವನಾಥ ಬಸವಣ್ಣೆಪ್ಪ ಚಿಕ್ಕೇರಿ ಇವನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ಕಾಲಕ್ಕೆ ಇವನಿಗೆ ವರದಕ್ಷಣೆ ರೂಪದಲ್ಲಿ 5 ತೊಲೆ ಬಂಗಾರ ಮತ್ತು 1 ಲಕ್ಷ ನಗದು ಹಣವನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಮದುವೆ ಆದ ಸ್ವಲ್ಪ ದಿನಗಳ ಕಾಲ ಶ್ವೇತಾ ಇವಳನ್ನು  ಚೆನ್ನಾಗಿ ನೋಡಿಕೊಂಡು, ನಂತರ ಇನ್ನೂ 5 ತೊಲೆ ಬಂಗಾರ ಹಾಗೂ 1 ಲಕ್ಷ ರೂ ನಗದು ಹಣವನ್ನು ತವರು ಮನೆಯಿಂದ ತೆಗೆದುಕೊಂಡು ಭಾ ಅಂತಾ ಬೈಯುವುದು ಹೊಡೆಯುವುದು ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನ ಕೊಡುತ್ತಾ ಬಂದು ಈ ಬಗ್ಗೆ ಹಿರಿಯ ಸಮ್ಮುಖದಲ್ಲಿ ಹಲವು ಬಾರಿ ರಾಜಿ ಸಂಧಾನ ಮಾಡಿ ಕೇಳಿದ ಬಂಗಾರ ಮತ್ತು ಹಣವನ್ನು ಕೊಡಲು ಸ್ವಲ್ಪ ಕಾಲಾವಕಾಶ ತೆಗೆದು ಕೊಂಡರು ಸಹ ಮತ್ತೆ ಅದೇ ಕೃತ್ಯವನ್ನು ಮುಂದುವರೆಸಿ ವರದಕ್ಷಣೆ ಕಿರುಕುಳ ನೀಡುತ್ತಾ ಬಂದಿದ್ದು ಅಲ್ಲದೇ ದಿನಾಂಕ: 05-04-2021 ರ  ಮದ್ಯಾಹ್ನ 01-00 ಘಂಟೆಯಿಂದ 02-00 ಘಂಟೆಯ ನಡುವಿನ ಅವದಿಯಲ್ಲಿ ಶ್ವೇತಾಳ ಕತ್ತು ಹಿಸುಕಿ ಕೊಲೆ ಮಾಡಿ ಕತ್ತಿಗೆ ವೇಲನ್ನು ಬಿಗಿದು ತಮ್ಮ ಮನೆಯ ವಾಸದ ಕೋಣೆಯ ಪ್ಯಾನಿಗೆ ನೇಣು ಹಾಕಿರುವುದಾಗಿ ಉಮೇಶ ಶ್ಯಾಬಳದ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪಿರ್ಯಾದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:50/2021 ಕಲಂ: 354(D), 506, 504 IPC.

                 ನಳಿನಾಕ್ಷಿ ಬಸಯ್ಯ ಹಿರೇಮಠ ಇವರು ಹಾವೇರಿಯಲ್ಲಿ ಓದುತ್ತಿದ್ದಾಗ ನವೀನಕುಮಾರ ತಂದೆ ರಾಜಶೇಖರ ಬುಕ್ಕಶೆಟ್ಟಿ ವಯಾ : 25 ವರ್ಷ ಸಾ : ಹಾವೇರಿ ಶಿವಬಸವ ನಗರ ಎಂಬುವವನ ಪರಿಚಯವಾಗಿ ನಂತರ ಪ್ರೀತಿಸುತ್ತಾ ಬಂದಿದ್ದು ನಂತರ ನವೀನಕುಮಾರಗೆ ಇನ್ನೊಂದು ಹುಡುಗಿಯ ಜೊತೆ ಸಂಬಂದ ಇದೆ ಮತ್ತು ಅವನ ಅಕ್ರಮ ಚಟುವಟಿಕೆಗಳ ಬಗ್ಗೆ ಇತ್ತಿಚ್ಚಿಗೆ ಗೊತ್ತಾಗಿ ಅವನಿಂದ ದೂರವಾಗಿದ್ದು ಇದರಿಂದ ನವೀನಕುಮಾರ ಕೋಪಗೊಂಡು ದಿನಾಂಕ : 08-02-2021 ರಂದು ಸಂಜೆ 06.00 ಗಂಟೆಯಿಂದ  ಇಲ್ಲಿಯವರೆಗೆ ಹಿಂಬಾಲಿಸುವದು ಮತ್ತು ಒತ್ತಾಯ ಪೂರ್ವಕವಾಗಿ ನನ್ನನ್ನು ಮದುವೆ ಆಗು ಅಂತಾ ಪಿಡಿಸುವದು ನಿನ್ನ ಪೋಟೊಗಳನ್ನು ಸೋಶಿಯಲ ಮಿಡಿಯಾದಲ್ಲಿ ಹಾಕಿ ನಿನ್ನ ಮಾನ ಹರಾಜು ಹಾಕುತ್ತೇನೆ ಅಂತಾ ಅವ್ಯಾಚ್ಚವಾಗಿ ಬೈದಾಡುವದು, ಜೀವದ ಬೆದರಿಕೆ ಹಾಕುವದು ಮತ್ತು ನಳಿನಾಕ್ಷಿ ಇವರ ಮನೆಯವರಿಗೆ ಅಹ ಅವ್ಯಾಚ್ಚವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:06/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                 ನಾಗರಾಜ ತಂದೆ ಪುಟ್ಟಪ್ಪ ಹೆಗಡೆ. ವಯಾ:46 ವರ್ಷ ಜಾತಿ: ಹಿಂದೂ ಕುರುಬರ. ಉದ್ಯೋಗ:ಕೂಲಿ ಕೆಲಸ ಸಾ|| ನಿಶೀಮ್ ಆಲದಕಟ್ಟಿ ತಾ||ಹಾನಗಲ್ಲ. ಇತನು ಕಳೆದ 21 ವರ್ಷಗಳ ಹಿಂದೆ ಹಾನಗಲ್ಲ ತಾಲೂಕ ಗೆಜ್ಜಿಹಳ್ಳಿ ಗ್ರಾಮದ ಶ್ರೀ.ಅಡವೇಪ್ಪ ಅಡವೆಣ್ಣನವರ(ಸಂಗೂರ) ಇವರ ಮಗಳಾದ ಶ್ರೀಮತಿ.ಶೀಲಾ ಇವಳನ್ನು ಮದುವೆ ಮಾಡಿಕೊಂಡಿದ್ದು ಇತ್ತು. ಇತನು ಮದುವೆ ಆದಾಗಿನಿಂದ ಚನ್ನಾಗಿ ಸಂಸಾರ ಮಾಡಿಕೊಂಡು ಬಂದಿದ್ದು ಆದರೆ ಮದುವೆ ಆಗಿ 8 ವರ್ಷಗಳ ನಂತರ ಸರಾಯಿ ಸೇವನೆ ಮಾಡುವ ಚಟವನ್ನು ರೂಡಿಸಿಕೊಂಡು ಪ್ರತಿ ದಿನ ಸರಾಯಿ ಸೇವನೆ ಮಾಡುತ್ತಾ ಮನೆಯಲ್ಲಿ ತನ್ನ ಹೆಂಡತಿ ಜೋತೆ ತಂಟೆ ತಕರಾರು ಮಾಡಿಕೊಂಡು ಬಂದಿದ್ದು ಇದರಿಂದ ಗಂಡ ಹೆಂಡತಿಯ ಮಧ್ಯ ಗಲಾಟೆ ಆಗಿ ಹೆಂಡತಿ ತನ್ನ ತವರು ಮನೆಗೆ ಹೋಗಿ ವಾಸವಾಗಿದ್ದು, ತನ್ನ ತಾಯಿಯ ಮನೆಯಲ್ಲಿದ್ದನು. ಆದರೆ ದಿನಾಂಕ 06-04-2021 ರಂದು ಮುಂಜಾನೆ 02-30 ಗಂಟೆಯಿಂದ 07-00 ಗಂಟೆಯ ನಡುವಿನ ಅವದಿಯಲ್ಲಿ  ನಿಶೀಮ್ ಆಲದಕಟ್ಟಿ ಗ್ರಾಮದ ಅಪ್ಪಣ್ಣ ಕುಲಕರ್ಣೆ ಇವರ ಜಮೀನದಲ್ಲಿ ಬೇವಿನ ಮರಕ್ಕೆ ವೈರ್ ಹಗ್ಗದಿಂದ ಉರುಲು ಹಾಕಿಕೊಂಡು ಮರಣ ಹೊಂದಿದ್ದು ಮೃತನ ಮರಣದಲ್ಲಿ ಸಂಶಯ ಇರುತ್ತದೆ ಅಂತಾ ಲಕ್ಷ್ಮವ್ವ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                 ದವಾಲಸಾಬ ಮಾಬುಸಾಬ ಬೊಚನಹಳ್ಳಿ ವಯಾ:38 ಸಾ|| ತಿಗರಿ ತಾ|| ಕೊಪ್ಪಳ ಇವರು ಇತ್ತಿಚ್ಚಿಗೆ ವಿಪರೀತ ಸರಾಯಿ ಕುಡಿಯುವ ಚಟವನ್ನು ಕಲಿತಿದ್ದು ಅದಕ್ಕಾಗಿ ಅಲ್ಲಲ್ಲಿ ಸಣ್ಣ ಪುಟ್ಟ ಸಾಲ ಮಾಡಿಕೊಂಡಿದ್ದು ಸಾಲ ತಿರಿಸುವ ಸಂಬಂದ ಶಿಗ್ಗಾಂವ ತಾಲೂಕ ಖುರ್ಸಾಪೂರ ಗ್ರಾಮದ ಮಾಯಪ್ಪ ಅಣ್ಣಪ್ಪ ಕಿಲಾರಿ ಎಂಬುವವರ ಹತ್ತಿರ ಕುರಿ ಕಾಯುವ ಕೆಲಸಕ್ಕೆ ಇದ್ದ ದಿನಾಂಕ : 05-04-2021 ರಂದು 11.00 ಗಂಟೆ ಸುಮಾರಿಗೆ ಸರಾಯಿ ಕುಡಿದು ಊಟ ಮಾಡಿ ಮಲಗುತ್ತೇನೆ ಅಂತಾ ಹೇಳಿ ಹೋದವನು ದಿನಾಂಕ : 06-04-2021 ರಂದು 11.00 ಗಂಟೆ ನಡುವಿನಲ್ಲಿ ಸರಾಯಿ ಕುಡಿದ ನಶೆಯಲ್ಲಿ ತನ್ನಷ್ಟಕ್ಕೆ ತಾನೇ ಮನಸ್ಸಿಗೆ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತಾನು ತೊಟ್ಟುಕೊಂಡಿದ್ದ ಲುಂಗಿಯ ಸಹಾಯದಿಂದ ಜಾಲಿಯ ಮರಕ್ಕೆ ನೇಣು ಹಾಕಿ ಕೊಂಡು ಮರಣ ಹೊಂದಿದ್ದು ಅವನ ಮರಣದಲ್ಲಿ ಯಾವುದೇ  ಸಂಶಯವಿರುದಿಲ್ಲಅಂತಾ ಪೀರಸಾಬ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:08/2021 ವಿಷ ಸೇವಿಸಿ ಯುವತಿ ಆತ್ಮಹತ್ಯೆ.

                 ಚೈತ್ರಾ ತಂದೆ ರಾಮಪ್ಪ  ಗೋಣೆರ, ವಯಾ: 17 ವರ್ಷ, ಉದ್ಯೋಗ: ಮನೆ ಕೆಲಸ, ಜಾತಿ: ಹಿಂದೂ ವಾಲ್ಮೀಕಿ, ಸಾ: ಆಲದಗೇರಿ, ತಾ: ಹಿರೇಕೆರೂರ, ಜಿ: ಹಾವೇರಿ. ಇವಳಿಗೆ ಈಗ ಸುಮಾರು 01 ವರ್ಷದಿಂದ ಹೊಟ್ಟೆ ನೋವಿನ ತೊಂದರೆ ಇದ್ದು ಎಷ್ಟೆ ಬಾರಿ ನಾಟಿ ಔಷದ ಕೊಡಿಸಿದರೂ ಸಹ ಗುಣವಾಗದೆ ತೊಂದರೆ ಪಡುತ್ತಿದ್ದಳು, ಈ ಕಾರಣಕ್ಕೆ ಹೊಟ್ಟೆ ನೋವಿನ ಬಾದೆಯನ್ನು ತಾಳಲಾರದೆ ದಿನಾಂಕ; 06-04-2021 ರಂದು ಬೆಳಿಗಿನ ಜಾವ 00-30 ಗಂಟೆಯ ಸುಮಾರಿಗೆ ಆಲದಗೇರೆ ಗ್ರಾಮದ ವಾಸದ ಮನೆಯಲ್ಲಿ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವನೆ ಮಾಡಿ ಉಪಚಾರ ಕುರಿತು ಬ್ಯಾಡಗಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಉಪಚಾರ ಪಡೆಯುವ ಕಾಲಕ್ಕೆ ಉಪಚಾರ ಫಲಿಸದೇ  ಬ್ಯಾಡಗಿ ಸರಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ ಈ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತಳ ತಂದೆಯು ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:09/2021 ಮಹಿಳೆ ಸಾವು.

                 ರೇಣುಕಾ ಕೊಂ ಮನೋಹರ ತಳಕಲ್ಲ, ವಯಾ-48 ವರ್ಷ ಸಾ; ಚಿಕ್ಕೇರೂರ ಇವರಿಗೆ ದಿನಾಂಕ 05-04-2021 ರಂದು ಮದ್ಯಾಹ್ನ 1-00 ಗಂಟೆಗೆ ಚಿಕ್ಕೇರೂರ ಸರಕಾರಿ ಆಸ್ಪತ್ರೆಯಲ್ಲಿ ಕೊವಿಡ್ ವ್ಯಾಕ್ಸಿನ್ ಹಾಕಿಸಿಕೊಂಡು ಬಂದು ನಂತರ ರಾತ್ರಿ 10-00 ಗಂಟೆ ಸುಮಾರಿಗೆ ಚಳಿ ಮತ್ತು ವಾಂತಿ ಆಗಿದ್ದು ಅಲ್ಲದೆ ದಿನಾಂಕ; 06-04-2021 ರಂದು ಬೆಳಿಗ್ಗೆ ವಾಂತಿ ಮತ್ತು ಬೇದಿ ಆಗಿ ಸುಮಾರು 10-00 ಗಂಟೆಗೆ ಮಾತನಾಡದೆ ಪ್ರಜ್ಞೆ ತಪ್ಪಿದ್ದು ನಂತರ ಹೆಚ್ಚಿನ ಉಪಚಾರಕ್ಕೆ ಹಿರೇರೂರ ಸರಕಾರಿ ಆಸ್ಪತ್ರೆಗೆ ವರದಿಗಾರನ ಹೆಂಡತಿಯನ್ನು ಕರೆದುಕೊಂಡು ಹೋಗಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿದ್ದು ವೈದ್ಯರು 11-30 ಗಂಟೆ ಸುಮಾರಿಗೆ ಮೃತ ಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 09-04-2021 06:06 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ