ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:14/2021 ಮಹಿಳೆ ಕಾಣೆ.

                 ಪ್ರಿಯಾಂಕ ತಂದೆ ಹೊನ್ನಪ್ಪ ಹರಿಜನ, ವಯಸ್ಸು 15 ವರ್ಷ 10 ತಿಂಗಳು ಇವಳನ್ನು ದಿನಾಂಕ: 09-02-2021 ರಂದು ಅನಾರೋಗ್ಯದ ಕಾರಣ ಅವಳನ್ನು ಮನೆಯಲ್ಲಿ ಬಿಟ್ಟು  ವರದಿಗಾರರು ಮುಂಜಾನೆ 6-00 ಗಂಟೆಗೆ ತನ್ನ ತಂದೆ-ತಾಯಿಯೊಂದಿಗೆ ಬ್ಯಾಡಗಿಗೆ ಮೆನಸಿನಕಾಯಿ ತುಂಬು ತೆಗೆಯುವ ಕೂಲಿಕೆಲಸಕ್ಕೆ ಹೋಗಿದ್ದಾಗ ವಿನಾಯಕ ಇತನು ಸಾಯಂಕಾಲ 5-00 ಗಂಟೆ ಸುಮಾರಿಗೆ ಪೋನ್ ಮಾಡಿ ಅಕ್ಕ ಪ್ರಿಯಾಂಕ ಮನೆಯಲ್ಲಿ ಕಾಣುತ್ತಿಲ್ಲ ಅಂತಾ ಹೇಳಿದ್ದಕ್ಕೆ ತನ್ನ ತಂದೆ-ತಾಯಿಯೊಂದಿಗೆ ತಮ್ಮ ಊರಿಗೆ ಬಂದು ತಮ್ಮ ಮಗಳನ್ನು ಊರಲ್ಲಿ ಹಾಗೂ ಸಂಬಂಧಿಕರ ಊರುಗಳಲ್ಲಿ ವಿಚಾರಿಸಿ ಎಲ್ಲಿಯೂ ಬಂದಿರುವುದಿಲ್ಲ ಅಂತಾ ತಿಳಿಸಿದ್ದು, ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋದವಳು ಮರಳಿ ಮನೆಗೆ ಬಾರದೆ ಇದ್ದುದ್ದರಿಂದ ಅವಳನ್ನು ಹುಡಕಾಡಿದ್ದು ಸಿಕ್ಕಿರುವುದಿಲ್ಲಾ ಮತ್ತು ಅವಳು ಅಲ್ಪವಯಿ ಇದ್ದುದ್ದರಿಂದ ಅವಳನ್ನು ಯಾರೋ,ಯಾವದೋ ಉದ್ದೇಶಕ್ಕಾಗಿ ಆಸೆ ಮತ್ತು ಆಮಿಷ ತೋರಿಸಿ ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ಲಕ್ಷ್ಮವ್ವ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಸಿಇಎನ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:18/2021 ಕಲಂ: INFORMATION TECHNOLO GY  ACT 2008 (U/s-66(C),66(D)); 420 IPC.

                 ರಮೇಶ ಕೃಷ್ಣಪ್ಪ ಕೆ ಇವರ ಮೊಬೈಲ್ ಗೆ ಮೋಬೈಲ್ ನಂ. 8583029569 ನಿಂದ ಪೋನ್ ಮಾಡಿ, ನಿಮಗೆ Rock Dwayne Poverty Eradication ನಿಂದ 12,18,195/- ರೂಪಾಯಿಗಳ ಲಾಟರಿ ಹಣ ಬಂದಿದೆ ಅಂತಾ ನಂಬಿಸಿ, ಲಾಟರಿ ಹಣವನ್ನು ಫಿರ್ಯಾದುದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಟ್ಯಾಕ್ಸ್ ಚಾರ್ಜ ಅಂತಾ ರೂ. 3,295/-ಗಳನ್ನು, ಜಿಎಸ್ಟಿ ಚಾರ್ಜ ಅಂತಾ ರೂ. 18,600/-ಗಳನ್ನು ತನ್ನ Canara Bank A/C No. 5566101009250 ಗೆ ಹಾಗೂ ಆರ್.ಟಿ.ಡಿ.ಎಸ್. ಚಾರ್ಜ ಅಂತಾ ರೂ. 37,299/- ಗಳನ್ನು, ಎನ್..ಸಿ. ಚಾರ್ಜ ಅಂತಾ ರೂ. 48,465/-ಗಳನ್ನು ಮತ್ತು ಆರ್.ಬಿ.. ಬ್ಯಾಂಕ್ ಸೆಕ್ಯೂರಿಟಿ ಚಾರ್ಜ ಅಂತಾ ರೂ. 28,450/- ಗಳನ್ನು ತನ್ನ Bank of India A/C No. 910110110006210 ಗೆ, ಹೀಗೆ ಒಟ್ಟು ರೂ. 1,36,109/- ಗಳ ಹಣವನ್ನು ಹಾಕಿಸಿಕೊಂಡು ಮೋಸಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೇಕೆರೂರ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:24/2021 ಮಹಿಳೆ ಕಾಣೆ.

                 ಕು: ಪ್ರೀಯಾ ತಂದೆ ಮೈಲಾರಪ್ಪ ಗೊರವರ  ವಯಾ: 17 ವರ್ಷ 09 ತಿಂಗಳು, ಜಾತಿ: ಹಿಂದೂ ವಾಲ್ಮೀಕಿ, ಉದ್ಯೋಗ: ವಿದ್ಯಾಬ್ಯಾಸ, ಸಾ: ಹಿರೇಯಡಚಿ ತಾ; ರಟ್ಟಿಹಳ್ಳಿ ಇವಳು ದಿನಾಂಕ: 23/02/2021 ರಂದು ಮುಂಜಾನೆ 09-00 ಗಂಟೆಗೆ  ಹಿರೇಯಡಚಿ ಗ್ರಾಮದ ವಾಸದ ಮನೆಯಿಂದ ತಾವರಗಿ ಗ್ರಾಮದ ಪ್ರೌಡಶಾಲೆಗೆ ಅಂತಾ ಹೋದವಳಿಗೆ ಗಿರೀಶ ಗೋಣೆಪ್ಪ ಮಾದರ ಇತನು ಪ್ರೀಯಾ ಇವಳು ಅಪ್ರಾಪ್ತ ವಯಸ್ಕಳು ಅಂತಾ ಗೊತ್ತಿದ್ದರು ಅವಳಿಗೆ ಬಟ್ಟೆ, ಬಂಗಾರ ಹಣದ ಆಶೆ ಆಮಿಷ್ಯ ತೋರಿಸಿ ಯಾವುದೋ ಉದ್ದೇಶದಿಂದ ಅವಳಿಗೆ ಅಪಹರಣ ಮಾಡಿಕೊಂಡು ಹೋದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:28/2021 ಯುವಕ ಕಾಣೆ.

                 ಗಣೇಶ ರೇವಣಸಿದ್ದಪ್ಪ ಬೆಸ್ತರ್ ವಯಾ: 23 ಸಾ|| ರಾಣೆಬೇನ್ನೂರ  ಇವನು ದಿನಾಂಕ: 02-03-2021 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ಮನೆಯಿಂದ ಸಂಬಂಧಿಕರ ಅಟೋಕ್ಕೆ ಸಿಲೇಂಡರ ಹಾಕಿಸಿಕೊಂಡು ಬರುತ್ತೇನೆ ಅಂತಾ ಹೇಳಿ ಅಟೋ ಸಮೇತ ಹೋದವನು ತಿರುಗಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವನನ್ನು ಹುಡುಕಿ ಕೊಡುವಂತೆ  ದುರುಗಮ್ಮ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣದ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:05/2021 ವ್ಯಕ್ತಿ ಸಾವು.

                 ಶೇಕಪ್ಪ ತಂದೆ ಗುಡ್ಡಪ್ಪ ಮುಳಗುಂದ ವಯಾ: 58 ವರ್ಷ, ಜಾತಿ: ಹಿಂದೂ-ಲಿಂಗಾಯತ ವೃತ್ತಿ: ಒಕ್ಕಲುತನ. ಸಾ: ಕೋಟಿಹಾಳ ಇವನು ದಿನಾಂಕ: 03-03-2021 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ತಮ್ಮ ಬಾಬತ್ ದನದ ಮನೆಯಲ್ಲಿ ತಮ್ಮ ಎತ್ತುಗಳಿಗೆ ನೀರು ಕುಡಿಸಿ ಮೇವು ಹಾಕುತ್ತಿರುವಾಗ ಒಂದು ಎತ್ತು ಹಗ್ಗವನ್ನು ಹರಿದುಕೊಂಡು ಶೇಖಪ್ಪನಿಗೆ ಕೊಂಬಿನಿಂದ ತಿವಿದು ಎತ್ತಿ ಒಗೆದು ಸಿಕ್ಕ ಸಿಕ್ಕಲ್ಲಿ ಕೊಂಬಿನಿಂದ ಹಾಯ್ದು ರಕ್ತಗಾಯ ಪೆಟ್ಟುಗೊಳಿಸಿದ್ದು ಅವನಿಗೆ ರಾಣೇಬೆನ್ನೂರದ ಸಾಯಿ ಆಸ್ಪತ್ರೆಯಲ್ಲಿ ಪ್ರಥಮೋಪಚಾರ ಕೊಡಿಸಿ ಹೆಚ್ಚಿನ ಉಪಚಾರಕ್ಕೆ ಎನ್ನಪೋಯಾ ಆಸ್ಪತ್ರೆ ಮಂಗಳೂರಿಗೆ ಒಯ್ದು ದಾಖಲಿಸಿದಾಗ ಉಪಚಾರ ಫಲಿಸದೇ ದಿನಾಂಕ: 05-03-2021 ರ ಬೆಳಗಿನ 4-15 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ ಮೃತನ ಪತ್ನಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 08-03-2021 06:53 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ