ಅಭಿಪ್ರಾಯ / ಸಲಹೆಗಳು

 ಹಾವೇರಿ ಸಿ ಇ ಎನ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:40/2021 ಕಲಂ:INFORMATION TECHNOLOGY ACT 2008 (U/s-66(C),66(D)); IPC 1860 (U/s-419,420) IPC.

                ದಿನಾಂಕ: 04-06-2021 ಬೆಳಿಗ್ಗೆ ಸುಮಾರು 11-00 ಗಂಟೆಯಿಂದ ಮದ್ಯಾಹ್ನ ಸುಮಾರು 1:40 ಗಂಟೆವರೆಗಿನ ಅವಧಿಯಲ್ಲಿ ಆನ್ಲೈನ್ ಶಾಪಕ್ಲ್ಯೂಸ್ನಿಂದ ಅಂತಾ ಮಹೇಶ ಅಶೋಕ ದೇಸಳ್ಳಿ ಸಾ|| ಯತ್ತಿನಹಳ್ಳಿ ಇವರಿಗೆ ಪೋನ್ ಮಾಡಿ ನಿಮಗೆ 14 ಲಕ್ಷ 85 ಸಾವಿರ ಪ್ರೈಜ್ ಹಣ ಬಂದಿದೆ ಅಂತಾ ನಂಬಿಸಿ, ಪ್ರೈಜ್ ಹಣವನ್ನು ಖಾತೆಗೆ ಜಮಾ ಮಾಡಲು ರಿಜಿಸ್ಟ್ರೇಶನ್ ಫೀ ಅಂತಾ ರೂ. 7,400/- ಗಳನ್ನು, ಚೆಕ್ ವೆರಿಫಿಕೇಶನ್ ಸಲುವಾಗಿ ರೂ. 10,000/- ಗಳನ್ನು ಅವನ ಪೋನ್ ನಂ. 7631128090 ಗೆ, ರೂ. 12,200/- ಗಳನ್ನು ಅವನ SBI Bank A/c No. 20398169306 ಗೆ, ಕ್ಯಾಶ್ ಫಾರ್ವಡಿಂಗ್ ಚಾರ್ಜಸ್ ಅಂತಾ ಅವನ SBI Bank A/c No. 31094088011 ಗೆ ರೂ. 32,400/- ಗಳನ್ನು ಹಾಗೂ ಜಿಎಸ್ಟಿ ಚಾರ್ಜಸ್ ಅಂತಾ ರೂ. 29,500/- ಗಳನ್ನು, ಹೀಗೆ ಒಟ್ಟು ರೂ. 91,500/- ಗಳನ್ನು India Post Payments Bank A/c No. 023910000751ನಿಂದ ಹಾಕಿಸಿಕೊಂಡು ಮೋಸ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:10/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                  ಶ್ರೀ.ಬಸಪ್ಪ ತಂದೆ ಚನ್ನಪ್ಪ ಎಮ್ಮೇರ ವಯಾ:84 ವರ್ಷ ಜಾತಿ:ಹಿಂದೂ ಲಿಂಗವಂತ ಉದ್ಯೋಗ:ಶೇತ್ಕಿ ಕೆಲಸ ಸಾ||ಕಿರವಾಡಿ ತಾ.ಹಾನಗಲ್ಲ ಇವರ ಹೆಂಡತಿ ಕಳೆದ 15 ದಿನಗಳ ಹಿಂದೆ ಮರಣ ಹೊಂದಿದ್ದರಿಂದ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ : 02/06/2021 ರಂದು ರಾತ್ರಿ 02 ಘಂಟೆ ಸುಮಾರಿಗೆ ಮನೆಯಲ್ಲಿ ಯಾವುದೋ ವಿಷದ ಔಷದಿಯನ್ನು ಸೇವನೆ ಮಾಡಿ ಚಿಕೀತ್ಸೆಗಾಗಿ ತಿಳುವಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕೀತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಉಪಚಾರ ಕೊಡುಸುತ್ತಿರುವಾಗ ಉಪಚಾರ ಪಲಿಸದೆ ದಿನಾಂಕ : 04/06/2021 ರಂದು ಮುಂಜಾನೆ 06-30 ಘಂಟೆ ಸುಮಾರಿಗೆ ಮರಣ ಹೊಂದಿದ್ದು ಮೃತನ ಮರಣದಲ್ಲಿ ಯಾವುದೆ ಸಂಶಯ ವಗೈರೆ ಇರುವುದಿಲ್ಲ ಅಂತಾ ಸತಿಶ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 05-06-2021 05:24 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ