ಅಭಿಪ್ರಾಯ / ಸಲಹೆಗಳು

ಬಂಕಾಪೂರ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:36/2021 ಕಲಂ: INDIAN MOTOR VEHICLES ACT, 1988 (U/s-134(A&B),187); 279,304(A) IPC.

                 ದಿನಾಂಕ: 04/04/2021 ರಂದು ಸಂಜೆ 7-00 ಗಂಟೆ ಸುಮಾರಿಗೆ ಲಾರಿ ನಂ: ಕೆಎ25 ಬಿ9559 ನೇದ್ದನ್ನು ಬಂಕಾಪುರ ಕಡೆಯಿಂದ ಸವಣೂರ ಕಡೆಗೆ ಹಳವಳ್ಳಿಯವರ ಹೊಲದ ಹತ್ತಿರ ರಸ್ತೆ ಮೇಲೆ ಜೋರಾಗಿ ಮತ್ತು ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಲಾರಿಯನ್ನು ಚಲಾಯಿಸಿಕೊಂಡು ಹೋಗಿ ಮುಂದೆ ಸವಣೂರ ಕಡೆಗೆ ಹೋಗುತ್ತಿದ್ದ ವಿನಾಯಕ ಲಕ್ಷ್ಮಣ ತಿರುಮಲೆ ಇವನ ಮೋಟಾರ್ ಸೈಕಲ್ ನಂ: ಕೆಎ27 ಇಕ್ಯೂ2799 ನೇದ್ದಕ್ಕೆ ಡಿಕ್ಕಿ ಅಪಘಾತ ಪಡಿಸಿ ಅವನಿಗೆ ತೀವ್ರ ಸ್ವರೂಪದ ಗಾಯ ಪಡಿಸಿ ಸ್ಥಳದಲ್ಲಿ ಮರಣವನ್ನುಂಟು ಪಡಿಸಿ ಮೃತನಿಗೆ ಆಸ್ಪತ್ರೆಗೆ  ಉಪಚಾರಕ್ಕೆ ಕರೆದುಕೊಂಡು ಹೋಗದೆ ಅಪಘಾತದ ಮಾಹಿತಿಯನ್ನು ಪೊಲೀಸ್ ಠಾಣೆಗೆ ತಿಳಿಸಿದೆ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:48/2021 ಕಲಂ: 380,454 IPC.

                 ಶಾಂತರಾಜ ಶಂಕ್ರಪ್ಪ ಸಾವಕ್ಕನವರ ಸಾ ಶಿಗ್ಗಾಂವ ಜಯನಗರದ ವಡ್ಡರ ಓಣಿಯಲ್ಲಿರುವ ಇವರ ಬಾಡಿಗೆ ಮನೆಯಲ್ಲಿ  ದಿನಾಂಕಃ03-04-2021 ರಂದು ಮುಂಜಾನೆ 10.00 ಗಂಟೆಯಿಂದ ಮದ್ಯಾಹ್ನ 12.30 ಗಂಟೆಯ ನಡುವಿನ ಅವದಿಯಲ್ಲಿ  ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲಕ್ಕೆ ಹಾಕಿದ ಕೀಲಿಯನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಕದ ತೆಗೆದು  ಒಳಹೊಕ್ಕು ಮನೆಯ ಟ್ರಜೇರಿಯ ಬಾಗಿಲ ಮುರಿದು ತೆಗದು ಟ್ರಜೇರಿಯಲ್ಲಿದ್ದ  1) ಒಂದು ಬಂಗಾರದ ಮಾಂಗಲ್ಯ ಚೈನ 4 ತೊಲೆಯದ್ದು ಅ:ಕಿ 120000/- 2) ಒಂದು ಬಂಗಾರದ ಅವಲಕ್ಕಿ ಸರ   2 ತೊಲೆಯದ್ದು ಅ:ಕಿ 60000/- 3) ಒಂದು ಬಂಗಾರದ ನಕ್ಲೇಸ್ 11/2 ತೊಲೆಯದ್ದು ಅ:ಕಿ 45000/- 4) ಒಂದು ಬಂಗಾರದ ಚೈನ  11/2 ತೊಲೆಯದ್ದು ಅ:ಕಿ 45000/-  5) ನಾಲ್ಕು ಬಂಗಾದ ಬಳೆಗಳು 4 ತೊಲೆಯದ್ದು ಅ:ಕಿ 120000/- 6) ನಾಲ್ಕು ಬಂಗಾರ ಉಂಗುರುಗಳು ಪ್ರತಿಯೊಂದು ½ ತೊಲೆಯದ್ದುಅ:ಕಿ 60000/- 7) ಒಂದು ಬಂಗಾರದ ಗುಂಡಿನ ಸರ 11/2 ತೊಲೆಯದ್ದು ಅ:ಕಿ 45000/- 8) ಒಂದು ಜೊತೆ ಝುಮಕಿ ಬೆಂಡವಾಲಿ 11/2 ತೊಲೆಯದ್ದು ಅ:ಕಿ 45000/- 9) ಒಂದು ಜೊತೆ ಲಕ್ಷ್ಮೀ ಬೆಂಡವಾಲಿ 1/2 ತೊಲೆಯದ್ದು ಅ:ಕಿ 15000/- 10) ಬಂಗಾರದ ಬಟನ ಬೆಂಡವಾಲಿ, ಕಿವಿ ಎಳೆ, ನೋಸ ರಿಂಗ, ತಾಳಿ ಗುಂಡು 3 ಜೊತೆ, ಕಿವಿ ರಿಂಗ ಇವುಗಳಲ್ಲವ ತೂಕ 1 ತೊಲೆ ಅ:ಕಿ 30.000/-  11) ಬೆಳ್ಳಿಯ ಎರಡು ಜೊತೆ ಕಾಲಚೈನು, 2 ಲಿಂಗದ ಕಾಯಿ ಹಾಗೂ ಇತರೇ  ಬೆಳ್ಳಿಯ ಸಾಮಾನುಗಳು 5 ತೊಲೆ ಅ:ಕಿ 3000/- 12) ನಗದು ಹಣ 10.000/- ಹೀಗೆ ಒಟ್ಟು 5.98.000=00 ರೂ ಬಂಗಾರ ಬೆಳ್ಳಿ ಸಾಮಾನುಗಳು ಮತ್ತು ನಗದು ಹಣ ಸಮೇತ ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:64/2021 ಕಲಂ: INDIAN MOTOR VEHICLES ACT, 1988 (U/s-134(A&B),187); 279,304(A) IPC.

                 ದಿನಾಂಕಃ04/04/2021 ರಂದು ಬೆಳಗಿನ ಜಾವಃ02-00 ಗಂಟೆಯಿಂದ 03-30 ಗಂಟೆಯ ನಡುವಿನ ಅವಧಿಯಲ್ಲಿ ಹಾನಗಲ್ಲ ಶಿರಸಿ ರಸ್ತೆಯ ಮೇಲೆ ಆಸೀಮ್ ತಂದೆ ಉಸ್ಮಾನಸಾಬ ಚಂದಾವರ ಈತನು ತನ್ನ ಬಾಬತ್ ಹೊಂಡಾ ಸ್ಕೂಟಿ ಮೋಟಾರ್ ಸೈಕಲ್ ನಂಬರಃಕೆಎ-31/ವೈ-5599 ನೇದ್ದರ ಹಿಂದೆ ಮಹ್ಮದಜಾಕೀರ ತಂದೆ ಜಿಯಾವುಲ್ಲಾ ಆಲೂರ ಈತನಿಗೆ ಮೋಟಾರ್ ಸೈಕಲ್ ಹಿಂದೆ ಹತ್ತಿಸಿಕೊಂಡು ಹಾನಗಲ್ಲ ಕಡೆಯಿಂದ ಶಿರಸಿ ಕಡೆಗೆ ಬರುತ್ತಿದ್ದಾಗ ಎದುರಿಗೆ ಶಿರಸಿ ಕಡೆಯಿಂದ ಹಾನಗಲ್ಲ ಕಡೆಗೆ ಯಾವುದೋ ಒಂದು ವಾಹನದ ಚಾಲಕನು ತಾನು ನಡೆಸುತ್ತಿದ್ದ ವಾಹನವನ್ನು ಅತೀ ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಆಸೀಮ್ ಚಂದಾವರ ಈತನು ಚಲಾಯಿಸುತ್ತಿದ್ದ ಹೊಂಡಾ ಸ್ಕೂಟಿ ಮೋಟಾರ್ ಸೈಕಲ್ಗೆ ಡಿಕ್ಕಿಪಡಿಸಿ ಅಪಘಾತಪಡಿಸಿ ಎರೆಡೂ ಜನರಿಗೆ ತಲೆಗೆ, ಮುಖಕ್ಕೆ ಭಾರಿ ಸ್ವರೂಪದ ರಕ್ತಗಾಯಪಡಿಸಿ ಆಸೀಮ್ ಚಂದಾವರ ಹಾಗೂ ಮಹ್ಮದಜಾಕೀರ ಈತನಿಗೆ ಸ್ಥಳದಲ್ಲಿಯೇ ಮರಣಹೊಂದುವಂತೆ ಮಾಡಿ ಈ ವಿಷಯವನ್ನು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸದೇ ಗಾಯಾಳುಗಳನ್ನು ಉಪಚರಿಸದೇ ಹಾಗೇ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:12/2021 ಬಾಲಕರು ಸಾವು.

                       ಅಹ್ಮದರಜಾ  ತಂದೆ ಜಾಫರಸಾಬ ಅಂಚಿ ವಯಾ:16 ವರ್ಷ ಜಾತಿ: ಮುಸ್ಲಿಂ, ಉದ್ಯೋಗ:ವಿದ್ಯಾರ್ಥಿಸಾ:ಮಂತಗಿ  ಹಾಗೂ ಮಂತಗಿ ಗ್ರಾಮದ ಮಹ್ಮದಸಾಹೀಲ್ ತಂದೆ ಮಖಬೂಲಹ್ಮದ ಡೊಂಗ್ರಿ ವಯಾ: 16 ವರ್ಷ ಜಾತಿ:ಮುಸ್ಲಿಂ, ಉದ್ಯೋಗ:ವಿದ್ಯಾರ್ಥಿ ಸಾ: ಮಂತಗಿ ಹಾಗೂ ಅಖ್ತರ ರಜಾಖಾನ್ ತಂದೆ ಹಜರತಖಾನ್ ಯಳವಟ್ಟಿ ವಯಾ: 15 ವರ್ಷ ಜಾತಿ:ಮುಸ್ಲಿಂ, ಉದ್ಯೋಗ:ವಿದ್ಯಾರ್ಥಿ ಸಾ: ಮಂತಗಿ ಇವರು ದಿನಾಂಕಃ-04/04/2021 ರಂದು ಮುಂಜಾನೆ 10-30 ಗಂಟೆಯಿಂದಾ ದಿ:4/4/2021 ಮದ್ಯಾಹ್ನ 12-00 ಗಂಟೆಯ ನಡುವಿನ ಅವಧಿಯಲ್ಲಿ  ಮಂತಗಿ ಗ್ರಾಮದ  ತಟ್ಟಿಕೆರೆಯ ನೀರಿನಲ್ಲಿ ಆಟ ಆಡುತ್ತಾ ಈಜಾಡುತ್ತಿರುವಾಗ ಆಕಸ್ಮಿಕವಾಗಿ ಈಜು ಬಾರದೇ  ನೀರಿನಲ್ಲಿ ಮುಳುಗಿ  ಮರಣ ಹೊಂದಿದ್ದು ಸದರಿಯವರ ಮರಣದಲ್ಲಿ  ಬೇರೆ ಯಾವುದೇ ಸಂಶಯ ಇರುವುದಿಲ್ಲ ಅಂತಾ  ಜಪರಸಾಬ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 07-04-2021 12:09 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ