ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:13/2021 ಮಹಿಳೆ ಕಾಣೆ.

                 ಶಿವಲೀಲಾ ತಂದೆ ಕುಮಾರಸ್ವಾಮಿ ಹಿರೇಮಠ, ವಯಸ್ಸು 13 ವರ್ಷ 06 ತಿಂಗಳು ಇವಳು ದಿನಾಂಕ: 03-03-2021 ರಂದು  ಮುಂಜಾನೆ 09-00 ಗಂಟೆಗೆ ಶಿವಲೀಲಾ ಇವಳು ಮನೆಯಲ್ಲಿ ಹೈಸ್ಕೂಲಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು  ಸಾಯಂಕಾಲ 5-00 ಗಂಟೆಯಾದರೂ ಮರಳಿ ಮನೆಗೆ ಬಾರದೆ ಇದ್ದುದ್ದರಿಂದ ಅವಳನ್ನು ತಮಗೆ ತಿಳಿದ ಎಲ್ಲಾಕಡೆ ಹುಡಕಾಡಿದ್ದು ಸಿಕ್ಕಿರುವುದಿಲ್ಲಾ ಮತ್ತು ಅವಳು ಅಲ್ಪವಯಿ ಇದ್ದುದ್ದರಿಂದ ಅವಳನ್ನು ಯಾರೋ,ಯಾವದೋ ಉದ್ದೇಶಕ್ಕಾಗಿ ಆಸೆ ಮತ್ತು ಆಮಿಷ ತೋರಿಸಿ ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ಸಂಶಯವಿದ್ದು ಈ ಕುರಿತು ತಮ್ಮ ಮೊಮ್ಮಗಳನ್ನು ಹುಡುಕಿಕೊಡಬೇಕೆಂದು ಶಿದ್ದಲಿಂಗಯ್ಯ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಶಹವರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:22/2021 ಕಲಂ: 454, 457, 380 IPC.

                 ದಿನಾಂಕ: 03-03-2021 ರಂದು ರಾತ್ರಿ 08-00 ಗಂಟೆಯಿಂದ ದಿನಾಂಕ 04-03-2021 ರಂದು ಬೆಳ್ಳಿಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಹಾವೇರಿ ಶಹರದ ತರಕಾರಿ ಮಾರ್ಕೇಟ್ ರೋಡಿನಲ್ಲಿರುವ ಆರಾನ್ ಸ್ವೀಟ್ ಶಾಫಿನ ಹಿಂದಿನ ಬಾಗಿಲು ಮುರಿದು ಆರಾನ್ ಸ್ವೀಟ್ ಅಂಗಡಿ ಮತ್ತು  ಶ್ರೀ ಗುರು ವಾದಿರಾಜ ಜ್ಯೂವೇಲರಿ ಅಂಗಡಿಯ ಮದ್ಯ ಇರುವ ಗೋಡೆಯನ್ನು ಯಾವುದೋ ಕಬ್ಬಿಣದ ಆಯುಧದಿಂದ ಒಡೆದು ಅಂಗಡಿಯ ಒಳಗೆ ಹೋಗಿ ಕೇಳಗಿನ ಲಾಕರಿನಲ್ಲಿರುವ ಮೂರು ಡ್ರಾಗಳನ್ನು ತೆಗೆದು ಮೂರು ಡ್ರಾದಲ್ಲಿರುವ 1,75,000/-ರೂ ಕಿಮ್ಮತ್ತಿನ ಸುಮಾರು 2.5 ಕೆ.ಜಿ. ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:33/2021 ಮಹಿಳೆ ಕಾಣೆ.

                 ಕು: ಜ್ಯೋತಿ ತಂದೆ ಯಲ್ಲಪ್ಪ ಲಮಾಣಿ ವಯಾ : 22 ವರ್ಷ ಸಾ : ಶಿವಪೂರ ತಾಂಡಾ ಇವಳಿಗೆ ಮೈಯಲ್ಲಿ ಹುಷಾರು ಇಲ್ಲದ್ದರಿಂದ ದಿನಾಂಕ; 01-03-2021 ರಂದು 12.00 ಗಂಟೆಗೆ  ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತೇನೆ. ಅಂತಾ ಶಿಗ್ಗಾಂವಗೆ ಮನೆಯಿಂದಾ ಹೋದವಳು ವಾಪಸ್ಸ ಮನೆಗೆ ಬಾರದೆ ಎಲ್ಲಿಯೋ ಕಾಣೆಯಾಗಿದ್ದು, ಕಾಣೆಯಾದವಳ ಚಹರೆ: ಎತ್ತರ 5.1 ಇಂಚು, ತೆಳುವಾದ ಮೈಕಟ್ಟು, ಉದ್ದ ಮುಖಸಾದಾಗಪ್ಪು ಮೈಬಣ್ಣ ನೀಟಾದ ಮೂಗು ಕನ್ನಡ ಮತ್ತು ಲಂಬಾಣಿ ಬಾಷೆ ಮಾತ್ರ ಮಾತಾನಾಡುತ್ತಾಳೆ, ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಯಲ್ಲಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:35/2021 ಮಹಿಳೆ ಕಾಣೆ.

                 ಕು|| ಮಂಜುಳಾ ತಂದೆ ಚಂದ್ರಶೇಖರ ಹಲಗೇರಿ, ವಯಸ್ಸು- 24 ವರ್ಷ, ಜಾತಿ-ಹಿಂದೂ ಲಿಂಗವಂತ, ಉದ್ಯೋಗ- ಮನೆ ಕೆಲಸ, ಸಾಃ ರಟ್ಟೀಹಳ್ಳಿ ಮಾಸೂರ ರಸ್ತೆ, ತಾ: ರಟ್ಟಿಹಳ್ಳಿ, ಇವಳು ದಿನಾಂಕ; 03/03/2021 ರಂದು ರಾತ್ರಿ 08-45 ಗಂಟೆಗೆ. ರಟ್ಟೀಹಳ್ಳಿ ಶಹರದ ಮಾಸೂರ ರಸ್ತೆಯಲ್ಲಿರುವ ತಮ್ಮ ವಾಸದ ಮನೆಯಿಂದ ಹೊರಗೆ ಹೋದವಳು ವಾಪಾಸ ಮನೆಗೆ ಬಾರದೇ ಕಾಣೆಯಾಗಿದ್ದು, ಕಾಣೆಯಾದವಳನ್ನು ಈ ವರೆಗೂ ಹುಡುಕಾಡಿದ್ದು ಪತ್ತೆಯಾಗದೆ ಇರುವುದರಿಂದ ಕಾಣೆಯಾದ ಮಂಜುಳಾ ಇವಳನ್ನು ಹುಡುಕಿಕೊಡಬೇಕೆಂದು ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:43/2021 ಕಲಂ: 279, 304(A)IPC.

                 ದಿನಾಂಕ: 04-03-2021 ರಂದು ಮುಂಜಾನೆ 11-15 ಗಂಟೆ ಸುಮಾರಿಗೆ ಟ್ರ್ಯಾಕ್ಟರ ಚಾಲಕ ಫಕ್ಕೀರಪ್ಪ ತಂದೆ ನಾಗಪ್ಪ ಗ್ವಾಡಿ, ಸಾ: ಸವಣೂರ ಕೋರಿ ಪೇಟೆ ಈತನು ತಾನು ನಡೆಸುತ್ತಿದ್ದ ಟ್ರ್ಯಾಕ್ಟರ್ ನಂಬರ: ಕೆಎ27 ಟಿಸಿ4291 ಹಾಗೂ ಟ್ರೇಲರ್ ನಂಬರ: ಕೆಎ27 ಟಿಸಿ4292 ನೇದ್ದನ್ನು ಜೋಡಿ ಹನುಮಂತ ದೇವರ ಗುಡಿಯ ಹತ್ತಿರ ಕಟಗು ಮಣ್ಣನ್ನು ಹೇರಿಕೊಂಡು ದರಗಾ ಕಡೆಗೆ ಹೋಗುವ ರಸ್ತೆಯ ಇಳಿಜಾರಿನಲ್ಲಿ ನಿರ್ಲಕ್ಷದಿಂದ ಟ್ರ್ಯಾಕ್ಟರ್ ಗಾಡಿಯನ್ನು ವೇಗವಾಗಿ ಇಳಿಸಿದ್ದರಿಂದ ಗಾಡಿಯು ನಿಯಂತ್ರಣ ತಪ್ಪಿ ರಸ್ತೆಯ ಎಡಬದಿ ತಗ್ಗಿನಲ್ಲಿ ಎರಡು ಮೂರು ಬಾರಿ ಬುಡಮೇಲು ಪಲ್ಟಿಯಾಗಿ ಅಪಘಾತವಾಗಿ ಚಾಲಕ ಫಕ್ಕೀರಪ್ಪನ ಮೇಲೆ ಬಿದ್ದು, ಆತನ ತಲೆಗೆ, ಬಾಯಿಗೆ, ಕಪಾಳಕ್ಕೆ ಬಲವಾದ ಗಾಯ ಪೆಟ್ಟುಗಳು ಆಗಿದ್ದು, ನಂತರ ಬಲಗಾಲು ಮೊಣಕಾಲ ಕೆಳಗೆ ಬಲವಾದ ಗಾಯ ಪೆಟ್ಟು ಆಗಿ ಸವಣೂರಿನ ಸರಕಾರಿ ದವಾಖಾನೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿರುವಾಗ ಉಪಚಾರ ಫಲಕಾರಿಯಾಗದೇ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 08-03-2021 06:50 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ