ಅಭಿಪ್ರಾಯ / ಸಲಹೆಗಳು

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:27/2021 ಕಲಂ: 379 IPC.

                 ದಿನಾಂಕ:02-03-2021 ರಂದು ಬೆಳಗಿನ ಜಾವ 00-45 ಗಂಟೆಯಿಂದ 06-15 ಗಂಟೆಯ ನಡುವಿನ ಅವಧಿಯಲ್ಲಿ ಇಬ್ರಾಹಿಂಸಾಬ ಇತನು ತನ್ನ ಮೋಟಾರ ಸೈಕಲನ್ನು ರಾಣೆಬೆನ್ನೂರು ಶಹರದ ಗೌರಿ  ಶಂಕರ ನಗರ 1 ನೇ ಕ್ರಾಸದ ವೀಣಾ ಪಾಣಿ ಶಾಲೆ ಹತ್ತಿರ ಇರುವ ತನ್ನ ತಮ್ಮನ ಮನೆಯ ಮುಂದೆ  ಹ್ಯಾಂಡ ಲಾಕ್ ಮಾಡಿ ನಿಲ್ಲಿಸಿದ ಹಿರೋ ಸ್ಲಂಡರ್ ಪ್ಲಸ್ ಮೋಟಾರ ಸೈಕಲ್ ನಂ: ಕೆಎ-17/ಎಚ್ಎಪ್-0536 ಇದರ ಇಂಜಿನ ನಂಬರ:HA10AGLHAB6733 ಚಾಸ್ಸೀಸ್ ನಂಬರ:MBLHAW090LHA48155 ನೇದ್ದು ಅ:ಕಿ:50,000/-ರೂಗಳು ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:42/2021 ಮಹಿಳೆ ಕಾಣೆ.

                 ಸೌಮ್ಯಾ ತಂದೆ ಮೋಹನ ಮಾಗಡಿ ವಯಸ್ಸು: 24 ವರ್ಷ, ಜಾತಿ: ಹಿಂದೂ ರಜಪೂತ, ಉದ್ಯೋಗ: ಮನೆ ಕೆಲಸ, ಸಾ: ಧರ್ಮರಾಜನಗರ ಸವಣೂರ ತಾ: ಸವಣೂರದಿನಾಂಕ: 02-03-2021 ರಂದು ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಇವರು  ತಮ್ಮ ಮನೆಯಿಂದ ವಾಕಿಂಗ ಮಾಡಲು ಹೋದವಳು ಎಲಿಗೋ ಹೋಗಿ ಕಾಣೆಯಾಗಿದ್ದು ವಾಪಸ್ಸ ಮನೆಗೆ ಬಂದಿರುವುದಿಲ್ಲ, ಇವಳು 5 ಪೂಟು ಎತ್ತರವಾಗಿದ್ದು, ಬಿಳಿ ವರ್ಣ, ದಪ್ಪ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಕಪ್ಪು ಬಣ್ಣದ ಕೂದಲಗಳು, ಉದ್ದ ಮೂಗು, ಇರುತ್ತದೆ.ಇವಳಿಗೆ ಹುಡುಕಿ ಕೊಡುವಂತೆ ಮೋಹನ್ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:06/2021 ವ್ಯಕ್ತಿ ಸಾವು .

                 ದೇವರಾಜ ಗಾಣಿಗೇರ ಇವನಿಗೆ ಸುಮಾರು ಒಂದು ವರ್ಷದ ಹಿಂದಿನಿಂದ ಹೊಟ್ಟೆನೋವು ಬರುತ್ತಿದ್ದು ಆಸ್ಪತ್ರೆಗೆ ತೋರಿಸಿದರು ಗುಣವಾಗಿದ್ದಿಲ್ಲ ಇತ್ತಿತ್ತಲಾಗಿ ದೇವರಾಜನಿಗೆ ಹೊಟ್ಟೆನೋವು ಜಾಸ್ತಿಯಾಗಿದ್ದರಿಂದ ಅವನು ಅದನ್ನು ಬಹಳ ಮನಸ್ಸಿಗೆ ಹಚ್ಚಿಕೊಂಡು. ದಿನಾಂಕ: 23-02-2021 ರಂದು ಮದ್ಯಾನ್ನ 01-30 ಗಂಟೆಗೆ ಹೊಟ್ಟೆ ನೋವು ಬಹಳ ತ್ರಾಸಾಗಿದ್ದರಿಂದ ಹೊಸರಿತ್ತಿಯ ರಾಘವೇಂದ್ರ ಮಠದ ಹತ್ತಿರ ವಿಷಕಾರಕ ಎಣ್ಣಿಯನ್ನು ಕುಡಿದಿದ್ದು ಅವನಿಗೆ  ಹೊಸರಿತ್ತಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿ ಹೆಚ್ಚಿನ  ಉಪಚಾರಕ್ಕೆ ಹುಬ್ಬಳ್ಳಿ ತತ್ವದರ್ಶ ಆಸ್ಪತ್ರೆ ಕರೆದುಕೊಂಡು ಹೋಗಿ ದಾಖಲ ಮಾಡಿದ್ದು ಅಲ್ಲಿ ಉಪಚಾರ ಫಲೀಸದೇ ದಿನಾಂಕ; 03-03-2021 ರಂದು ಬೆಳಗಿನ 04-20 ಗಂಟೆಗೆ ಮರಣ ಹೊಂದಿರುತ್ತಾನೆ ವಿನಃ ಅವನ ಸಾವಿನಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಕಾನೂನು ರಿತ್ಯ ಕ್ರಮ ಜರುಗಿಸಬೇಕು ಅಂತಾ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 06-03-2021 06:13 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ