ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:12/2021 ಮಹಿಳೆ ಕಾಣೆ.

                 ಚೈತ್ರಾ ತಂದೆ ಮಹದೇವಯ್ಯ ದೇವಗಿರಿಮಠ, ವಯಾ: 21 ವರ್ಷ ಇವಳು ದಿನಾಂಕ: 01-03-2021 ರಂದು ಮುಂಜಾನೆ 9-00 ಗಂಟೆ ಸುಮಾರಿಗೆ ಹಾವೇರಿ ಕಾಲೇಜಿಗೆ ಹೋಗಿ ಲೈಬ್ರರಿ ಬುಕ್ ಹಾಗೂ ದಾಖಲಾತಿಗಳನ್ನು ಕೊಡುವುದಿದೆ ಕಾಲೇಜಿಗೆ ಹೋಗುತ್ತೇನೆ ಅಂತಾ ತನ್ನ ತಂದೆಯವರ ಮುಂದೆ ಹೇಳಿದ್ದರಿಂದ ತಮ್ಮ ಮಗಳನ್ನು ತಮ್ಮ ಮಗನ ಸಂಗಡ ಕಳಿಸಿಕೊಂಡಿದ್ದು  ಮುಂದೆ ಮಾದೇವಯ್ಯ ತಮ್ಮ ಮಗಳಿಗೆ ಮುಂಜಾನೆ 11-30 ಗಂಟೆಗೆ ಸುಮಾರಿಗೆ ಕಾಲ್ ಮಾಡಿದಾಗ ಅವಳು ಕಾಲೇಜಿನಲ್ಲಿ ಇದ್ದೇನೆ ಅಂತಾ ಹೇಳಿದ್ದು ನಂತರ 12-30 ಗಂಟೆ ಸುಮಾರಿಗೆ ಕಾಲ್ ಮಾಡಿದ್ದು ಅವಳ ಪೋನ್ ಸ್ವೀಚ್ ಆಫ್ ಅಂತಾ ಬರ್ತಾ ಇದ್ದು ಮುಂದೆ ಮಾಹದೇವಯ್ಯ ತಮ್ಮ ಸಂಬಂಧಿಕರ ಮನೆಯಾದ ಪ್ರಸಾದ, ನೇತಾಜಿ ನಗರ ಹಾವೇರಿ ಇವರ ಮನೆಗೆ ಹೋಗಿ ವಿಚಾರಿಸಿದ್ದು ಅವರು ಚೈತ್ರಾ ಇವಳು ನಮ್ಮ ಮನೆಗೆ 12-00 ಗಂಟೆ ಸುಮಾರಿಗೆ ಮನೆಗೆ ಬಂದು ಗೆಳತಿ ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದಳು ಅಂತಾ ವಿಷಯ ತಿಳಿಸಿದ್ದು ಮುಂದೆ ರಾತ್ರಿಯಾದರೂ ಮರಳಿ ಮನೆಗೆ ಬರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಕಾಣೆಯಾದ ಚೈತ್ರಾ ಇವಳನ್ನು ಹುಡುಕಿಕೊಡಲು  ಮಾದೇವಯ್ಯ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:20/2021 ಕಲಂ: 379 IPC .

                 ಹಾವೇರಿ ಶಹರದ ಎಪಿಎಂಸಿ ಆವರಣದ ದನದ ಮಾರ್ಕೇಟ ಒಳಗೆ ರಸ್ತೆಯ ಪಕ್ಕದಲ್ಲಿ ದಿನಾಂಕ: 21-01-2021 ರಂದು ಮದ್ಯಾನ್ಹ: 01-00 ಗಂಟೆಯಿಂದ ಮದ್ಯಾನ್ಹ: 02-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿದ ಹೀರೋ ಸ್ಪೇಂಡರ್ ಪ್ಲಸ್ ಕಂಪನಿ ಮೋಟಾರ ಸೈಕಲ್ ನಂ: ಕೆಎ-27/ಇಎ-6094 ಚೆಸ್ಸಿ ನಂ- MBLHA10AMDHD52625 ಇಂಜಿನ ನಂ: HA10EJDHD43294 ಬಣ್ಣ ಪರಪಲ್ ಬ್ಲ್ಯಾಕ್ ಇದ್ದು ಮಾಡಲ್ 2013 ಅಃಕಿಃ 15,000/ ರೂ ನೇದ್ದನ್ನು ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:29/2021 ಕಲಂ: 279,337,304(A) IPC .

                 ದಿನಾಂಕ:-02-03-2021 ರಂದು ಮದ್ಯಾಹ್ನ  12-45  ಗಂಟೆ ಸುಮಾರಿಗೆ ರಿಲಾಯನ್ಸ ಪೆಟ್ರೋಲ್ ಬಂಕ ಎದುರು ರಾಣೇಬೆನ್ನುರ-ಹರಿಹರ ಎನ್ ಎಚ್ -04 ರಸ್ತೆಯ ಮೇಲೆ ಪೃಥ್ವಿ ಎನ್ ಆರ್ ಇತನು ತಾನು ನಡೆಸುತ್ತಿದ್ದ ಹುಂಡೈ ಐ 20 ಕಾರ ನಂ: ಕೆಎ-02/ಎಮ್ ಆರ್ 0211 ನೇದ್ದನ್ನು ರಾಣೇಬೆನ್ನೂರ ಕಡೆಯಿಂದ ಹರಿಹರ ಕಡೆಗೆ ಅತೀ ಜೋರಿನಿಂದ ವ ನಿಷ್ಕಾಳಜಿತನದಿಂದ ನಡೆಸಿಕೊಂಡು ರಸ್ತೆ ತುಂಬಾ ಹೊರಳಾಡಿಸುತಾ ಬಂದು ನಿಯಂತ್ರಿಸಲಾಗದೆ ತನ್ನ ಎದುರಿಗೆ ನಿದಾನವಾಗಿ ರಾಣೇಬೆನ್ನೂರ ಕಡೆಯಿಂದ ಹರಿಹರ ಕಡೆಗೆ ಸಣ್ಣ ಗೂಡ್ಸ ವಾಹನ ಆಟೋ ನಂ:ಕೆಎ-68/2209 ನೇದ್ದರ ಹಿಂದೆ ಡಿಕ್ಕಿ ಪಡಿಸಿ ಅದರ ಚಾಲಕನಾದ  ಹನುಮಂತಪ್ಪ ತಂದೆ ತುಮನೆಪ್ಪ ಉಳ್ಳಾಗಡ್ಡಿ ಸಾ: ರಾಣೇಬೆನ್ನೂರ ಗುರಣ್ಣಿಚಾಳ ವಿದ್ಯಾಚೇತನ ಶಾಲೆ ಹತ್ತಿರ ಇವನಿಗೆ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿ  ಹಾಗೂ ತನ್ನ ಕಾರಿನಲ್ಲಿದ್ದ 03 ಜನರಿಗೂ ಸಹ ಸಣ್ಣ ಪುಟ್ಟ ಗಾಯ ಪಡಿಸಿ ತನಗೂ ಸಹ ಸಣ್ಣ ಪುಟ್ಟ ಗಾಯ ಪಡಿಸಿಕೊಂಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2021 ವ್ಯಕ್ತಿ ಸಾವು .

                 ಹನುಮಂತಪ್ಪ ತಂದೆ ಬಸವಣ್ಣೆಪ್ಪ ಸಂಗೂರ, ವಯಸ್ಸು: 46 ವರ್ಷ, ಸಾ: ದೇವಿಹೊಸುರ, ತಾ: ಹಾವೇರಿ ಈತನು ದಿನಾಂಕ: 24-02-2021 ರಂದು ರಾತ್ರಿ 8-30 ಗಂಟೆಯಿಂದ 9-00 ಗಂಟೆಯ ನಡುವಿನ ಅವಧಿಯಲ್ಲಿ ದೇವಿಹೋಸೂರ ಗ್ರಾಮದ ತನ್ನ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಕರೆಂಟ್ ಹೋಗಿದ್ದರಿಂದ ದೀಪದ ಬೆಳಕಿನಲ್ಲಿ ಕುಳಿತುಕೊಂಡು ಊಟ ಮಾಡುವ ಸಮಯದಲ್ಲಿ ಸೆಲ್ಪದಲ್ಲಿ ಇಟ್ಟಿದ್ದ ನೀರಿನ ಚಂಬನ್ನು ತೆಗೆದುಕೊಳ್ಳುತ್ತಿದ್ದಾಗ ಅದರ ಪಕ್ಕದಲ್ಲಿದ್ದ ಚೀಮಣಿ ಎಣ್ಣೆಯ ಕ್ಯಾನಿಗೆ ಆಕಸ್ಮಿಕವಾಗಿ ಹನುಮಂತಪ್ಪನ  ಕೈ ತಾಗಿ ಅದು ದೀಪದ ಮೇಲೆ ಬಿದ್ದು ಒಮ್ಮೆಲೆ ಮೈಗೆಲ್ಲಾ ಬೆಂಕಿ ಹತ್ತಿ ಸುಟ್ಟು ಗಾಯಗಳಾಗಿದ್ದರಿಂದ ಆತನಿಗೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆಯಿಂದ ಗುಣಮುಖನಾಗದೇ ದಿನಾಂಕ: 02-03-2021 ರಂದು ಸಾಯಂಕಾಲ 5-15 ಗಂಟೆಗೆ   ಮೃತಪಟ್ಟಿದ್ದು ಈ ಬಗ್ಗೆ ಯಾರ ಮೇಲೂ ಸಂಶಯ ಇರುವುದಿಲ್ಲಾ ಅಂತಾ ಮೃತನ ಸಹೋದರ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 06-03-2021 06:08 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ