ಅಭಿಪ್ರಾಯ / ಸಲಹೆಗಳು

ಹಿರೇಕೆರೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:17/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                     ಭರಮಗೌಡ ತಂದೆ ಪಾಲಾಕ್ಷಗೌಡ ಖಂಡಿಬಾಗೂರು ವಯಾ: 64 ವರ್ಷ, ಜಾತಿ: ಹಿಂದೂ ಲಿಂಗಾಯಿತ, ಉದ್ಯೋಗ: ವ್ಯವಸಾಯ ಸಾ:  ದೂದಿಹಳ್ಳಿ ತಾ: ಹಿರೇಕೆರೂರ ಇವರು ಸುಮಾರು ವರ್ಷಗಳಿಂದ ಮಂಡಿ, ಸೊಂಟ, ಚಪ್ಪೆನೋವಿನಿಂದ ಹಾಗೂ ಹೃದಯಿ ಸಂಬಂದಿ ಖಾಯಿಲೆಯಿಂದ ಬಳಲುತ್ತಿದ್ದು ಈ ಸಂಬಂದ ಹಲವಾರ ಆಸ್ಪತ್ರೆಗಳಲ್ಲಿ ಉಪಚಾರ ಮಾಡಿಸಿದರು ಖಾಯಿಲೆ ಗುಣವಾಗದೇ ಇದ್ದುದರಿಂದ ಅದನ್ನೆ ಬೇಸರ ಮಾಡಿಕೊಂಡು ದಿನಾಂಕ: 29-08-2021 ರಂದು ಬೆಳಗಿನ ಜಾವ 00-40 ಗಂಟೆಗೆ ಸುಮಾರಿಗೆ ಮನೆಯಲ್ಲಿ ತನ್ನಷ್ಟಕ್ಕೆ ತಾನು ಧನದ ಉಣ್ಣೆಗೆ ಸಿಂಪಡಿಸುವದ ವಿಷಕಾರಕವನ್ನು ಸೇವನೆ ಮಾಡಿ ನರಳಾಡುತ್ತಿದ್ದವನಿಗೆ ಉಪಚಾರಕ್ಕೆ ಹಿರೇಕೆರೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಉಪಚಾರ ಮಾಡಿಸಿ ನಂತರ ಹೆಚ್ಚಿನ ಉಪಚಾರಕ್ಕೆ ದಾವಣಗೇರೆ ಎಸ್.ಎಸ್.ಐ.ಎಂ.ಎಸ್ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರದಿಂದ ಚೇತರಿಸಿಕೊಳ್ಳದೇ ದಿ: 31-08-2021 ರಂದು ಬೆಳಗಿನ ಜಾವ 00-15 ಗಂಟೆಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಮೃತನ ಸಾವಿನಲ್ಲಿ ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತಾ ಮೃತನ ಮಗ ರವಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:22/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                     ನಾಗಪ್ಪ ತಂದೆ ಮಂಗಲೆಪ್ಪ ಲಮಾಣಿ, ವಯಸ್ಸು: 45 ವರ್ಷ, ಉದ್ಯೋಗ: ಕೂಲಿ ಕೆಲಸ, ಜಾತಿ: ಹಿಂದೂ ಲಮಾಣಿ ಸಾ|| ಬೇವಿನಹಳ್ಳಿ ತಾ|| ಸವಣೂರ ಈತನು ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ಅದರ ಬಗ್ಗೆಯೇ ಚಿಂತಿಸುತ್ತಾ ದಿ: 30-08-2021 ರಂದು ಸಂಜೆ 4-00 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋಗಿ ಬರುವುದಾಗಿ ಹೇಳಿ ಹೊರಗೆ ಹೋದವನು ಮರಳಿ ಮನೆಗೆ ಬಾರದೆ ಬೇವಿನಹಳ್ಳಿ ಕ್ರಾಸ್ ಹತ್ತಿರ ಚಿಲ್ಲೂರ ಬಡ್ನಿ ಗ್ರಾಮಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಪಕ್ಕದಲ್ಲಿರುವ ಬೀಳು ಜಮೀನದಲ್ಲಿನ ಒಂದು ಬೇವಿನ ಮರಕ್ಕೆ ದಿನಾಂಕ: 31-08-2021 ರಂದು ಮಧ್ಯಾಹ್ನ 2-00 ಗಂಟೆ ನಡುವಿನ ಅವಧಿಯಲ್ಲಿ ತನ್ನಷ್ಟಕ್ಕೆ ತಾನೆ ನೇಣು ಹಾಕಿಕೊಂಡು ಮರಣ ಹೊಂದಿದ್ದು ಈತನ ಸಾವಿನಲ್ಲಿ ಯಾರಮೇಲು ಯಾವುದೆರೀತಿಯ ಸಂಶಯ ವಗೈರೆ ಇರುವುದಿಲ್ಲ ಅಂತಾ ಪುಟ್ಟವ್ವ ಲಮಾಣಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:27/2021 ವ್ಯಕ್ತಿ ಸಾವು.

                    ನಿಂಗವ್ವ ಕೋಂ ಮುಖಪ್ಪ ಪೂಜಾರ ವಯಾ 46 ವರ್ಷ, ಸಾಃವೈ.ಟಿ ಹೊನ್ನತ್ತಿ ಇವರು ದಿನಾಂಕಃ31-08-2021 ರಂದು ಮುಂಜಾನೆ 8-00 ಗಂಟೆ ಸುಮಾರಿಗೆ ವೈ.ಟಿ.ಹೊನ್ನತ್ತಿ ಗ್ರಾಮದ  ತಾಂಡ ಹತ್ತಿರ ತುಂಗಭದ್ರಾ ಚಾನಲ್ ನಲ್ಲಿ ಭಟ್ಟೆ ತೋಳೆಯಲು ಹೋಗಿ ಆಕಸ್ಮಿಕ ಕಾಲು ಜಾರಿ ಚಾನಲ್ ಲ್ಲಿರುವ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದು ಅವರ ಸಾವಿನಲ್ಲಿ ಯಾವುದೆರಿತಿಯ ಸಂಶಯ ವಗೈರೆ ಇರುವುದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಶಂಭುಲಿಂಗ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:28/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                    ನಾಗರಾಜ ಕೆಂಚಪ್ಪ ನಾಗರಜ್ಜಿ ವಯಾ: 40 ಸಾ|| ಅರೆಮಲ್ಲಾಪೂರ ಇವರು ಒಕ್ಕಲುತನ ಮಾಡುತ್ತಾ ಉಪಜೀವನ ಸಾಗಿಸುತ್ತಿದ್ದು ಒಕ್ಕಲುತನದ ಹಾಗೂ ಮನೆತನದ ಉದ್ದೇಶಕ್ಕೆ ಸಾಲವನ್ನು ಮಾಡಿದ್ದು ಅದನ್ನು ತೀರಿಸುವದು ಆಗಲಿಲ್ಲ ಅಂತಾ ಜೀವನದಲ್ಲಿ ಜಿಗುಪ್ಸೆಹೊಂದಿ ದಿ: 31-08-2021 ರಂದು 18-30 ಗಂಟೆಯಿಂದ 22-00 ಗಂಟೆ ಮಧ್ಯದಲ್ಲಿ ಅರೇಮಲ್ಲಾಪುರ ಗ್ರಾಮದ ರಾಣೆಬೆನ್ನೂರ ಐರಣಿ ರಸ್ತೆಯ ಬಾಜೂ ಇರುವ ಸರ್ವೆನಂ : 210 ರ ಜಮೀನದಲ್ಲಿರುವ ಬೇವಿನ ಗಿಡಕ್ಕೆ ಲುಂಗಿ (ಬಟ್ಟೆ) ಯನ್ನು ಕಟ್ಟಿಕೊಂಡು ನೇಣುಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನುನು ಕ್ರಮ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:31/2021 ಅನಾಮದೇಯ ಮಹಿಳೆ ಸಾವು.

                    ದಿನಾಂಕ 31-08-2021 ರಂದು ಮದ್ಯಾಹ್ನ 12-15 ಗಂಟೆಗೆ ಉಮೇಶ ಲಂಕೇಪ್ಪನವರ ಇವರು ಠಾಣೆಗೆ ಹಾಜರಾಗಿ ವರದಿ ನೀಡಿದ್ದು. ಸುಮಾರು 40 ರಿಂದ 50 ವಯಸ್ಸಿನ ಅನಾಮಧೇಯ ಹೆಂಗಸು ಇವಳು ಈಗ ಎಲ್ಲಿಯೋ ವರದಾ ನದಿಯಲ್ಲಿ ಬಿದ್ದು ಮರಣ ಹೊಂದಿದ್ದು ಈ ದಿವಸ ಮುಂಜಾನೆ 10-00 ಅಕ್ಕೂರ ಗ್ರಾಮದ ಸಮೀಪ ಕಾಫಿಪುಡಿ ಇವರ ಜಮೀನದ ಹತ್ತಿರ ವರದಾ ನದಿಯಲ್ಲಿ ಬಂದಿದ್ದು, ಶವವು ಬಾವು ಬಂದಿದ್ದು, ಕಣ್ಣು, ಬಾಯಿಗಳನ್ನು ಯಾವುದೋ ಪ್ರಾಣೆಗಳು ತಿಂದಿದ್ದು ಇರುತ್ತದೆ. ಸದರಿಯವಳ ಮೈಮೇಲೆ ಒಂದು ಕಪ್ಪ ರವಿಕೆ, ಕಪ್ಪು ಲಂಗ, ಹಾಗೂ ತಲೆಗೆ ವಸ್ತ್ರ ಕಟ್ಟಿಕೊಂಡಿದ್ದು ಕೈಯಲ್ಲಿ ಕೆಂಪು ಗಾಜಿನ ಬಳೆಗಳು ಇರುತ್ತವೆ. ಕಾನೂನು ರಿತ್ಯ ಕ್ರಮ ಜರುಗಿಬೇಕು ಅಂತಾ ಉಮೇಶ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 13-09-2021 11:02 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ