ಅಭಿಪ್ರಾಯ / ಸಲಹೆಗಳು

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:102/2021 ಮಹಿಳೆ ಕಾಣೆ .

               ಕುಮಾರಿ ದಿವ್ಯಾ ತಂದೆ ಕೊಟ್ರೇಶ್ ಕಂಬಳಿ ವಯಾ: 16 ವರ್ಷ ಸಾ: ಕವಲೆತ್ತು ತಾ:ರಾಣೆಬೆನ್ನೂರ ಇವಳು ಕರೋನಾ ಇದ್ದುದ್ದರಿಂದ ಶಾಲೆ ರಜೆ ಇರುವದರಿಂದ ಮೊಟೇಬೆನ್ನೂರ ಗ್ರಾಮದ ನಿಂಗಪ್ಪ ಸಣ್ಣಿಂಗಪ್ಪ ಕರಿಸಿದ್ದಣ್ಣವರ ಇವರ ಮನೆಯಲ್ಲಿ ದಿನಾಂಕಃ30-07-2021 ರಂದು ರಾತ್ರಿ 10-30 ಘಂಟೆಯಿಂದ ರಾತ್ರಿ 11-00 ಘಂಟೆ ನಡುವಿನ ಅವಧಿಯಲ್ಲಿ ಮನೆಯ ಹೊರಗಡೆ ಕುಳಿತವಳು  ಎಲ್ಲಿಯೋ ಹೋಗಿದ್ದು ಎಷ್ಟು ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಕಾರಣ ನನ್ನ ಮಗಳು ಎಲ್ಲಿಯೋ ಹೋಗಿ ಕಾಣೆಯಾಗಿರಬಹುದು ಅಥವಾ ಯಾರೋ ಯಾವುದೋ ಉದ್ದೇಶಕ್ಕೆ ಅಪಹರಣ ಮಾಡಿಕೊಂಡು ಹೋಗಿರಬಹುದು, ಕಾಣೆಯಾದ/ಅಪಹರಣವಾದ ನನ್ನ ಮಗಳನ್ನು ಹುಡುಕಿಕೊಡಬೇಕು ಅಂತಾ ರೂಪಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪಿರ್ಯಾದಿ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 19/2021 ಮಹಿಳೆ ಸಾವು.

             ರತ್ನಮ್ಮ ಕೊಂ ದುಂಡೆಪ್ಪ ದುರ್ಗದ ವಯಾ: 52 ವರ್ಷ ಸಾ: ಹೆಡಿಯಾಲ ಇವಳು ಈಗ ಸುಮಾರು 10-12 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಅವಳಿಗೆ ಮನೋವೈದ್ಯರ ಬಳಿ ಉಪಚಾರ ಕೊಡಿಸಿದರೂ ಗುಣಮುಖವಾಗದೇ ಇದ್ದು ದಿನಾಂಕ: 29-07-2021 ರಂದು ಮುಂಜಾನೆ 6-00 ಗಂಟೆಯಿಂದ 14-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾಲಕ್ಕೆ ಮಾನಸಿಕ ಅಸ್ವಸ್ಥತೆಯಲ್ಲಿ ತನ್ನ ಮಾನಸಿಕ ಕಾಯಿಲೆಯ ಹೆಚ್ಚಿನ ಗುಳಿಗೆಗಳನ್ನು ತೆಗೆದುಕೊಂಡು ಅಸ್ವಸ್ಥಳಾದಾಗ ಅವಳಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಒಯ್ದು ಉಪಚಾರಕ್ಕೆ ದಾಖಲಿಸಿದ ಕಾಲಕ್ಕೆ ಉಪಚಾರ ಫಲಿಸದೇ ದಿನಾಂಕ: 31-07-2021 ರಂದು 15-10 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ ವಿನಃ ಬೇರೆ ಏನೂ ಸಂಶಯ ವಗೈರೆ ಇರುವುದಿಲ್ಲಾ ಅಂತಾ ರತ್ನಮ್ಮ ಇವರ ಅಳಿಯ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 04-08-2021 12:16 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ