ಅಭಿಪ್ರಾಯ / ಸಲಹೆಗಳು

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:51/2021 ವ್ಯಕ್ತಿ ಕಾಣೆ.

                 ಮೌನೇಶ ಅಶೋಕ ಕಮ್ಮಾರ ವಯಾ: 30 ಸಾ: ಹಾವೇರಿ  ಇವರು ದಿನಾಂಕ: 30-03-2021 ರಂದು ಮದ್ಯಾಹ್ನ 15-00 ಗಂಟೆಯ ಸುಮಾರಿಗೆ ರಾಣೇಬೆನ್ನೂರು ಶಹರದ ಹಳೆ ಪಿ ಬಿ ರಸ್ತೆಯ ಬದಿಯಲ್ಲಿರುವ ಪೂಜಾ ಡಾಬಾದಲ್ಲಿ ಊಟಕ್ಕೆ ಹೋದಾಗ ರಿಸಸ್ ಮಾಡಿ ಕೈತೊಳೆದುಕೊಂಡು ಬರುತ್ತೇನೆ ಅಂತಾ ಹೇಳಿ ಹೋದವನು ಇಂದಿನವರೆಗೂ ಮರಳಿ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಅವನನ್ನು ಹುಡುಕಿಕೊಡುವಂತೆ ವೀರಣ್ಣ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:63/2021 ಕಲಂ: 279, 337, 338, 304A IPC.

              ದಿನಾಂಕ 25-02-2021 ರಂದು ಜಗದೀಶ ಗದಿಗೇಪ್ಪ ಮುದೇನೂರ ಇವರು ನಡೆಸುತ್ತಿದ್ದ ಬೊಲೆರೋ ವಾಹನ ನಂ: ಕೆಎ: 27. ಬಿ: 1907 ನೇದ್ದನ್ನು ಅತಿ ಜೋರಾಗಿ ಹಾಗೂ ನಿಷ್ಕಾಳಜಿತನದಿಂದಾ ಅಸುಂಡಿ ಗ್ರಾಮದ ಕಡೆಯಿಂದ ಕದರಮಂಡಲಗಿ ಗ್ರಾಮದ ಕಡೆಗೆ ನಡೆಯಿಸಿಕೊಂಡು ಎದುರುಗಡೆಯಿಂದ ಅಂದರೆ ಕದರಮಂಡಲಗಿ ಕಡೆಯಿಂದ ಅಸುಂಡಿ ಕಡೆಗೆ ಬರುತ್ತಿದ್ದ ಮೋಟರ ಸೈಕಲ ನಂ: ಕೆಎ: 17. ಇಕ್ಯೂ: 4572 ನೇದ್ದಕ್ಕೆ ಡಿಕ್ಕಿಪಡಿಸಿ ಅದರ ಸವಾರನಾದ ಈರಪ್ಪ ಬೀರಪ್ಪ ಪೂಜಾರ ಇವನಿಗೆ ತೀವ್ರ ಸ್ವರೂಪದ ಹಾಗೂ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅವರ ಮಗ ದಿಲೀಪನಿಗೆ ಸಹ ಗಾಯಗೊಳಿಸಿ ಸದರೀಯವನಿಗೆ ಸಹ ಸಾದಾ ಮತ್ತು ಭಾರೀ ಗಾಯಗಳನ್ನುಂಟು ಮಾಡಿ ಮರಣಹೊಂದುವಂತೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:64/2021 ಕಲಂ: 279, 337, 338, 304(A) IPC.

              ಹನುಮಂತಪ್ಪ ದುರುಗಪ್ಪ ಬೊರಗಲ್ಲನವರ ಸಾ|| ಶಾಕಾಹಾರ  ತಾನು ನಡೆಸುತ್ತಿದ್ದ ಟಿ ವಿ ಎಸ್ ಎಕ್ಸೈಲ್ ಮೊಟರ ಸೈಕಲ ನಂ ಕೆ ಎ 27 ಇ ಎಲ್ 7802 ನೇದ್ದನ್ನು ಹೊನ್ನತ್ತಿ ಕಡೆಯಿಂದಾ ಚೌಡಯ್ಯದಾನಪುರ ಕಡೆಗೆ ತನ್ನ ಹಿಂದೆ ನಿಂಗಪ್ಪ ದುರಗಪ್ಪ ಸುಣಗಾರ ಸಾ: ಶಾಖಾರ ಇವರಿಗೆ ಹತ್ತಿಸಿಕೊಂಡು ಅತೀ ಜೋರಿನಿಂದಾ ವ ತಾತ್ಸಾರತನದಿಂದಾ, ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಹೋಗಿ ತನ್ನ ಗಾಡಿಯನ್ನು ನಿಯಂತ್ರಿಸಲು ಆಗದೇ ಎದುರಿನಿಂದಾ ಅಂದರೆ ಚೌಡಯ್ಯದಾನಪುರ ಕಡೆಯಿಂದಾ ಹೊನ್ನತ್ತಿ ಕಡೆಗೆ ಹೊರಟಿದ್ದ ಮೋಟರ ಸೈಕಲ ನಂ ಕೆ ಎ 17 ಇ ಪಿ 5143 ನೇದ್ದಕ್ಕೆ ಡಿಕ್ಕಿ ಪಡಿಸಿ ಅದರ ಸವಾರ ಗಣೇಶ ಮಲ್ಲಪ್ಪ ಕಾಯಕದ ವಯಸ್ಸು 22 ಸಾ: ಹರವಿ ತಾ:ಹೂವಿನಹಡಗಲಿ ಜಿಲ್ಲಾ ಬಳ್ಳಾರಿ ಈತನಿಗೆ ಭಾರೀ ದುಃಖಾಪತ್  ಆಗುವಂತೆ ಮಾಡಿದ್ದಲ್ಲದೇ ತನ್ನ ಸ್ವಂತಕ್ಕೆ ಸಹಾ ಭಾರೀ ದುಃಖಾಪತ್ ಪಡಿಸಿದ್ದಲ್ಲದೇ ತನ್ನ ಹಿಂದೆ ಕುಳಿತುಕೊಂಡಿದ್ದ ನಿಂತಪ್ಪ ದುರಗಪ್ಪ ಸುಣಗಾರ ಈತನಿಗೆ ಸಹಾ ದುಃಖಾಪತ್ ಪಡಿಸಿದ್ದಲ್ಲದೇ ಗಾಯ ಹೊಂದಿದ ಗಾಯಾಳುಗಳ ಪೈಕಿ ಗಣೇಶ ಈತನಿಗೆ ರಾಣೆಬೆನ್ನೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡುಹೋಗುವ ಕಾಲಕ್ಕೆ ಮಾರ್ಗಮದ್ಯದಲ್ಲಿ ಮೃತ ಹೊಂದುವಂತೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:12/2021 ವ್ಯಕ್ತಿ ಸಾವು.

              ಬಸಪ್ಪ ತಂದೆ ದುರಗಪ್ಪ ಕಾಳೆ ವಯಸ್ಸು: 24 ವರ್ಷ ಜ್ಯಾತಿ: ಹಿಂದು ಚಲವಾದಿ ಉದ್ಯೊಗ: ಕೂಲಿ ಕೆಲಸ ಸಾ: ಹೂವಿನ ಶಿಗ್ಲಿ ತಾ: ಸವಣೂರ ಜಿ: ಹಾವೇರಿ ಈತನು ದಿನಾಂಕ, 31-03-2021 ರಂದು ಮುಂಜಾನೆ 09-30 ಗಂಟೆಗೆ ಕೆಇಬಿಯ ಕೂಲಿ ಕೆಲಸಕ್ಕೆ ಅಂತಾ ತನ್ನ ಊರಿನಿಂದ ಹಾವೇರಿ ತಾಲೂಕ ಕರ್ಜಗಿ ಗ್ರಾಮಕ್ಕೆ ಹೋಗಿ ಕರ್ಜಗಿ ಗ್ರಾಮದ ಹರಿಜನ ಕೇರಿಯಲ್ಲಿ ವಿದ್ಯೂತ್ ಕಂಬದ ಮೇಲೆ ಕೆಲಸ ಮಾಡುವಾಗ ಮದ್ಯಾಹ್ನ 03-20 ಗಂಟೆಗೆ ಆಕಸ್ಮಿಕವಾಗಿ ಕಂಬದ ಮೇಲಿನಿಂದ ಕೆಳಗೆ ಬಿದ್ದು ಸಾವರಿಸಿಕೊಂಡು ಮತ್ತೆ ಕುಸಿದು ಬಿದ್ದಾಗ ಆತನ ಸಂಗಡ ಇದ್ದ ಕೂಲಿ ಕೆಲಸಗಾರರು ಹಾವೇರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಿಗೆ ತೋರಿಸಿದಾಗ ಮೃತಪಟ್ಟಿರುವದಾಗಿ ತಿಳಿಸಿದ್ದು, ನನ್ನ ಮಗನು ಆಕಸ್ಮಿಕ ವಿದ್ಯುತ್ ಶಾಕದಿಂದಲೋ ಅಥವಾ ಹೃದಯಾಘಾತದಿಂದಲೋ ಮರಣ ಹೊಂದಿದ್ದು ಇತನ ಸಾವಿನಲ್ಲಿ ಯಾರ ಮೇಲೆಯೂ ಸಂಶಯ ಇರುವುದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮೃತನ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 03-04-2021 05:41 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ