ಅಭಿಪ್ರಾಯ / ಸಲಹೆಗಳು

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:100/2021 379 IPC.

               ದಿನಾಂಕಃ-24-07-2021 ರಂದು ರಾತ್ರಿ 01-00 ಗಂಟೆಯಿಂದ 02-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಬ್ಯಾಡಗಿ ತಾಲ್ಲೂಕ ಮಾಸಣಗಿ ಗ್ರಾಮದ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಬಳಿ ಇರುವ ಸ.ನಂ-122 ಅರ್ಕಾರಿ ಕರಾಬು ಗುಡ್ಡದ ಬಯಲು ಜಾಗೆಯಲ್ಲಿ ನಿಲ್ಲಿಸಿರುವ ರಾಜಿಸ್ಥಾನ್ ಗಮ್ ಪ.ಲಿ.ಮಾಲಿಕತ್ವದ ಎಸ್.ಡಿ.-23 ಯಂತ್ರದ ಸುಮಾರೂ 18 ಲೆಂತ್ ಕಾಪರ್ ವೈಯರ್ ಅದರ ಸುತ್ತಳತೆ 245 ಸ್ಕೈಯರ್ ಎಂ.ಎಂ.ಅಳತೆ ಅದರ ಅ||ಕಿ||450000/-ರೂ.ಕಿಮ್ಮತ್ತಿನದ್ದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 11/2021 ವ್ತಕ್ತಿ ಸಾವು.

             ಕುಮಾರ ತಂದೆ ಗದಿಗೆಪ್ಪ ಬಡಳ್ಳೇರ ವಯಾ 32 ವರ್ಷ ಸಾಃ ಹಿರೇಮೊರಬ ತಾಃ ರಟ್ಟೀಹಳ್ಳಿ. ಇವನು ದಿನಾಂಕ 26-07-2021 ರಂದು ಸಂಜೆ 4-00 ಗಂಟೆ ಸುಮಾರಿಗೆ ಮನೆಯಲ್ಲಿ ಊಟ ಮಾಡಿಕೊಂಡು ಮನೆಯಿಂದ ಹೊಳೆ ಕಡೆಗೆ ಹೋಗಿ ಬಹುಶಃ ಆಕಸ್ಮಕವಾಗಿ ಕಾಲು ಜಾರಿ ಬಿದ್ದು ಹೊಳೆಯ ಸೆಳವಿನಲ್ಲಿ ಸಿಕ್ಕು ಈಜಲು ಬಾರದೆ ಮರಣ ಹೊಂದಿ ಶವವು ತಲೆಕೊಂಡು ಬಂದು ರಟ್ಟಿಹಳ್ಳಿ ತೊಟಗಂಟಿ ನಡುವೆ ಹೊಸದಾಗಿ ಕಟ್ಟುತ್ತಿರವ ಬ್ಯಾರೇಜನಲ್ಲಿ ಮುಳ್ಳಿನಲ್ಲಿ ಸಿಕ್ಕಿಕೊಂಡು ದಿನಾಂಕ 30-07-2021 ರಂದು ಮದ್ಯಾಹ್ನ 1-30 ಗಂಟೆಗೆ ಶವವಾಗಿ ಸಿಕ್ಕಿದ್ದು ಇರುತ್ತದೆ ವಿನಃ ನನ್ನ ಮಗನ ಮರಣದಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವದಿಲ್ಲ. ಅಂತಾ ಮೃತನ ತಾಯಿ ಠಾಣೆಗೆ ಹಾಜರಾಗಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 18/2021 ಹಾವು ಕಡಿತದಿಂದ ಯುವಕ ಸಾವು.

            ಅಭಿಸೇಕ  ಶಂಕ್ರಪ್ಪ ಮಲ್ಲಾಡದ ವಯಾ: 17 ಸಾ|| ನೇಟಗಿನಕೊಪ್ಪ ಇವನು ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಸಿಕೊಂಡು ತನ್ನ ಚಿಕ್ಕಪ್ಪನ ಮನೆಗೆ ಕಳೇದ 4-5 ದಿನಗಳ ಕೆಳಗೆ ಚಾಕಾಪೂರ ಗ್ರಾಮಕ್ಕೆ ಬಂದಿದ್ದು ದಿನಾಂಕ : 28-07-2021 ರಂದು ತನ್ನ ಚಿಕ್ಕಪ್ಪನಿಗೆ ಊಟಕ್ಕೆ ಕೊಡಲು ಅಂತಾ ಸುಮಾರು 11.30 ಗಂಟೆಗೆ ಹೊಲಕ್ಕೆ ಬಂದ ಸಮಯದಲ್ಲಿ ಯಾವುದೋ ಒಂದು ವಿಷ ಕಾರಕ ಹಾವು ಕಡಿದು ಚಿರಾಡುತ್ತಿದ್ದವನನ್ನು ಒಂದು ಖಾಸಗಿ ವಾಹನದಲ್ಲಿ ಉಪಚಾರಕ್ಕೆ ಶಿಗ್ಗಾವಿ ಸರ್ಕಾರಿ ಆಸ್ಪತ್ರೆ ದಾಖಲು ಮಾಡಿ ನಂತರ ಹೆಚ್ಚಿನ ಉಪಚಾರಕ್ಕೆ ಕೀಮ್ಸ ಆಸ್ಪತ್ರೆ ಹುಬ್ಬಳ್ಳಿ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಅಲ್ಲಿ ಉಪಚಾರ ಹೊಂದುವಾಗ ಉಪಚಾರ ಫಲಿಸದೆ ದಿನಾಂಕ;30/07/2021 ರಂದು ಬೆಳಗಿನ ಜಾವ 05.30 ಗಂಟೆಯ ಸುಮಾರು ಕೀಮ್ಸ ಹುಬ್ಬಳ್ಳಿಯಲ್ಲಿ ಮರಣ ಹೊಂದಿದ್ದು  ಅವನ ಮರಣದಲ್ಲಿ ಯಾವುದೇ  ಸಂಶಯವಿರುದಿಲ್ಲಅಂತಾ ಆದಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 22/2021 ಮಹಿಳೆ ಸಾವು.

            ಸಚಿನ್‌ ತಂದೆ: ಸುರೇಶಗೌಡ ಚನ್ನಗೌಡ್ರ ಹಾಗೂ ಅಕ್ಕವ್ವ ಶಂಕರಗೌಡ ಹರಕಂಗಿ ವಯಾ: 42 ಸಾ|| ನೇಗಳೂರ ಇವರಿಬ್ಬರು ಮೋಟರ ಸೈಕಲದಲ್ಲಿ ಹೋಗುತ್ತಿರುವಾಗ ದಾರಿಮಧ್ಯದಲ್ಲಿ ಅಂದರೆ ಚೌಡಯ್ಯದಾನಪುರ ಪ್ರಾಥಮಿಕ ಶಾಲೆಯ ಹತ್ತಿರ ಮೋಟರ ಸೈಕಲನ್ನು ನಿಲ್ಲಿಸಿ ರಿಸಸ್‌ ಮಾಡಿ ಮರಳಿ ಮೋಟರ ಸೈಕಲನ್ನು ಹತ್ತುತ್ತಿರುವಾಗ ದಿ: 28-07-2021 ರಂದು 16-30 ಗಂಟೆಗೆ ಜೋಲಿಹೋಗಿ ಆಕಸ್ಮಾತ್‌ ಕೆಳಗೆ ಬಿದ್ದು ತಲೆಗೆ ಗಾಯವಾಗಿದ್ದು ಉಪಚಾರ ಕುರಿತು ರಾಣೇಬೆನ್ನೂರ ಓಂ ಆಸ್ಪತ್ರೆಗೆ ನಂತರ ದಾವಣಗೆರೆ ಸಿಟಿಸೆಂಟ್ರಲ್‌ ಆಸ್ಪತ್ರೆಗೆ ದಾಖಲಿಸಿ ಉಪಚಾರ ಕೊಡಿಸಿದರೂ ಗುಣವಾಗದೇ ದಿ: 30-07-2021 ರಂದು 16-30 ಗಂಟೆಗೆ ಮರಣಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 04-08-2021 12:15 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ