ಅಭಿಪ್ರಾಯ / ಸಲಹೆಗಳು

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:111/2021 ಕಲಂ: PROTECTION OF CHILDREN FROM SEXUAL OFFENCES ACT 2012 (U/s-4,6); 376(2)(J) IPC.

                   ದಿನಾಂಕ 30-06-2021 ರಂದು 21-15 ಗಂಟೆಯ ಸುಮಾರಿಗೆ ಮಾಂತೇಶ ಮಂಜಪ್ಪ ಲಮಾಣಿ ಸಾ: ಗಿರಿಯಾಪುರತಾಂಡೇ ತಾ: ಹರಪನಹಳ್ಳಿ ಹಾ:: ಅಂಕಸಾಪುರ ಈತನು ಸಿಂದು ಇವಳಿಗೆ ಮೇಸೇಜ ಮಾಡಿ ದನದ ಮನೆಗೆ ಬರುವಂತೆ ಹೇಳಿ ಕರೆಯಿಸಿಕೊಂಡು ಅವಳಿಗೆ ಮದುವೆಯಾಗುತ್ತೇನೆ, ನಮ್ಮ ಮನೆಯವರಿಗೆ ಒಪ್ಪಿಸುತ್ತೇನೆ ಅಂತಾ ಪುಸಲಾಯಿಸಿ, ಅವಳು ಅಲ್ಪವಯಿ ಅಂತಾ ಗೊತ್ತಿದ್ದರು ಅವಳೊಂದಿಗೆ ದಿನಾಂಕ 27-06-2021 ರಂದು ಬೆಳಗಿನ 00-05 ಗಂಟೆಯ ಸುಮಾರಿಗೆ ಅಂಕಸಾಪುರ ಗ್ರಾಮದಲ್ಲಿರುವ ಮಂಜಪ್ಪ ಇವರ ದನದ ಮನೆಯಲ್ಲಿ ಬಲವಂತವಾಗಿ ಅತ್ಯಾಚಾರ ಮಾಡಿದ ಬಗ್ಗೆ ಮಂಜಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಿರೆಕೇರೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:13/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

            ಶಿವನಗೌಡ ತಂದೆ ನಾಗಪ್ಪ ಕೊಪ್ಪದ ವಯಾ: 50 ವರ್ಷ, ಜಾತಿ: ಹಿಂದೂ ಲಿಂಗಾಯಿತ, ಉದ್ಯೋಗ: ವ್ಯವಸಾಯ, ಸಾ: ಹಾದ್ರಿಹಳ್ಳಿ ತಾ: ಹಿರೇಕೆರೂರು ಈತನು ತಮ್ಮ 02 ಎಕರೆ 17 ಗುಂಟೆ ಜಮೀನದಲ್ಲಿ  ಬೇಸಾಯದ ಸಂಬಂದ ಹಿರೇಕೆರೂರ ಎಸ್,ಬಿ,ಐ ಬ್ಯಾಂಕು. ಹಿರೇಕೆರೂರ ಬ್ಯಾಂಕಿನಲ್ಲಿ ಒಟ್ಟು ಸುಮಾರು 2 ಲಕ್ಷ 90 ಸಾವಿರ ರೂಪಾಯಿ ಸಾಲ ಮಾಡಿದ್ದು ಅಲ್ಲದೇ ಯತ್ತಿನಹಳ್ಳಿ ಎಂ.ಕೆ ಗ್ರಾಮದ ಸೊಸೈಟಿಯಲ್ಲಿ 20 ಸಾವಿರ ರೂಪಾಯಿ ಸಾಲ ಹಾಗೂ  ಕೈಗಡವಾಗಿ 04 ಲಕ್ಷ ರೂಪಾಯಿ ಹೀಗೆ ಸಾಲ ಮಾಡಿಕೊಂಡು ಈ ವರ್ಷ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಈ ವರ್ಷ ಸೊಂಟಿ ಬೆಳೆ ಕೊಳೆರೋಗ ಬಂದು ಸರಿಯಾಗಿ ಬಾರದೇ ಇದ್ದರಿಂದಾ ಸಾಲ ಹೇಗೆ ತೀರಿಸುವದು ಅಂತಾ ಮಾನಸಿಕ ಮಾಡಿಕೊಂಡು ದಿನಾಂಕ: 29/06/2021 ರಂದು 16-00 ಗಂಟೆಯಿಂದ ದಿನಾಂಕ-30/06/2021 ರಂದು ಮುಂಜಾನೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಹಾದ್ರಿಹಳ್ಳಿ ಗ್ರಾಮದ ತನ್ನ ವಾಸದ ಮನೆಯಲ್ಲಿ ತನ್ನಷ್ಟಕ್ಕೆ ತಾನೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಮೃತನ ಸಾವಿನಲ್ಲಿ ಯಾವದೇ ಸಂಶಯವಿರುವದಿಲ್ಲ ಅಂತಾ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ  ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:13/2021  ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

            ಶ್ರೀ.ಪುಟ್ಟನಗೌಡ ತಂದೆ ಚಂದ್ರಗೌಡ ಪಾಟೀಲ ವಯಾ.39 ವರ್ಷ ಜಾತಿ.ಹಿಂದೂ ಕ್ಷತ್ರೀಯ ಉದ್ಯೋಗ.ಚಾಲಕ ಕೆಲಸ ಸಾ.ಕಂಚಿನೆಗಳೂರ ತಾ.ಹಾನಗಲ್ಲ ಇವನು ತನಗೆ ಇರುವ ಹೊಟ್ಟೆ ನೋವು ಕಾಯಿಲೆಯನ್ನು ಮನಸ್ಸಿಗೆ ಹಚ್ಚಿಕೊಂಡು ಅತಿಯಾದ ಸರಾಯಿ ಸೇವನೆ ಮಾಡುವ ಚಟವನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ : 30/06/2021 ರಂದು ಮುಂಜಾನೆ 09-00 ಘಂಟೆ ಸುಮಾರಿಗೆ ತನ್ನ ವಾಸದ ಮನೆಯಲ್ಲಿ ಕುತ್ತಿಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಮರಣ ಹೊಂದಿದ್ದು ಮೃತನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 09-07-2021 06:48 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ