ಅಭಿಪ್ರಾಯ / ಸಲಹೆಗಳು

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:76/2021 ಕಲಂ: 380, 457 IPC.

             ಬ್ಯಾಡಗಿ ತಾಲ್ಲೂಕ ಬ್ಯಾಡಗಿ ತಾಲ್ಲೂಕ ಮೊಟೇಬೆನ್ನೂರ ಗ್ರಾಮದ ಮಹಾರಾಜ ವೈನ್ಸ್ ದಲ್ಲಿ ದಿನಾಂಕ:29-05-2021 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ:30-05-2021 ಮುಂಜಾನೆ 06-30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮೊಟೇಬೆನ್ನೂರ ಗ್ರಾಮದ ಮಹಾರಾಜ ವೈನ್ಸ್ ದಲ್ಲಿ ತಗಡುಗಳನ್ನು ಕಿಂಡಿ ಮಾಡಿ ಒಳಗೆ ಹೋಗಿ ಅಂಗಡಿಯ ಶೇಟರ ಮೇಲೆ ಇರುವ ವೆಂಟಿಲೇಟರ್ ಮೂಲಕ ಒಳಗೆ ಇಳಿದು ಅಂಗಡಿಯಲ್ಲಿದ್ದ 1] 180 ಎಂ.ಎಲ್ ದ 3 ಬಾಕ್ಸ್ ಒಟ್ಟು 144 ಪೌಚ 3 ಏಸಸ್ ಅ:ಕಿ: 7380-00 ರೂ.ಗಳು 2] 180 ಎಂ.ಎಲ್ ದ 3 ಬಾಕ್ಸ್ 144 ಪೌಚ  ಓರಿಜನಲ್ ಚಾಯ್ವಿಸ್ ಅ:ಕಿ: 10350-00 ರೂ.ಗಳು  3] 180 ಎಂ.ಎಲ್ ದ 100 ಪೇಪರ್ 22 ಬಾಟಲಗಳು ಅ:ಕಿ: 13,200-00 ರೂಗಳು 4] 750 ಎಂ.ಎಲ್ ದ  ಡಿ.ಎಸ್.ಪಿ ಬ್ಲಾಕ್  4 ಬಾಟಲಗಳು ಅ:ಕಿ: 2720-00 ರೂ.ಗಳು 6] 90 ಎಂ.ಎಲ್ ದ  ಬ್ಯಾಕ್ ಪೇಟರ 96 ಬಾಟಲಗಳು ಅ:ಕಿ: 6520-00 ರೂ.ಗಳು 7] 1 ಬಾಕ್ಸ ಬುಡವೇಜರ್ ಟಿನ್  ಮತ್ತು 2 ಬಾಕ್ಸ ನಾಕೌಟ ಟಿನ ಅ;ಕಿ: 6240-00 ರೂ.ಗಳು 8] ರೋಕ 10,000/- ಚಿಲ್ಲರೆ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 20/2021 ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ.

                  ಕುಮಾರಿಃವಿನೋದಾ ತಂದೆ ಕುಮಾರ ಲಮಾಣಿ ವಯಾಃ16 ವರ್ಷ ಜಾತಿಃಹಿಂದೂ ಲಮಾಣಿ ಉದ್ಯೋಗಃವಿದ್ಯಾರ್ಥಿನಿ ಸಾಃಗುರುರಾಯಪಟ್ಟಣ ತಾಃಹಾನಗಲ್ಲ ಇವಳಿಗೆ ಈಗ ಸುಮಾರು 3-4 ವರ್ಷಗಳಿಂದ ಮುಟ್ಟು ಆಗುವ ಸಮಯದಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದು  ಆ ಕಾರಣಕ್ಕೆ ಹೊಟ್ಟೆ ನೋವು ಜಾಸ್ತಿ ಆಗುತ್ತಾ ಹೋಗಿದ್ದರಿಂದ ತನ್ನಷ್ಟಕ್ಕೆ ತಾನೇ ದಿನಾಂಕಃ25/05/2021 ರಂದು ಮುಂಜಾನೆಃ09-00 ಗಂಟೆಯ ಸುಮಾರಿಗೆ ನಮ್ಮ ಮನೆಯ ಬಚ್ಚಲು ಕೋಣೆಯಲ್ಲಿಟ್ಟಿದ್ದ ಕಳೆನಾಶಕ ಎಣ್ಣೆಯನ್ನು ಸೇವನೆ ಮಾಡಿದ್ದು ಉಪಚಾರಕ್ಕೆ ಅಕ್ಕಿಆಲೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರಕ್ಕೆ ದಾಖಲು ಮಾಡಿ ಉಪಚಾರವನ್ನು ಕೊಡಿಸಿ ನಂತರ ಹೆಚ್ಚಿನ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರವನ್ನು ಕೊಡಿಸಿ ಮನೆಗೆ ಕರೆದುಕೊಂಡು ಬಂದು ಉಪಚಾರವನ್ನು ಕೊಡುತ್ತಾ ಬಂದಿದ್ದು ನಂತರ ದಿನಾಂಕಃ28/05/2021 ರಂದು ಮುಂಜಾನೆಃ11-00 ಗಂಟೆಯ ಸುಮಾರಿಗೆ ತುಂಬಾ ತ್ರಾಸ್ ಆಗಿದ್ದರಿಂದ ಉಪಚಾರಕ್ಕೆ ಹಾನಗಲ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರಕ್ಕೆ ದಾಖಲು ಮಾಡಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲು ಮಾಡಿದ್ದು ಅಲ್ಲಿ ಉಪಚಾರದಲ್ಲಿದ್ದಾಗ ಉಪಚಾರ ಫಲಿಸದೇ ದಿನಾಂಕಃ28/05/2021 ರಂದು ರಾತ್ರಿಃ08-15 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ನನ್ನ ಮಗಳ ಸಾವಿನಲ್ಲಿ ಬೇರೆ ಏನೂ ಸಂಶಯವಿರುವುದಿಲ್ಲ ಅಂತಾ ಮೃತಳ ತಾಯಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 02-06-2021 04:38 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080