ಅಭಿಪ್ರಾಯ / ಸಲಹೆಗಳು

ಕಾಗಿನೇಲೆ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 27/2021 ವ್ಯಕ್ತಿ ಕಾಣೆ.

               ಮೃತ್ಯುಂಜಯ ತಂದೆ ಗಣೇಶಪ್ಪ ಕಚವಿ ವಯಾ 61 ವರ್ಷ ಜಾತಿ ಹಿಂದೂ ಲಿಂಗವಂತ ಉದ್ಯೋಗ. ವ್ಯವಸಾಯ ಸಾ||ಸಿದ್ದಾಪೂರ ಈತನು ದಿನಾಂಕಃ-28-04-2021 ರಂದು ಮುಂಜಾನೆ 6-30 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರಿಗೂ ಏನನ್ನು ಹೇಳದೆ ಕೆಳದೆ ಮನೆಯಿಂದ ಹೊರಗೆ ಹೊದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು ಕಾಣೆಯಾದಾಗಿನಿಂದ ಇಲ್ಲಿಯವರೆಗೆ ಊರಲ್ಲಿ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ. ಹಾಗೂ ನಮ್ಮ ಸಂಬಂಧಿಕರ ಊರುಗಳಲ್ಲಿ ತಿರುಗಾಡಿ ಹುಡುಕಾಡಿದರು ಸಿಕ್ಕಿರುವದಿಲ್ಲಾ ಕಾಣೆಯಾದ ತನ್ನ ತಂದೆಗೆ ಪತ್ತೆ ಮಾಡಿಕೊಡಲು ಗುರುರಾಜ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 51/2021 ಕಲಂ: 279,304(A) IPC.

          ದಿನಾಂಕ; 22-04-2021 ರಂದು ಸಂಜೆ 7-00 ಗಂಟೆ ಸುಮಾರಿಗೆ ಚಿಕ್ಕೇರೂರ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ ರಸ್ತೆಯ ಮೇಲೆ ನಿಸ್ಸಾರ್ ಅಹ್ಮದ್ ತಂದೆ ದಾವಲಸಾಬ ಬಾಳೂರ. ಸಾ;ಚಿಕ್ಕೇರೂರ. ತಾ; ಹಿರೇಕೆರೂರ ಈತನು ತನ್ನ ಗೂಡ್ಸ ಆಟೋ ನಂ ಕೆಎ 27/ಸಿ-1674 ನೇದ್ದನ್ನು ಚಿಕ್ಕೇರೂರ ಬಸ್ಟ್ಯಾಂಡ್ ಕಡೆಯಿಂದ ಹಂಸಭಾವಿ ಕಡೆಗೆ ಅತೀ ವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ತನ್ನ ಮುಂದೆ ರಸ್ತೆ ಸೈಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮುಕ್ತಾರ್ ತಂದೆ ರಜಾಕ್ಸಾಬ ಬಳ್ಳಾರಿ, ವಯಾ: 50 ವರ್ಷ, ಉದ್ಯೋಗ: ಕೂಲಿ ಕೆಲಸ, ಜಾತಿ: ಮುಸ್ಲಿಂ, ಸಾ: ಚಿಕ್ಕೇರೂರ, ತಾ: ಹಿರೇಕೆರೂರ ಈತನಿಗೆ ಹಿಂದಿನಿಂದ ಡಿಕ್ಕಿಮಾಡಿ ಅಪಘಾತ ಪಡಿಸಿ ಭಾರಿ ಘಾಯ ಪಡಿಸಿದ್ದು ಅಲ್ಲದೆ ಘಾಯಾಳು ಆಸ್ಪತ್ರೆಯಲ್ಲಿ ದಾಖಲಾಗಿ ಉಪಚಾರ ಪಡೆದು ನಂತರ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಹೋಗಲು ತನ್ನ ಮನೆಗೆ ಹಣವನ್ನು ತೆಗೆದುಕೊಂಡು ಹೋಗಲು ಬಂದಾಗ ದಿನಾಂಕ; 29-04-2021 ರಂದು ಸಂಜೆ 5-45 ಗಂಟೆಗೆ ಗಾಯಾಳು ಮುಕ್ತಾರ್ ತಂದೆ ರಜಾಕ್ಸಾಬ ಬಳ್ಳಾರಿ ಇವನು ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬಂಕಾಪೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 05/2021 ವ್ಯಕ್ತಿ ಸಾವು.

                        ಬಸವರಾಜ ತಂದೆ ಯಲ್ಲಪ್ಪ ಮಾದರ@ ಹಾದಿಮನಿ ವಯಾ:22 ವರ್ಷ ಜ್ಯಾತಿ: ಹಿಂದೂ ಮಾದರ ಉದ್ಯೋಗ: ಕೂಲಿ ಕೆಲಸ ಸಾ: ಬಂಕಾಪುರ ಅಂಬೇಡ್ಕರ ನಗರ ತಾ:ಶಿಗ್ಗಾಂವ ಇತನು  ದಿನಾಂಕ: 28-04-2021 ರಂದು ರಾತ್ರಿ 08.00 ಗಂಟೆಯಿಂದ  ದಿನಾಂಕ:29-04-2021 ರಂದು ಬೆಳಿಗ್ಗೆ  06.00 ಗಂಟೆಯ ನಡುವಿನ ಅವದಿಯಲ್ಲಿ ಮನೆತನ ನಡೆಸುವ ಬಗ್ಗೆ ತನ್ನ ತಂದೆ ಯಲ್ಲಪ್ಪ ಬುದ್ದಿ ಹೇಳಿದಕ್ಕೆ ಸಿಟ್ಟು ಮಾಡಿಕೊಂಡು ಮನೆಯಿಂದ ಹೊರಗೆ ಹೋಗಿ ಬಂಕಾಪೂರದ ಕುಂಬಾರಗಟ್ಟಿ ನೀರು ತುಂಬಿದ ಕೆರೆಗೆ  ತನಷ್ಟಕ್ಕೆ ತಾನೆ ಹಾರಿ ಕೆರೆಯ ನೀರಿನಲ್ಲಿ ಮುಳಗಿ, ನೀರು ಕುಡಿದು ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 14/2021 ಅನಾಮದೇಯ ವ್ಯಕ್ತಿ ಸಾವು.

                 ಅನಾಮಧೇಯ ವ್ಯಕ್ತಿ 40-45 ವರ್ಷದವನಿದ್ದು, ಸದರಿಯವನು ದಿನಾಂಕ: 30/04/2021 ರಂದು ಮಧ್ಯಾಹ್ನ 03-45 ಗಂಟೆಯಿಂದ ಸಂಜೆ 04-30 ಗಂಟೆಯ ನಡುವಿನ ಅವಧಿಯಲ್ಲಿ ರಾಣೇಬೆನ್ನೂರ ಶಹರದ ಹಳೇ ಪಿ.ಬಿ. ರಸ್ತೆ, ಕುರುಬಗೇರಿ ಕ್ರಾಸ, ಕಡ್ಲೆಪ್ಪನವರ ಓಣಿ ಹತ್ತಿರ ಇರುವ ಶ್ರೀ ಮೈಲಾರಲಿಂಗೇಶ್ವರ ಟ್ರೇಡರ್ಸ ಎನ್ನುವ ದಲಾಲಿ ಅಂಗಡಿಯ ಮುಂದೆ ಮಲಗಿಕೊಂಡಿದ್ದವನು ಅವನಿಗಿದ್ದ ಯಾವದೋ ಕಾಯಿಲೆಯಿಂದ ಬಳಲಿ ಅವನಷ್ಟಕ್ಕೆ ಅವನೇ ಮಲಗಿದ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದು ಅವನ ಸಾವಿನಲ್ಲಿ ಯಾವುದೇ ರೀತಿಯ ಸಂಶಯ ಇರುವುದಿಲ್ಲ. ಅಂತಾ ವಿರುಪಾಕ್ಷಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 01-05-2021 01:43 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ