ಅಭಿಪ್ರಾಯ / ಸಲಹೆಗಳು

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:20/2021 ಕಲಂ: 279, 304(A) IPC.

             ದಿನಾಂಕ:29/03/2021 ರಂದು 21-30 ಗಂಟೆಯ ಸುಮಾರಿಗೆ ಕುಮಾರಪಟ್ಟಣಂ ಪೊಲೀಸ್ ಠಾಣಾ ಹದ್ದು ರಾಣೇಬೆನ್ನೂರ ಡಾವಣಗೇರಿ ಎನ್ಎಚ್-04 ರಸ್ತೆಯ ಮೇಲೆ ಮಾಕನೂರ ಕ್ರಾಸ್ ಬ್ರಿಡ್ಜ ಹತ್ತಿರ ಸುನೀಲ ತಂದೆ ಹಾಲಪ್ಪ ರಿತ್ತಿ ವಯಸ್ಸು :22 ವರ್ಷ ಜಾತಿ ಹಿಂದೂ ಲಿಂಗವಂತ ಉದ್ಯೋಗ: ವ್ಯಾಪಾರ ಸಾ: ಹನುಮನಹಳ್ಳಿ ತಾ:ಹಾವೇರಿ ಇವನು ತನ್ನ ರಾಯಲ್ ಎನ್.ಫೀಲ್ಡ್ ಮೋಟಾರ ಸೈಕಲ್ ನಂಬರ: ಕೆಎ:17/ಇಎಪ್-7305 ನೇದ್ದನ್ನು ರಾಣೆಬೆನ್ನೂರ ಕಡೆಯಿಂದ ಡಾವಣಗೇರಿ ಕಡೆಗೆ ಅತೀ ಜೋರಿನಿಂದ ನಿರ್ಲಕ್ಷ್ಯ ತಾತ್ಸರತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಹೋಗಿ ಎನ್.ಹೆಚ್-04 ರಸ್ತೆ ಮಾಕನೂರ ಕ್ರಾಸ್ ಹತ್ತಿರ ತನ್ನ ಮುಂದೆ ಹೋಗುತ್ತಿದ್ದ ಯಾವುದೋ ಗಾಡಿಯ ಹಿಂದಿನ ಎಡಭಾಗಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ್ ಸೈಕಲ್  ಸಮೇತ ರಸ್ತೆಗೆ ಬಿದ್ದು ತನಗೆ  ತಲೆಗೆ, ಕಾಲುಗಳಿಗೆ, ಹೊಟ್ಟೆಗೆ, ತೊಡೆಗೆ ಮರಣಾಂತಿಕ ಗಾಯಪಡಿಸಿಕೊಂಡು ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:60/2021 ಕಲಂ: 354(B), 506, 504, 143, 147, 323, 324 IPC.

              ಪ್ರತಾಪ ಹೀರಪ್ಪ ಲಮಾಣಿ ಹಾಗೂ ಬೀಮಪ್ಪ ಚಂದ್ರಪ್ಪ ಲಮಾಣಿ ಹಾಗೂ ಸಹಚರರು ಸಾ||ಗಂಗಾಜಲತಾಂಡಾ ಎಲ್ಲರು ಒಂದೆ ಊರಿನವರು ಇದ್ದು. ಪ್ರತಾಪ  ಸಮಾಜ ಸೇವೆಯಲ್ಲಿ ನಿರತರಾಗಿದ್ದನ್ನೇ ದ್ವೇಷ ಇಟ್ಟುಕೊಂಡ ಬೀಮಪ್ಪ ಚಂದ್ರಪ್ಪ ಲಮಾಣಿ ಇವನು ದ್ವೇಷ ಸಾದಿಸುತ್ತಾ ಬಂದಿದ್ದು, ಇದೇ  ಕಾರಣಕ್ಕಾಗಿ ದಿನಾಂಕ 29-03-2021 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ ಬೀರಪ್ಪ ಹಾಗೂ ಆತನ ಸಹಚರರು ಸೇರಿಕೊಂಡು ಪ್ರತಾಪ ಇವರ ಮನೆಯ ಪಕ್ಕದಲ್ಲಿರುವ ದರ್ಶನ ಎಂಬ ಹುಡುಗನಿಗೆ ಬೈಯ್ದಾಡುತ್ತಿದ್ದಾಗ ಪ್ರತಾಪ ಅಲ್ಲಿ ಕಂಡಿದ್ದರಿಂದಾ ಅವನಿಗೆ ಸಹಾ ಬಾಯಿಗೆ ಬಂದಂತೆ ಬೈಯ್ದಾಡುತ್ತಾ ಎದಿಯ ಮೇಲಿನ ಅಂಗಿ ಹಿಡಿದು ಜಗ್ಯಾಡಿ ಕೈಯಿಂದಾ , ಬಡಿಗೆಯಿಂದಾ ಹೊಡಿಬಡಿ ಮಾಡಿದ್ದಲ್ಲದೇ ಬಿಡಿಸಿಕೊಳ್ಳಲು ಬಂದ ಪ್ರತಾಪ ಇವರ ತಾಯಿ ಹೀರವ್ವ ಇವಳಿಗೆ ಬಾಯಿಗೆ ಬಂದಂತೆ ಬೈಯ್ದಾಡಿ ತೆಲೆ ಕುದಲಾ ಹಿಡಿದು ಜಗ್ಯಾಡಿ ಜೀವಧ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:11/2021 ವ್ಯಕ್ತಿ ಸಾವು.

              ವಿನಾಯಕ ತಂದೆ ಪುಟ್ಟಪ್ಪ ಲಮಾಣಿ, ವಯಸ್ಸು: 17 ವರ್ಷ, ಸಾ: ನೆಲೊಗಲ್ಲ ತಾಂಡಾ, ತಾ: ಹಾವೇರಿ, ಈತನು ಊರಲ್ಲಿ ಕೆಲಸ ಮಾಡಿಕೊಂಡಿದ್ದಲ್ಲದೇ ಪಾರಿವಾಳಗಳನ್ನ ಸಾಕಿ ಮಾರಾಟ ಮಾಡುತ್ತಾ ಬಂದಿದ್ದು, ದಿನಾಂಕ: 28-03-2021 ರಂದು ನೆಲೊಗಲ್ಲ ತಾಂಡಾದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಮುಂಜಾನೆ 11-00 ಗಂಟೆಗೆ ಬಣ್ಣ ಆಟವಾಡಲು ಮನೆಯಿಂದ ಊರಲ್ಲಿ ಹೋಗಿ ಮರಳಿ ಮನೆಗೆ ಬಾರದೇ ದಿನಾಂಕ: 30-03-2021 ರಂದು ಮುಂಜಾನೆ 07-30 ಗಂಟೆಯ ನಡುವಿನ ಅವಧಿಯಲ್ಲಿ ನೆಲೊಗಲ್ಲ ತಾಂಡಾದ ಕಲ್ಲ ಕಣಿವೆಯ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು ನನ್ನ ತಮ್ಮ ವಿನಾಯಕನ ಸಾವು ಹೇಗೆ ಆಯಿತು ಅಂತಾ ತಿಳಿದು ಬಂದಿಲ್ಲ ಈತನ ಸಾವಿನಲ್ಲಿ ಸಂಶಯ ಇದ್ದು ಮುಂದಿನ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:12/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

              ಸುರೇಶ ತಂದೆ ಡಾಕಪ್ಪ ಲಮಾಣಿ ವಯಾ-45 ವರ್ಷ. ಜಾತಿ-ಲಮಾಣಿ  ಉದ್ಯೋಗ-ಶೇತ್ಕಿ  ಕೆಲಸ  ಸಾ-ಹೊಸಗುಂಗರಗೊಪ್ಪ  ತಾ-ಬ್ಯಾಡಗಿ ಇತನು ತನ್ನ ಬಾಬತ್ತ ಜಮೀನು ರಿ..ನಂ 88/2 ಕ್ಷೇತ್ರ 2 ಎಕರೆ ಜಮಿನು ತನ್ನ ಅಕ್ಕ-ತಂಗಿಯರ ಹೆಸರಿಗೆ ಜೈಂಟ ಇದ್ದುದ್ದರಿಂದ ಬ್ಯಾಂಕಿನಲ್ಲಿ ಸಾಲ ಸಿಗದಿದ್ದರಿಂದ ತಮ್ಮ ದೊಡ್ಡಪ್ಪನ ಮಗನ ಹೆಸರಿನಲ್ಲಿ ಸಿಂಡಿಕೇಟ ಬ್ಯಾಂಕ ಶಿಡೆನೂರದಲ್ಲಿ 6,00,000/- ರೂ ಹಾಗೂ ಮತ್ತೂರ ಸೊಸಾಯಟಿಯಲ್ಲಿ 20,000/- ರೂ ಸಾಲವನ್ನು ಮಾಡಿದ್ದು ಈಗ 2-3 ವರ್ಷಗಳಿಂದ ಮಳೆಯು ಬಾರದೇ ಈ ವರ್ಷ ಅತಿಯಾದ ಮಳೆಯಾಗಿದ್ದರಿಂದ ಬಿತ್ತಿದ ಪೀಕು ಬಾರದೇ ಇದ್ದುದ್ದರಿಂದ ಮಾಡಿದ ಸಾಲವನ್ನು ಹೇಗೆ ತಿರಿಸುವದು ಅಂತಾ ಮಾನಸಿಕ ಮಾಡಿಕೊಂಡಿ ತನ್ನಷ್ಠಕ್ಕೆ ತಾನೆ ದಿನಾಂಕ:29-03-2021 ರಂದು ಮದ್ಯಾನ 12-00 ಗಂಟೆಯಿಂದ ದಿನಾಂಕ:30-03-2021 ರಂದು ಮುಂಜಾನೆ 10-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನಷ್ಟಕ್ಕೆ ತಾನೆ ಗುಂಗರಗೊಪ್ಪ ಅಡವಿಯಲ್ಲಿ ತನ್ನ ಲುಂಗಿಯ ಚುಂಗಿನಿಂದ ಕದ್ನ ಮರಕ್ಕೆ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾನೆ ವಿನಃ ನನ್ನ ಗಂಡನ ಮರಣದಲ್ಲಿ ಬೇರೆ ಸಂಶಯ ಇರುವದಿಲ್ಲಾ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 31-03-2021 04:39 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080