ಅಭಿಪ್ರಾಯ / ಸಲಹೆಗಳು

ಕಾಗಿನೇಲೆ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:58/2021 ಕಲಂ: 504,355,143,147,149,302,323IPC.

                     ಕಾಗಿನೆಲೆ ಪಿ.ಎಸ್. ಹದ್ದಿ ಪೈಕಿ ಬಡಮಲ್ಲಿ ಗ್ರಾಮದಲ್ಲಿ ಇದರಲ್ಲಿಯ ಜಗದೀಶಗೌಡ ಕರಬಸಗೌಡ ಹೊಂಡದಗೌಡ್ರ ಸಾ|| ಬಡಮಲ್ಲಿ ಹಾಗೂ ಗದಿಗೆಪ್ಪಗೌಡ ಬಸನಗೌಡ ಹೊಂಡದಗೌಡ್ರ ಇವರ ನಡುವೆ ಬಡಮಲ್ಲಿ ಗ್ರಾಮದ ಹದ್ದಿಯ ರಿ.ಸ.ನಂ 40/4 ಮತ್ತು 40/2 ನೇದ್ದರ ಜಮೀನುಗಳ ಸಂಬಂಧ ತಂಟೆ ಇದ್ದು ದಿನಾಂಕಃ-26-08-2021 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಜೀವರಾಜ ಹೇಮನಗೌಡ ಪಾಟೀಲ್‌ ಇವರು ತನ್ನ ತಂದೆಯಾದ ಹೇಮನಗೌಡ ದ.ತಾಯಿ ಗೌರಮ್ಮ ಪಾಟೀಲ ವಯಾ 67 ವರ್ಷ ಇವರೊಂದಿಗೆ ತಮ್ಮ ಬಾಭತ್ ರಿ.ಸ.ನಂ 40/2ರ ಜಮೀನಿಗೆ ಹೋಗಿ ಜಮೀನು ಸಾಗು ಮಾಡಲು ಅಂತಾ ಎತ್ತುಗಳಿಗೆ ರಂಟಿ ಕಟ್ಟುತ್ತಿದ್ದಾಗ ಗದಿಗೇಪ್ಪಗೌಡ ಹಾಗೂ ಆತನ ಸಹಚರರು ಸೇರಿ ಸಂಗನಮತ ಮಾಡಿಕೊಂಡು ತಮ್ಮ ಸಾಮಾನ್ಯ ಉದ್ದೇಶವನ್ನು ಸಾಧಿಸುವಕ್ಕೋಸ್ಕರ ಹೊಲ ಹೊಡಿಬ್ಯಾಡ್ರಿ ಸೂಳೇಮಕ್ಕಳ ಅಂತಾ ಹಲ್ಕಟ್ ಬೈಯ್ದು ಜೀವರಾಜ ಇವರ ತಂದೆಗೆ ಕೈಯಿಂದ. ಚಪ್ಪಲಿಯಿಂದ ಮೈಕೈಗೆ ಹೊಡಿಬಡಿ ಮಾಡಿದ್ದು ಅಲ್ಲದೆ ಜಗಳ ಬಿಡಿಸಲು ಹೋದ ಪಿರ್ಯಾದಿಯ ಚಿಕ್ಕಪ್ಪರಾದ 1)ಜಗದೀಶಗೌಡ ತಂದೆ ಕರಬಸನಗೌಡ ಹೊಂಡದಗೌಡ್ರ 2)ಹನುಮಗೌಡ ತಂದೆ ಕರಬಸನಗೌಡ ಹೊಂಡದಗೌಡ್ರ ಇವರಿಬ್ಬಗೆ ಸಹ ಕೈಯಿಂದ ಹೊಡಿಬಡಿ ಮಾಡಿದ್ದು ಅಲ್ಲದೆ ದಿನಾಂಕಃ-29-08-2021 ರಂದು ಮುಂಜಾನೆ 6-30 ಗಂಟೆಯ ಸುಮಾರಿಗೆ ರಿ.ಸ.ನಂ 42/4 ನೇದ್ದರ ಜಮೀನಿಗೆ ಹೋಗಿದ್ದ ಹೇಮನಗೌಡ ದ.ತಾಯಿ ಗೌರಮ್ಮ ಪಾಟೀಲ ವಯಾ 67ವರ್ಷ ನೇದ್ದವನಿಗೆ ಹೊಡೆದು ಕೊಲೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:130/202 ಕಲಂ: 379 IPC.

                     ದಿನಾಂಕ:28-08-2021 ರಂದು 15-00 ಗಂಟೆಯಿಂದ 15-30 ಗಂಟೆಯ ನಡುವಿನ ಅವಧಿಯಲ್ಲಿ ಹೊನ್ನಪ್ಪ ತಂದೆ ಹನುಮಂತಪ್ಪ ತಿಮ್ಮೇನಹಳ್ಳಿ ಇವರು ರಾಣೇಬೆನ್ನೂರ ಶಹರದ ಎ.ಪಿ.ಎಂ.ಸಿ ಸಮುಧಾಯ ಭವನ ಉದ್ಥಾಟನೆ ಕಾಲಕ್ಕೆ  ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ಕೊಡಲು ಹೋದ ಕಾಲಕ್ಕೆ ನುಕು ನುಗಲ್ಲಿನಲ್ಲಿ ಯಾರೋ ಕಳ್ಳರು ಪ್ಯಾಂಟ ಜೇಬ ಹತ್ತಿರ ಯಾವುದೋ ಬ್ಲೇಡಿನಿಂದ ಕತ್ತಿರಿಸಿ, ಪ್ಯಾಂಟಿನ ಒಳ ಬೇಬಿನಲ್ಲಿ ಇಟ್ಟಿಕೊಂಡಿದ್ದ 50,000/- ರೂ ಗಳ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡುಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೇಕೆರೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ:141/2021 ಕಲಂ:143,147,148,323,324,354(A),376, 448,511,504,506,149 IPC.

                    ಯಶೋದಾ ಉಜ್ಜನಗೌಡ ಪಾಟೀಲ ಸಾ|| ಜೊಗೊಹಳ್ಳಿ ಹಾಗೂ ದೊಡ್ಡಗೌಡ ರುದ್ರಗೌಡ ಪಾಟೀಲ ಸಾ|| ಜೋಗಿಹಳ್ಳಿ ಹಾಗೂ ಸಹಚರರು ಒಬ್ಬರಿಗೊಬ್ಬರು ಸಂಬಂದಿಕರು ಇದ್ದು ಜೋಗಿಹಳ್ಳಿ ಗ್ರಾಮದ ರಿ.ಸ.ನಂ 2  ಕ್ಷೇತ್ರ 01 ಎಕರೆ 37 ಗುಂಟೆ ಜಮೀನದ ಆಸ್ತಿ ಸಂಬಂದ ಆಗಾಗ ತಂಟೇ ತಕರಾರು ನಡೆಯುತ್ತಾ ಬಂದಿದ್ದು ಅಲ್ಲದೇ ದಿನಾಂಕ ; 29-08-2021 ರಂದು ಮುಂಜಾನೆ 10-30 ಗಂಟೆಯ ಸುಮಾರಿಗೆ ದೊಡ್ಡಗೌಡಾ ಹಾಗೂ ಸಹಚರರು ಸೇರಿ ಗುಂಪುಕಟ್ಟಿಕೊಂಡು ಯಶೋದಾ ಇವರ ಮನೆಗೆ ಅತೀಕ್ರಮಣ ಪ್ರವೇಶ ಮಾಡಿ ಗಾಯಾಳು ಉಜ್ಜನಗೌಡ ಈತನಿಗೆ ಕೈಯಿಂದ, ಕುಡುಗೋಲಿನಿಂದ, ಮುಳ್ಳುತಂತಿಯಿಂದ, ಕಂದ್ಲಿ ಹಾರಿಕೋಲು ದೊಣ್ಣೆಯಿಂದ ಹೊಡೆದು ದುಃಖಾಪತ್ಪಡಿಸುತ್ತಿದ್ದಾಗ ಇದನ್ನು ನೋಡಿ ಬಿಡಿಸಲು ಹೋದ ಯಶೋದ ಇವಳ ಕೈ ಹಿಡಿದು ಎಳೆದು ಮೈಮೇಲಿನ ರವಿಕೆಯನ್ನು ಹರಿದು ಸಿರೇಯನ್ನು ಬಿಚ್ಚಿ ಮಾನಭಂಗಪಡಿಸಿದ್ದು ಅಲ್ಲದೇ ಅತ್ಯಾಚಾರ ಮಾಡುವ ಉದ್ದೇಶದಿಂದ ನೆಲಕ್ಕೆ ಕೆಡವಿ ಮೈಮೇಲೆ ಬಿದ್ದು ಜಬರಿ ಸಂಭೋಗ ಮಾಡಲು ಪ್ರಯತ್ನಿಸಿದ್ದು ಆಗ ಈ ಘಟನೆ ನೋಡಿ ಬಿಡಿಸಲು ಹೋದ ಗಾಯಾಳು ಶಾಂತಮ್ಮ ಇವರಿಗೂ ನೆಲೆಕ್ಕೆ ಉರುಳಿಸಿ ಸೀರೆ ರವಿಕೆಯನ್ನು ಹಿಡಿದು ಎಳೆದಾಡಿ ಹರಿದು ಅಪಮಾನಪಡಿಸಿದ್ದು ಅಲ್ಲದೇ ಇನ್ನೊಮ್ಮೆ ಈ ಜಮೀನಿನ ತಂಟೆಗೆ ಬಂದರೆ ನಿಮ್ಮನ್ನು ಜೀವಸಹಿತ ಬಿಡುವದಿಲ್ಲಾ ಅಂತಾ  ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 03-09-2021 01:57 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080