ಅಭಿಪ್ರಾಯ / ಸಲಹೆಗಳು

ಹಿರೆಕೇರೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:109/2021 ಕಲಂ:323,354(A),376,511,504,506 IPC.

            ಚಂದ್ರಪ್ಪ ಶಿವನಂದಪ್ಪ ಗಾಣಿಗೇರ ಸಾ|| ಚನ್ನಳ್ಳಿ ಇವನು ದನುಜಾ ಇವರ ಗಂಡನ ಖಾಸ ಅಣ್ಣನಿದ್ದು ದನುಜಾ ಗಂಡನು ತೀರಿಕೊಂಡಿದ್ದು, ಆಸ್ತಿ ಹಂಚಿಕೆಯ ಸಂಬಂದ ದನುಜಾ ಹಾಗೂ ಚಂದ್ರಪ್ಪ ಮದ್ಯೆ ಆಗಾಗ ತಂಟೇ ತಕರಾರು ನಡೆಯುತ್ತಾ ಬಂದಿದ್ದು ಇದ್ದು ದಿನಾಂಕ ; 28-06-2021 ರಂದು ಮುಂಜಾನೆ 10-30 ಗಂಟೆಯ ಸುಮಾರಿಗೆ ದನುಜಾ ತಮ್ಮ ವಾಸದ ಮನೆಯ ಪಕ್ಕದಲ್ಲಿರುವ ಸ್ನಾನದ ಕೋಣೆಗೆ ಹೋಗಿ ಸ್ನಾನ ಮಾಡಲು ಅಂತಾ ಹೊರಟಾಗ ಅಲ್ಲಿಗೆ ಚಂದ್ರಪ್ಪ ಏಕಾ ಏಕಿ ಹೋಗಿ ದನುಜಾ ಕೈ ಹಿಡಿದು ಎಳೆದು ನೆಲಕ್ಕೆ ಕೆಡವಿ ಬಾಯಿಗೆ ಬಟ್ಟೆಯನ್ನು ತುರುಕಿ ಮೈ ಮೇಲೆ ಇದ್ದ ಬಟ್ಟೆಯನ್ನು ಎಳೆದು ಎದೆಯ ಮೇಲೆ ಕೈ ಹಾಕಿದಾಗ ದನುಜಾ ತಪ್ಪಿಸಿಕೊಳ್ಳಲು ಹೋದಾಗ ಅವರ ಮೈ ಮೇಲಿನ ಬಟ್ಟೆಯನ್ನು ಹರಿದು ಅವರ ಮೈ ಮೇಲೆ ಬಿದ್ದು ಎದೆಯನ್ನು ಹಾಗೂ ಹೊಟ್ಟೆಯ ಬಾಗವನ್ನು ಹಿಚುಕಿ ಕೈ ಕಾಲು ಮತ್ತು ಕುತ್ತಿಗೆಯ ಬಾಗದಲ್ಲಿ ಕೈಯಿಂದ ಚಿಬುರಿ ಗಾಯ ಪಡಿಸಿ ತಲೆಯ ಕೂದಲು ಹಿಡಿದು ಜಗ್ಗಾಡಿ ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:114/2021 ಕಲಂ: 380, 457 IPC.

            ಹಾನಗಲ್ಲ ಪೊಲೀಸ ಠಾಣೆಯ ಹದ್ದಿ ಪೈಕಿ ಹಾನಗಲ್ಲ ಶಹರದ ಹೊಸ ಬಸ್ ನಿಲ್ದಾಣದ ಹತ್ತಿರ ಎನ್.ಸಿ,ಜೆ.ಸಿ. ಕಾಂಪ್ಲೆಕ್ಸನಲ್ಲಿರುವ ಶ್ರೀ  ಕಟ್ಟೆ ಬಸವೇಶ್ವರ ಮೆಡಿಕಲ್ಸ್  ಅಂಗಡಿಯಲ್ಲಿ ದಿನಾಂಕ; 27-06-2021 ರಂದು ರಾತ್ರಿ 10-30 ಘಂಟೆಯಿಂದ ದಿನಾಂಕ; 28-06-2021 ರಂದು ಬೆಳಿಗ್ಗೆ 06-30 ಘಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಟ್ಟಿ ಬಸವೇಶ್ವರ ಮೆಡಿಕಲ್ಸ ಎಂಬ ಹೆಸರಿನ ಅಂಗಡಿಯ ಸಣ್ಣ ಶೆಟರ್ಸಗೆ ಹಾಕಿದ್ದ ಕೀಲಿಯನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಒಳಗಡೆ ಬಂದು ಕ್ಯಾಶ ಕೌಂಟರದ ಡ್ರಾದಲ್ಲಿ ಇಟ್ಟಿದ್ದ 200/- ರೂಗಳು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:04/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

            ಕರಬಸಪ್ಪ ತಂದೆ ಮಲ್ಲೇಶಪ್ಪ ಹಲಗೇರಿ ವಯಾ:35 ವರ್ಷ  ಜಾತಿ:ಹಿಂದೂ ಲಿಂಗವಂತ ಉದ್ಯೋಗ:ಪೋಟೋ ಗ್ರಾಫರ್  ವಾಸ:ಕವಲೆತ್ತು ತಾ: ರಾಣೆಬೆನ್ನೂರು. ಇವರು ಸುಮಾರು 03 ತಿಂಗಳಿಂದ ಲಾಕ್ಡೌನ್ ಇದ್ದ ಕಾರಣ ಪೋಟೋ ಗ್ರಾಫರ್ ಕೆಲಸಕ್ಕೆ ಹಾಗೂ ಮತ್ತೆ ಬೆರೆ ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು, ಇದ್ದರಿಂದ ಮನೆಯ ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತಿದೆ ಅಂತಾ ಜೀವನ ನಡೆಸಲು ಮಾಡಿರುವ ಸಣ್ಣ ಪುಟ್ಟ ಸಾಲವನ್ನು ಹೇಗೆ ತಿರಿಸುವುದು ಅಂತಾ ಈ ಎಲ್ಲಾ ಕಷ್ಟಗಳಿಂದ ಮನಸ್ಸಿಗೆ ತುಂಬಾ ಬೇಜಾರಾಗಿದೆ ಅಂತಾ ಜೀವನದಲ್ಲಿ ಜೀಗುಪ್ಸೆ ಮಾಡಿಕೊಂಡು ದಿನಾಂಕ:28/06/2021 ರಂದು 11-00 ಗಂಟೆಯಿಂದ ಸಂಜೆ 17-00 ನಡುವಿನ ಅವದಿಯಲ್ಲಿ ಕವಲೆತ್ತು ಗ್ರಾಮದ ನಮ್ಮ ಮನೆಯ ಆರ್ ಸಿ ಸಿ ಹುಕ್ ಗೆ ಸೀರೆಯಿಂದ ಕೊರಳಿಗೆ ಉರುಲು ಹಾಕಿಕೊಂಡಿದ್ದು ಮೃತ ಪಟ್ಟಿದ್ದು ಇರುತ್ತದೆಯೇ ವಿನಃ ನನ್ನ ಗಂಡನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಿರೆಕೇರೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:12/2021  ನೀರಿನಲ್ಲಿ ಮಳುಗಿ ಮಕ್ಕಳು ಸಾವು.

            ಅಭಿಷೇಕ ತಂದೆ ಬಸನಗೌಡ ಹಂಡೋರಿ ವಯಾ: 14 ವರ್ಷ, ಜಾತಿ: ಹಿಂದೂ ಲಿಂಗಾಯತ, ಉದ್ಯೋಗ: ವಿದ್ಯಾರ್ಥಿ ಸಾ: ದೂದಿಹಳ್ಳಿ, ತಾ: ಹಿರೇಕೆರೂರ. ಹಾಗೂ ಸಂಬಂದಿಕರ ಮಗ ಹರೀಶ ತಂದೆ ಬಸವರಾಜ ಬಾಳಿಕಾಯಿ ವಯಾ: 14 ವರ್ಷ, ಜಾತಿ: ಹಿಂದೂ ಲಿಂಗಾಯತ, ಉದ್ಯೋಗ: ವಿದ್ಯಾಥರ್ಿ ಸಾ: ದೂದಿಹಳ್ಳಿ, ತಾ: ಹಿರೇಕೆರೂರ. ಇಬ್ಬರು ಕೂಡಿಕೊಂಡು ದಿನಾಂಕ ; 29-06-2021 ರಂದು ಮದ್ಯಾಹ್ನ 13-00 ಗಂಟೆಯಿಂದ 13-30 ಗಂಟೆಯ ನಡುವಿನ ಅವಧಿಯಲ್ಲಿ ಮಾಸೂರು ರಸ್ತೆಗೆ ಹೊಂದಿರುವ ದೂದಿಹಳ್ಳಿ ಗ್ರಾಮ ಹದ್ದು ಬಂಧಮ್ಮನ ಕೇರೆಯ ನೀರಿನಲ್ಲಿ ಎತ್ತುಗಳನ್ನ ಮೈ ತೋಳೆಯಲು ಅಂತಾ ಹೋದಾಗ ಆಕಸ್ಮಾತ್ ಕೇರೆಯ ಆಳವಾದ ನೀರಿನಲ್ಲಿ ಮುಳುಗಿ ಎರಡೂ ಜನ ಹುಡುಗರು ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 04-07-2021 11:27 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ