ಅಭಿಪ್ರಾಯ / ಸಲಹೆಗಳು

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 30/2021 ಕಲಂ: 279, 304(A) IPC.

               ದಿನಾಂಕ 29-04-2021 ರಂದು ಸಂಜೆ 05-00 ಗಂಟೆ ಸುಮಾರಿಗೆ ಸರಸ್ವತೆವ್ವ ಮಡಿವಾಳರ ವಯಾ: 58 ಸಾ|| ಹಳೆಮೆಲ್ಮುರಿ ಇವಳು ಹೊಸಮೇಲ್ಮೂರಿ ಕಡೆಯಿಂದ ಹಳೇಮೇಲ್ಮೂರಿ ಕಡೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಅಶೋಕ ಲೈಲ್ಯಾಂಡ ವಾಹನ ನಂಬರ ಕೆ,ಎ-17 ಡಿ-7218 ನೇದ್ದರ ಚಾಲಕ ಶಾಂತವೀರಪ್ಪ ಕಾಳಿ ಸಾ|| ಹೊಸಮೇಲ್ಮೂರಿ ಇವನು ಸದರಿ ವಾಹನವನ್ನು ಜೋರಾಗಿ ವ ನಿರ್ಲಕ್ಷತನಿಂದ ನಡೆಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತಪಡಿಸಿ ಬಲವಾದ ಗಾಯಪಡಿಸಿದ್ದು, ಅವಳಿಗೆ ಉಪಚಾರ ಫಲಿಸದೆ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬಂಕಾಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 43/2021 ವ್ಯಕ್ತಿ ಕಾಣೆ.

          ಬಸವರಾಜ ತಂದೆ ಯಲ್ಲಪ್ಪ ಮಾದರ@ ಹಾದಿಮನಿ ವಯಾ:22 ವರ್ಷ ಸಾ: ಬಂಕಾಪುರ ಇವನು ದಿನಾಂಕ: 28-04-2021 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಅವರ ತಂದೆ  ದುಡಿಮೆಯ ಪಗಾರ ಕೇಳಿದ್ದಕೆ ಸಿಟ್ಟು ಮಾಡಿಕೊಂಡು ಮನೆಯಲ್ಲಿ ಮೋಬೈಲ್ ಬಿಟ್ಟು ಮನೆಯಿಂದ ಹೊರಗೆ ಹೋದವನು ಇದುವರೆಗೂ ವಾಪಸ್ಸ ಮನೆಗೆ ಬಾರದೇ ಕಾಣೆಯಾಗಿದ್ದು ಕಾಣೆಯಾದವನನ್ನು ಹುಡುಕಿಕೊಡಬೇಕೆಂದು ಯಲ್ಲಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 68/2021 ಮಹಿಳೆ ಕಾಣೆ.

           ಕು||ಮಂಜುಳಾ ತಂದೆ ಅಡಿವೆಪ್ಪ ಉದ್ದನಕಾಲ@ವಡ್ಡರ ವಯಾ.23 ವರ್ಷ ಜಾತಿ.ಹಿಂದೂ ವಡ್ಡರ ಉದ್ಯೋಗ:ಟೈಲರ್ ಕೆಲಸ ಸಾ||ಬ್ಯಾಗವಾದಿ ತಾ||ಹಾನಗಲ್ಲ  ಇವಳು ಬ್ಯಾಗವಾದಿ ಗ್ರಾಮದ ತಮ್ಮ ಮನೆಯಿಂದ ದಿನಾಂಕ : 29-04-2021 ರ ರಾತ್ರಿ 01 ಘಂಟೆಯಿಂದ ದಿನಾಂಕ: 29-04-2021 ರ ಮುಂಜಾನೆ 05-30 ಘಂಟೆಯ ನಡುವಿನ ಅವದಿಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರಿಯವಳಿಗೆ ಎಲ್ಲಾ ಕಡೆಗೆ ಹುಡುಕಿದರು ಸಿಕ್ಕಿದ್ದು ಇರುವುದಿಲ್ಲಾ ಕಾರಣ ಕಾಣೆಯಾದ ಮಂಜುಳಾ ಇವಳನ್ನು ಹುಡುಕಿಕೊಡಬೇಕೆಂದು ಗಿರಿಜವ್ವ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಮಡು ಕಾನೂನು ತನಿಖೆ ಕೈಗೊಳ್ಳಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 84/2021 ಮಹಿಳೆ ಕಾಣೆ.

             ಕಾವ್ಯಾ ನಿಂಗರಾಜ ತಂದೆ ಪುಟ್ಟಪ್ಪ ಅಂಬಿಗೇರ ಸಾ|| ಮೇಡ್ಲೇರಿ  ತಾ|| ರಾಣೆಬೆನ್ನೂರ ಇವಳು ದಿನಾಂಕ 28-04-2021 ರಂದು 14-00 ಗಂಟೆಯ ಸುಮಾರಿಗೆ ಕಾವ್ಯಾ ಸೇರಿ ಮನೆಯ ಜನರೆಲ್ಲರೂ ಮಾತಾಡುತ್ತಾ ಕುಳಿತುಕೊಂಡಿದ್ದು ಈ ಕಾಲಕ್ಕೆ ಕಾವ್ಯಾ ಇವಳು ನಮ್ಮ ಅವ್ವ ಮೇಲಿನ ರೂಂದಲ್ಲಿ ಮಲಗಿಕೊಂಡಾಳ ಅಲ್ಲಿಗೆ ಹೋಗಿ ನಾನು ಮಲಗಿಕೊಳ್ಳುತ್ತೇನೆ ಅಂತಾ ಹೇಳಿ ಹೋದವಳು ರೂಮಿಗೆ ಹೋಗದೇ ಎಲ್ಲಿಯೋ ಕಾಣೆಯಾಗಿರುತ್ತಾಳೆ ಅವಳಿಗೆ ಹುಡಕಿಕೊಡಲು ವಿನಂತಿ ಅಂತಾ ನಿಂಗರಾಜ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 09/2021 ವ್ಯಕ್ತಿ ಸಾವು.

                        ಶ್ರೀ.ಚನ್ನಬಸಪ್ಪ ತಂದೆ ದುಂಡಪ್ಪ ಮಡಿವಾಳರ ವಯಾ.70 ವರ್ಷ ಜಾತಿ.ಹಿಂದೂ ಮಡಿವಾಳರ ಉದ್ಯೋಗ.ಶೇತ್ಕಿ ಕೆಲಸ ಸಾ.ಅರಳೇಶ್ವರ ತಾ.ಹಾನಗಲ್ಲ ಇವರು ದಿನಾಂಕ : 28-04-2021 ರಂದು 20-00 ಘಂಟೆ ಸುಮಾರಿಗೆ ತಮ್ಮ ಮನೆಯ ಹಿತ್ತಲಿನಲ್ಲಿ ತೆಂಗಿನ ಮರದ ಅಡಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ಅಂತಾ ಕುಳಿತುಕೊಂಡಾಗ ತೆಂಗಿನ ಮರದ ಕಾಯಿಯು ತಲೆಯ ಮೇಲೆ ಬಿದ್ದಾಗ ಅಲ್ಲಿಂದ ಎದ್ದು ಬರುತ್ತಿರುವಾಗ ಮೂರ್ಚೆ ಬಂದು ನೆಲಕ್ಕೆ ಬಿದ್ದು ತಲೆಗೆ ಪೆಟ್ಟಾಗಿ ರಕ್ತ ಘಾಯವಾಗಿ ಚಿಕೀತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕೀತ್ಸೆಗಾಗಿ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕೀತ್ಸೆ ಪಡೆದುಕೊಳ್ಳುತ್ತೀರುವಾಗ ಚಿಕೀತ್ಸೆ ಪಲಕಾರಿಯಾಗದೆ ದಿನಾಂಕ : 29-04-2021 ರ ಮುಂಜಾನೆ 04-30 ಘಂಟೆ ಸುಮಾರಿಗೆ ಮರಣ ಹೊಂದಿದ್ದು  ಮೃತನ ಮರಣದಲ್ಲಿ ಯಾವುದೆ ಸಂಶಯ ವಗೈರೆ ಇರುವುದಿಲ್ಲ ಅಂತಾ ಸಿದ್ದಮ್ಮ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 13/2021 ವ್ಯಕ್ತಿ ಸಾವು.

                 ಸುನೀಲಕುಮಾರ ಎಚ್ ಬಿ ತಂದೆ: ಬಸವರಾಜಪ್ಪ ಎಚ್‌‌.ಎಸ್‌ ಇವರು ದಿ: 25-04-2021 ರಂದು ಮಧ್ಯಾಹ್ನ 12-30 ಗಂಟೆಗೆ ಹರ್ಲಾಪುರ ಹೊಳೆಯಲ್ಲಿ ಜಳಕ ಮಾಡಲು ಈಜಾಡಲು ಹೋಗಿದ್ದು ಸರಿಯಾಗಿ ಈಜು ಬಾರದೇ ಆಕಸ್ಮಾತ್‌ ನೀರಿನ ಸೆಳವಿಗೆ ಸಿಕ್ಕು ತೇಲುತ್ತಾ ಹೋಗಿದ್ದು ಸರಿಯಾಗಿ ಈಜು ಬಾರದೇ ಹೊಳೆಯಲ್ಲಿ ಮುಳುಗಿ ನೀರುಕುಡಿದು ಉಸಿರುಗಟ್ಟಿ ಮರಣಹೊಂದಿ ದಿ:29-04-2021 ರಂದು 08-00 ಗಂಟೆಗೆ ಸೋಮಲಾಪುರ ಹಾಗೂ ಕೋಣನತಂಬಗಿ ಗ್ರಾಮದ ಮಧ್ಯದಲ್ಲಿರುವ ಹೊಳೆಯಲ್ಲಿಂದ ಮೇಲೆ ಎದ್ದಿರುತ್ತದೆ. ತನ್ನ ಗಂಡನ ಮರಣದಲ್ಲಿ ಬೇರೆ ಸಂಶಯ ಇರುವದಿಲ್ಲ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಚೈತ್ರಾ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 16/2021 ವ್ಯಕ್ತಿ ಸಾವು.

                 ಈರಣ್ಣ ನೀಲಪ್ಪ ಮಡಿವಾಳ, ವಯಾ: 58 ವರ್ಷ, ಜಾತಿ: ಮಡಿವಾಳರ, ಉದ್ಯೋಗ: ಬಟ್ಟೆ ತೊಳೆಯುವುದು. ಸಾ: ನೆಗಳೂರ ತಾ: ಹಾವೇರಿ ಇವನು ದಿನಾಂಕ 29-04-2021 ರಂದು ಮುಂಜಾನೆ ತನ್ನ ಹೆಂಡತಿ, ಸೊಸೆ, ಮೊಮ್ಮಗಳನ್ನು ಕರೆದುಕೊಂಡು ನೆಗಳೂರ ಗ್ರಾಮದ ಕೋಡಿ ದುರ್ಗಮ್ಮನ ಗುಡಿಯ ಹತ್ತಿರ ಇರುವ ಬಾಂದಾರಕ್ಕೆ ಹೋಗಿ ಬಟ್ಟೆ ತೊಳೆಯುತ್ತಿರುವಾಗ ಮದ್ಯಾಹ್ನ 02-00 ಗಂಟೆಗೆ ಆಕಸ್ಮಾತಾಗಿ ಕಾಲು ಜಾರಿ ಬಾಂದಾರ ನೀರಿನಲ್ಲಿ ಬಿದ್ದು ಮರಣ ಹೊಂದಿರುತ್ತಾನೆ ವಿನಃ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಅಂತಾ ಮಂಜವ್ವ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 30-04-2021 05:55 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ